Connect with us

    LATEST NEWS

    ಖರಗ್ ಪುರ ಎಕ್ಸ್ ಪ್ರೆಸ್ ರೈಲು ಹರಿದು ನಾಲ್ವರು ಕಾರ್ಮಿಕರ ಭಯಾನಕ ಸಾವು..!

    Published

    on

    ಖರಗ ಪುರ : ಪಶ್ಚಿಮ ಬಂಗಾಳದ ಮಿಡ್ನಾಪುರ ಜಿಲ್ಲೆಯ ಇಲ್ಲಿನ  ರೈಲ್ವೆ ವಿಭಾಗ ವ್ಯಾಪ್ತಿಯ ದುವಾ ನಿಲ್ದಾಣದ ಬಳಿ ಶನಿವಾರ ಬೆಳಿಗ್ಗೆ ಸಿಕಂದರಾಬಾದ್ ನಿಂದ ಹೊರಟ ಫಲಕ್ನುಮಾ ಎಕ್ಸ್ ಪ್ರೆಸ್ ರೈಲು ಹರಿದು ಮೂವರು ಪುರುಷರು ಸಾವನ್ನಪ್ಪಿದ್ದು, ಮತ್ತೊಬ್ಬ ವ್ಯಕ್ತಿ ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.ಬೆಳಗ್ಗೆ 10ಗಂಟೆ ಸಂದರ್ಭ  ಹಳಿಯಲ್ಲಿ  ಒಟ್ಟು ಐವರು ಕೆಲಸ ಮಾಡುತ್ತಿದ್ದರು ಆಗ ಎಕ್ಸ್ ಪ್ರೆಸ್ ರೈಲು ಹರಿದು ನಾಲ್ವರು ಸಾವನ್ನಪ್ಪಿದ್ದಾರೆ. ಘಟನೆ ಸಂದರ್ಭ  ಓರ್ವ ಕುಡಿಯುವ ನೀರು ತರಲೆಂದು ಹೋಗಿದ್ದು ಆತ ಬದುಕುಳಿದಿದ್ದಾನೆ ಎನ್ನಲಾಗಿದೆ.

    ಉಳಿದ ನಾಲ್ವರು ಭೀಕರ ಸಾವನ್ನಪ್ಪಿದ್ದಾರೆ.

    BIG BOSS

    ಮೋಕ್ಷಿತಾ ಈಗ ಯುವರಾಣಿ; ಇಬ್ಭಾಗವಾದ ಬಿಗ್ ಬಾಸ್ ಮನೆ

    Published

    on

    ‘ಬಿಗ್​ಬಾಸ್ ಸಾಮ್ರಾಜ್ಯ’ದ ಆಟದಲ್ಲಿ ಬಿಗ್​ ಟ್ವಿಸ್ಟ್ ಸಿಕ್ಕಿದೆ. ಮಂಜು ಸಾಮ್ರಾಜ್ಯ ಪತನದತ್ತ ಸಾಗುತ್ತಿದ್ದು, ಗದ್ದುಗೆ ಮೇಲೆ ಯುವರಾಣಿ ಮೋಕ್ಷಿತಾ ಕಣ್ಣು ಬಿದ್ದಿದೆ. ಸಾಮ್ರಾಜ್ಯದ ಮೇಲೆ ಯುವರಾಣಿ ಮೋಕ್ಷಿತಾರ ಕಣ್ಣು ಬಿದ್ದಿದೆ. ಮಂಜು ಮಹಾರಾಜರು ಅಲಂಕರಿಸಿರುವ ಖುರ್ಚಿ ಮೇಲೆ ಮೋಕ್ಷಿತಾ ಹೋಗಿ ಕೂತಿದ್ದಾರೆ.

    ಕಲರ್ಸ್ ಕನ್ನಡ ಇವತ್ತು ರಾತ್ರಿ ಪ್ರಸಾರವಾಗುವ ಎಪಿಡೋಡ್​ಗೆ ಸಂಬಂಧಿಸಿ ಹೊಸ ಪ್ರೊಮೋ ಹಂಚಿಕೊಂಡಿದೆ. ಬಿಗ್​ಬಾಸ್ ಸಾಮ್ರಾಜ್ಯದ ಮಂಜಣ್ಣ ಅವರ ಅಧಿಕಾರವನ್ನು ಕಸಿದುಕೊಳ್ಳಲು ಬರುತ್ತಿದ್ದಾರೆ ಅಂತಾ ಬಿಗ್​ಬಾಸ್​ ಧ್ವನಿ ಕೇಳಿಸಿದೆ. ಬೆನ್ನಲ್ಲೇ ಮಂಜು ಅಧಿಕಾರ ನಮ್ಮದೇ ಎಂದು ತೊಡೆ ತಟ್ಟಿದ್ದಾರೆ.

