Connect with us

LATEST NEWS

ಕೋಲಾರದಲ್ಲಿ 2021ರ ಮೊದಲ ದಿನವೇ ಭೀಕರ ಅಪಘಾತ: ತಂದೆ ಮಗ ಸೇರಿ ಮೂವರು ಬಲಿ..! 

Published

on

ಕೋಲಾರದಲ್ಲಿ 2021ರ ಮೊದಲ ದಿನವೇ ಭೀಕರ ಅಪಘಾತ: ತಂದೆ ಮಗ ಸೇರಿ ಮೂವರು ಬಲಿ..!

ಕೊಲಾರ:ಮಾಲೂರು ತಾಲೂಕಿನ ಹರಿಪುರ ಗೇಟ್ ಬಳಿ ನಿನ್ನೆ ಶುಕ್ರವಾರ ರಾತ್ರಿ ಭೀಕರ ಅಪಘಾತ ಸಂಭವಿಸಿದೆ. ತಂದೆ-ಮಗ ಸೇರಿ ಮೂವರು ದುರಂತ ಅಂತ್ಯ ಕಂಡಿದ್ದಾರೆ.

ಕುಪ್ಪಂನಿಂದ ಮಾಲೂರಿಗೆ ಪತ್ನಿ ಮತ್ತು ಮಗನೊಂದಿಗೆ ಮಾಲೂರು ಪಟ್ಟಣಕ್ಕೆ ಬೈಕ್​ನಲ್ಲಿ ಮುನಿರಾಜು ಆಗಮಿಸುತ್ತಿದ್ದರು. ಮಾಲೂರು ಪಟ್ಟಣದಿಂದ ಟೇಕಲ್​ನತ್ತ ಅನಿಲ್ ಕುಮಾರ್ ಕೂಡ ಬೈಕ್​ನಲ್ಲಿ ತೆರಳುತ್ತಿದ್ದರು

.

ಮೃತರಲ್ಲಿ  ನೊಸಗೆರೆಯ 35 ವರ್ಷದ ಮುನಿರಾಜು), ಇವರ ಪುತ್ರ 9 ವರ್ಷದ ಪ್ರವೀಣ್  ಹಾಗೂ ಟೇಕಲ್​ನ 24 ವರ್ಷದ ಅನಿಲ್ ಮೃತ ದುರ್ದೈವಿಗಳಾಗಿದ್ದಾರೆ.

ಹರಿಪುರ ಗೇಟ್ ಬಳಿ ಈ ಎರಡೂ ಬೈಕ್​ಗಳು ಮುಖಾಮುಖಿ ಡಿಕ್ಕಿಯಾಗಿದ್ದು, ಪ್ರವೀಣ್ ಸ್ಥಳದಲ್ಲೇ ಮೃತಪಟ್ಟರು. ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಮುನಿರಾಜು ಹಾಗೂ ಅನಿಲನ್ನು  ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಬದುಕುಳಿಯಲಿಲ್ಲ ಎಂದು ಹೇಳಗಾಗಿದೆ.

ಮುನಿರಾಜು ಪತ್ನಿ ಗಾಯಗೊಂಡಿದ್ದು, ಮಾಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡೂ ಬೈಕ್​ಗಳು ನಜ್ಜುಗುಜ್ಜಾಗಿವೆ. ಮಾಲೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

DAKSHINA KANNADA

ಮಂಗಳೂರು : ತಿಳುವಳಿಕೆ ಪತ್ರದ ಒಡಂಬಡಿಕೆಗೆ ಸಹಿ ಹಾಕುವ ಕಾರ್ಯಕ್ರಮ

Published

on

ಮಂಗಳೂರು: ಮಂಗಳೂರಿನ ಶಕ್ತಿನಗರದಲ್ಲಿರುವ ಅರಿವು ಅರ್ಲಿ ಇಂಟರ್ ವೆನ್ಶನ್ ಸೆಂಟರ್ – ವಿಶೇಷ ಮಕ್ಕಳ ತರಬೇತಿ ಕೇಂದ್ರ ಹಾಗೂ ಯೆನೆಪೊಯಾ ನರ್ಸಿಂಗ್ ಕಾಲೇಜ್ ಪರಸ್ಪರ ಸೇವಾ ಸಹಯೋಗದ ತಿಳುವಳಿಕೆ ಪತ್ರದ ಒಡಂಬಡಿಕೆಗೆ ಸಹಿ ಹಾಕುವ ಕಾರ್ಯಕ್ರಮ ಅರಿವು ಕೇಂದ್ರದಲ್ಲಿ ಬುಧವಾರ ನಡೆಯಿತು.


