Connect with us

    LATEST NEWS

    ಮಂಗಳೂರು: ಗಂಡನ ಮನೆಯಲ್ಲಿ ವಿವಾಹಿತೆ ನಿಗೂಢ ಸಾವು: ಗಂಡ ಮತ್ತು ಅತ್ತೆ ವಿರುದ್ಧ ಪ್ರಕರಣ ದಾಖಲು

    Published

    on

    ಮಂಗಳೂರು: ವಿವಾಹಿತೆಯೊಬ್ಬಳು ಗಂಡನ ಮನೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಘಟನೆ ನಗರದ ಫಳ್ನೀರಿನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರ ವಿರುದ್ದ ಪ್ರಕರಣ ದಾಖಲಾಗಿದೆ. ಕೊಲೆ ಶಂಕೆ ವ್ಯಕ್ತವಾಗಿದೆ.


    ಆಯಿಶಾ ಅಫೀಫಾ ನಿಗೂಢವಾಗಿ ಸಾವಿಗೀಡಾದವಳು. ಘಟನೆ ಸಂಬಂಧ ಆಯಿಶಾ ಗಂಡ ಶಹ್‌ಬಾನ್ ಮಿಸ್ಬಾ ಮತ್ತು ಆತನ ತಾಯಿ ರಝಿಯಾ ವಿರುದ್ಧ ಪ್ರಕರಣ ದಾಖಲಾಗಿದೆ
    ಘಟನೆ ವಿವರ
    ನಗರದ ಬಂದರ್‌ನ ಎಂ. ಹಸನಬ್ಬ ಪುತ್ರಿ ಆಯಿಶಾ ಅಫೀಫಾಳನ್ನು 2019ರಲ್ಲಿ ಶಹ್‌ಬಾನ್ ಮಿಸ್ಬಾಗೆ ಮದುವೆ ಮಾಡಿಕೊಡಲಾಗಿತ್ತು. ಅವರು ಫಳ್ನೀರಿನ ಫ್ಲಾಟ್‌ ವೊಂದರಲ್ಲಿ ವಾಸವಾಗಿದ್ದರು. ಈ ದಂಪತಿಗೆ ಮಕ್ಕಳಿರಲಿಲ್ಲ. ಜ.30ರಂದು ಮಧ್ಯಾಹ್ನ ಆಯಿಷಾ ತಂದೆ ತಾಯಿಗೆ ಕರೆ ಮಾಡಿ ಮಗಳಿಗೆ ನಿಮ್ಮ ಮಗಳಿಗೆ ಹುಷಾರಿಲ್ಲ ಅಂದಿದ್ದರು.

    ಅದರಂತೆ ಕುಟುಂಬಸ್ಥರು ಅಲ್ಲಿಗೆ ತೆರಳಿದಾಗ ಮಗಳು ಸೋಫಾದಲ್ಲಿ‌ ಮಲಗಿದ್ದು, ಮಾತನಾಡುತ್ತಿರಲಿಲ್ಲ. ತಕ್ಷಣ ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಪರೀಕ್ಷಿಸಿದ ವೈದ್ಯರು‌ ಹಫೀಫಾ ಮೃತಪಟ್ಟಿರುವುದಾಗಿ ತಿಳಿಸಿದರು.

    ನಂತರ ಮಗಳ ಅಂತ್ಯ ಸಂಸ್ಕಾರ ನಡೆಸಲಾಗಿದೆ. ಮಗಳಿಗೆ ಅತ್ತೆ ಮತ್ತು ಅಳಿಯ ಸೇರಿ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದರು.

    ಅವರಿಬ್ಬರು ಸೇರಿ ಮಗಳನ್ನು ಕೊಲೆ ಮಾಡಿ ನಂತರ ಆತ್ಮಹತ್ಯೆಗೈದಿದ್ದಾಳೆ ಎಂದು ಸುಳ್ಳು ಹೇಳಿದ್ದಾರೆ.‌

    ಹಾಗಾಗಿ ಇಬ್ಬರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಯೇಷಾ ತಂದೆ ದೂರಿನಲ್ಲಿ ಅಗ್ರಹಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು‌ ತನಿಖೆ ನಡೆಸುತ್ತಿದ್ದಾರೆ.

