Connect with us

    LATEST NEWS

    ಉಡುಪಿ: ಅವಧಿ ಮೀರಿ ಹೊಟೇಲ್‌ ಅವ್ಯವಹಾರ; ಬಾರ್ ಆ್ಯಂಡ್ ರೆಸ್ಟೋರೆಂಟ್ ರದ್ದು

    Published

    on

    ಉಡುಪಿ: ವಿವಿದೆಡೆ ವೇಶ್ಯಾವಾಟಿಕೆ ಹಾಗೂ ಅವಧಿ ಮೀರಿ ಹೊಟೇಲ್‌ಗ‌ಳು ಕಾರ್ಯಾಚರಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಉಡುಪಿ ನಗರ ಭಾಗದಲ್ಲಿ ಪೊಲೀಸರು ಅಕ್ಟೋಬರ್ 24ರ ತಡರಾತ್ರಿ ಕಾರ್ಯಾಚರಣೆ ನಡೆಸಿ ಎಚ್ಚರಿಕೆ ನೀಡಿದ್ದರು.

    ಮುಖ್ಯವಾಗಿ ಹಳೆ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣ, ನರ್ಮ್ ಬಸ್‌ ತಂಗುದಾಣ, ಸಿಟಿ, ಸರ್ವಿಸ್‌ ಬಸ್‌ ತಂಗುದಾಣದಲ್ಲಿ ಅನಗತ್ಯವಾಗಿ ಇದ್ದವರನ್ನು ತೆರಳುವಂತೆ ಸೂಚಿಸಲಾಯಿತು. ಜತೆಗೆ ಹೊಟೇಲ್‌ಗ‌ಳಿಗೂ ತೆರಳಿ ಎಚ್ಚರಿಕೆ ನೀಡಲಾಗಿತ್ತು.

    ನಗರ ಠಾಣೆಯ ಪೊಲೀಸ್‌ ನಿರೀಕ್ಷಕ ಶ್ರೀಧರ ಸತಾರೆ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿತ್ತು.

    ಮಣಿಪಾಲ ಠಾಣಾ ವ್ಯಾಪ್ತಿಯ ಕಟ್ಟಡ ಸಂಖ್ಯೆ 4-94E4 ರಲ್ಲಿ ನಡೆಸುತ್ತಿರುವ Dee-Tee(ಭವಾನಿ) ಲಾಡ್ಜಿಂಗ್ & ರೆಸ್ಟೋರೆಂಟ್ ಹಾಗೂ ಕಟ್ಟಡ ಸಂಖ್ಯೆ 2-7E, E1, E2, E3, E4, E5ರಲ್ಲಿ ಶಾಂಭವಿ ಅಸೋಸಿಯೇಟ್ಸ್ ನ 7th Heaven(Ecstays), ಎಂಬ ಬಾರ್ & ರೆಸ್ಟೋರೆಂಟ್ ಗಳಲ್ಲಿ ಗ್ರಾಹಕರಿಗೆ ತಡರಾತ್ರಿವರೆಗೆ ಅವಕಾಶ ಮಾಡಿಕೊಟ್ಟಿರುವುದರಿಂದ, ಬಾರ್ ರೆಸ್ಟೋರೆಂಟ್ ನಿರ್ವಹಣೆ ವೇಳೆ ಯಾವುದೇ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳದೆ ಇರುವುದರಿಂದ ಮತ್ತು ಪದೇ ಪದೇ ಅಪರಾಧ ಪ್ರಕರಣಗಳು ನಡೆಯುತ್ತಿರುವುದರಿಂದ, ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಉದ್ದಿಮೆಯ ಪರವಾನಿಗೆಯನ್ನು ರದ್ದುಪಡಿಸುವಂತೆ, ಪೊಲೀಸ್ ಅಧೀಕ್ಷಕರಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು.