ಯೆನೆಪೊಯಾ ನರ್ಸಿಂಗ್ ಕಾಲೇಜಿನ ಪ್ರಿನ್ಸಿಪಾಲ್ ಡಾ.ಲೀನಾ ಕೆ.ಸಿ ಹಾಗೂ ಅರಿವು ಟ್ರಸ್ಟ್ ಅಧ್ಯಕ್ಷ ಡಾ.ಕೆ.ಎಸ್. ಭಟ್ ಅವರು ಒಡಂಬಡಿಕೆ ಪತ್ರಕ್ಕೆ ಸಹಿ ಹಾಕುವ ಮೂಲಕ ಶುಭ ಹಾರೈಸಿ, ಎರಡೂ ಸಂಸ್ಥೆಗಳಿಂದ ವಿಶೇಷ ಅಗತ್ಯವುಳ್ಳ ಮಕ್ಕಳ ಮಾನಸಿಕ ವಿಕಾಸಕ್ಕೆ ಇದು ಸಹಕಾರಿಯಾಗಲಿ ಎಂದು ಹೇಳಿದರು. ಅರಿವು ಸಂಸ್ಥೆಯ ಸ್ಥಾಪಕ ನಿರ್ದೇಶಕಿ ಪೂರ್ಣಿಮಾ ಆರ್. ಭಟ್ ಅವರು ಸಂಸ್ಥೆಯ ಬೆಳವಣಿಗೆ ಕುರಿತು ವಿವರಿಸಿ, ಕಾರ್ಯಕ್ರಮದ ಉದ್ದೇಶಗಳನ್ನು ತಿಳಿಸಿದರು.

ಯೆನೆಪೊಯಾ ಮೆಡಿಕಲ್ ಕಾಲೇಜಿನ ಮನಃಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ರಾಜೇಶ್ ಎಂ. ಅವರು ವಿಶೇಷ ಅಗತ್ಯವುಳ್ಳ ಮಕ್ಕಳ ಆಹಾರ ಪದ್ಧತಿ ಹಾಗೂ ಬೆಳವಣಿಗೆಗೆ ಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭ ಯೆನೆಪೊಯಾ ನರ್ಸಿಂಗ್ ಕಾಲೇಜಿನ ಮಾನಸಿಕ ಆರೋಗ್ಯ ವಿಭಾಗ ಮುಖ್ಯಸ್ಥ ಮತ್ತು ಪ್ರೊಫೆಸರ್ ಡಾ. ಬಿನಿಷ ಪಾಪಚ್ಚನ್, ಅಸೋಸಿಯೇಟ್ ಪ್ರೊಫೆಸರ್ ಗಳಾದ ವಿಜಿ ಪ್ರಸಾದ್ ಸಿ, ಸುಬಿನ್ ರಾಜ್ ಆರ್, ಉಪನ್ಯಾಸಕಿ ವಿನೀಷಾ, ಅರಿವು ಟ್ರಸ್ಟ್ ಕಾರ್ಯದರ್ಶಿ ಡಾ. ರಾಧಾಕೃಷ್ಣ ಬಿ. ಭಟ್, ಟ್ರಸ್ಟ್ ನ ಲೆಕ್ಕಪರಿಶೋಧಕ ಸಿಎ ಬಿ.ಅರವಿಂದ ಕೃಷ್ಣ, ಅರಿವು ಟ್ರಸ್ಟ್ ನ ವಿವಿಧ ಸಮಿತಿಗಳ ಸದಸ್ಯರಾದ ಡಾ. ಶೀತಲ್ ಉಳ್ಳಾಲ್, ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘದ ಜಿಲ್ಲಾ ಕಾರ್ಯದರ್ಶಿ ಹಾಗೂ ತಾಲೂಕು ಅಧ್ಯಕ್ಷೆ ಆಶಾಲತಾ, ಉಪನ್ಯಾಸಕಿ ತೇಜಸ್ವಿನಿ ರೈ, ಪತ್ರಕರ್ತ ಹರೀಶ ಮಾಂಬಾಡಿ, ಅರಿವು ಶಿಕ್ಷಕಿಯರಾದ ಸಹನಾ ಕಿರಣ್, ಯಶ್ವಿನಿ, ರಶ್ಮಿತಾ, ತಿಲೋತ್ತಮಾ, ರಮ್ಯಾ ಸಂದೀಪ್, ಜಯಶ್ರೀ ಉಪಸ್ಥಿತರಿದ್ದರು.