    Click to comment

    Leave a Reply

    Your email address will not be published. Required fields are marked *

    LATEST NEWS

    ಐಸ್‌ಕ್ರೀಂನಲ್ಲಿ ಪತ್ತೆಯಾಗಿದ್ದ ಬೆರಳು ಯಾರದ್ದು ಗೊತ್ತಾ..? ಪೊಲೀಸರು ಹೇಳಿದ್ದೇನು?

    Published

    on

    ಮುಂಬೈ/ಮಂಗಳೂರು: ಕೆಲ ದಿನಗಳ ಹಿಂದೆ ಮುಂಬೈನಲ್ಲಿ ವೈದ್ಯರೊಬ್ಬರು ಆನ್‌ಲೈನ್‌ನಲ್ಲಿ ಐಸ್‌ಕ್ರೀಂ ಆರ್ಡರ್ ಮಾಡಿದ್ದಾರೆ. ಆದ್ರೆ ಐಸ್‌ಕ್ರೀಂನಲ್ಲಿ  ಮನುಷ್ಯ ನ ಬೆರಳು ಪತ್ತೆಯಾಗಿದ್ದು, ಅಚ್ಚರಿಯನ್ನು ಮೂಡಿಸಿತ್ತು. ಮೊದಲು ಇದು ವೆಲ್ನೆಟ್ ಅಂದುಕೊಂಡಿದ್ದರು. ಬಳಿಕ ಕೂಲಂಕುಷವಾಗಿ ಪರಿಶೀಲನೆ ಮಾಡಿದಾಗ ಅದು ಮನುಷ್ಯನ ಬೆರಳೆಂದು ಗೊತ್ತಾಗಿದೆ. ಈ ಕುರಿತು ವೈದ್ಯರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದರು.

    Read More..; ಆನ್​ಲೈನ್​ ಮೂಲಕ ಆರ್ಡರ್​ ಮಾಡಿದ್ದ ಐಸ್​ಕ್ರೀಂನಲ್ಲಿ ಮನುಷ್ಯನ ಬೆರಳು ಪತ್ತೆ

    ಇದೀಗ ಆನ್‌ಲೈನ್ ಮೂಲಕ ತರಿಸಿದ್ದ ಐಸ್‌ಕ್ರೀಂ ನಲ್ಲಿ ಪತ್ತೆಯಾಗಿದ್ದಬೆರಳು ಯಾರದ್ದು ಎಂಬುದರ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.  ಪುಣೆಯಲ್ಲಿ ಐಸ್‌ಕ್ರೀಂ ತಯಾರಿಕಾ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬಂದಿಯ ಕೈ ಬೆರಳು ಎಂದು ಹೇಳಲಾಗಿದೆ. ಐಸ್‌ಕ್ರೀಂ ತಯಾರಿಕಾ ಫ್ಯಾಕ್ಟರಿಗೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಕೆಲ ದಿನಗಳ ಹಿಂದೆ ಇಲ್ಲಿನ ಸಿಬಂದಿಯೊಬ್ಬರು ಕೆಲಸ ಮಾಡುವಾಗ ಕೈ ಬೆರಳು ತುಂಡರಿಸಿತ್ತು.  ಹೀಗಾಗಿ ಆತನದ್ದೇ  ಈ ಕೈಬೆರಳು ಎಂದು ಅಂದಾಜಿಸಲಾಗಿದೆ. ವ್ಯಕ್ತಿಯ ಡಿಎನ್‌ಎ ಮಾದರಿಗಳನ್ನು ಪರೀಕ್ಷೆಗಾಗಿ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದ್ದು ನಿಖರ ಮಾಹಿತಿಗಾಗಿ ಕಾದು ನೋಡಬೇಕಿದೆ.

    Continue Reading

    LATEST NEWS

    ಅಯೋಧ್ಯೆ ರಾಮ ಮಂದಿರದಲ್ಲಿ ಗುಂಡಿಗೆ ಯೋಧನ ಜೀವಾಂತ್ಯ..!

