Connect with us

    LATEST NEWS

    ಮಂಗಳೂರು: ಶಾರ್ಟ್ ಸರ್ಕ್ಯೂಟ್‌ನಿಂದ ಬಸ್‌ಗೆ ಬೆಂಕಿ

    Published

    on

    ಮಂಗಳೂರು: ಕೆಟ್ಟು ನಿಂತಿದ್ದ ಬಸ್ಸೊಂದು ರಿಪೇರಿ ಮಾಡಿ ಮತ್ತೆ ಸ್ಟಾರ್ಟ್‌ ಮಾಡುವ ವೇಳೆ ಶಾರ್ಟ್ ಸರ್ಕ್ಯೂಟ್‌ನಿಂದ ಬಸ್‌ಗೆ ಬೆಂಕಿ ತಗುಲಿದ ಘಟನೆ ನಗರದ ಕೆಪಿಟಿ ಬಳಿ ಇಂದು ಮಧ್ಯಾಹ್ನದ ವೇಳೆ ನಡೆದಿದೆ.


    ಕೆಪಿಟಿ ಬಳಿ ಖಾಸಗಿ ಬಸ್ ತಾಂತ್ರಿಕ ಸಮಸ್ಯೆಯಿಂದಾಗಿ ಕೆಟ್ಟು ನಿಂತಿತ್ತು.

    ಈ ಹಿನ್ನೆಲೆಯಲ್ಲಿ ಮೆಕಾನಿಕ್ ರಿಪೇರಿ ಮಾಡಿ ಸ್ಟಾರ್ಟ್ ಮಾಡುವ ವೇಳೆ ಶಾರ್ಟ್ ಸರ್ಕ್ಯುಟ್ ಆಗಿ ಬೆಂಕಿ ತಗುಲಿದೆ.

    ತಕ್ಷಣವೇ ಎಚ್ಚೆತ್ತ ಬಸ್‌ ಚಾಲಕ, ನಿರ್ವಾಹಕ ನೀರು ಹಾಕಿ ಬೆಂಕಿ ನಂದಿಸಿದ್ದಾರೆ. ನಂತರ ಅಗ್ನಿಶಾಮಕ ದಳ ಸಿಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ.

    ಯಾವುದೇ ಪ್ರಾಣಾಪಾಯವಾಗಿಲ್ಲ.

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಮಂಗಳೂರು: ಕೆ.ಎಸ್.ಆರ್.ಟಿ.ಸಿ. ದಸರಾ ವಿಶೇಷ ಪ್ರವಾಸ ಪ್ಯಾಕೇಜ್

    Published

    on

    ಮಂಗಳೂರು : ಕೆ.ಎಸ್.ಆರ್.ಟಿ.ಸಿ. ಮಂಗಳೂರು ವಿಭಾಗದ ವತಿಯಿಂದ ದಸರಾ ಪ್ರಯುಕ್ತ ಮಂಗಳೂರು, ಕೊಲ್ಲೂರು, ಮಡಿಕೇರಿ, ಮುರುಡೇಶ್ವರ ಸುತ್ತುಮುತ್ತಲಿನ ದೇವಸ್ಥಾನಗಳ ದರ್ಶನಕ್ಕೆ ವಿಶೇಷ ಪ್ಯಾಕೇಜ್ ಪ್ರವಾಸವನ್ನು ಅಕ್ಟೋಬರ್ 3 ರಿಂದ 12ರವರೆಗೆ ಆಯೋಜಿಸಲಾಗಿದೆ.

    ಮಂಗಳೂರು ಬಸ್ಸು ನಿಲ್ದಾಣದಿಂದ ಅಕ್ಟೋಬರ್ 3ರಂದು ಬೆಳಿಗ್ಗೆ 7 ಗಂಟೆಗೆ ಶರವು ಗಣಪತಿ ದೇವಸ್ಥಾನದ ಮುಂಭಾಗದಲ್ಲಿ ಪೂಜೆಯೊಂದಿಗೆ ಪ್ರವಾಸ ಆರಂಭಗೊಳ್ಳಲಿದೆ ಎಂದು ಕೆ.ಎಸ್.ಆರ್.ಟಿ.ಸಿ.  ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಇದನ್ನೂ ಓದಿ : ದೇವರನ್ನು ರಾಜಕೀಯದಿಂದ ದೂರವಿಡಿ ; ಸುಪ್ರೀಂ ಕೋರ್ಟ್ ಸೂಚನೆ..!

    ಹೆಚ್ಚಿನ ಮಾಹಿತಿಗೆ ಮಂಗಳೂರಿನ ಬಿಜೈನಲ್ಲಿರುವ ಕೆ.ಎಸ್.ಆರ್.ಟಿ.ಸಿ. ಮಂಗಳೂರು ವಿಭಾಗೀಯ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.

    Continue Reading

    LATEST NEWS

    ದೇವರನ್ನು ರಾಜಕೀಯದಿಂದ ದೂರವಿಡಿ ; ಸುಪ್ರೀಂ ಕೋರ್ಟ್ ಸೂಚನೆ..!