    7th Heaven ಬಾರ್ ಅಂಡ್ ರೆಸ್ಟೋರೆಂಟ್ ಗೆ ಸಂಬಂಧಿಸಿದಂತೆ ಮಣಿಪಾಲ ಠಾಣೆಯಲ್ಲಿ 2024ನೇ ಸಾಲಿನಲ್ಲಿ ಡಿಜೆ ಬಳಸಿ ಪಾರ್ಟಿ ನಡೆಸುತ್ತಿರುವ ಬಗ್ಗೆ ದಾಖಲಾದ ಒಂದು ಪ್ರಕರಣ ಸೇರಿದಂತೆ ಒಟ್ಟು ನಾಲ್ಕು ಪ್ರಕರಣಗಳು, ಮುಂಬೈಯಲ್ಲಿ ಒಂದು ಪ್ರಕರಣ ಹಾಗೂ ಅಬಕಾರಿ ಇಲಾಖೆಯಿಂದ ಒಂದು ಪ್ರಕರಣ ದಾಖಲಾಗಿರುತ್ತದೆ.

    ತಡರಾತ್ರಿಯಾದ್ರೂ ವ್ಯವಹಾರ ನಿಲ್ಲಿಸದೆ ಇದ್ದು, ಎಚ್ಚರಿಕೆ ನೀಡಿದ್ರೂ ಹಳೇ ಚಾಳಿ ಮುಂದುವರಿಸಿದ ಕಾರಣ ಜಿಲ್ಲಾಧಿಕಾರಿ ಉದ್ಯಮ ಸ್ಥಳಕ್ಕೆ ಬೀಗ ಜಡಿದು ಪರವಾನಿಗೆ ರದ್ದು ಮಾಡಿದ್ದಾರೆ.

     

    ಇದನ್ನೂ ಓದಿ : ಉಡುಪಿ: ವೇಶ್ಯಾವಾಟಿಕೆ,ಅವಧಿ ಮೀರಿ ಹೊಟೇಲ್‌ ವ್ಯವಹಾರ; ತಡರಾತ್ರಿ ಕಾರ್ಯಾಚರಣೆ

     

    ಅದರಂತೆ ಉಡುಪಿ ನಗರಸಭೆ ವ್ಯಾಪ್ತಿಯ ಮಣಿಪಾಲದ ಈಶ್ವರ ನಗರದಲ್ಲಿರುವ ಕಟ್ಟಡ ಸಂಖ್ಯೆ 4-94E4 ರಲ್ಲಿ ನಡೆಸುತ್ತಿರುವ Dee-Tee(ಭವಾನಿ) ಲಾಡ್ಜಿಂಗ್ & ರೆಸ್ಟೋರೆಂಟ್ ಹಾಗೂ ನಗರಸಭಾ ವ್ಯಾಪ್ತಿಯ ಕಟ್ಟಡ ಸಂಖ್ಯೆ 2-7E, E1, E2, E3, E4, E5ರಲ್ಲಿ ಶಾಂಭವಿ ಅಸೋಸಿಯೇಟ್ಸ್ ನ 7th Heaven(Ecstays), ಬಾರ್ & ರೆಸ್ಟೋರೆಂಟ್ ಎಂಬ ಹೆಸರಿನ ಉದ್ದಿಮೆಗಳ ಪರವಾನಿಗೆಯನ್ನು ನಗರಸಭಾ ವತಿಯಿಂದ ರದ್ದುಪಡಿಸಲಾಗಿದೆ.

    Click to comment

    Leave a Reply

    Your email address will not be published. Required fields are marked *

    LATEST NEWS

    ಅನಾರೋಗ್ಯದ ಸಂದರ್ಭದಲ್ಲಿ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡ ಸಂಗಾತಿ; ಮುತ್ತಿನಂಥ ಪತ್ನಿಗೆ ಡಿವೋರ್ಸ್‌ ನೀಡಿದ ಪತಿ

