Connect with us

    LATEST NEWS

    ಗೇಮ್‌ಝೋನ್‌ ಅಗ್ನಿ ಅವಘಡದಲ್ಲಿ ಸಜೀವ ದಹ*ನವಾದ ನವ ದಂಪತಿ..!

    Published

    on

    ಗುಜರಾತ್: ಗುಜರಾತ್‌  ರಾಜ್ ಕೋಟ್‌ನ ಗೇಮಿಂಗ್ ಝೋನ್‌ಗೆ ಸಂಭವಿಸಿದ ಅಗ್ನಿ ದುರಂತದಲ್ಲಿ ಸಾ*ವಿಗೀಡಾದವರ ಸಂಖ್ಯೆ ಹೆಚ್ಚುತ್ತಿದೆ.  ಮಕ್ಕಳು ಸಹಿತ ಮಹಿಳೆಯರು ಈ ದುರಂತದಲ್ಲಿ ಸಾವಿಗೀಡಾಗಿದ್ದಾರೆ. ಸುಟ್ಟು  ಕರಕಲಾಗಿರುವ ಮೃತ ದೇಹವನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ. ಇದೂ ವರೆಗೆ ಸಾವನ್ನಪ್ಪಿದವರ ಸಂಖ್ಯೆ 34 ಕ್ಕೆ ಏರಿದೆ.

    ನವ ದಂಪತಿ ಸಜೀವ ದಹನ
    ಅಗ್ನಿ ದುರಂತದಲ್ಲಿ ನವ ದಂಪತಿ ಸಜೀವ ದ*ಹನವಾಗಿದ್ದಾರೆ. ಕಳೆದ ವಾರವಷ್ಟೆ ಅಕ್ಷಯ್ ಧೊಲಾರಿಯ ಹಾಗೂ ಖ್ಯಾತಿ ಸ್ವಾಲಿವಿಯಾ ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಕೆನಡಾದಲ್ಲಿ ವ್ಯಾಸಾಂಗ ಮಾಡುತ್ತಿದ್ದ ಅಕ್ಷಯ್ ಮದುವೆಯಾಗಲು ಭಾರತಕ್ಕೆ ಬಂದಿದ್ದರು. ರಿಜಿಸ್ಟರ್ ಮ್ಯಾರೇಜ್‌ ಆಗಿರುವ ದಂಪತಿ ಡಿಸೆಂಬರ್‌ ನಲ್ಲಿ ಅದ್ಧೂರಿಯಾಗಿ ಹಿಂದೂ ಸಂಪ್ರದಾಯದಂತೆ ಮದುವೆ ಆಗಲು ಯೋಜನೆಯನ್ನು ಹಾಕಿಕೊಂಡಿದ್ದರು. ಗೇಮಿಂಗ್ ಝೋನ್‌ಗೆ ಅಕ್ಷಯ್‌-ಖ್ಯಾತಿ ಇಬ್ಬರ ಜೊತೆ ಸಂಬಂಧಿಕನೂ ಬಂದಿದ್ದ.ಇನ್ನು ಈ ದರುಂತದ ಬಳಿಕ ಅಕ್ಷಯ್ ಪೋಷಕರು ರಾಜ್ ಕೋಟ್ ತೆರಳಿ ಪೊಲೀಸರ ಸೂಚನೆಯಂತೆ ಮೃತದೇಹದ ಗುರುತು ಪತ್ತೆ ಹಚ್ಚಲು ಡಿಎನ್‌ಎ ಮಾದರಿಗಳನ್ನು ನೀಡಿದ್ದಾರೆ.