ಇದನ್ನೂ ಓದಿ : ಚಾರ್ಲಿ ಕಡೆಯಿಂದ ಸಿಕ್ತು ಗುಡ್ ನ್ಯೂಸ್; ಸಂಭ್ರಮ ಹಂಚಿಕೊಂಡ ರಕ್ಷಿತ್ ಶೆಟ್ಟಿ

ಯೆನಪೊಯಾ ನರ್ಸಿಂಗ್ ಸಂಸ್ಥೆಯ ರಕ್ಷಿತಾ ಕಾರ್ಯಕ್ರಮ ನಿರ್ವಹಿಸಿದರು. ಈ ಸಂದರ್ಭ ವಿಶೇಷ ಮಕ್ಕಳು ಹಾಗೂ ಯೆನೆಪೊಯಾ ವಿದ್ಯಾರ್ಥಿಗಳಿಂದ ಕಾರ್ಯಕ್ರಮಗಳು ನಡೆದವು.

Continue Reading

FILM

ಮತ್ತೆ ಬರಲಿದೆಯೇ ‘ಮಜಾ ಟಾಕೀಸ್’ ..! ಈ ಬಗ್ಗೆ ಸೃಜನ್ ಹೇಳಿದ್ದೇನು?

Published

on

ಮಂಗಳೂರು: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಮಜಾ ಟಾಕೀಸ್ ಎಲ್ಲರ ಮನೆಮಾತಾಗಿರುವ ಟಾಪ್ ಶೋ. ಸೃಜನ್ ಲೋಕೇಶ್ ಸಾರಥ್ಯದಲ್ಲಿ ಮೂಡಿಬರುತ್ತಿದ್ದ ಈ ಶೋ ಗೆ ಹೆಚ್ಚು ಟಿಆರ್ ಪಿ ಕೂಡಾ ಸಿಗ್ತಾ ಇತ್ತು. ಇನ್ನು ಮಾತಿನ ಮಲ್ಲ ಸೃಜನ್ ಕೌಂಟರ್ ಫಿದಾ ಆಗದೋರೇ ಇಲ್ಲ.  ಈ ಶೋಗೆ ಘಟಾನುಘಟಿ ಸೆಲೆಬ್ರೆಟಿಗಳಿಂದ ಹಿಡಿದು ಚಿತ್ರರಂಗದ ತಾರಾಗಣವೇ ಅತಿಥಿಗಳಾಗಿ ಬಂದಿದ್ದರು.

