Connect with us

DAKSHINA KANNADA

ಮಂಗಳೂರಿನಲ್ಲಿ ದುಷ್ಕರ್ಮಿಗಳಿಂದ ಸೌಹಾರ್ಧ ಕದಡುವ ಹೇಯ ಕುಕೃತ್ಯ..!

Published

on

ಮಂಗಳೂರಿನಲ್ಲಿ ದುಷ್ಕರ್ಮಿಗಳಿಂದ ಸೌಹಾರ್ಧ ಕದಡುವ ಹೇಯ ಕುಕೃತ್ಯ

ಮಂಗಳೂರು: ಮಂಗಳೂರಿನ ವಿವಿಧ ದೈವಸ್ಥಾನದ ಕಾಣಿಕೆ ಹುಂಡಿಗಳಲ್ಲಿ ನಕಲಿ ನೋಟುಗಳಲ್ಲಿ ಅವಹೇಳನ ಬರಹ ಬರೆದು ಹಾಕಿರುವ ಘಟನೆ ಬೆಳಕಿಗೆ ಬಂದಿದೆ.

ಮೊದಲೇ ಕೋಮು ಸೂಕ್ಷ್ಮ ಪ್ರದೇಶವಾಗಿರುವ ಮಂಗಳೂರಿನಲ್ಲಿ ಇಂತಹ ದುಷ್ಕೃತ್ಯ ಘಟನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.ಕೀಡಿಗೇಡಿ ಕೃತ್ಯ ನಡೆಸಿರುವ ದುಷ್ಕರ್ಮಿಗಳ, ಬಂಧನವಾಗುವರೆಗೂ ಹೋರಾಟ ಮುಂದುವರೆಸುವುದಾಗಿ ದೈವಸ್ಥಾನಗಳ ಮುಖಂಡರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ನಗರದ ಮೂರು ದೈವಸ್ಥಾನಗಳಲ್ಲಿ ಕೊಟ್ಟಾರದ ಕಲ್ಲುರ್ಟಿ ದೈವಸ್ಥಾನದಲ್ಲೂ ದುಷ್ಕರ್ಮಿಗಳಿಂದ ಹೇಯ ಕುಕೃತ್ಯ ನಡೆದಿದೆ. ನಕಲಿ ನೋಟುಗಳಲ್ಲಿ ಹಿಂದೂ ಧರ್ಮವನ್ನು ಅವಹೇಳನ ಮಾಡಿ ಬರೆದಿರುವಂತಹ ಬರಹ ಹಿಂದೂ ಧರ್ಮಕ್ಕೆ  ಮಾಡಿದ ಮಹಾಪರಾಧವಾಗಿದೆ.

ಭಗವಾನ್ ಶ್ರೀ ಬಬ್ಬುಸ್ವಾಮಿ ಕ್ಷೇತ್ರ ಶೆಟ್ಲೆಗ್ರಾಮ ಬಾಬುಗುಡ್ಡೆ ಇದರ ಕಾಣಿಕೆ ಡಬ್ಬಿಗೆ ಯಾರೋ ಕಿಡಿಗೇಡಿಗಳು 200 ರೂ ಕೋಟಾನೋಟಿನಲ್ಲಿ ಅಸಭ್ಯವಾಗಿ ಬರೆದು ಮತ್ತು ಬಳಸಿದ ಕಾಂಡೋಮ್ ನ್ನು ಹಾಕಿರುತ್ತಾರೆ .

   

ಈ ಬಗ್ಗೆ ಧಾರ್ಮಿಕ ಮುಖಂಡರ ಬಗ್ಗೆಯೂ ಅವಹೇಳನಕಾರಿ ಬರಹ ಪತ್ತೆಯಾಗಿದೆ

ಯಾರೇ ಈ ಕೃತ್ಯ ಮಾಡಿದ್ದರೂ    ಅಂತವರಿಗೆ ದೈವಸ್ಥಾನದ ಕಾರಣೀಕ ದೈವಗಳು ತಕ್ಕ. ಶಿಕ್ಷೆ ನೀಡುತ್ತಾರೆ ಎಂದು ಬಲವಾದ ನಂಬಿಕೆಯಲ್ಲಿ ಇಂದು ಗ್ರಾಮಸ್ಥರು , ಊರ ಭಕ್ತಾದಿಗಳು ಸೇರಿ ಪ್ರಾರ್ಥನೆ ಮಾಡಿದ್ದಾರೆ.

