Connect with us

    LATEST NEWS

    ಈ ದೇಶದಲ್ಲಿ ಜನರು ಕಟ್ಟಬೇಕು ‘ಮಳೆ ತೆರಿಗೆ’..! ಏನಿದು ವಿಚಿತ್ರ ತೆರಿಗೆ?

    Published

    on

    ಮಂಗಳೂರು:  ನಮ್ಮ ಪ್ರಪಂಚದಲ್ಲಿ ಚಿತ್ರ-ವಿಚಿತ್ರವಾದ ಅನೇಕ ನಿಯಮಗಳು, ತೆರಿಗೆಗಳು, ನಿರ್ಬಂಧಗಳು ಇವೆ. ಅವುಗಳನ್ನು ಕೇಳಿದಾಗ ನಮಗೆ ಸಾಮಾನ್ಯವಾಗಿ ಅಚ್ಚರಿ ಆಗುತ್ತದೆ. ಹಾಗೆಯೇ, ಅಲ್ಲಿನ ಜನರ ಬಗ್ಗೆ ಅನುಕಂಪ ಕೂಡ ಮೂಡುತ್ತದೆ. ಅದೇ ರೀತಿ, ಈ ದೇಶದಲ್ಲಿಯು ಕೂಡ ‘ಮಳೆ ತೆರಿಗೆ’ ಯನ್ನು ಜನರು ಕಟ್ಟಬೇಕು. ಆ ದೇಶ ಯಾವೂದು ಗೊತ್ತೆ..?

    ಕೆನಡಾ

    ಹೌದು, ಆ ದೇಶದ ಹೆಸರು ಕೆನಡಾ. ಇತ್ತೀಚಿನ ಬೆಳವಣಿಗೆಯ ಪ್ರಕಾರ ಕೆನಡಾ ಮುಂದಿನ ತಿಂಗಳಿನಿಂದ ಆಡುಮಾತಿನಲ್ಲಿ ‘ಮಳೆ ತೆರಿಗೆ’ ಎಂದು ಪರಿಚಯಿಸಲು ಸಿದ್ಧವಾಗಿದೆ. ವರದಿಗಳ ಪ್ರಕಾರ, ಈ ಕ್ರಮವು ಕೆನಡಾದ ನಗರವಾದ ಟೊರೊಂಟೊದಲ್ಲಿ ಮಳೆನೀರು ನಿರ್ವಹಣೆಯ ಸವಾಲನ್ನು ಎದುರಿಸುವ ಗುರಿಯನ್ನು ಹೊಂದಿದೆ.

    ಟೊರೊಂಟೊ ಸರ್ಕಾರದ ಅಧಿಕೃತ ವೆಬ್‌ಸೈಟ್‌ನ ಪ್ರಕಾರ, ಮುನ್ಸಿಪಲ್ ಪ್ರಾಧಿಕಾರವು ಈ ‘ಮಳೆ ತೆರಿಗೆ’ಯನ್ನು ಪರಿಚಯಿಸಲು ಚಿಂತಿಸುತ್ತಿದೆ.

    ಟೊರೊಂಟೊ ನಗರದ ಅಧಿಕೃತ ವೆಬ್‌ಸೈಟ್ ಸರ್ಕಾರವು ನೀರಿನ ಬಳಕೆದಾರರು ಮತ್ತು ಮಧ್ಯಸ್ಥಗಾರರ ಸಹಯೋಗದೊಂದಿಗೆ ‘ಸ್ಟಾರ್ಮ್‌ವಾಟರ್ ಚಾರ್ಜ್ ಮತ್ತು ವಾಟರ್ ಸರ್ವಿಸ್ ಚಾರ್ಜ್ ಕನ್ಸಲ್ಟೇಶನ್’ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಎಂದು ಹೇಳುತ್ತದೆ.