maja takies

ಸಿನೆಮಾ ಪ್ರಮೋಷನ್ ಗೆ ಅತ್ಯುತ್ತಮ ವೇದಿಕೆ ಅಂದ್ರೆ ಅದು ಸೃಜನ್ ಅವರ ‘ಮಜಾ ಟಾಕೀಸ್’. ಹೌದು, ಸಿನೆಮಾವನ್ನು ಜನರಿಗೆ ರೀಚ್ ಮಾಡೋದು ತಂಬಾನೆ ದೊಡ್ಡ ಟಾಸ್ಕ್. ಈ ಸಮಯದಲ್ಲಿ ಮಜಾ ಟಾಕೀಸ್ ಎಂಬ ಶೋ ಮೂಲಕ ಜನರಿಗೆ ಹೊಸ ಸಿನೆಮಾಗಳ ಪರಿಚಯವನ್ನು ನೀಡುವಂತ ಕೆಲಸವನ್ನು ಮಾಡುತ್ತಿತ್ತು.  ಸಿನಿಮಾ ಇಂಡಸ್ಟ್ರಿಗೆ ಪ್ರಚಾರ ಮಾಡಲು ನಮ್ಮ ಶೋ ಸಹಾಯ ಮಾಡುತ್ತಿದೆ ಅಂದ್ರೆ ಖುಷಿ ವಿಚಾರವೇ. 450 ರಿಂದ 600 ಸಿನಿಮಾ ತಂಡಗಳಿಂದ ಒಂದು ರೂಪಾಯಿಯೂ ಪಡೆಯದೆ ಪ್ರಚಾರ ಮಾಡಿದ್ದೀವಿ. ಸಾಮಾನ್ಯವಾಗಿ ಪ್ರಚಾರಕ್ಕೆ ತುಂಬಾ ಹಣ ಖರ್ಚು ಆಗುತ್ತದೆ ಆದರೆ ಮಜಾ ಟಾಕೀಸ್ ಮೂಲಕ ಸಹಾಯ ಆಗಿದೆ ಪ್ರಚಾರ ಸಿಕ್ಕಿದೆ ಅಂದ್ರೆ ಅದಕ್ಕಿಂತ ಹೆಮ್ಮೆ ಏನು ಬೇಕು? ಎಂದು ಸೃಜನ್ ಹೇಳಿದ್ದಾರೆ.

ಸ್ವಿಡ್ಜರ್ ಲ್ಯಾಂಡ್‌ನ ಬೀದಿಯಲ್ಲಿ ಮಸ್ತ್ ಮಜಾ ಮಾಡಿದ ಡಿಂಪಲ್ ಕ್ವೀನ್ ರಚಿತಾ ರಾಮ್‌

ಮತ್ತೆ ಆರಂಭ ಮಜಾಟಾಕೀಸ್:

ಸದ್ಯಕ್ಕೆ ಕಲರ್ಸ್‌ ಕನ್ನಡದಲ್ಲಿ ನಮ್ಮಮ್ಮ ಸೂಪರ್ ಸ್ಟಾರ್-3 ರಿಯಾಲಿಟಿ ಶೋ ನಡೆಯುತ್ತಿದ್ದು ಗ್ರ್ಯಾಂಡ್‌ ಫಿನಾಲೆ ಹಂತಕ್ಕೆ ತಲುಪಿದೆ. ಈ ಶೋ ದಲ್ಲಿ ಸೃಜನ್ ಸೇರಿದಂತೆ ತಾರಾ, ಅನುಪ್ರಭಾಕರ್ ತೀರ್ಪುಗಾರರಾಗಿದ್ದಾರೆ. ಈ ವೇಳೆ ಸೃಜನ್ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಮಜಾ ಟಾಕೀಸ್ ಇನ್ನು ಆರಂಭಗೊಳ್ಳಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ. ಮಜಾಟಾಕೀಸ್ ಮತ್ತೆ ತೆರೆಗೆ ತರುವ ಪ್ಲ್ಯಾನ್ ಇದೆ. ಆದರೆ ಯಾವಾಗ ಬರುತ್ತೆ ಗೊತ್ತಿಲ್ಲ. ಅದು ವಾಹಿನಿಯವರಿಗೆ ಬಿಟ್ಟ ನಿರ್ಧಾರ. ಎಲೆಕ್ಷನ್ ನಡಿತಿದೆ. ಐಪಿಎಲ್‌ ಇದೆ. ಮುಂದೆ ಟಿ20 ವಿಶ್ವಕಪ್ ಬರಲಿದೆ. ಇವುಗಳ ಮಧ್ಯೆ ಬಿಗ್‌ಬಾಸ್, ಅನುಬಂಧ ಅವಾರ್ಡ್ಸ್‌ ಎಲ್ಲಾ ಇರುವುದರಿಂದ ಚಾನೆಲ್‌ ನಿರ್ಧಾರ ಮಾಡಬೇಕು ಎಂದು ಹೇಳಿದ್ದಾರೆ.