    Published

    on

    ಮಂಗಳೂರು: ವ್ಯಕ್ತಿಯೊಬ್ಬ ತನ್ನ ಕಷ್ಟ ಕಾಲದಲ್ಲಿ ಜೊತೆಯಾಗಿ ನಿಂತಿದ್ದ ಹೆಂಡ್ತಿಗೆ ಕೈಕೊಟ್ಟು ಇನ್ನೊಬ್ಬಳನ್ನು ಮದುವೆಯಾಗಿದ್ದಾನೆ. ಹೌದು ಆ ವ್ಯಕ್ತಿ ತಾನು ಪಾರ್ಶ್ವವಾಯುಗೆ ತುತ್ತಾಗಿ 6 ವರ್ಷಗಳ ಕಾಲ ಹಾಸಿಗೆ ಹಿಡಿದಾಗ, ಆತನನ್ನು ಯಾವುದೇ ಕಾರಣಕ್ಕೂ ಬಿಟ್ಟು ಹೋಗದೆ ಕಣ್ಣಲ್ಲಿ ಕಣ್ಣಿಟ್ಟು ಆರೈಕೆ ಮಾಡಿದಂತಹ ಮುತ್ತಿನಂಥ ಪತ್ನಿಗೆ ಡಿವೋರ್ಸ್‌ ಕೊಟ್ಟು ಇನ್ನೊಬ್ಬಳನ್ನು ಮದುವೆಯಾದ ಘಟನೆ ನಡೆದಿದೆ.

    ಪತಿ ಪಾರ್ಶ್ವವಾಯುಗೆ ತುತ್ತಾಗಿ ಹಾಸಿಗೆ ಹಿಡಿದ ಸಂದರ್ಭದಲ್ಲಿ ತನ್ನನ್ನು ಮಗುವಿನಂತೆ ಆರೈಕೆ ಮಾಡಿದ ಪತ್ನಿಗೆ ಡಿವೋರ್ಸ್‌ ನೀಡಿ ಮತ್ತೊಬ್ಬ ಮಹಿಳೆಯನ್ನು ಮದುವೆಯಾಗಿದ್ದಾನೆ.

    ಮಲೇಷ್ಯಾದ ನಿವಾಸಿಯಾಗಿರುವ ಈತ 2016 ರಲ್ಲಿ ನೂರುಲ್‌ ಸಯಾಜ್ ಸೈಜ್ವಾನಿ ಎಂಬ ಮಹಿಳೆಯನ್ನು ಮದುವೆಯಾಗುತ್ತಾನೆ. ಮದುವೆಯಾದ ಎರಡೇ ವರ್ಷಕ್ಕೆ ಆತ ಭೀಕರ ಕಾರು ಅಪಘಾತದಲ್ಲಿ ಪಾರ್ಶ್ವವಾಯುಗೆ ತುತ್ತಾಗಿ ಹಾಸಿಗೆ ಹಿಡಿಯುತ್ತಾನೆ. ಈ ಸಂದರ್ಭದಲ್ಲಿ ಸೈಜ್ವಾನಿ ಆತನನ್ನು ಬಿಟ್ಟು ಹೋಗದೆ ಸತತ ಆರು ವರ್ಷಗಳ ಕಾಲ ಅಂದರೆ ಅತ ಸಂಪೂರ್ಣವಾಗಿ ಗುಣಮುಖವಾಗುವವರೆಗೂ ನಾಸೊಗ್ಯಾಸ್ಟ್ರಿಕ್‌ ಟ್ಯೂಬ್‌ ಮೂಲಕ ಊಟ ಮಾಡಿಸುವುದರಿಂದ ಹಿಡಿದು ಡೈಪರ್‌ ಚೇಂಜ್‌ ಮಾಡುವವರೆಗೂ ಪತಿರಾಯನನ್ನು ಮಗುವಿನಂತೆ ಆರೈಕೆ ಮಾಡಿ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡಿದ್ದಾಳೆ.

    ಹೆಂಡತಿಯ ಆರೈಕೆಯಿಂದ ಸಂಪೂರ್ಣವಾಗಿ ಗುಣಮುಖನಾದ ಕೆಲವೇ ಸಮಯಗಳ ಬಳಿಕ ತನ್ನನ್ನು ಆರೈಕೆ ಮಾಡಿದ ಮುತ್ತಿನಂಥ ಪತ್ನಿಗೆ ಡಿವೋರ್ಸ್‌ ಕೊಟ್ಟು, ವಿಚ್ಛೇದನದ ಒಂದು ವಾರದ ಬಳಿಕ ಇನ್ನೊಬ್ಬ ಮಹಿಳೆಯನ್ನು ಮದುವೆಯಾಗಿದ್ದಾನೆ. ಸೈಜ್ವಾನಿ ಸೋಷಿಯಲ್‌ ಮೀಡಿಯಾದಲ್ಲಿ ಪತಿಯ ಎರಡನೇ ಮದುವೆಗೆ ಶುಭ ಕೋರಿದ್ದು, ಚಿನ್ನದಂತ ಹೆಂಡತಿಯನ್ನು ಬಿಟ್ಟು ಹೋದ ಆತನಿಗೆ ನೆಟ್ಟಿಗರು ಹಿಗ್ಗಾಮುಗ್ಗಾ ಬೈದಿದ್ದಾರೆ.