    ಇದನ್ನೂ ಓದಿ..; ಗೇಮ್ ಝೋನ್ ಹೊತ್ತಿ ಉರಿದು 27 ಮಂದಿ ಸಜೀವ ದಹ*ನ..! ಮಾಲಕನ ಬಂಧನ

    ಅಗ್ನಿ ಅವಘಡದಲ್ಲಿ ದಂಪತಿ ದೇಹ ಸುಟ್ಟು ಕರಕಲಾಗಿದೆ. ಈ ಅವಘಡ ಹಿನ್ನೆಲೆ ಸೂಕ್ತ ತನಿಖೆಯನ್ನು ನಡೆಸಲು ರಾಜ್ಯ ಸರಕಾರ ವಿಶೇಷ ತನಿಖಾ ತಂಡಕ್ಕೆ ತನಿಖೆಯನ್ನು ವಹಿಸಿದ್ದಾರೆ.

    ಗೇಮಿಂಗ್‌ ಝನ್‌ಗೆ ಇತ್ತು ಒಂದೇ ಬಾಗಿಲು..!
    ಅವಘಡ ಸಂಭವಿಸಿದ ಗೇಮಿಂಗ್ ಝೋನ್‌ ಗೆ ಕೇವಲ ಒಂದೇ ಬಾಗಿಲು ಇರುವುದು ದುರಂತ. ಇನ್ನು ಗೇಮಿಂಗ್ ಝೋನ್‌ ಗೆ ಪರವಾನಿಗೆ ಮತ್ತು ಎನ್‌ಸಿಒ ಕೂಡಾ ಇರಲಿಲ್ಲ. 99 ರೂ ವಿಶೇಷ ರಿಯಾಯಿತಿ ನೀಡಿದ್ದರಿಂದ ಜನ ಮುಗಿ ಬಿದ್ದಿದ್ದರು ಎನ್ನಲಾಗಿದೆ. ಹೆಚ್ಚಾಗಿ ಬೇಸಿಗೆ ರಜೆ ಇರುವುದರಿಂದ ಜನರು ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ಗೇಮ್‌ ಝೋನ್‌ಗೆ ಭೇಟಿ ನೀಡುತ್ತಿದ್ದರು.  ಇನ್ನು ಜನರೇಟರ್‌ಗಾಗಿ 3500 ಲೀ. ಇಂಧನವನ್ನು ಸಂಗ್ರಹಿಸಿಡಲಾಗಿದ್ದು, ಇದು ಕೂಡ ಬೆಂಕಿಯ ತೀವ್ರತೆಗೆ ಮುಖ್ಯ ಕಾರಣವಾಗಿದೆ ಎನ್ನಲಾಗಿದೆ. ಇನ್ನೂ ಅಗ್ನಿಶಾಮಕ ಇಲಾಖೆಯಿಂದ ಪರವಾನಿಗೆ ಕೂಡಾ ಪಡೆದುಕೊಳ್ಳದೆ ಇರುವುದು ತನಿಖೆ ವೇಳೆ ಮಾಹಿತಿ ಹೊರ ಬಿದ್ದಿದೆ.  ಇದೀಗ ಶಾರ್ಟ್‌ ಸರ್ಕ್ಯೂಟ್ ನಿಂದ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆಯಾದರೂ ತನಿಖೆ ಬಳಿಕ ಸತ್ಯಾಂಶ ಹೊರಬರಬೇಕಿದೆ.

    ಈ ಕುರಿತಾಗಿ ಗೇಮ್‌ಝೋನ್‌ 6 ಮಂದಿ ಪಾಲದಾರರ ವಿರುದ್ದ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ. ಇನ್ನು ಗುಜರಾತ್ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡಿದೆ.

    Click to comment

    Leave a Reply

    Your email address will not be published. Required fields are marked *

    LATEST NEWS

    ವಯನಾಡಿನಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧೆ..!

