Connect with us

bangalore

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಇನ್ನು ಮುಂದೆ ಫ್ರೀ ವಿದ್ಯುತ್…!

Published

on

ಬೆಂಗಳೂರು: ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ವಾಸ ಮಾಡುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬಿಪಿಎಲ್ ಕುಟುಂಬಗಳ ಗೃಹ ವಿದ್ಯುತ್ ಬಳಕೆದಾರರಿಗೆ ಮಾಸಿಕ 75 ಯೂನಿಟ್ ವರೆಗೆ ಉಚಿತ ವಿದ್ಯುತ್ ‌ನೀಡಲು ರಾಜ್ಯ ಸರ್ಕಾರ ಆದೇಶಿಸಿದೆ.


ಈ ಸಂಬಂಧ ಇಂಧನ ಇಲಾಖೆ ಆದೇಶ ಹೊರಡಿಸಿದ್ದು, ಮೇ 1 ರಿಂದ ಅನ್ವಯವಾಗುವಂತೆ ಉಚಿತ ವಿದ್ಯುತ್ ಸರಬರಾಜು ಮಾಡಲು ಸೂಚಿಸಲಾಗಿದೆ.

ವಿದ್ಯುತ್ ಸರಬರಾಜು ಕಂಪನಿಗಳು ಸಲ್ಲಿಸುವ ಅಂಕಿ ಅಂಶಗಳನ್ನು ಪರಿಗಣಿಸಿ ಉಚಿತ ವಿದ್ಯುತ್ ಸರಬರಾಜು ಮಾಡುವಂತೆ ಸಚಿವ ಸಂಪುಟ ಅನುಮೋದಿಸಿರುವ ಪ್ರಕಾರವಾಗಿ ಒದಗಿಸಬೇಕಾದ ವಿದ್ಯುತ್‌ ಸಹಾಯ ಧನದ ಮೊತ್ತದ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಂಡ ನಂತರ ವಿದ್ಯುತ್ ಸರಬರಾಜು ಕಂಪನಿಗಳು ಸದರಿ ಮೊತ್ತದ ವಿವರಗಳೊಂದಿಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಕ ಆಯೋಗಕ್ಕೆ ತಮ್ಮ ಪ್ರಸ್ತಾವನೆಯನ್ನು ಸಲ್ಲಿಸಬೇಕು.

ಉಚಿತ ವಿದ್ಯುತ್ ಪಡೆಯುವ ಫಲಾನುಭವಿಗಳು ಕೆಲವೊಂದು ಮಾನದಂಡವನ್ನು ಪಾಲಿಸುವುದು ಮುಖ್ಯವಾಗುತ್ತದೆ. ಸ್ಥಾವರಗಳಿಗೆ ಮಾಪಕವನ್ನು ಕಡ್ಡಾಯವಾಗಿ ಅಳವಡಿಸಬೇಕು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಈ ಪ್ರವರ್ಗದ ವಿದ್ಯುತ್ ಗ್ರಾಹಕರುಗಳು ಕಡ್ಡಾಯವಾಗಿ ಜಾತಿ ಪ್ರಮಾಣ ಪತ್ರದ ದೃಢಿಕೃತ ದಾಖಲೆಯನ್ನು ಒದಗಿಸಬೇಕು.

bangalore

ಗುದದ್ವಾರಕ್ಕೆ ಗಾಳಿ ಬಿಟ್ಟ ಸ್ನೇಹಿತ; ಕರುಳು ಬ್ಲಾ*ಸ್ಟ್ ಆಗಿ ಯುವಕನ ದುರ್ಮರ*ಣ

Published

on

ಬೆಂಗಳೂರು : ಏರ್‌ ಪ್ರೆಶರ್‌ ಪೈಪ್‌ನಿಂದ ಗುದದ್ವಾರಕ್ಕೆ ಗಾಳಿ ಬಿಟ್ಟಿದ್ದರಿಂದ ಹೊಟ್ಟೆಯೊಳಗೆ ಕರುಳು ಬ್ಲಾ*ಸ್ಟ್‌ ಆಗಿ ಯುವಕ ಮೃ*ತಪಟ್ಟಿದ್ದಾನೆ. ಹುಡುಗಾಟದಲ್ಲಿ ಆಡಿದ ಆಟ ಘನಘೋರ ಅಂತ್ಯ ಕಂಡ ಘಟನೆ ಬೆಂಗಳೂರಲ್ಲಿ ನಡೆದಿದೆ. ಯೋಗೀಶ್(28) ಮೃ*ತ ಯುವಕ.

ಹುಡುಗಾಟಕ್ಕೆ ಹೋಯ್ತು ಪ್ರಾಣ…!