    ಇತ್ತ ಮೋಕ್ಷಿತಾ ಈ ಸಾಮ್ರಾಜ್ಯದ ಯುವರಾಣಿ ನಾನು ಎಂದು ಘೋಷಣೆ ಮಾಡಿಕೊಂಡಿದ್ದಾರೆ. ಅದೇ ರೀತಿ ಪ್ರಜೆಗಳಿಂದ ಯುವರಾಣಿ ಅವರಿಗೆ ಜಯವಾಗಲಿ ಎಂಬ ಘೋಷಣೆ ಕೂಡ ಮೊಳಗಿದೆ. ಅಷ್ಟರಲ್ಲೇ ಮೋಕ್ಷಿತಾ ಕ್ಯಾಪ್ಟನ್ಸಿ ರೂಮ್ ಒಳಗೆ ಹೋಗುವ ಅಧಿಕಾರ ನನಗೆ ಇದೆ ಎಂದು ನುಗ್ಗಿದ್ದಾರೆ. ಆಗ ಅಧಿಕಾರ ನಿಮಗೆ ಇಲ್ಲ. ಬಾಗಿಲು ಕ್ಲೋಸ್ ಮಾಡಿ ಎಂದು ಮಂಜು ಹೇಳಿದ್ದಾರೆ. ನಂತರ ಮತ್ತೆ ಖುರ್ಚಿ ವಿಚಾರಕ್ಕೆ ಮೋಕ್ಷಿತಾ ಮತ್ತು ಮಂಜು ನಡುವೆ ಹೋರಾಟ ನಡೆದಿದೆ. ಈ ಗದ್ದುಗೆ ಕಿತ್ತಾಟದಲ್ಲಿ ಯಾರು ಗೆದ್ದಿದ್ದಾರೆ ಅನ್ನೋದು ಇವತ್ತಿನ ಎಪಿಸೋಡ್​ನಲ್ಲಿ ಗೊತ್ತಾಗಲಿದೆ.

    Continue Reading

    FILM

    ಸೀತಾರಾಮ ಸೀರಿಯಲ್​ ವೀಕ್ಷಕರಿಗೆ ಶಾಕಿಂಗ್​ ನ್ಯೂಸ್​; ಎಲ್ಲ ಸರಿ ಅನ್ನುವಷ್ಟರಲ್ಲೇ ಮತ್ತೊಂದು ಆಘಾತ

    Published

    on

    ಸೀತಾರಾಮ ಧಾರಾವಾಹಿಯ ಮುಖ್ಯ ಆಕರ್ಷಣೆ ಸಿಹಿ ಪುಟಾಣಿ. ಸಿಹಿಗೋಸ್ಕರನೇ ಧಾರಾವಾಹಿ ನೋಡೋ ವೀಕ್ಷಕರೇ ಇದ್ದಾರೆ. ಸಿಹಿ ಇಲ್ಲ ಅಂದ್ರೇ ಸ್ಟೋರಿ ಸಪ್ಪೆ ಆಗುತ್ತೆ. ಸಿಹಿಗೆ ಗೋಳಾಡಿಸಿದ್ರೇ ಬಹುತೇಕ ಜನಕ್ಕೆ ಇಷ್ಟ ಆಗಲ್ಲ. ಸಿಹಿಯನ್ನು ಸಿಹಿಯಾಗೇ ತೋರಿಸಿ ಅನ್ನೋದು ವೀಕ್ಷಕರ ಡಿಮ್ಯಾಂಡ್ ಆಗಿತ್ತು.

    ಇನ್ನೂ, ಸೀತಾ-ರಾಮನ ಬಾಳಲ್ಲಿ ಸಿಹಿ ಕುರಿತು ಇದ್ದ ಅನುಮಾನ ವನವಾಸ ಮುಗಿದು ಇನ್ನೇನೂ ಖುಷಿ ಕ್ಷಣಗಳು ಬರುತ್ತೇ ಅನ್ನೋವಾಗಲೇ ಸ್ಟೋರಿಗೆ ಹೊಸ ಟ್ವಿಸ್ಟ್​ ಕೊಟ್ಟಿದ್ದಾರೆ. ಸಿಹಿ ಅಧ್ಯಾಯಕ್ಕೆ ಜೊತೆಯಾಗ್ತಿದ್ದಾಳೆ ಸುಬ್ಬಿ. ಹೌದು, ಹಲವು ದಿನಗಳ ಹಿಂದೆನೇ ಸಿಹಿಗೆ ಆ್ಯಕ್ಸಿಡೆಂಟ್​ ಆಗೋ ಪ್ರೋಮೋವೊಂದನ್ನು​ ರಿಲೀಸ್​ ಮಾಡಲಾಗಿತ್ತು.