    Continue Reading

    BELTHANGADY

    ಬೆಳ್ತಂಗಡಿ ಮಲಂತಬೆಟ್ಟುವಿನಲ್ಲಿ ಹೆಜ್ಜೇನು ದಾಳಿ …!!

    Published

    on

    ಬೆಳ್ತಂಗಡಿ : ಸಂತ ತೆರೆಸಾ ಶಾಲೆಯ 8ನೇ ತರಗತಿ ವಿದ್ಯಾರ್ಥಿ ತೀರ್ಥೇಶ್ ಮೇಲಂತಬೆಟ್ಟು ಶಾಲೆಯಿಂದ ಮನೆ ಕಡೆ ಬರುತ್ತಿದ್ದರು. ಇವರ ಮೇಲೆ ತೀವ್ರವಾಗಿ ಹೆಜ್ಜೇನು ದಾಳಿ ನಡೆಸಿತ್ತು. ಮಗು ದಾರಿ ತೋರದೆ ಕೆಲ ಮನೆಗಳಿಗೆ ಓಡಿತ್ತು. ಭಯಭೀತಿಯಿಂದಾಗಿ ಮನೆ ಬಾಗಿಲು ಮುಚ್ಚಿತ್ತು.


    ಮೇಲಂತಬೆಟ್ಟು ಗ್ರಾಮದ ಬಳಿ ಹೆಜ್ಜೇನು ಜನರ ಮೇಲೆ ದಾಳಿ ಮಾಡಿದ್ದು, ಜನ ಭಯದಿಂದ ಓಡಿ ಹೋದರು. ಸುತ್ತಲಿನ ಮನೆಯವರು ಭೀತಿಯಿಂದ ಮನೆಬಾಗಿಲು ಮುಚ್ಚಿದರು.

    ಹೆಜ್ಜೇನು ದಾಳಿಯಿಂದ ನೋವು ಉರಿ ತಾಳಲಾರದೆ, ಅತ್ತು ಕರೆದರೂ ರಕ್ಷಣೆಗೆ ರಕ್ಷಣೆಗೆ ಯಾರೂ ಇಲ್ಲದಾಗ ಕೊನೆಯ ಉಪಾಯ ಇಲ್ಲದೆ ಪಂಚಾಯತ್ ಬಳಿ ಓಡಿದಾಗ ಪಂಚಾಯತ್ ಲೈಬ್ರರಿಯನ್ ಚಂದ್ರಾವತಿ ಯೊಗೀಶ್ ಪೂಜಾರಿ ಗೇರುಕಟ್ಟೆ ಬಂದು ಮುಚ್ಚಿದ ಬಾಗಿಲನ್ನು ತೆರೆದು ಮಗುವನ್ನು ಪಂಚಾಯತ್ ಒಳಗೆ ಕರೆಸಿಕೊಂಡು ಹೊದರು. ಆದರೂ ಬೆನ್ನು ಬಿಡದ ಹೆಜ್ಜೇನು ಆಗಲೂ ದಾಳಿ ನಡೆಸಿತು.