ಈ ಸಂದರ್ಭ ನಗರ ಪಾಲಿಕೆ ಸದಸ್ಯರುಗಳಾದ ಶ್ರೀ ಶೈಲೇಶ್ ಶೆಟ್ಟಿ, ಶ್ರೀ ಭರತ್ ಕುಮಾರ್ ಎಸ್ , ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಶ್ರೀ ರತೀಂದ್ರನಾಥ್ ಎಚ್ , ಅಖಿಲ ಭಾರತ ಮುಂಡಾಲ ಯುವ ವೇದಿಕೆ , ವಿಶ್ವಹಿಂದು ಪರಿಷತ್, ಬಜರಂಗದಳ ಅತ್ತಾವರ ಚಕ್ರಪಾಣಿ ಶಾಖೆ ಮತ್ತು ಛತ್ರಪತಿ ಶಾಖೆ ಬಾಬುಗುಡ್ಡ ಶಾಖೆ ಸದಸ್ಯರುಗಳು, ಉಪಸ್ಥಿತರಿದ್ದರು.

DAKSHINA KANNADA

Sullia: ನದಿಗೆ ಸ್ನಾನಕ್ಕೆ ತೆರಳಿದ ವ್ಯಕ್ತಿ ಶವವಾಗಿ ಪತ್ತೆ..!

Published

on

ಸುಳ್ಯ: ನದಿಗೆ ಸ್ನಾನಕ್ಕೆಂದು ಹೋದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಸುಳ್ಯದಲ್ಲಿ ನಡೆದಿದೆ.

ಮೃತಪಟ್ಟ ವ್ಯಕ್ತಿ ಎರಡನೇ ಮಣ್ಣಗೇರಿಯ ನಿವಾಸಿ ವೆಂಕಟರಮಣ ಎಂದು ಗುರುತಿಸಲಾಗಿದೆ.

ಸುಳ್ಯದಲ್ಲಿರುವ ಆರಂಬೂರು ಸೇತುವೆ ಬಳಿಯ ಪಯಸ್ವಿನಿ ನದಿಗೆ ಸ್ನಾನಕ್ಕೆಂದು ಹೋದ ವ್ಯಕ್ತಿಯು ಕಾಣೆಯಾಗಿದ್ದಾರೆ. ಬಳಿಕ ಅವರ ಹುಡುಕಾಟ ನಡೆಸಲಾಗಿದೆ. ಆದರೆ ಎಷ್ಟು ಹುಡುಕಾಟ ನಡೆಸಿದರೂ ಸಿಕ್ಕಿರಲಿಲ್ಲ. ಆ ಕಾರಣದಿಂದ ಸುಳ್ಯದ ಪೈಚಾರ್ ನ ಮುಳುಗು ತಜ್ಞರ ತಂಡವು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಮೇಳಕ್ಕೆತ್ತುವಲ್ಲಿ ಯಶಸ್ವಿಯಾಗಿದೆ. ಸುಳ್ಯ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ

Continue Reading

DAKSHINA KANNADA

Sullia: ಮದ್ಯ ಸೇವಿಸಿ ಅಡ್ಡಾದಿಡ್ಡಿ ವಾಹನ ಚಲಾವಣೆ- ಎಪಿಎಂಸಿ ಕಾರ್ಯದರ್ಶಿ ಅಮಾನತು

Published

on

ಸುಳ್ಯ: ಮದ್ಯಪಾನ ಮಾಡಿ ಹೆದ್ದಾರಿಯಲ್ಲಿ ಅಡ್ಡಾದಿಡ್ಡಿಯಾಗಿ ಸರಕಾರಿ ವಾಹನ ಚಲಾಯಿಸಿದ ಪ್ರಕರಣದ ಆರೋಪಿ ಸುಳ್ಯದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ನವೀನ್‌ ಕುಮಾರ್‌ನನ್ನು ಅಮಾನತುಗೊಳಿಸಿ ಇಲಾಖೆ ಆದೇಶ ಹೊರಡಿಸಿದೆ.

