Monday, May 17, 2021

ಸರಕಾರದ ಆದೇಶವನ್ನು ಸಂಸ್ಥೆ ಎಂದೂ ಉಲ್ಲಂಘಿಸಿಲ್ಲ – ಸಂಸ್ಥೆಯ ವಿರುದ್ಧ ಮಾಡಿರುವ ಆರೋಪ ನಿರಾಧಾರ: ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆ ಸ್ಪಷ್ಟನೆ

ಮಂಗಳೂರು :ರಾಜ್ಯ ಸರಕಾರ ಹೊರಡಿಸಿರುವ ಕರ್ಫ್ಯೂ ಆದೇಶ ಉಲ್ಲಂಘಿಸಿ ಎಪ್ರಿಲ್ 7 ರಿಂದ ಯಾವುದೇ ತರಗತಿಗಳನ್ನು ಮತ್ತು ಶೈಕ್ಷಣಿಕ ಚಟುವಟಿಕೆಗಳನ್ನು ಮಂಗಳೂರಿನ ಎಕ್ಸ್ ಪರ್ಟ್ ಸಮೂಹ ಶಿಕ್ಷಣ ಸಂಸ್ಥೆ ನಡೆಸಿಲ್ಲ, ಸಂಸ್ಥೆಯ ಮೇಲೆ ಮಾಡಿರುವ ಆರೋಪಗಳು ನಿರಾಧಾರವಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಎಪ್ರಿಲ್ 21 ರಂದು ರಾಜ್ಯ ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳನ್ನು ಯಥಾ ಪ್ರಕಾರ ಜಾರಿಗೆ ತರಲಾಗಿದೆ. ಲಾಕ್‌ಡೌನ್ ಗಿಂತ ಮೊದಲು ಬಂದ ಪೋಷಕರೊಂದಿಗೆ 500 ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲಾಗಿದೆ. ಲಾಕ್ ಡೌನ್ ಜಾರಿಯಾದ ಬಳಿಕ ಪೋಷಕರು ಮಕ್ಕಳನ್ನು ಕರೆದುಕೊಂಡು ಹೋಗಲು ಬರಬೇಕಾದರೆ ಸರಕಾರದ ಕಠಿಣ ಆದೇಶವನ್ನು ಉಲ್ಲಂಘಿಸಬೇಕಾಗುತ್ತದೆ, ಕಾನೂನು ಕಣ್ಣು ತಪ್ಪಿಸಿ ಮಕ್ಕಳನ್ನು ಕರೆದುಕೊಂಡು ಹೋಗುವ ವೇಳೆ ತನಿಖಾಧಿಕಾರಿಗಳ ಕೈಗೆ ಸಿಕ್ಕಿ ಹಾಕಿಕೊಂಡರೆ ಕ್ರಿಮಿನಲ್ ಪ್ರಕರಣ ದಾಖಲಾಗುವ ಉಪಾಯ ಇದೆ ಎಂಬ ಕಾರಣದಿಂದಾಗಿ, ಕಠಿಣ ಕರ್ಫ್ಯೂ ಜಾರಿಯಾದ ಬಳಿಕ, ರಾಜ್ಯ ಸಕಾCದ ಆದೇಶವನ್ನು ಉಲ್ಲಂಘಿಸಿ ವಿದ್ಯಾರ್ಥಿಗಳನ್ನು ಕಳುಹಿಸಿ ಕೊಡಲಾಗುವುದಿಲ್ಲ. ಲಾಕ್ ಡೌನ್ ಜಾರಿಯಾದ ಬಳಿಕ ಹೆತ್ತವರು ಬರಬಾರದು ಈ ಬಗ್ಗೆ ಎಲ್ಲರಿಗೂ ಮುಂಗಡವಾಗಿ ತಿಳಿಸಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ನಡುವೆ, ಮುಂಬರುವ ಪರೀಕ್ಷೆಗಳ ದೃಷ್ಟಿಯಿಂದ, ವಸತಿ ಕಾಲೇಜುಗಳ ಮಾತ್ರ ನಿಲಯದಲ್ಲಿರುವ ವಿದ್ಯಾರ್ಥಿಗಳನ್ನು ಇಲ್ಲೆ ಉಳಿಸಿಕೊಳ್ಳಲು ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಪ್ರಾಥಮಿಕ ಶಿಕ್ಷಣ ಸಚಿವರು ಮಾರ್ಗಸೂಚಿಗಳನ್ನು ಹೊರಡಿಸಿದ್ದರು, ಈ ಹಿನ್ನೆಲೆಯಲ್ಲಿ ಸರ್ಕಾರದ ಎಲ್ಲಾ ಮಾನದಂಡವನ್ನು ಸಂಸ್ಥೆ ಪಾಲನೆ ಮಾಡಿದೆ ಎಂದು ಹೇಳಿದೆ. .