    ಮುಂದಕ್ಕೆ ಅಧ್ಯಕ್ಷರ ಕೊಠಡಿಯ ಒಳಗೆ ಹೋಗಿ ಬಾಗಿಲು ಮುಚ್ಚಿ ನೋಡಿದಾಗ ಅಲ್ಲಿಯೂ ಹೆಜ್ಜೇನು ಬಂದಿತ್ತು. ಆವಾಗ ಚಂದ್ರಮತಿಯು ಪೊರಕೆ ಸಹಾಯದಿಂದ ಬಹಳಷ್ಟು ಸಂಖ್ಯೆಯಲ್ಲಿದ್ದ ಹೆಜ್ಜೇನನ್ನು ಕೊಂದು ಮಗುವಿನ ಬಟ್ಟೆ ಬಿಚ್ಚಿಸಿ ಹೆಜ್ಜೇನು ಮುಳನ್ನು ತುರ್ತಾಗಿ ತೆಗೆದು ಮನೆಯವರಿಗೆ ಸುದ್ದಿ ಮುಟ್ಟಿಸಿದರು.

    ನಂತರ ಮಗುವನ್ನು ಆಸ್ಪತ್ರೆಗೆ ಸೇರಿಸಿ ಸೂಕ್ತ ಚಿಕಿತ್ಸೆ ನೀಡಲಾಯಿತು. ಮಗು ಈಗ ಆರೋಗ್ಯದಿಂದ ಚೇತರಿಸಿಕೊಳ್ಳುತ್ತಿದ್ದಾನೆ. ಪಂಚಾಯತ್ ನೌಕರ ಚಂದ್ರಾವತಿಯವರ ಸಮಯ ಪ್ರಜ್ಞೆ, ತಾಯಿ ಮಮತೆ, ಧೈರ್ಯ ಗ್ರಾಮಸ್ಥರ ಪ್ರಿತಿಗೆ ಪಾತ್ರವಾಯಿತು.

    Continue Reading

    LATEST NEWS

    ಡಿಜಿಟಲ್ ವಂಚನೆಗಳ ಬಗ್ಗೆ ಎಚ್ಚರದಿಂದಿರಿ : ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ ಮಾತು

    Published

    on

    ಮಂಗಳೂರು/ನವದೆಹಲಿ : ತಮ್ಮ ತಿಂಗಳ ರೇಡಿಯೊ ಕಾರ್ಯಕ್ರಮ ‘ಮನ್ ಕಿ ಬಾತ್’ ನಲ್ಲಿ ಇಂದು(ಅ.27) ಸೈಬರ್ ಕ್ರೈಂ ವಿಷಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಧ್ವನಿ ಎತ್ತಿದ್ದಾರೆ. ಸೈಬರ್ ಕ್ರೈಂ ಹಗರಣಗಳು ಇಂದು ಎಲ್ಲಾ ವರ್ಗದ ಜನರ ಮೇಲೆ ಪರಿಣಾಮ ಬೀರುತ್ತಿದೆ ಎಂದಿರುವ ಅವರು, ಇಂತಹ ಸಂದರ್ಭಗಳಲ್ಲಿ ಜನರು ಯೋಚಿಸುವುದನ್ನು ನಿಲ್ಲಿಸಿ ಕ್ರಮ ಕೈಗೊಳ್ಳುವ ಮಂತ್ರವನ್ನು ಅಳವಡಿಸಿಕೊಳ್ಳಬೇಕೆಂದು ಹೇಳಿದ್ದಾರೆ.

    ಕಾನೂನಲ್ಲಿ ಡಿಜಿಟಲ್ ಬಂಧನದಂತಹ ವ್ಯವಸ್ಥೆ ಇಲ್ಲ, ಇದು ಕೇವಲ ವಂಚನೆ, ವಂಚನೆ, ಸುಳ್ಳು, ಅಪರಾಧಿಗಳ ಗುಂಪು ಮತ್ತು ಇದನ್ನು ಮಾಡುತ್ತಿರುವವರು ಸಮಾಜದ ಶತ್ರುಗಳು. ವಿವಿಧ ತನಿಖಾ ಸಂಸ್ಥೆಗಳು ಡಿಜಿಟಲ್ ಬಂಧನದ ಹೆಸರಿನಲ್ಲಿ ನಡೆಯುತ್ತಿರುವ ವಂಚನೆಯನ್ನು ನಿಭಾಯಿಸಲು ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಈ ಏಜೆನ್ಸಿಗಳ ನಡುವೆ ಸಮನ್ವಯವನ್ನು ಸೃಷ್ಟಿಸಲು ರಾಷ್ಟ್ರೀಯ ಸೈಬರ್ ಕೋ-ಆರ್ಡಿನೇಷನ್ ಸೆಂಟರ್ ಅನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.