ನವೀನ್‌ ಕುಮಾರ್ ಮಂಗಳವಾರ ರಾತ್ರಿ ಅರಂಬೂರು ಬಳಿ ರಾಜ್ಯ ಹೆದ್ದಾರಿಯಲ್ಲಿ ಅಪಾಯಕಾರಿಯಾಗಿ ಸರಕಾರಿ ಇಲಾಖೆಯ ನಾಮಫ‌ಲಕವಿರುವ ವಾಹನವನ್ನು ಅಪಾಯಕಾರಿಯಾಗಿ ಚಲಾಯಿಸಿದ್ದನೆಂದು ಆರೋಪಿಸಲಾಗಿದೆ. ಅಡ್ಡಾದಿಡ್ಡಿಯಾಗಿ ವಾಹನ ಚಲಾಸುತ್ತಿರುವುದನ್ನು ಗಮನಿಸಿದ ಸ್ಥಳೀಯರು ವಾಹನವನ್ನು ಬೆನ್ನಟ್ಟಿ ಅಡ್ಡಗಟ್ಟಿ ವಿಚಾರಿಸಿದ್ದರು. ಈ ಸಂದರ್ಭ ತಾನು ಸುಳ್ಯ ಎಪಿಎಂಸಿ ಕಾರ್ಯದರ್ಶಿ, ನನ್ನದು ತಪ್ಪಾಯಿತು ಎಂದು ಕ್ಷಮೆ ಯಾಚಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಬುಧವಾರ ಎಪಿಎಂಸಿ ಕಾರ್ಯದರ್ಶಿಯವರನ್ನು ಅಮಾನತುಗೊಳಿಸಿ ಆದೇಶ ಮಾಡಲಾಗಿದೆ. ಬೆಳ್ತಂಗಡಿ ಎಪಿಎಂಸಿ ಕಾರ್ಯದರ್ಶಿ ರವೀಂದ್ರ ಅವರಿಗೆ ಸುಳ್ಯ ಎಪಿಎಂಸಿ ಪ್ರಭಾರ ವಹಿಸಲಾಗಿದೆ.

 

Continue Reading

DAKSHINA KANNADA

ಕಟೀಲು ಕ್ಷೇತ್ರಕ್ಕೆ ಮಾಜಿ ಸಚಿವ, ಶಾಸಕ ಶ್ರೀರಾಮುಲು ಭೇಟಿ

Published

on

ಕಿನ್ನಿಗೋಳಿ: ಪುರಾಣ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಮಾಜಿ ಸಚಿವ, ಶಾಸಕ ಶ್ರೀರಾಮುಲು ಭೇಟಿ ನೀಡಿದರು.

ದೇವಳದ ವತಿಯಿಂದ ಶ್ರೀ ರಾಮುಲು ಅವರನ್ನು ಗೌರವಿಸಲಾಯಿತು.

ಈ ಸಂದರ್ಭ ವೆಂಕಟರಮಣ ಆಸ್ರಣ್ಣ, ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು ಉಪಸ್ಥಿತರಿದ್ದರು.

ಕ್ಷೇತ್ರದಲ್ಲಿ ಅವರು ಅನ್ನಪ್ರಸಾದವನ್ನು ಸ್ವೀಕರಿಸಿ ಸರಳತೆ ಮೆರೆದರು. ಬಳಿಕ ಕ್ಷೇತ್ರದ ಕುರಿತಂತೆ ಹೆಚ್ಚಿನ ಮಾಹಿತಿ ಪಡೆದುಕೊಂಡರು.

Continue Reading

LATEST NEWS

Trending