    ಮಳೆ ತೆರಿಗೆ

    ವರದಿಗಳ ಪ್ರಕಾರ, ಈ ಉಪಕ್ರಮವನ್ನು ಮಳೆನೀರು ಸಮಸ್ಯೆಗಳನ್ನು ನಿಭಾಯಿಸುವ ಗುರಿಯನ್ನು ಹೊಂದಿದೆ. ಇದನ್ನು ಸಾಮಾನ್ಯವಾಗಿ ‘ಮಳೆ ತೆರಿಗೆ’ ಎಂದು ಕರೆಯಲಾಗುತ್ತದೆ. ಮೂಲಗಳ ಪ್ರಕಾರ, ಅಧಿಕಾರಿಗಳು ಎಲ್ಲಾ ಆಸ್ತಿ ವರ್ಗಗಳಿಗೆ ಅನ್ವಯವಾಗುವ ‘ಸ್ಟಾಮ್ ವಾಟರ್ ಚಾರ್ಜ್’ ಅನ್ನು ಪರಿಚಯಿಸಲು ಯೋಜಿಸಿದ್ದಾರೆ. ಇದರ ಜೊತೆಗೆ, ‘ನೀರಿನ ಸೇವಾ ಶುಲ್ಕ’ ಎಂದು ಕರೆಯಲ್ಪಡುವ ವಿಶೇಷ ನೀರಿನ ಶುಲ್ಕವನ್ನು ಪರಿಚಯಿಸಲಿದೆ.

    DAKSHINA KANNADA

    ಪ್ರತಿಭಟನೆ ವೇಳೆ ಸುಸ್ತಾದ ಬಿಜೆಪಿಯ ಹಿರಿಯ ನಾಯಕ ಭಾನುಪ್ರಕಾಶ್ ನಿಧನ

    Published

    on

    ಶಿವಮೊಗ್ಗ/ಮಂಗಳೂರು: ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಬಿ ಭಾನುಪ್ರಕಾಶ್ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.  ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಶಿವಮೊಗ್ಗ ನಗರದ ಗೋಪಿ ಸರ್ಕಲ್‍ನಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಭಾಗಿಯಾಗಿದ್ದರು. ಈ ವೇಳೆ ಅವರು ತೀವ್ರ ಹೃದಯಾಘಾತ ಉಂಟಾಗಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಅವರು ಕೊನೆಯುಸಿರೆಳೆದಿದ್ದಾರೆ. ಮೃತರ ಸ್ವಗ್ರಾಮ ಮತ್ತೂರಿಗೆ ಮೃತದೇಹವನ್ನು ಕೊಂಡೊಯ್ಯಲಾಗಿದೆ.

     

    ವಾಹನ ಜಾಥಾ, ಅಭಿನಂದನಾ ಕಾರ್ಯಕ್ರಮ ಮುಂದೂಡಿಕೆ

    ಬಿಜೆಪಿ ಹಿರಿಯ ಮುಖಂಡ ಭಾನುಪ್ರಕಾಶ್ ರವರ ನಿಧನದ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ನಡೆಯಬೇಕಿದ್ದ ವಾಹನ ಜಾಥಾ ಮತ್ತು ಅಭಿನಂದನಾ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ದ.ಕ ಜಿಲ್ಲಾ ಬಿಜೆಪಿ ಪ್ರಕಟಣೆಯಲ್ಲಿ ತಿಳಿಸಿದೆ.

    Continue Reading

    LATEST NEWS

    WATCH : ನೀರಿಗೆ ಹಾರಿದ ಪ್ರೇಮಿಗಳು; ದಡಕ್ಕೆ ಕರೆತಂದು ಕೆನ್ನೆಗೆ ಬಾರಿಸಿದ ಮೀನುಗಾರರು

    Published

    on

    ಮಂಗಳೂರು/ಉತ್ತರಪ್ರದೇಶ : ಪ್ರೀತಿ ಮಾಡುವುದು ಇತ್ತೀಚೆಗೆ ಸಾಮಾನ್ಯ ಸಂಗತಿ. ಕೆಲವರು ಪ್ರೀತಿಸಿ ಮದುವೆಯಾದರೆ, ಪ್ರೀತಿಗೆ ಮನೆಯಲ್ಲಿ ಸಮ್ಮತಿ ಸಿಕ್ಕಿ ಮದುವೆಯಾದವರು ಅನೇಕ ಮಂದಿ ಇದ್ದಾರೆ. ಅಲ್ಲದೇ, ಪ್ರೀತಿಗೆ ಸಮ್ಮತಿ ಸಿಕ್ಕದೆ ಮನೆಯಿಂದ ಹೊರ ನಡೆದು ಓಡಿ ಹೋದವರೂ ಇದ್ದಾರೆ. ಕೆಲವರು ಬೇರೆ ಬೇರೆಯಾಗಿದ್ದಾರೆ. ಇನ್ನು ಕೆಲವರು ಸಾವಿನ ದಾರಿ ಹಿಡಿದಿದ್ದಾರೆ.