ಮಾರ್ಚ್ 25ರಂದು ಬೈಕ್‌ ರಿಪೇರಿಗಾಗಿ ಸಂಪಿಗೆಹಳ್ಳಿಯ ಸಿಎನ್‌ಸಿ (CNS) ಬೈಕ್ ಸರ್ವೀಸ್ ಸೆಂಟರ್‌ಗೆ ಯೋಗೀಶ್‌ ಎಂಬ ಯುವಕ ತೆರಳಿದ್ದ. ಅದೇ ಸರ್ವೀಸ್‌ ಸೆಂಟರ್‌ನಲ್ಲಿ ಯೋಗೀಶ್‌ ಸ್ನೇಹಿತ ಮುರುಳಿ ಎಂಬಾತ ಕೆಲಸ ಮಾಡುತ್ತಿದ್ದ. ಸ್ನೇಹಿತರಿಬ್ಬರೂ ಒಬ್ಬರಿಗೊಬ್ಬರು ತರ್ಲೆ, ತಂಟೆ ಮಾಡಿಕೊಂಡು ಆಟವಾಡುತ್ತಿದ್ದರು. ಸರ್ವೀಸ್‌ ಸೆಂಟರ್‌ನಲ್ಲಿದ್ದ ಏರ್ ಪ್ಲೇಶರ್ ಪೈಪ್‌ನಿಂದ ಇಬ್ಬರು ಆಟ ಆಡುತ್ತಿದ್ದರು.

ಮೊದಲಿಗೆ ಮುರುಳಿ, ಯೋಗೀಶ್‌ನ ಮುಖ ಹಾಗೂ ಹೊಟ್ಟೆಗೆ ಗಾಳಿ ಬಿಟ್ಟಿದ್ದ. ಇದಾದ ಬಳಿಕ ಯೋಗಿಶ್ ಗುದದ್ವಾರಕ್ಕೆ ಏರ್‌ ಪ್ಲೇಶರ್‌ನಿಂದ ಗಾಳಿ ಬಿಟ್ಟಿದ್ದಾನೆ. ಗುದದ್ವಾರಕ್ಕೆ ಗಾಳಿ ಬಿಟ್ಟಿದ್ದರಿಂದ ಯೋಗೇಶ್‌ ಹೊಟ್ಟೆ ಊದಿಕೊಂಡು ಕರುಳು ಬ್ಲಾ*ಸ್ಟ್ ಆಗಿದೆ. ತಕ್ಷಣ ಯೋಗೀಶ್ ನರಳಾಟ ಕಂಡು ಮುರುಳಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಯೋಗಿಶ್ ಮೃ*ತಪಟ್ಟಿದ್ದಾನೆ.

ಸದ್ಯ ಯೋಗೀಶ್‌ ಪೋಷಕರು ಈ ಸಂಬಂಧ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 304 ಅಡಿ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ಮುರಳಿಯನ್ನು ಬಂಧಿಸಿದ್ದಾರೆ. ಘಟನೆ ಸಂಬಂಧ ಡಿಸಿಪಿ ಲಕ್ಷ್ಮೀ ಪ್ರಸಾದ್ ಮಾಹಿತಿ ನೀಡಿದ್ದಾರೆ.

Continue Reading

bangalore

WATCH VIDEO : ಬಸ್ ಫ್ರೀ ಇದ್ರೂ ಟಿಕೆಟ್ ವಿಚಾರದಲ್ಲಿ ತಗಾದೆ….ಬಸ್ ಕಂಡಕ್ಟರ್‌ನಿಂದ ಮಹಿಳೆಗೆ ಹ*ಲ್ಲೆ…ದೃಶ್ಯದ ವೀಡಿಯೋ ವೈರಲ್!

Published

on

ಬೆಂಗಳೂರು:  ಬಿಎಂಟಿಸಿ ಬಸ್ಸ್ ನಲ್ಲಿ ಕಂಡಕ್ಟರ್‌ ಹಾಗೂ ಪ್ರಯಾಣಿಕೆಯೊಡನೆ ಹಿಗ್ಗಾಮುಗ್ಗಾ ಹ*ಲ್ಲೆ ನಡೆದ ಘಟನೆ ಮಂಗಳವಾರ(ಮಾ.26) ಬೆಂಗಳೂರಿನಲ್ಲಿ ನಡೆದಿದೆ.

ಟಿಕೆಟ್ ವಿಚಾರವಾಗಿ ತಂಝೀನಾ ಇಸ್ಮಾಯೀಲ್ ಎಂಬ ಮಹಿಳೆ ಹಾಗೂ ಕಂಡಕ್ಟರ್ ನಡುವೆ ವಾಗ್ವಾದ ನಡೆದಿದ್ದು, ಮಹಿಳೆ ಕಂಡಕ್ಟರ್ ಗೆ ಕಪಾಳಮೋಕ್ಷ ಮಾಡಿದ್ದಾರೆ. ಇದರಿಂದ ಆಕ್ರೋಶಗೊಂಡ ಕಂಡಕ್ಟರ್ ಹೊನ್ನಪ್ಪ ಎಂಬವರು ಮಹಿಳೆ ಮೇಲೆ ಹಿಗ್ಗಾಮುಗ್ಗ ಹಲ್ಲೆ ನಡೆಸಿದ್ದಾರೆ.

