Connect with us

    LATEST NEWS

    ಗೇಮ್ ಝೋನ್ ಹೊತ್ತಿ ಉರಿದು 27 ಮಂದಿ ಸಜೀವ ದಹ*ನ..! ಮಾಲಕನ ಬಂಧನ

    Published

    on

    ಗುಜರಾತ್‌: ಗುಜರಾತಿನ ರಾಜ್‌ಕೋಟ್‌ ನಲ್ಲಿರುವ ಮನರಂಜನಾ ಕೇಂದ್ರ ‘ಜಿಆರ್‌ಪಿ ಗೇಮ್‌ ಝೋನ್‌’ನಲ್ಲಿ ಶನಿವಾರ(ಮೇ.25) ಸಂಜೆ ಭಾರಿ ಅಗ್ನಿ ದುರಂತ ಸಂಭವಿಸಿದ್ದು, 12 ವರ್ಷ ಪ್ರಾಯದ ನಾಲ್ವರು ಮಕ್ಕಳೂ ಸೇರಿದಂತೆ 27 ಮಂದಿ ಸಜೀವ ದಹನಗೊಂಡಿದ್ದಾರೆ.

    FIRE ATTACK-GAME ZONE

    ದುರಂತದ ತೀವ್ರತೆ ಸಾವು‌ ನೋವಿನ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸ ಬಹುದು ಎಂದು ಹೇಳಲಾಗಿದೆ. ಘಟನೆಗೆ ಸಂಬಂಧಿಸಿ ಗೇಮ್ ಜೋನ್ ನ ಮಾಲೀಕರನ್ನು ಇಂದು ಬೆಳಿಗ್ಗೆ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಘಟನೆಯ ತನಿಖೆಯ ಹೊಣೆಯನ್ನು ವಿಶೇಷ ತನಿಖಾ ತಂಡಕ್ಕೆ ವಹಿಸಿ ಸರಕಾರ ಆದೇಶ ಹೊರಡಿಸಿದೆ. ಆಟದ ಚಟುವಟಿಕೆಗಳಿಗೆ ನಿರ್ಮಿಸಲಾಗಿದ್ದ ಫೈಬರ್‌ ಗೊಮ್ಮಟದಲ್ಲಿ ನಿನ್ನೆ ಸಂಜೆ ಸುಮಾರು 4:30 ಗಂಟೆಗೆ ಬೆಂಕಿ ಕಾಣಿಸಿಕೊಂಡಿತ್ತು. ಹೊತ್ತಿ ಉರಿದಾಗ ಕಟ್ಟಡ ಕುಸಿಯಿತು. ಈ ಸಂದರ್ಭದಲ್ಲಿ ಮಕ್ಕಳು ಸೇರಿದಂತೆ ಹಲವರು ಅದರಡಿಯಲ್ಲಿ ಸಿಲುಕಿ ಹೊರ ಬರಲಾಗದೆ ಸಜೀವ ದಹನಗೊಂಡರು ಎಂದು ಪೊಲೀಸರು ತಿಳಿಸಿದ್ದಾರೆ.

    Read More..;ಹಾಸನದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾ*ತ; ಮಗು ಸೇರಿ 6 ಜನ ಸಾ*ವು

    ‘ಸ್ಥಳದಲ್ಲಿ ರಕ್ಷಣಾ ಕಾರ್ಯಗಳು ಇಂದು(ಮೇ.26) ಬೆಳಗ್ಗೆ 4:30ರವರೆಗೂ ನಡೆದಿದ್ದವು. ಬೇಸಿಗೆ ರಜೆ ಕಾರಣ ಗೇಮ್‌ ಝೋನ್‌ನಲ್ಲಿ ಮಕ್ಕಳು ಅಧಿಕ ಸಂಖ್ಯೆಯಲ್ಲಿ ಸೇರಿದ್ದರು. ಹಾಗಾಗಿ, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದಿದ್ದಾರೆ. ಬೆಂಕಿ ತಗುಲಿದ್ದು ಹೇಗೆ ಎಂಬುದನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ತನಿಖೆ ನಡೆಸಲಾಗುವುದು. ಇದೇ ವೇಳೆ ರಾಜ್‌ ಕೋಟ್‌ ನಗರದಲ್ಲಿರುವ ಎಲ್ಲಾ ಗೇಮ್‌ ಝೋನ್‌ಗಳಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಸೂಚನೆ ನೀಡಲಾಗಿದೆ ಎಂದು ರಾಜ್‌ಕೋಟ್‌ ಪೊಲೀಸ್ ಆಯುಕ್ತ ರಾಜು ಭಾರ್ಗವ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

    FILM

    ದರ್ಶನ್ ಪ್ರಕರಣ: ನಟ ಚಿಕ್ಕಣ್ಣನಿಗೂ ನೋಟಿಸ್..!