    ಪರಸ್ಪರ ಪ್ರೀತಿಸಿ, ಮನೆಯವರ ಒಪ್ಪಿಗೆ ಸಿಗದೇ ಇದ್ದಾಗ ದುಡುಕಿನ ನಿರ್ಧಾರ ತೆಗೆದುಕೊಳ್ಳುವುದನ್ನು ಕಾಣುತ್ತೇವೆ. ಸದ್ಯ ಅಂತಹುದೇ ಘಟನೆಯೊಂದು ಉತ್ತರಪ್ರದೇಶದಲ್ಲಿ ನಡೆದಿದೆ. ಪ್ರೇಮಿಗಳು ಯಾವುದೋ ಕಾರಣಕ್ಕೆ ಆತ್ಮಹತ್ಯೆಯ ನಿರ್ಧಾರ ಮಾಡಿದ್ದಾರೆ. ಸುಲ್ತಾನ್ ಪುರದಲ್ಲಿ ಈ ಘಟನೆ ನಡೆದಿದ್ದು, ಪ್ರೇಮಿಗಳಿಬ್ಬರನ್ನು ಬಚಾವ್ ಮಾಡಲಾಗಿದೆ.

    ಪ್ರೇಮಿಗಳು ನೀರಿಗೆ ಜಿಗಿಯುತ್ತಲೇ ಅಲ್ಲೇ ನೀರಿನಲ್ಲಿ ಮೀನು ಹಿಡಿಯಲು ಬಲೆ ಬೀಸಿ ಕುಳಿತಿದ್ದ ಮೀನುಗಾರರು ಗಮನಿಸಿದ್ದಾರೆ. ತಕ್ಷಣ ಮೀನುಗಾರರು ನದಿಗೆ ಜಿಗಿದಿದ್ದಾರೆ. ಅವರಿಬ್ಬರು ರಕ್ಷಿಸಿದ್ದಾರೆ, ಅಲ್ಲದೇ, ದಡಕ್ಕೆ ಕರೆತಂದು ಕ್ಲಾಸ್ ತೆಗೆದುಕೊಂಡಿದೆ.

    ಇದನ್ನು ಓದಿ : ಸುಳ್ಯ : ಸರಕಾರಿ ಶಾಲೆಯಲ್ಲಿ ಅಪರಿಚಿತ ಮೃ*ತದೇಹ ಪತ್ತೆ

    ನೀರಿಗೆ ಜಿಗಿದ ಯುವಕನನ್ನು ದಡಕ್ಕೆ ಎಳೆದೊಯ್ದ ಮೀನುಗಾರರೊಬ್ಬರು, ಆತನ ಕಪಾಳಕ್ಕೆ ಎರಡೇಟು ಬಾರಿಸಿ ಗದರಿದ್ದಾರೆ. ಮತ್ತೊಂದೆಡೆ ಯುವತಿಯನ್ನು ರಕ್ಷಿಸಿ ಪ್ರಜ್ಞಾಹೀನಳಾಗಿದ್ದ ಆಕೆಯನ್ನು ಉಪಚರಿಸುವ ಕೆಲಸವನ್ನೂ ಮಾಡಿದ್ದಾರೆ. ಸದ್ಯ ಈ ದೃಶ್ಯಾವಳಿಗಳನ್ನು ಒಳಗೊಂಡ ವೀಡಿಯೋ ವೈರಲ್ ಆಗಿದೆ.

     

     

     

    Continue Reading

    LATEST NEWS

    ಇನ್ಮುಂದೆ ಬಾರ್, ಪಬ್‌ ಎಂಟ್ರಿಗೆ ಗುರುತಿನ ಚೀಟಿ ಕಡ್ಡಾಯ..!