ಮಹಿಳಾ ಪ್ರಯಾಣಿಕರ ಜತೆಗೆ ನಡೆಯುತ್ತಿದ್ದ ವಾಗ್ವಾದವನ್ನು ಬಸ್‌ನಲ್ಲಿದ್ದ ಇನ್ನೋರ್ವ ಪ್ರಯಾಣಿಕರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು ಇದೀಗ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

 

Continue Reading

bangalore

ಬ್ಯಾಂಕ್‌ನ ಇಯರ್‌ ಎಂಡ್ ಕಿರಿಕ್‌…ಉಡುಪಿ ಮೂಲದ ಮೂವರ ಜೀವಾಂತ್ಯ…!

Published

on

ಬೆಂಗಳೂರು : ಖಾಸಗಿ ಬ್ಯಾಂಕ್ ಸಾಲ ವಸೂಲಿ ವಿಚಾರದಲ್ಲಿ ಮೂವರು ತಮ್ಮ ಜೀವಾಂತ್ಯಗೊಳಿಸಿದ್ದಾರೆ.  ಖಾಸಗಿ ಬ್ಯಾಂಕ್‌ನಲ್ಲಿ ಪತಿ ಸಾಲ ಮಾಡಿದ್ದು, ಬಾಕಿ ಕಟ್ಟಲು ಉಳಿದಿತ್ತು. ಆ ಸಾಲದ ವಸೂಲಿಗೆ ಬ್ಯಾಂಕ್ ಸಿಬ್ಬಂದಿಗಳು ಸಾಲಗಾರನ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ಸಾಲ ಮಾಡಿದ ಪತಿ ಮನೆಯಿಂದ ಹೊರ ಹೋಗಿದ್ದರು.  ಆದ್ರೆ ಅಕ್ಕ ಪಕ್ಕದ ಮನೆಯವರ ಮುಂದೆ ಬ್ಯಾಂಕ್ ಸಿಬ್ಬಂದಿಗಳು ಜೋರಾಗಿ ಮಾತನಾಡಿ ಗಲಾಟೆ ಮಾಡಿದ್ದರು. ಇದರಿಂದ ಅಕ್ಕಪಕ್ಕದ ಮನೆಯವರಿಗೂ ಸಾಲದ ವಿಚಾರ ಗೊತ್ತಾದ ಹಿನ್ನಲೆಯಲ್ಲಿ ಮಾನ ಹೋಯಿತು ಎಂದು ಮನ ನೊಂದಿದ್ದಾರೆ. ಬಳಿಕ ಇಬ್ಬರು ಅವಳಿ ಗಂಡು ಮಕ್ಕಳ ಜೊತೆಯಲ್ಲಿ ತಾಯಿ ಬೆಂಕಿ ಹಚ್ಚಿಕೊಂಡು ಜೀವಾಂತ್ಯ ಗೊಳಿಸಿದ್ದಾರೆ. ಇವರು ಉಡುಪಿಯ ಅಂಬಲಪಾಡಿ ನಿವಾಸಿಗಳಾಗಿದ್ದು, ಕೆಲ ವರ್ಷದಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.  ತಾಯಿ ಸುಕನ್ಯ, ಮಕ್ಕಳಾದ ನಿಖಿತ್ ಹಾಗೂ ನಿಶ್ಚಿತ್‌ ಮೂವರು ತಮ್ಮ ಜೀವಾಂತ್ಯ ಗೊಳಿಸಿದ್ದಾರೆ. ಬೆಂಗಳೂರಿನ  ಜೆ.ಪಿ.ನಗರದ ಮೂರನೇ ಹಂತದಲ್ಲಿ ವಾಸವಾಗಿದ್ದ ಈ ಕುಟುಂಬದ ಬಗ್ಗೆ ಅಕ್ಕಪಕ್ಕದ ಜನರಲ್ಲಿ ಒಳ್ಳೆಯ ಅಭಿಪ್ರಾಯ ಇತ್ತು ಎನ್ನಲಾಗಿದೆ. ಬ್ಯಾಂಕ್ ಸಾಲದ ವಿಚಾರ ಎಲ್ಲರಿಗೂ ತಿಳಿದು ಮಾನ ಹಾನಿಯಾಗಿದೆ ಎಂದು ಈ ರೀತಿ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

 

Continue Reading

LATEST NEWS

Trending