    Published

    on

    ನವದೆಹಲಿ / ಮಂಗಳೂರು : ರಾಯ್‌ ಬರೇಲಿ ಹಾಗೂ ವಯನಾಡು ಎರಡೂ ಕಡೆಯಿಂದ ಗೆಲುವು ಸಾಧಿಸಿದ್ದ ರಾಹುಲ್ ಗಾಂಧಿ, ವಯನಾಡು ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದಾರೆ. ಈ ಮೂಲಕ ಪ್ರಿಯಾಂಕಾ ಗಾಂಧಿ ವಯನಾಡಿನಲ್ಲಿ ಚುನಾವಣೆ ಸ್ಪರ್ಧಿಸುವುದು ಖಚಿತವಾಗಿದೆ. ಈ ಬಗ್ಗೆ ಮಾಧ್ಯಮಗಳಿಗೆ ರಾಹುಲ್ ಗಾಂಧಿ ಮಾಹಿತಿ ನೀಡಿದ್ದಾರೆ.


    2019 ರ ಚುನಾವಣೆಯಲ್ಲಿ ರಾಹುಲ್‌ ಗಾಂಧಿಗೆ ಮರು ಜೀವ ನೀಡಿದ ಕ್ಷೇತ್ರ ವಯನಾಡು. ಅಮೇಠಿ ಹಾಗೂ ವಯನಾಡಿನಿಂದ ಸ್ಪರ್ಧೆ ಮಾಡಿದ್ದ ರಾಹುಲ್ ಗಾಂಧಿ ಅಮೇಠಿಯಲ್ಲಿ ಸೋಲು ಕಂಡಿದ್ದರು. ಬಿಜೆಪಿಯ ಸ್ಮೃತಿ ಇರಾನಿ ಗೆಲುವು ಸಾಧಿಸಿ ಸಚಿವೆ ಕೂಡಾ ಆಗಿದ್ದರು. 2024 ರ ಚುನಾವಣೆಯಲ್ಲಿ ಅಮೇಠಿಯಲ್ಲಿ ಗಾಂಧಿ ಕುಟುಂಬದ ಆಪ್ತ ಕಿಶೋರಿಲಾಲ್ ಶರ್ಮ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದ್ದಾರೆ.
    ರಾಯಬರೇಲಿ ಕ್ಷೇತ್ರದಲ್ಲಿ ಸೋನಿಯಾ ಗಾಂಧಿ ಸ್ಪರ್ಧೆ ಮಾಡುತ್ತಿದ್ದು, ಈ ಬಾರಿ ಅವರು ರಾಜ್ಯಸಭೆಯಿಂದ ಸಂಸದರಾಗಿ ಕ್ಷೇತ್ರವನ್ನು ರಾಹುಲ್ ಗಾಂಧಿಗೆ ಬಿಟ್ಟುಕೊಟ್ಟಿದ್ದರು. ರಾಯಬರೇಲಿಯಲ್ಲಿ ರಾಹುಲ್‌ ಗಾಂಧಿ ನಾಲ್ಕು ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದರು. ಇನ್ನು ವಯನಾಡಿನಲ್ಲೂ ನಿರೀಕ್ಷೆಯಂತೆ ಗೆಲುವು ಸಾಧಿಸಿದ್ದರು. ಇದೀಗ ವಯನಾಡು ಕ್ಷೇತ್ರವನ್ನು ರಾಹುಲ್ ಗಾಂಧಿ ಸಹೋದರಿ ಪ್ರಿಯಾಂಕಾ ಗಾಂಧಿಗೆ ಬಿಟ್ಟುಕೊಟ್ಟಿದ್ದಾರೆ.


    ಈ ಎರಡೂ ಕ್ಷೇತ್ರಗಳ ಜನರ ಜೊತೆ ನನ್ನ ಉತ್ತಮ ಬಾಂಧವ್ಯವಿದ್ದು, ವಯನಾಡು ಕ್ಷೇತ್ರ ಬಿಟ್ಟಿರುವುದಕ್ಕೆ ತುಂಬಾ ಬೇಸರವಾಗಿದೆ. ಆದ್ರೆ, ನನ್ನ ಸಹೋದರಿ ಅಲ್ಲಿ ಗೆದ್ದು ಜನರ ಜೊತೆ ಇರಲಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