 

Continue Reading

FILM

ಚಾರ್ಲಿ ಕಡೆಯಿಂದ ಸಿಕ್ತು ಗುಡ್ ನ್ಯೂಸ್; ಸಂಭ್ರಮ ಹಂಚಿಕೊಂಡ ರಕ್ಷಿತ್ ಶೆಟ್ಟಿ

Published

on

ಮೈಸೂರು : ಎರಡು ವರ್ಷಗಳ ಹಿಂದೆ ತೆರೆಕಂಡು ಭಾರೀ ಯಶಸ್ಸು ಬಾಚಿಕೊಂಡ ಚಿತ್ರ 777 ಚಾರ್ಲಿ. ಈ ಸಿನಿಮಾ ನೋಡಿದವರು ಚಾರ್ಲಿಯನ್ನು ಮೆಚ್ಚಿಕೊಂಡಿದ್ದಾರೆ. ಇದೀಗ ಚಾರ್ಲಿ ಕಡೆಯಿಂದ ಶುಭಸುದ್ದಿ ಸಿಕ್ಕಿದೆ. ಹೌದು, ಚಾರ್ಲಿ ಪಾತ್ರ ಮಾಡಿದ್ದ ನಾಯಿ, 6 ಮರಿಗಳಿಗೆ ಜನ್ಮ ನೀಡಿದೆ. 5  ಹೆಣ್ಣು ಮರಿಗಳು, ಒಂದು ಗಂಡು ಮರಿಗೆ ಅವಳು ಜನ್ಮ ನೀಡಿದ್ದಾಳೆ.  ಸ್ವತಃ ರಕ್ಷಿತ್ ಶೆಟ್ಟಿ ಇನ್‌ಸ್ಟಾಗ್ರಾಂನಲ್ಲಿ ಲೈವ್ ಬಂದು ಈ ವಿಚಾರವನ್ನು ಹಂಚಿಕೊಂಡಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಲೈವ್‌ಗೆ ಬಂದ ಅವರು, ಮೈಸೂರಿನಲ್ಲಿದ್ದು, ಚಾರ್ಲಿ ಆರು ಮುದ್ದಾದ ಮರಿಗಳಿಗೆ ಜನ್ಮ ನೀಡಿದ್ದಾಳೆ. ಅವನ್ನು ನೋಡಲು ಬಂದಿದ್ದೇನೆ ಎಂದು ಸಂಭ್ರಮ ಹಂಚಿಕೊಂಡಿದ್ದಾರೆ. ಚಾರ್ಲಿಯನ್ನು ನೋಡಲು ರಕ್ಷಿತ್ ಶೆಟ್ಟಿ ಮೈಸೂರಿನ ಪ್ರಮೋದ್ ಅವರ ಮನೆಗೆ ಭೇಟಿ ಕೊಟ್ಟಿದ್ದಾರೆ.

ಇದನ್ನೂ ಓದಿ : ಒಂದು ರೇಷ್ಮೆ ಸೀರೆ ತಯಾರಿಸಲು ಎಷ್ಟು ರೇಷ್ಮೆ ಹುಳುಗಳು ಬೇಕು ಗೊತ್ತೇ..?

ಅಲ್ಲಿಂದಲೇ ಲೈವ್ ಮಾಡಿ, ಚಾರ್ಲಿ ಮತ್ತು ಮರಿಗಳನ್ನು ತೋರಿಸಿದ್ದಾರೆ. ಚಾರ್ಲಿ ಸಿನಿಮಾಗೆ ಸಾಕಷ್ಟು ಪ್ರೀತಿ ಸಿಕ್ಕಿದೆ, ವಿಶೇಷವಾಗಿ ಮಕ್ಕಳು ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಅವರಿಗೆ ಈ ವಿಚಾರ ತಿಳಿಸಬೇಕು ಎನ್ನಿಸಿತು ಅದಕ್ಕಾಗಿ ಲೈವ್‌ಗೆ ಬಂದೆ ಎಂದು ಹೇಳಿದ್ದಾರೆ.


ಸದ್ಯ ರಕ್ಷಿತ್ ಶೆಟ್ಟಿ ರಿಚರ್ಡ್ ಆಂಟನಿ ಸಿನಿಮಾದ ತಯಾರಿಯಲ್ಲಿದ್ದಾರೆ. ಹೊಂಬಾಳೆ ಫಿಲಂಸ್ ಈ ಸಿನಿಮಾಗೆ ಬಂಡವಾಳ ಹೂಡುತ್ತಿದೆ.

Continue Reading

LATEST NEWS

Trending