    Published

    on

    ಅಯೋಧ್ಯಾ : ಅಯೋಧ್ಯೆಯ ರಾಮ ಮಂದಿರದ ಭದ್ರತೆಗೆ ನಿಯೋಜನೆಗೊಂಡಿದ್ದ ಎಸ್‌ಎಸ್‌ಎಫ್‌ ಯೋಧ ಅನುಮಾನಾಸ್ಪದವಾಗಿ ಗುಂಡು ತಾಗಿ ಸಾ*ವನ್ನಪ್ಪಿದ್ದಾರೆ. ಜೂನ್ 19 ರ ಮುಂಜಾನೆ 5.25 ಕ್ಕೆ ಈ ಘಟನೆ ನಡೆದಿದ್ದು, ಯೋಧನ ಹಣೆಗೆ ಗುಂಡು ತಾಗಿ ಮಂದಿರದ ವಿಐಪಿ ಗೇಟ್ ಬಳಿ ಮೃ*ತಪಟ್ಟಿದ್ದಾನೆ. ಮೃ*ತ ಯೋಧನನ್ನು ಶತ್ರುಘ್ನ ವಿಶ್ವಕರ್ಮ ಎಂದು ಗುರುತಿಸಲಾಗಿದ್ದು, ಘಟನೆ ಹೇಗಾಯ್ತು ಅನ್ನೋದು ಇನ್ನೂ ನಿಗೂಢವಾಗಿ ಉಳಿದಿದೆ.

    ಮೂಲಗಳ ಪ್ರಕಾರ, ರಾಮಮಂದಿರ ಸಂಕೀರ್ಣದ ವಿಐಪಿ ಗೇಟ್ ಬಳಿ ಗುಂಡಿನ ಸದ್ದು ಕೇಳಿ ಬಂದಿದೆ. ಸಹೋದ್ಯೋಗಿ ಭದ್ರತಾ ಸಿಬ್ಬಂದಿ ಓಡಿ ಬಂದು ನೋಡಿದಾಗ ಶತ್ರುಘ್ನ ವಿಶ್ವಕರ್ಮ ಹಣೆಗೆ ಗುಂಡು ತಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ರವಾನಿಸಲಾಯಿತಾದ್ರೂ ಆ ವೇಳೆಗೆ ಅವರು ಮೃ*ತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಇವರು ಅಂಬೇಡ್ಕರ್ ನಗರದ ನಿವಾಸಿಯಾಗಿದ್ದು, ಘಟನಾ ಸ್ಥಳಕ್ಕೆ ಐಜಿ ಹಾಗೂ ಎಸ್‌ಎಸ್‌ಪಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

    ಘಟನೆ ವೇಳೆ ಶತ್ರುಘ್ನ ವಿಶ್ವಕರ್ಮ ಮೊಬೈಲ್ ನೋಡುತ್ತಿದ್ದು, ಅವರ ಜೊತೆ ಬೇರೆ ಸಿಬ್ಬಂದಿ ಇದ್ದರು ಎಂದು ಮೊದಲ ಮಾಹಿತಿ ದೊರೆತಿದೆ. ಆದ್ರೆ, ಗುಂಡು ಹಣೆಗೆ ಹೇಗೆ ತಾಗಿತು ಅನ್ನೋ ಬಗ್ಗೆ ಯಾರಿಂದಲೂ ಸರಿಯಾದ ಉತ್ತರ ಸಿಕ್ಕಿಲ್ಲ. ಈ ಬಗ್ಗೆ ಯೋಧ ಶತ್ರುಘ್ನ ವಿಶ್ವಕರ್ಮ ಅವರ ಸಹೋದರರು ಆರೋಪಿಸಿದ್ದಾರೆ. ಸಹೋದರನ ಸಾ*ವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಅವರು ತನಿಖೆಗೆ ಆಗ್ರಹಿಸಿದ್ದಾರೆ.