    ಇದನ್ನು ಓದಿ:ಪ್ರತಿಭಟನೆ ವೇಳೆ ಸುಸ್ತಾದ ಬಿಜೆಪಿಯ ಹಿರಿಯ ನಾಯಕ ಭಾನುಪ್ರಕಾಶ್ ನಿಧನ

    Continue Reading

    LATEST NEWS

    ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್‌ ರೈಲು ಅಪಘಾತ; 8 ಮಂದಿ ಸಾವು

    Published

    on

    ನವದಹಲಿ: ಪಶ್ಚಿಮ ಬಂಗಾಳದ ರಂಗಪಾಣಿ ನಿಲ್ದಾಣದ ಬಳಿ ಸೋಮವಾರ(ಜೂ.17) ಗೂಡ್ಸ್ ರೈಲು ಸೀಲ್ದಾಹ್ ಕಡೆಗೆ ಹೋಗುವ ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್‌ಗೆ ಡಿಕ್ಕಿ ಹೊಡೆದ ನಂತರ ಕನಿಷ್ಠ 19 ರೈಲುಗಳನ್ನು ರದ್ದುಗೊಳಿಸಲಾಗಿದೆ. ಈ ದುರ್ಘಟನೆಯಲ್ಲಿ 8 ಮಂದಿ ಸಾವನ್ನಪ್ಪಿದ್ದು, ಸುಮಾರು 50 ಮಂದಿ ಗಾಯಗೊಂಡಿದ್ದಾರೆ.

    ಪಶ್ಚಿಮ ಬಂಗಾಳದಲ್ಲಿ ಸಂಭವಿಸಿದ ರೈಲು ಅಪಘಾತದಲ್ಲಿ ಮೃತಪಟ್ಟವರಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಕ್ಕೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ ಎರಡು ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ 50,000 ರೂಪಾಯಿ ಪರಿಹಾರ ಘೋಷಿಸಿದ್ದಾರೆ.

    Read More..; ಉಪ್ಪಿನಂಗಡಿ: ಮಹಿಳೆ ಸಾ*ವಿನಲ್ಲಿ ಅನುಮಾನ; ಕೊ*ಲೆ ಶಂಕೆ

    ನ್ಯೂ ಜಲ್ಪೈಗುರಿ ಬಳಿ ಗೂಡ್ಸ್ ರೈಲು ಸಿಗ್ನಲ್ ಅನ್ನು ನಿರ್ಲಕ್ಷಿಸಿದ ಕಾರಣ ಮತ್ತು ಅಗರ್ತಲಾದಿಂದ ಸೀಲ್ದಾಹ್‌ಗೆ ತೆರಳುತ್ತಿದ್ದ ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್‌ಗೆ ಡಿಕ್ಕಿ ಹೊಡೆದಿದ್ದರಿಂದ ಸಂಭವಿಸಿದೆ ಎಂದು ರೈಲ್ವೇ ಮಂಡಳಿಯ ಅಧ್ಯಕ್ಷ ಜಯ ವರ್ಮ ಸಿನ್ಹಾ ಹೇಳಿದ್ದಾರೆ.