    ಸೀತಾ ರಾಮನ ಬಾಳಲ್ಲಿ ಸಿಹಿ ದೂರ ಆಗ್ತಾಳೆ ಎಂಬ ಸುಳಿವು ಕೊಟ್ಟಿತ್ತು ಸೀರಿಯಲ್​ ತಂಡ. ಇದೇ ಪ್ರೋಮೋವನ್ನು ನೋಡಿದ ವೀಕ್ಷಕರು ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದರು. ಧಾರಾವಾಹಿಯಲ್ಲಿ ಸಿಹಿ ಇರಲೇಬೇಕು. ಸಿಹಿ ಇಲ್ಲದೇ ಸೀರಿಯಲ್​ ನಾವು​ ನೋಡಲ್ಲ ಅಂತ ಪ್ರೇಕ್ಷಕ ಪ್ರಭುಗಳು ಬೇಸರ ವ್ಯಕ್ತಪಡಿಸಿದ್ದರು. ಈ ಬೆನ್ನಲ್ಲೇ ಮತ್ತೊಂದು ಪಾತ್ರ ಇಂಟ್ರಡ್ಯೂಸ್​ ಮಾಡಿದೆ ತಂಡ. ಆ ಪಾತ್ರ ಬೇರೆ ಯಾವುದು ಅಲ್ಲ ಅದುವೆ ಸಿಹಿಯ ಮತ್ತೊಂದು ರೂಪ ಸುಬ್ಬಿ. ಬಡ ಕುಟುಂಬದ ಸುಬ್ಬಿ ಥೇಟ್​ ನೋಡೋಕೆ ಸಿಹಿ ಥರನೇ ಇದ್ದಾಳೆ. ಮಾತು, ನೋಟ ಒರಟಾಗಿದ್ರು ಸಿಹಿ ಹಾಗೇ ಮಗ್ಧ ಮನಸ್ಸಿನ ಪುಟಾಣಿ.

    ಸಿಹಿ ಸಾವಿನ ನಂತರ ಆತ್ಮವಾಗಿ ಸೀತಾರಾಮನ ಬದುಕಿಗೆ ಎಂಟ್ರಿ ಕೊಡ್ತಾಳೆ. ಸಿಹಿ ಸಾವು ಸೀತಾರಾಮನ ಬದುಕಿನಲ್ಲಿ ಬಿರುಗಾಳಿ ಬೀಸುತ್ತೆ. ಅಪ್ಪ-ಅಮ್ಮನಿಗೆ ಹತ್ತಿರವಾಗಲೂ ಸಿಹಿಯ ಆತ್ಮಕ್ಕೆ ಸಾಥ್​ ಕೊಡೋದು ಸುಬ್ಬಿ ಪಾತ್ರ. ಸಿಹಿ-ಸುಬ್ಬಿ ಕಾಂಬಿನೇಷನ್​ ಹೊಸ ಅಧ್ಯಾಯದಲ್ಲಿ ಮೂಡಿಬರಲಿದ್ದು, ಮನರಂಜನೆ ಡಬಲ್​ ಆಗೋದು ಪಕ್ಕಾ. ವೀಕ್ಷಕರು ಹೇಗೆ ಈ ಎರಡು ಶೇಡ್​ನ ಸ್ವೀಕರಿಸುತ್ತಾರೆ ಅಂತ ಕಾದು ನೋಡಬೇಕಿದೆ.

    Continue Reading

    LATEST NEWS

    ಐಪಿಎಲ್ 2025: ಮೊದಲ ಪಂದ್ಯದಿಂದ ಮುಂಬೈ ಪಡೆಯ ನಾಯಕ ಹಾರ್ದಿಕ್ ಪಾಂಡ್ಯ ಬ್ಯಾನ್

    Published

    on

    ಮುಂಬೈ: ಐಪಿಎಲ್ 2025ಕ್ಕಾಗಿ ಎಲ್ಲಾ ತಂಡಗಳು ಸಿದ್ಧಗೊಂಡಿವೆ. ಈ ಬಾರಿಯೂ ಮುಂಬೈ ಇಂಡಿಯನ್ಸ್ ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರೆ. ಆದರೆ ಅವರನ್ನು ಮೊದಲ ಪಂದ್ಯದಿಂದ ಬ್ಯಾನ್ ಮಾಡಲಾಗಿದೆ.

    ಹೌದು ಕಳೆದ ಆವೃತ್ತಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ನಿಗದಿತ ಸಮಯದೊಳಗೆ 20 ಓವರ್‌ಗಳನ್ನು ಪೂರ್ಣಗೊಳಿಸಿರಲಿಲ್ಲ. ಹೀಗಾಗಿ ನಾಯಕ ಹಾರ್ದಿಕ್ ಪಾಂಡ್ಯಗೆ 30 ಲಕ್ಷ ರೂ. ದಂಡ ಹಾಗೂ ಒಂದು ಪಂದ್ಯದಿಂದ ನಿಷೇಧ ಹೇರಲಾಗಿದೆ.

    ಈ ಒಂದು ಪಂದ್ಯದ ನಿಷೇಧದ ಶಿಕ್ಷೆ ಐಪಿಎಲ್ ಸೀಸನ್ 18ರಲ್ಲಿ ಮುಂದುವರೆಯಲಿದೆ. ಅದರಂತೆ ಐಪಿಎಲ್ 2025ರಲ್ಲಿ ಮುಂಬೈ ಇಂಡಿಯನ್ಸ್ ಪರ ಮೊದಲ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯಗೆ ಕಣಕ್ಕಿಳಿಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ಮೊದಲ ಪಂದ್ಯದಲ್ಲಿ ತಂಡವನ್ನು ಜಸ್‌ಪ್ರೀತ್ ಬುಮ್ರಾ ಅಥವಾ ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದಾರೆ.

    Continue Reading

    LATEST NEWS

    Trending