ಆದರೆ ಸರಕಾರದ ಕಠಿಣ ಲಾಕ್ ಡೌನ್ ನಿಯಮ ಉಲ್ಲಂಘಿಸಿ ಪೋಷಕರು ಸಂಸ್ಥೆಗೆ ಯಾವುದೇ ಮುನ್ಸೂಚನೆ ನೀಡಿದೆ ತಮ್ಮ ಮಕ್ಕಳನ್ನು ಕರೆದೊಯ್ಯಲು ಕ್ಯಾಂಪಸ್‌ಗೆ ಬಂದಿದ್ದರು, ಲಾಕ್‌ ಡೌನ್ ಮಾರ್ಗಸೂಚಿಗಳನ್ನು ಜಾರಿಗೊಳಿಸುವ ಮತ್ತು ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಪ್ರಸ್ತುತ ದಿನದಲ್ಲಿ ಕ್ಯಾಂಪಸ್ ನೊಳಗೆ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು,ಸರ್ಕಾರದ ಆದೇಶವನ್ನು ಗಾಳಿಗೆ ಹಾರಿ ಕ್ಯಾಂಪಸ್‌ಗೆ ಬಂದ ಪೋಷಕರ 20-30 ಮಂದಿಯ ಗುಂಪು ಅಸಭ್ಯ ಭಾಷೆಯನ್ನು ಬಳಸಿದಾಗ ಸಂಸ್ಥೆಯು ನಾವು ಪೊಲೀಸರನ್ನು ಮಧ್ಯ ಪ್ರವೇಶಿಸುವಂತೆ ಮನವಿ ಮಾಡಿತ್ತು. ದುರಾದೃಷ್ಟವಶಾತ್ ಸರ್ಕಾರದ ಲಾಕ್ ಡೌನ್ ಆದೇಶ ಉಲ್ಲಂಘಿಸಿ ಯಾರು ಕೂಡ ಕ್ಯಾಂಪಸ್‌ಗೆ ಬರಬಾರದೆಂದು ಪದೇ ಪದೇ ಈ ಮೇಲ್ ಮೂಲಕ ಸಂದೇಶ ಕಳುಹಿಸಿದ್ದರೂ, ಇದನ್ನು ಉಲ್ಲಂಘಿಸಿ ಕ್ಯಾಂಪಸ್‌ಗೆ ಬಂದಿದರಲ್ಲದೆ ಸಂಸ್ಥೆಯ ತರಗತಿ ನಡೆಸುತ್ತಿದೆ ಎಂದು ಸುಳ್ಳು ಆರೋಪ ಮಾಡಿ ಸಂಸ್ಥೆಯ ವಿರುದ್ದ ಎಫ್‌ಐಆರ್‌ ದಾಖಲಿಸಲು ಕಾರಣರಾಗಿದ್ದಾರೆ.
ಇದೀಗ ಕೆಲ ಪೋಷಕರ ಒತ್ತಡ ಮತ್ತು ಜಿಲ್ಲಾಡಳಿತ ನಿರ್ದೇಶನದ ಆಧಾರದ ಮೇರೆಗೆ ತಮ್ಮ ಮಕ್ಕಳನ್ನು
ಮನೆಗೆ ಕರೆದೊಯ್ಯಲು ಎಪ್ರಿಲ್ 29ರಿಂದ ಅವಕಾಶ ನೀಡಲಾಗಿದೆ. ಯಾವುದೇ ವಿದ್ಯಾರ್ಥಿಯನ್ನು ಪೋಷಕರು
ಮನೆಗೆ ಕರೆದುಕೊಂಡು ಹೋಗಲು ಸಂಸ್ಥೆಯು ನಿರ್ಬಂಧಿಸಿಲ್ಲ, ಸರ್ಕಾರದ ಕಠಿಣ ಲಾಕ್ ಡೌನ್ ಅದೇಶದ ನಡುವೆಯೂ ಪೋಷಕರು ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗಲು ಬಯಸಿದರೆ, ಈಗಲೂ ಬಂದು ಕರೆದುಕೊಂಡು ಹೋಗಬಹುದು ಎಂದು ಸಂಸ್ಥೆಯು ತಿಳಿಸಿದೆ. ಕ್ಯಾಂಪಸ್ ನಲ್ಲಿ ಯಾವುದೇ ಒಂದು ವಿದ್ಯಾರ್ಥಿಗೆ ಕೂಡ ಪಾಸಿಟಿವ್ ಬಂದಿರುವುದಿಲ್ಲ, ಆರ್‌ಟಿಪಿಸಿಆರ್ ಪರೀಕ್ಷೆಗಾಗಿ ಐವರು ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.. ಯಾವುದೇ ವಿದ್ಯಾರ್ಥಿಗೆ ಕೋವಿಡ್ ಪಾಸಿಟಿವ್ ಬಂದರೆ, ಅವರನ್ನು ಪ್ರತ್ಯೇಕಿಸಲು ಮತ್ತು ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಎಲ್ಲಾ ರೀತಿಯ ಕ್ರಮ ಸಂಸ್ಥೆ ಕೈಗೊಂಡಿದೆ,
ಈ ನಡುವೆ ಬೋರ್ಡ್ ಪರೀಕ್ಷೆಗಳನ್ನು ಎದುರಿಸಲು ಕ್ಯಾಂಪಸ್, ಸುರಕ್ಷಿತ ಮತ್ತು ಪ್ರಶಾಂತ ವಾತಾವರಣವನ್ನು ಒದಗಿಸಿದೆಯೆಂಬ ಭಾವನೆಯಿಂದ ಹಲವು ವಿದ್ಯಾರ್ಥಿಗಳು ಪೋಷಕರ ಒಪ್ಪಿಗೆಯಂತೆ ಹಾಸ್ಟೆಲ್‌ನಲ್ಲಿ ಸ್ವಯಂ ಅದ್ಯಯನದಲ್ಲಿ ತೊಡಗಿದ್ದಾರೆ ಎಂದು ಸಂಸ್ಥೆಯು ತಿಳಿಸಿದೆ.

Hot Topics

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ: ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..! 

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..!  ಮಂಗಳೂರು: ಟೆರೇಸ್ ನಲ್ಲಿ ಫೋನ್ ನಲ್ಲಿ ಮಾತನಾಡುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ವಿಟ್ಲದ ಕೇಪು ಎಂಬಲ್ಲಿ...