Connect with us

DAKSHINA KANNADA

ಮಂಗಳೂರಿಂದ ಅಂತರ್ ರಾಜ್ಯ ಕ್ರಿಕೆಟ್ ಬೆಟ್ಟಿಂಗ್ ದಂಧೆ: ಆರು ಆರೋಪಿಗಳ ಬಂಧನ..!

Published

on

ಮಂಗಳೂರು : ಐಪಿಎಲ್‌ ಕ್ರಿಕೆಟ್ ಆಟಕ್ಕೆ ಸಂಬಂಧಿಸಿದಂತೆ ಬೆಟ್ಟಿಂಗ್‌ ನಡೆಸಿ ಅಕ್ರಮವಾಗಿ ಹಣ ಸಂಪಾದನೆಯಲ್ಲಿ ತೊಡಗಿಸಿಕೊಂಡಿದ್ದ   ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ವಿಕ್ರಂ ಕುಂಪಲ, ಧನಪಾಲ್ ಶೆಟ್ಟಿ ಕೃಷ್ಣಾಪುರ, ಕಮಲೇಶ್ ಸುರತ್ಕಲ್, ಹರೀಶ್ ಶೆಟ್ಟಿ, ಪ್ರೀತೆಶ್ ಆಲಿಯಾಸ್ ಪ್ರೀತಮ್ ಅಶೋಕ್ ನಗರ, ಅವಿನಾಶ್ ಉರ್ವ ಮಾರಿಗುಡಿ ಎಂದು ಗುರುತ್ತಿಸಲಾಗಿದೆ.

ಇವರು ಕ್ರಿಕೆಟ್‌ ಬೆಟ್ಟಿಂಗ್ ಮೊಬೈಲ್ ಆಪ್‍ಗಳಾದ ಸ್ಟಾರ್ ಆಪ್ ಮತ್ತು ಲೋಟಸ್ ಬುಕ್ 247 ಬೆಟ್‍ಗಳಲ್ಲಿ ಬೇರೆಯವರ ಹೆಸರಿನಲ್ಲಿ ಮಂಗಳೂರು ನಗರದ ಆಕ್ಸಿಸ್ ಬ್ಯಾಂಕ್, ಕಣಾರ್ಟಕ ಬ್ಯಾಂಕ್, ಎಚ್‍ಡಿಎಫ್‍ಸಿ ಬ್ಯಾಂಕ್ ಖಾತೆಗಳನ್ನು ತೆರೆದು ಬಳಿಕ ಅವರುಗಳ ಖಾತೆಗೆ ಬಾಜಿದಾರರಿಂದ ಆನ್ ಲೈನ್ ಮೂಲಕ ಬೆಟ್ಟಿಂಗ್ ಹಣವನ್ನು ಸಂಗ್ರಹಿಸಿ ಮೋಸದಿಂದ ಬೆಟ್ಟಿಂಗ್ ವ್ಯವಹಾರ ನಡೆಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಈ ಪ್ರಕರಣದಲ್ಲಿ ಸುಮಾರು 20 ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿ ಸುಮಾರು 20 ಲಕ್ಷ ರೂ ಹಾಗೂ 3 ಲಕ್ಷ ನಗದು ಮತ್ತು ಆನ್‍ಲೈನ್ ಗೇಮ್ ಸಲುವಾಗಿ ಉಪಯೋಗಿಸುತ್ತಿದ್ದ 10 ಮೊಬೈಲ್ ಫೋನ್  ಗಳನ್ನು ವಶಕ್ಕೆ ಪಡೆದು ಕ್ರಮಕೈಗೊಳ್ಳಲಾಗಿದೆ.

ಮಂಗಳೂರು ನಗರದ ಉಪ-ಪೊಲೀಸ್ ಆಯುಕ್ತರಾದ ಹರಿರಾಂ ಶಂಕರ್ ಮತ್ತು ವಿನಯ ಗಾಂವಕರ್ ರವರ ನಿರ್ದೆಶನದಂತೆ ಸಿಸಿಬಿ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ಮತ್ತು ಸಿಬ್ಬಂದಿ ಹಾಗೂ ಇಕೋನಾಮಿಕ್ ಮತ್ತು ನಾರ್ಕೊಟಿಕ್ ಕ್ರೈಂ ಠಾಣೆಯ ಪಿಎಸ್‍ಐ ಸತೀಶ್ ಎಂ ಪಿ ಹಾಗೂ ಸಿಬ್ಬಂದಿಯವರು ಈ ಪ್ರಕರಣವನ್ನು ಪತ್ತೆ ಹಚ್ಚಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಎನ್ ಸಶಿ ಕುಮಾರ್ ಮಾಹಿತಿ ನೀಡಿದ್ದಾರೆ.