    Published

    on

    ಮಹಾರಾಷ್ಟ್ರ/ಮಂಗಳೂರು: ಇನ್ಮುಂದೆ ಪಬ್, ಬಾರ್‌ಗೆ ಮದ್ಯ ಸೇವನೆ ಮಾಡಬೇಕು ಅಂದ್ರೆ ಬೇಕಂತೆ ಐಡಿ ಕಾರ್ಡ್. ಹೌದು, ಮಹಾರಾಷ್ಟ್ರ ಸರಕಾರ ಇಂತಹದೊಂದು ಕಾನೂನನ್ನು ಜಾರಿಗೊಳಿಸಿದೆ. ಇನ್ಮುಂದೆ  ಪಬ್, ಬಾರ್‌ಗಳಿಗೆ ಪ್ರವೇಶ ನೀಡಬೇಕಾದರೆ ಸರಕಾರದ ಗುರುತಿನ ಚೀಟಿಯನ್ನು ಹೊಂದಿರಬೇಕು. ಈ ಹಿಂದೆ ಪುಣೆಯಲ್ಲಿ ನಡೆದಿದ್ದ ಕಾರು ಅಫಘಾತದಿಂದ ಎರಡು ಜೀವ ಬಲಿಯಾಗಿತ್ತು. ಇದರಿಂದ ಎಚ್ಚೆತ್ತ ಸರಕಾರ ಈ ಕಾನೂನು ಜಾರಿ ತಂದಿದೆ ಎನ್ನಲಾಗಿದೆ.

    Read More..; ನಕಲಿ ವೈದ್ಯನಿಂದ ಭ್ರೂಣ ಹ*ತ್ಯೆ ..! ತನಿಖೆ ವೇಳೆ ವೈದ್ಯನ ಕರಾಳ ಮುಖ ಬಯಲು..!!

    ಕೆಲವು ದಿನಗಳ ಹಿಂದೆ ಬಾಲಕನೊಬ್ಬ ಪಬ್‌ಗೆ ಹೋಗಿ ಪಾರ್ಟಿ ಮಾಡಿದ್ದಾನೆ. ಬಳಿಕ ಮದ್ಯದ ಅಮಲಿನಲ್ಲಿ ಪೋರ್ಶೆ ಕಾರನ್ನು ಚಲಾಯಿಸಿಕೊಂಡು ಹೋಗಿ ಅಪಘಾತ ಮಾಡಿದ್ದು ಇಬ್ಬರ ಸಾವಿಗೆ ಕಾರಣನಾಗಿದ್ದ. ಈ ಪ್ರಕರಣದಿಂದ ಎಚ್ಚೆತ್ತ ಬಾರ್‌, ಪಬ್ ಮಾಲೀಕರೂ ಕೂಡಾ ಕಟ್ಟು ನಿಟ್ಟಿನ ನಿಯಮಗಳನ್ನು ಕೈಗೊಂಡಿದ್ದಾರೆ.

    ಇತ್ತೀಚೆಗೆ ಅಪ್ರಾಪ್ತರು ಮದ್ಯಪಾನ ಸೇವಿಸಿ ವೇಗವಾಗಿ ವಾಹನ ಚಲಾಯಿಸುವ ಪ್ರಕರಣಗಳು ಹೆಚ್ಚುತ್ತಿವೆ. ಇದರಿಂದ ಮುಂಬೈ ಹಾಗೂ ಪುಣೆಯಲ್ಲಿ ಮದ್ಯಪಾನ ಮತ್ತು ವೈನ್ ಸೇವನೆ ಮಾಡುವವರಿಗೆ ವಯಸ್ಸಿನ ಪ್ರಮಾಣ ಪತ್ರ ಕಡ್ಡಾಯಗೊಳಿಸಲಾಗಿದೆ. ವಯಸ್ಸಿನ ಪ್ರಮಾಣ ಪತ್ರ ಪರಿಶೀಲನೆ ಮಾಡಿದ ಬಳಿಕವೇ ಪಬ್, ಬಾರ್‌ಗಳಿಗೆ ಪ್ರವೇಶ ನೀಡಲಾಗುತ್ತಿದೆ. ವೈನ್ ಮತ್ತು ಬಿಯರ್ ಕುಡಿಯಲು 21 ವರ್ಷ ಮತ್ತು ಮದ್ಯ ಸೇವಿಸಲು 25 ವರ್ಷ ವಯಸ್ಸು ಕಡ್ಡಾಯವಾಗಿರುತ್ತದೆ.

    Continue Reading

    LATEST NEWS

    Trending