ಮುಂಬೈ : ಬಾಲಿವುಡ್ ಮಹಾ ಮಾರಿ ಕೊರೊನಾದಿಂದ ನಲುಗಿದೆ. ಅನೇಕ ಹಿರಿಯ ಕಿರಿಯ ನಟ- ನಟಿಯರು, ನಿರ್ಮಾಪಕರು ಕೊರೊನಾ 2ನೇ ಅಲೆಯಿಂದ ಭಾದಿತರಾಗಿದ್ದಾರೆ.
ಈಗಾಗಲೇ ಅಮಿತಾಬ್ ಬಚ್ಚನ್, ಅಮೀರ್ ಖಾನ್,ಆಲಿಯಾ ಭಟ್, ರಣಬೀರ್ ಕಪೂರ್, ಪರೇಶ್ ರಾವಲ್, ಆರ್. ಮಾಧವನ್, ಮನೋಜ್ ಭಾಜಪಾಯಿ, ಐಶ್ವರ್ಯ ರೈ ಹೀಗೆ ಘಟಾನುಘಟಿಗಳು ಕೊರೊನಾದ ಕರಾಳ ಬಾಹುಗಳಲ್ಲಿ ನಲುಗಿದ್ದಾರೆ.
ಇದೀಗ ಬಾಲಿವುಡ್ನ ಖ್ಯಾತ ನಟ ಅಕ್ಷಯ್ ಕುಮಾರ್ ಅವರಿಗೆ ಕೊರೊನಾ ವೈರಸ್ ಪಾಸಿಟಿವ್ ಆಗಿದೆ.
ಈ ವಿಚಾರವನ್ನು ಅವರು ಸೋಶಿಯಲ್ ಮೀಡಿಯಾ ಮೂಲಕ ಖಚಿತಪಡಿಸಿದ್ದಾರೆ. ಅಲ್ಲದೆ, ಎಲ್ಲರೂ ಸುರಕ್ಷಿತವಾಗಿರುವಂತೆ ಮನವಿ ಮಾಡಿಕೊಂಡಿದ್ದಾರೆ.
ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಲು ಅಕ್ಷಯ್ ಕುಮಾರ್ ಅವರು ಸೋಶಿಯಲ್ ಮೀಡಿಯಾ ಮೂಲಕ ಪ್ರಯತ್ನಿಸಿದ್ದರು. ಈಗ ಅವರಿಗೆ ಕೊರೊನಾ ಸೋಂಕು ತಗುಲಿರುವುದು ಅಭಿಮಾನಿಗಳಿಗೆ ಬೇಸರ ತರಿಸಿದೆ.
ಸದಾ ಶೂಟಿಂಗ್, ಡಬ್ಬಿಂಗ್ ಎಂದು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿರುವ ಅಕ್ಷಯ್ ಕುಮಾರ್ ಅವರು ಇತ್ತೀಚೆಗೆ ‘ರಾಮ್ ಸೇತು’ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದರು.
ಈಗ ಅವರು ಕ್ವಾರಂಟೈನ್ ಆಗಿದ್ದಾರೆ. ‘ಇಂದು ಬೆಳಿಗ್ಗೆ ನನಗೆ ಕೋವಿಡ್-19 ಪಾಸಿಟಿವ್ ಆಗಿದೆ.
ಎಲ್ಲ ನಿಯಮಗಳನ್ನು ಪಾಲಿಸಿ ನಾನು ತಕ್ಷಣ ಐಸೊಲೇಟ್ ಆಗಿದ್ದೇನೆ. ಸದ್ಯ ಹೋಮ್ ಕ್ವಾರಂಟೈನ್ ಆಗಿದ್ದು, ಚಿಕಿತ್ಸೆ ಪಡೆಯುತ್ತಿದ್ದೇನೆ.
ನನ್ನ ಜೊತೆ ಸಂಪರ್ಕದಲ್ಲಿದ್ದ ಎಲ್ಲರೂ ನೀವಾಗಿಯೇ ಪರೀಕ್ಷೆ ಮಾಡಿಸಿಕೊಳ್ಳಿ ಮತ್ತು ಎಚ್ಚರಿಕೆ ವಹಿಸಿ ಎಂದು ವಿನಂತಿಸಿಕೊಳ್ಳುತ್ತೇನೆ.
ಶೀಘ್ರದಲ್ಲೇ ನಾನು ಗುಣಮುಖನಾಗಿ ಬರುತ್ತೇನೆ’ ಎಂದು ಅಕ್ಷಯ್ ಕುಮಾರ್ ಟ್ವೀಟ್ ಮಾಡಿದ್ದಾರೆ.
Wishing you a speedy recovery. Everyone knows you are a real fighter & will win the battle against #COVID19.
Pl take care & get well soon.#AkshayKumar https://t.co/ywM300B81Y
— Dr Narottam Mishra (@drnarottammisra) April 4, 2021