    Published

    on

    ನವ ದೆಹಲಿ : ತಿರುಪತಿ ಲಡ್ಡು ವಿವಾದದಲ್ಲಿ ಆಂಧ್ರ ಸಿಎಂ ಚಂದ್ರಬಾಬು ನಾಯ್ಡುಗೆ ಸುಪ್ರೀಂ ಕೋರ್ಟ್‌ ಚಾಟಿ ಬೀಸಿದೆ. ದೇವರನ್ನು ರಾಜಕೀಯದಿಂದ ಹೊರಗೆ ಇಡಿ ಎಂದು ಕೋರ್ಟ್‌ ಹೇಳಿದೆ. ಕನಿಷ್ಟ ಪಕ್ಷ ದೇವರುಗಳನ್ನು ರಾಜಕೀಯದಿಂದ ದೂರ ಇಡಬೇಕು ಎಂದು ಹೇಳಿರುವ ಸುಪ್ರೀಂ ಕೋರ್ಟ್‌, ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬಳಸಲಾಗಿದೆ ಎಂದು ಸಿಎಂ ಚಂದ್ರಬಾಬು ನಾಯ್ಡು ಅವರ ಹೇಳಿಕೆಯನ್ನೇ ಪ್ರಶ್ನೆ ಮಾಡಿದೆ. ಸಿಎಂ ಮಾಡಿರುವ ಆರೋಪಕ್ಕೆ ಸಾಕ್ಷಿ ಒದಗಿಸುವಂತೆ ಕೋರ್ಟ್‌ ಸೂಚನೆ ನೀಡಿದೆ. ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಕೆ.ವಿ ವಿಶ್ವನಾಥನ್‌ ಅವರ ಪೀಠವು ಸಿಎಂ ಚಂದ್ರಬಾಬು ನಾಯ್ಡು ಅವರು ನೀಡಿದ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದೆ.

    ಸಾಂವಿಧಾನಕವಾಗಿ ಉನ್ನತ ಹುದ್ದೆಯಲ್ಲಿ ಇರುವ ವ್ಯಕ್ತಿಯಾಗಿ ಈ ರೀತಿ ಕೋಟ್ಯಾಂತರ ಜನರ ಭಾವನೆ ಮೇಲೆ ಪರಿಣಾಮ ಬೀರುವ ಹೇಳಿಕೆ ನೀಡಬಾರದು ಎಂದು ಪೀಠ ಹೇಳಿದೆ. ತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಬಳಸಲಾಗಿದೆ ಎಂಬ ವಿಚಾರವಾಗಿ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಲು ಕೋರಿ ಸಲ್ಲಿಸಿದ ಅರ್ಜಿಗಳನ್ನು ಪೀಠವು ವಿಚಾರಣೆ ನಡೆಸುತ್ತಿದೆ. ಈ ಸಂದರ್ಭದಲ್ಲಿ ದೇವರನ್ನು ರಾಜಕೀಯದಿಂದ ದೂರ ಇಡಬೇಕು ಎಂದು ನಿರೀಕ್ಷಿಸುವುದಾಗಿ ಪೀಠ ಆಂಧ್ರ ಸಿಎಂ ಚಂದ್ರಬಾಬು ನಾಯ್ಡುಗೆ ಚಾಟಿ ಬೀಸಿದೆ. ಮುಂದಿನ ವಿಚಾರಣೆಯನ್ನು ಅಕ್ಟೋಬರ್ 3 ಕ್ಕೆ ಮುಂದೂಡಲಾಗಿದೆ.

    Continue Reading

    LATEST NEWS

    ಬಾವಿಯ ಕಾಂಪೌಂಡ್‌ ಸ್ವಚ್ಛಗೊಳಿಸುವಾಗ ಬಾವಿಗೆ ಬಿದ್ದು ವ್ಯಕ್ತಿ ಸಾ*ವು

    Published

    on

    ಮಂಗಳೂರು: ಬಾವಿಯ ಕಾಂಪೌಂಡ್‌ ಸ್ವಚ್ಛಗೊಳಿಸುವಾಗ ಬಾವಿಗೆ ಬಿದ್ದು ವ್ಯಕ್ತಿ ಸಾ*ವನ್ನಪ್ಪಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕೋಟೆಕಾರುನಲ್ಲಿ ಸ್ಥಳ ಕಾಳಿಕಾಂಬ ದೇವಸ್ಥಾನದ ಬಳಿಯ ನೆತ್ತಿಲ ಎಂಬಲ್ಲಿ ನಡೆದಿದೆ.

    ನವೀನ್ ಬೆಳ್ಳಾಡ(48) ಮೃತ ವ್ಯಕ್ತಿ. ನವೀನ್ ಅವರು ಭಾನುವಾರ ಸಂಜೆ ಮನೆಯ ಹಿಂಭಾಗದ ಬಾವಿಯ ಕಾಂಪೌಂಡ್ ಸ್ವಚ್ಛಗೊಳಿಸುತ್ತಿದ್ದರು. ಈ ವೇಳೆ ಆಯ ತಪ್ಪಿ ಬಾವಿಗೆ ಬಿದ್ದು ಮೃ*ತಪಟ್ಟಿದ್ದಾರೆ. ಮನೆಯೊಳಗೆ ನವೀನ್ ಕಾಣದಾಗ ಪತ್ನಿ ಮತ್ತು ಮಕ್ಕಳು ಹುಡುಕಾಡಿ ಬಾವಿಯ ಬಳಿ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ.

    ಸ್ಥಳೀಯರು ಸೇರಿ ನವೀನ್ ರನ್ನು ಬಾವಿಯಿಂದ ಮೇಲಕ್ಕೆತ್ತಿದ್ದು ಅದಾಗಲೇ ಅವರು ಮೃ*ತಪಟ್ಟಿದ್ದರು ಎನ್ನಲಾಗಿದೆ. ಸೆಂಟ್ರಿಗ್ ಕೆಲಸ ಮಾಡುತ್ತಿದ್ದ ನವೀನ್ ಅವರಿಗೆ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ಪುತ್ರಿ ಮತ್ತು ನಾಲ್ಕನೇ ತರಗತಿ ಓದುತ್ತಿರುವ ಪುತ್ರನಿದ್ದಾನೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

    Continue Reading

    LATEST NEWS

    Trending