    Continue Reading

    DAKSHINA KANNADA

    ಚಿಕ್ಕಮೇಳದ ಹೆಸರಿನಲ್ಲಿ ಯಕ್ಷಗಾನ ಕಲೆಗೆ ಅಪಚಾರ ಮಾಡದಿರಿ; ಒಕ್ಕೂಟ ಮನವಿ

    Published

    on

    ಮಂಗಳೂರು: ಇಂದು ದೇಶ, ವಿದೇಶಗಳಲ್ಲಿ ಯಕ್ಷಗಾನದ ಹಿರಿಮೆ ಸಾರಲಾಗುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕಲೆಯ ಹೆಸರಿನಲ್ಲಿ ಕಲೆಯ ಗಂಧಗಾಳಿ ಇಲ್ಲದವರು ಕೂಡಾ ಯಕ್ಷ ಕಲೆಯನ್ನು ವಿರೂಪಗೊಳಿಸುತ್ತಿವುದು ವಿಷಾದನೀಯ ಸಂಗತಿ. ಇತ್ತೀಚಿನ ದಿನಗಳಲ್ಲಿ ಮಳೆಗಾಲದಲ್ಲಿ ತಿರುಗಾಟದ ಇಲ್ಲದ ಸಂದರ್ಭದಲ್ಲಿ ಮನೆ ಮನೆಗೆ ಚಿಕ್ಕ ಮೇಳಗಳು ಹೊರಡುತ್ತವೆ. ಆದರೆ ಯಕ್ಷಗಾನದ ಬಾಲಪಾಠವೂ ಆಗದವರಿಂದ ಚಿಕ್ಕ ಮೇಳ ಎಂದು ಹೆಸರಿಟ್ಟುಕೊಂಡು ಅದೊಂದು ದಂಧೆಯಾಗಿ ವ್ಯಾಪಕವಾಗಿರುವುದು ನೋವಿನ ಸಂಗತಿ ಎಂದು ತೆಂಕುತಿಟ್ಟು ಚಿಕ್ಕಮೇಳಗಳ ಒಕ್ಕೂಟ ದಕ್ಷಿಣ ಕನ್ನಡ ಜಿಲ್ಲೆ ಕೇಂದ್ರ ಸಮಿತಿ ದೂರಿದೆ.

    ಸಂಪ್ರದಾಯಕ್ಕೆ ಬದ್ಧವಾಗಿ, ಶಿಸ್ತುಬದ್ಧವಾಗಿ ಯಕ್ಷಗಾನ ಮಾಡಲು ಕಲಾವಿದರಲ್ಲಿ ಒಟ್ಟು ಮಾಡಿಕೊಂಡು ತೆಂಕುತಿಟ್ಟು ಚಿಕ್ಕಮೇಳ ಹೆಸರಿನಲ್ಲಿ ತಿರುಗಾಟವನ್ನು ಆರಂಭಿಸಲಾಗಿದೆ. ಒಕ್ಕೂಟದ ಪರವಾನಿಗೆ ಇದ್ದವರಿಗೆ ಮಾತ್ರ ಮನೆಯಲ್ಲಿ ಆಟವಾಡಿಸಲು ಜನತೆ ಅನುವು ಮಾಡಿಕೊಡಬೇಕು ಎಂದು ಒಕ್ಕೂಟದ ಅಧ್ಯಕ್ಷ ಸರಪಾಡಿ ಅಶೋಕ್ ಶೆಟ್ಟಿ ಹೇಳಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು ನಿಜವಾದ ಕಲಾವಿದರಿಗೆ ಅನ್ಯಾಯವಾಗಬಾರದು ಎನ್ನುವ ನಿಟ್ಟಿನಲ್ಲಿ ಒಕ್ಕೂಟವನ್ನು ರಚನೆ ಮಾಡಲಾಗಿದೆ. ಒಕ್ಕೂಟದ ಅಧಿಕೃತ ಪರವಾಣಿಗೆ ಪಡೆದು ತಿರುಗಾಟ ಮಾಡುವವರು ಸಂಜೆ 6ರಿಂದ ರಾತ್ರಿ 10.30ರವರೆಗೆ ಕನ್ನಡ ಇಲ್ಲವೇ ತುಳುಭಾಷೆಗಳ ಗರಿಷ್ಠ 20 ನಿಮಿಷಗಳ ಸಂದೇಶ ಇರುವ ಸನ್ನಿವೇಶದ ಪ್ರದರ್ಶನ ಮಾಡಲಿರುವರು ಎಂದರು.

    ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ರಮೇಶ ಕುಲಶೇಖರ, ಕುಮಾರ್ ಮಾಲೆಮಾರ್‌, ದಿವಾಕರ ದಾಸ್, ಕಡಬ ದಿನೇಶ ರೈ ಮೊದಲಾದವರಿದ್ದರು.

    Continue Reading

    LATEST NEWS

    Trending