    Published

    on

    ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈಗಾಗಲೇ ಸ್ಟಾರ್ ನಟ ದರ್ಶನ್ ಸೇರಿದಂತೆ 19 ಮಂದಿ ಪೊಲೀಸರ ವಶದಲ್ಲಿದ್ದಾರೆ. ಪೊಲೀಸರ ತೀವ್ರ ತನಿಖೆ ನಡೆಯುತ್ತಿದ್ದು ಬೇರೆ ಬೇರೆ ಆಯಾಮಗಳಲ್ಲಿ ತನಿಖೆ ಮುಂದುವರಿಯುತ್ತಿದೆ. ಹೈ ಪ್ರೊಫೈಲ್‌ ಗ್ಯಾಂಗ್ ಈ ಕೊಲೆ ಪ್ರಕರಣದಲ್ಲಿ ಕಾಣಿಸಿಕೊಂಡಿದ್ದು ಈ ಕೇಸ್ ಹೆಚ್ಚು ಚರ್ಚೆಗೂ ಕಾರಣವಾಗಿದೆ. ಇನ್ನು ತನಿಖೆ ಬಳಿಕ ಬೇರೆ ಬೇರೆ ಹೆಸರುಗಳು ಕೇಳಿಬರುತ್ತಿದೆ.

    ಇದೀಗ ಕನ್ನಡ ಚಿತ್ರರಂಗದ ಹಾಸ್ಯನಟ ಚಿಕ್ಕಣ್ಣರವರಿಗೆ ನೋಟೀಸ್‌ ನೀಡಲು ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ದರ್ಶನ್ ಪಟ್ಟಣಗೆರೆ ಶೆಡ್‌ಗೆ ಹೋಗುವ ಮೊದಲು ರೆಸ್ಟೋರೆಂಟ್‌ನಲ್ಲಿ ನಡೆದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದಾರೆ. ಈ ಪಾರ್ಟಿಯಲ್ಲಿ ನಿರ್ಮಾಪಕರು ಸೇರಿದಂತೆ ಚಿಕ್ಕಣ್ಣ ಕೂಡಾ ಭಾಗಿಯಾಗಿದ್ದರು. ದರ್ಶನ್ ಪಾರ್ಟಿ ಮುಗಿಸಿ ನೇರವಾಗಿ ಶೆಡ್‌ ಬಳಿ ತೆರಳಿದ್ದಾರೆ. ಬಳಿಕ ರೇಣುಕಾಸ್ವಾಮಿಗೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ಧಾರೆ ಎನ್ನಲಾಗಿದೆ.

    ಚಿಕ್ಕಣ್ಣ ಹಾಗೂ ದರ್ಶನ್ ಮಧ್ಯೆ ಉತ್ತಮವಾದ ಬಾಂಧವ್ಯವಿತ್ತು. ದರ್ಶನ್‌ರವರ ಸಿನೆಮಾದಲ್ಲಿ ಚಿಕ್ಕಣ್ಣ ನಟನೆ  ಮಾಡಿದ್ದಾರೆ. ಉಪಾಧ್ಯಕ್ಷ ಸಿನೆಮಾದ ಬಗ್ಗೆ ದರ್ಶನ್ ಕೂಡಾ ಮೆಚ್ಚುಗೆಯ ಮಾತನ್ನಾಡಿದ್ದರು.

    Read More..; ದರ್ಶನ್ – ರೇಣುಕಾಸ್ವಾಮಿ – ಪಾರದರ್ಶಕ ವಿಚಾರಣೆ …..ಎಂದ ನಟ ಉಪೇಂದ್ರ

    ಇದೀಗ ಪಾರ್ಟಿಯಲ್ಲಿ ದರ್ಶನ್ ಜೊತೆ ಭಾಗಿಯಾದ ಹಿನ್ನೆಲೆಯಲ್ಲಿ ಚಿಕ್ಕಣ್ಣಗೆ ನೋಟಿಸ್​ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ವಿಚಾರಣೆಗೆ ಹಾಜರಾಗುವಂತೆ ನೋಟಿಸ್​ ನೀಡಲು ಅನ್ನಪೂರ್ಣೇಶ್ವರಿನಗರ ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ. ಇಂದು (ಜೂ. 17) ಸಂಜೆಯೇ ನೋಟಿಸ್ ನೀಡಲು ಸಿದ್ಧತೆ ನಡೆದಿದೆ ಎಂದು ಹೇಳಲಾಗುತ್ತಿದೆ.