    Continue Reading

    LATEST NEWS

    ಮೆಗಾಸ್ಟಾರ್ ಚಿರಂಜೀವಿಯ ಮಾಜಿ ಅಳಿಯ ಹಠಾತ್ ನಿಧ*ನ

    Published

    on

    ಮಂಗಳೂರು / ಚೆನ್ನೈ : ಮೆಗಾಸ್ಟಾರ್ ಚಿರಂಜೀವಿಯ ಮಾಜಿ ಅಳಿಯ ಶಿರೀಶ್ ಭಾರಧ್ವಜ್ ಹೃದಯಾ*ಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಶಿರೀಶ್, ಮೆಗಾಸ್ಟಾರ್ ಚಿರಂಜೀವಿಯ ಪುತ್ರಿ ಶ್ರಿಜಾ ಕೊನೆಡೆಲಾ ಅವರನ್ನು ವಿವಾಹವಾಗಿದ್ದರು. ಈ ವಿವಾಹಕ್ಕೆ ಚಿರಂಜೀವಿ ಅವರ ತೀವ್ರ ವಿರೋಧವಿತ್ತು, ಹಾಗಾಗಿ ಕುಟುಂಬಕ್ಕೆ ತಿಳಿಸದೆ ಶಿರೀಶ್ ಹಾಗೂ ಶ್ರೀಜಾ ವಿವಾಹವಾಗಿದ್ದರು. ಆದರೆ ಬಳಿಕ ಶ್ರಿಜಾ, ಶೀರೀಶ್ ಅವರಿಂದ ವಿಚ್ಛೇದನ ಪಡೆದುಕೊಂಡಿದ್ದರು, ಬುಧವಾರ (ಜೂನ್ 19) ಬೆಳಿಗ್ಗೆ ಶಿರೀಶ್ ಇಹಲೋಕ ತ್ಯಜಿಸಿದ್ದಾರೆ.


    ಶಿರೀಶ್ ಕಳೆದ ಕೆಲವು ತಿಂಗಳಿನಿಂದ ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿದ್ದು, ಅದಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಆದರೆ, ಅವರು ಬುಧವಾರ ಬೆಳಿಗ್ಗೆ ಹೃದಯಾ*ಘಾತದಿಂದ ಮೃತಪಟ್ಟಿದ್ದಾರೆ.

    ವಿರೋಧದ ನಡುವೆ ಮದುವೆಯಾಗಿದ್ದ ಶಿರೀಶ್ – ಶ್ರೀಜಾ :

    ಶಿರೀಶ್ ಹಾಗೂ ಶ್ರೀಜಾ ಕುಟುಂಬದವರನ್ನು ಎದುರು ಹಾಕಿಕೊಂಡು ವಿವಾಹವಾಗಿದ್ದು ಭಾರಿ ವಿವಾದ ಸೃಷ್ಟಿಸಿತ್ತು. ಆ ಸಮಯದಲ್ಲಿ ಪವನ್ ಕಲ್ಯಾಣ್ ಸೇರಿದಂತೆ ಕೆಲವರಿಂದ ತಮಗೆ ಬೆದರಿಕೆ ಇರುವುದಾಗಿ ಶ್ರೀಜಾ ದೂರನ್ನೂ ನೀಡಿದ್ದರು.

    ಇದನ್ನೂ ಓದಿ : ಪತ್ನಿಯ ಅಗಲುವಿಕೆಗೆ ಜೀವಾಂತ್ಯಗೊಳಿಸಿದ ಶೌರ್ಯ ಪ್ರಶಸ್ತಿ ವಿಜೇತ ಐಪಿಎಸ್ ಅಧಿಕಾರಿ ..!

    ಶ್ರೀಜಾ ಹಾಗೂ ಶಿರೀಶ್ ಮದುವೆಯಾದ ಕೆಲ ವರ್ಷಗಳಲ್ಲಿ ಅವರಿಗೆ ಮಗಳೊಬ್ಬಳು ಜನಿಸಿದಳು. ಅದಾದ ಬಳಿಕ ಶ್ರೀಜಾ ಶಿರೀಶ್​ರಿಂದ ವಿಚ್ಛೇದನ ಪಡೆದು ಮರು ಮದುವೆ ಆದರು. ಆ ಬಳಿಕ ಶಿರೀಶ್ ಸಹ ಮತ್ತೊಂದು ಮದುವೆಯಾದರು.

    Continue Reading

    LATEST NEWS

    Trending