    ರಾಷ್ಟ್ರೀಯ ಸೈಬರ್ ಸಹಾಯವಾಣಿಯೊಂದಿಗೆ ಸಂಪರ್ಕ ಸಾಧಿಸಲು ಅಥವಾ ಅದರ ಪೋರ್ಟಲ್‌ನೊಂದಿಗೆ ಸಂಪರ್ಕ ಸಾಧಿಸಲು 1930 ನಂಬರ್ ಡಯಲ್ ಮಾಡಿ. ಅಂತಹ ಅಪರಾಧದ ಬಗ್ಗೆ ಪೊಲೀಸರಿಗೆ ತಿಳಿಸಿ. ಇಂತಹ ಕರೆಗಳು ಬಂದಾಗ ಸಂಭಾಷಣೆಗಳನ್ನು ರೆಕಾರ್ಡ್ ಮಾಡಿ ಸ್ಕ್ರೀನ್‌ಶಾಟ್‌ಗಳನ್ನು ತೆಗೆದು ದೂರು ನೀಡಿ ಎಂದು ಮಾಹಿತಿ ನೀಡಿದರು.

    ಭಾರತೀಯ ಆ್ಯನಿಮೇಷನ್ ಬಗ್ಗೆ ಮೆಚ್ಚುಗೆ :

    ಅಲ್ಲದೇ, ಪ್ರಧಾನಿ ಆ್ಯನಿಮೇಷನ್ ಜಗತ್ತಿನಲ್ಲಿ ಭಾರತೀಯ ಪ್ರತಿಭೆಗಳು ಹೆಚ್ಚುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸೃಜನಶೀಲ ಶಕ್ತಿಯ ಅಲೆಯು ಭಾರತವನ್ನು ಆವರಿಸುತ್ತಿದೆ. ಆ್ಯನಿಮೇಷನ್ ಜಗತ್ತಿನಲ್ಲಿ ‘ಮೇಡ್ ಇನ್ ಇಂಡಿಯಾ’ ಮತ್ತು ‘ಮೇಡ್ ಬೈ ಇಂಡಿಯಾ’ ಪ್ರಕಾಶಮಾನವಾಗಿ ಮಿಂಚುತ್ತಿವೆ ಎಂದರು.

    ಇದನ್ನೂ ಓದಿ : ಅತ್ತಿಗೆ ಮೇಲೆ ಸ್ನೇಹಿತನ ಕಣ್ಣು ; ವಾರ್ನ್ ಮಾಡಿದ್ದಕ್ಕೆ ಬರ್ಬರ ಹ*ತ್ಯೆ

    ಛೋಟಾ ಭೀಮ್, ಕೃಷ್ಣ ಮತ್ತು ಮೋಟು ಪತ್ಲು ಮುಂತಾದ ಭಾರತೀಯ ಆ್ಯನಿಮೇಷನ್ ಪಾತ್ರಗಳು ವ್ಯಾಪಕವಾಗಿ ಜನಪ್ರಿಯವಾಗಿವೆ. ಭಾರತದ ವಿಷಯ, ಸಂಸ್ಕೃತಿ ಮತ್ತು ಸೃಜನಶೀಲತೆಯನ್ನು ಜಗತ್ತಿನಾದ್ಯಂತ ಮೆಚ್ಚುಗೆ ಗಳಿಸಿವೆ ಎಂದರು. ಭಾರತವು ಆ್ಯನಿಮೇಷನ್ ನಲ್ಲಿ ಕ್ರಾಂತಿಯನ್ನು ಸೃಷ್ಟಿಸುವ ಹಾದಿಯಲ್ಲಿದೆ. ಭಾರತೀಯ ಆಟಗಳು ಕೂಡ ಜನಪ್ರಿಯವಾಗುತ್ತಿವೆ ಎಂದರು.

     

     

     

    Continue Reading

    LATEST NEWS

    Trending