    Continue Reading

    DAKSHINA KANNADA

    ಸುಳ್ಯ : ಸರಕಾರಿ ಶಾಲೆಯಲ್ಲಿ ಅಪರಿಚಿತ ಮೃ*ತದೇಹ ಪತ್ತೆ

    Published

    on

    ಸುಳ್ಯ : ಸರಕಾರಿ ಶಾಲೆಯಲ್ಲಿ ಅಪರಿಚಿತ ಮೃತದೇ*ಹ ಪತ್ತೆಯಾಗಿದೆ. ಸುಳ್ಯದ ಕಾಂತಮಂಗಲ ಸರಕಾರಿ ಶಾಲೆಯ ಬಳಿ ಶವ ಪತ್ತೆಯಾಗಿದೆ. ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊ*ಲೆಗೈದಿರುವ ಸಾಧ್ಯತೆ ಕಂಡು ಬಂದಿದೆ.


    ಸಾ*ವನ್ನಪ್ಪಿದ ವ್ಯಕ್ತಿಯ ಬಗ್ಗೆ ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ತಲೆ ಮತ್ತು ಕೈ ಭಾಗದಲ್ಲಿ ರ*ಕ್ತದ ಕಲೆಗಳು ಕಂಡು ಬಂದಿದ್ದು, ಮೇಲ್ನೋಟಕ್ಕೆ ಕೊ*ಲೆಗೈದಿರುವಂತೆ ಕಂಡು ಬರುತ್ತಿದೆ.

    ಇದನ್ನೂ ಓದಿ : ದರ್ಶನ್ – ರೇಣುಕಾಸ್ವಾಮಿ – ಪಾರದರ್ಶಕ ವಿಚಾರಣೆ …..ಎಂದ ನಟ ಉಪೇಂದ್ರ

    Continue Reading

    FILM

    ದರ್ಶನ್ – ರೇಣುಕಾಸ್ವಾಮಿ – ಪಾರದರ್ಶಕ ವಿಚಾರಣೆ …..ಎಂದ ನಟ ಉಪೇಂದ್ರ

    Published

    on

    ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊ*ಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ದರ್ಶನ್ ಬಗ್ಗೆ ಇದೀಗ ಸೆಲೆಬ್ರಿಟಿಗಳು ಮೌನ ಮುರಿದಿದ್ದಾರೆ. ಅನೇಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ ರಿಯಲ್ ಸ್ಟಾರ್ ಉಪೇಂದ್ರ ಸರದಿ.
    ದರ್ಶನ್ ಅವರನ್ನು ಬಂಧಿಸಿ ಒಂದು ವಾರ ಕಳೆದ ಮೇಲೆ ಉಪ್ಪಿ ತಮ್ಮ ಅಭಿಪ್ರಾಯ ಹೊರಹಾಕಿದ್ದಅರೆ. ಸೋಶಿಯಲ್ ಮೀಡಿಯಾದಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.


    ಪೋಸ್ಟ್ ನಲ್ಲಿ ಏನಿದೆ?

    ದರ್ಶನ್ – ರೇಣುಕಾ ಸ್ವಾಮಿ – ಪಾರದರ್ಶಕ ವಿಚಾರಣೆ …..

    ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ದರ್ಶನ್ ಬಂಧನ ರೇಣುಕಾ ಸ್ವಾಮಿ ಕೊಲೆ ಪ್ರಕರಣ ಮತ್ತು ಅದರ ವಿಚಾರಣೆ ಇಡೀ ಕರ್ನಾಟಕ ಮಾತ್ರವಲ್ಲ ಇಡೀ ಭಾರತವೇ ಬೆರಗಾಗಿ ನೋಡುತ್ತಿದೆ. ಈ ಹೈ ಪ್ರೊಫೈಲ್ ಕೇಸ್ ನ ವಿಚಾರಣೆಯಲ್ಲಿ ನಿಷ್ಪಕ್ಷಪಾತವಾದ ನಿರ್ಣಯ ಮತ್ತು ನ್ಯಾಯಕ್ಕಾಗಿ ಕಾಯುತ್ತಿದ್ದಾರೆ. ರೇಣುಕಾಸ್ವಾಮಿ ಕುಟುಂಬದಲ್ಲಿ, ಜನರಲ್ಲಿ, ಟಿವಿ ಮಾಧ್ಯಮಗಳಲ್ಲಿ ಮತ್ತು ದರ್ಶನ್ ಅಭಿಮಾನಿಗಳಲ್ಲಿ ಏನೇನೋ ಆತಂಕ, ಅನುಮಾನಗಳು ಕಾಡುತ್ತಿದೆ ಎಂದು ಉಪ್ಪಿ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
    ಊಹಾಪೋಹಗಳು ಹುಟ್ಟಿಕೊಳ್ಳುತ್ತಿದೆ. ಏಕೆಂದರೆ……

    ಯಾವುದೇ ಕೇಸ್ ಆದರೂ ಆ ಕೇಸ್ ನ ವಿಚಾರಣೆಯ ವೀಡಿಯೋ ದಾಖಲೆಗಳನ್ನು ಮತ್ತು ಸಾಕ್ಷಿಗಳ ಎಲ್ಲಾ ವಿವರಗಳನ್ನು ಆಗಾಗ ಪೊಲೀಸರು ಸಂಬಂಧಪಟ್ಟ ವ್ಯಕ್ತಿಗಳ ಕುಟುಂಬದವರ ಜೊತೆ ಹಂಚಿಕೊಳ್ಳಬೇಕು ಮತ್ತು ಅದು ಕಾನೂನಾಗಬೇಕು. ( ಹಿಂದೆಲ್ಲಾ ಪೊಲೀಸರು ವಿಚಾರಣೆಯ ವಿವರ ಬರೆದು ದಾಖಲಿಸುತ್ತಿದ್ದರು. ಈಗ ತಂತ್ರಜ್ಞಾನ ಇಷ್ಟೊಂದು ಮುಂದುವರೆದಿದ್ದು ಎಲ್ಲವನ್ನೂ ವೀಡಿಯೋ ರೆಕಾರ್ಡ್ ಮತ್ತು ಲೈವ್ ಸ್ಟ್ರೀಮಿಂಗ್ ಮಾಡಬಹುದು ) (ಕಾನೂನು ಸುಧಾರಣೆಗಳು #CriminalJustice Reforms )
    ಅದೇ ರೀತಿ ಒಬ್ಬ ಸಾರ್ವಜನಿಕ ವ್ಯಕ್ತಿಯ ಬಗ್ಗೆ ಕೇಸ್ ಆಗಿದ್ದರೆ ಆ ಕೇಸ್ ನ ವಿಚಾರಣೆಯ ವೀಡಿಯೋ ದಾಖಲೆಗಳನ್ನು ಮತ್ತು ಸಾಕ್ಷಿಗಳ ಎಲ್ಲಾ ವಿವರಗಳನ್ನು ಪೊಲೀಸರು ಆಗಾಗ ಸಾರ್ವಜನಿಕವಾಗಿ ತೆರೆದಿಡಬೇಕು. ಒಬ್ಬ ಸಾರ್ವಜನಿಕ ವ್ಯಕ್ತಿಯ ವಿಚಾರಣೆ ಸಾರ್ವಜನಿಕವಾಗೇ ಸಂಪೂರ್ಣ ಪಾರದರ್ಶಕತೆಯಿಂದ ಆಗಬೇಕು.

    ಇದನ್ನೂ ಓದಿ :ಪುತ್ತೂರಿನಲ್ಲಿ ಭೀಕರ ಅಪಘಾತ; ಇಬ್ಬರು ಸಾ*ವು

    ಸಾಕ್ಷಿ ನಾಶ, ಪ್ರಭಾವಿಗಳ ಹಸ್ತಕ್ಷೇಪ, ಭ್ರಷ್ಟಾಚಾರ ಇವಕ್ಕೆಲ್ಲಾ ತೆರೆ ಎಳೆದಂತಾಗುತ್ತದೆ. ಆಗ ರೇಣುಕಾಸ್ವಾಮಿ ಕುಟುಂಬಕ್ಕೆ, ಜನರಿಗೆ, ಟಿವಿ ಮಾಧ್ಯಮಗಳಿಗೆ ಮತ್ತು ದರ್ಶನ್ ಅಭಿಮಾನಿಗಳಿಗೆ ಮನಸಿನಲ್ಲಿ ಗೊಂದಲಗಳಿಲ್ಲದೇ ಪೊಲೀಸ್ ಮತ್ತು ಟಿವಿ ಮಾಧ್ಯಮಗಳ ಬಗ್ಗೆ ಇನ್ನೂ ಗೌರವ ಹೆಚ್ಚಾಗುತ್ತದೆ ಮತ್ತು ನ್ಯಾಯ ಸಿಗುತ್ತದೆ ಎಂಬ ನಂಬಿಕೆ ಬರುತ್ತದೆ ಎಂದು ಬರೆದುಕೊಂಡಿದ್ದಾರೆ.

    Continue Reading

    LATEST NEWS

    Trending