DAKSHINA KANNADA

ಮೊಬೈಲ್ ನೋಡುತ್ತಿದ್ದಾಗ 16 ವರ್ಷದ ಬಾಲಕ ದಿಢೀರ್ ಸಾ*ವು; ವೈದ್ಯರಿಂದ ಶಾಕಿಂಗ್‌ ರಿಪೋರ್ಟ್‌; ಆಗಿದ್ದೇನು?

Published

on

ಸಾ*ವು ಹೇಗೆ, ಎಲ್ಲಿ ಬೇಕಾದರೂ ಬರಬಹುದು ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ. 16 ವರ್ಷದ ಬಾಲಕ ಮೊಬೈಲ್ ಫೋನ್ ನೋಡುತ್ತಿದ್ದಾಗಲೇ ಕುಸಿದು ಬಿದ್ದು ಸಾ*ವನ್ನಪ್ಪಿದ್ದಾರೆ. ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಈ ದುರಂತ ನಡೆದಿದೆ.

16 ವರ್ಷದ ಅಮನ್ ಖುರೇಷಿ ಮೃ*ತ ದುರ್ದೈವಿ. ಖುರೇಷಿ ಮೊಬೈಲ್ ಫೋನ್ ನೋಡುತ್ತಿದ್ದಾಗ ಹಾಸಿಗೆ ಮೇಲೆ ಕುಸಿದು ಬಿದ್ದಿದ್ದಾನೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಅಮನ್ ಖುರೇಷಿ ಆಸ್ಪತ್ರೆ ತಲುಪುವಷ್ಟರಲ್ಲೇ ಪ್ರಾ*ಣ ಕಳೆದುಕೊಂಡಿದ್ದಾರೆ.

ಅಮನ್ ಖುರೇಷಿ ಸಾ*ವನ್ನಪ್ಪಿದ್ದನ್ನು ವೈದ್ಯರು ಖಚಿತ ಪಡಿಸಿದ್ದು, ಹಾರ್ಟ್ ಅಟ್ಯಾಕ್‌ನಿಂದ ಪ್ರಾ*ಣ ಬಿಟ್ಟಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಮೃ*ತಪಟ್ಟ ಬಾಲಕ ಮೊಬೈಲ್ ಫೋನ್‌ನಲ್ಲಿ ವಿಡಿಯೋ ನೋಡುತ್ತಿದ್ದಾಗ ಈ ದುರಂತ ನಡೆದಿದೆ.

ಇತ್ತೀಚೆಗೆ ದೇಶಾದ್ಯಾಂತ ಹೃದಯಾಘಾತಕ್ಕೆ ಸಾ*ವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಹದಿ ಹರಿಯದ ಯುವಕರು ಹೃದಯಾಘಾತಕ್ಕೆ ಒಳಗಾಗುತ್ತಿರೋದು ನಿಜಕ್ಕೂ ಶಾಕಿಂಗ್‌ ಘಟನೆಯಾಗಿದೆ.

ಹೃದಯಾಘಾತವು ವ್ಯಕ್ತಿಯ ಮಾನಸಿಕ ಒತ್ತಡ ಮತ್ತು ದೈಹಿಕ ಪರಿಶ್ರಮದಿಂದ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ದೈನಂದಿನ ಕೆಲಸಗಳಲ್ಲಿ ಒತ್ತಡ ಹೆಚ್ಚಾಗುವುದರಿಂದ ಹೃದಯದ ಮೇಲೆ ಒತ್ತಡವೂ ಹೆಚ್ಚಾಗುತ್ತದೆ.

ಪ್ರಮುಖವಾಗಿ ನಮ್ಮ ದಿನನಿತ್ಯದ ಜೀವನಶೈಲಿ ಹಾಗೂ ಆಹಾರ ಕ್ರಮಗಳು ಸಣ್ಣ ವಯಸ್ಸಿನವರಿಂದ ವಯಸ್ಸಾದವರಿಗೂ ಹೃದಯಾಘಾತ ಆಗಲು ಕಾರಣವಾಗಿದೆ. ನ್ಯುಮೋನಿಯದಂತಹ ತೀವ್ರ ಸೋಂಕು ಹೃದಯ ಸ್ನಾಯುವಿನ ಊತಕವೂ ಸಾ*ವನ್ನು ಉಂಟು ಮಾಡಬಹುದು. ರಕ್ತನಾಳದಲ್ಲಿ ಬೇಗ ರಕ್ತು ಹೆಪ್ಪುಗಟ್ಟುವುದನ್ನು ತಡೆದರೆ ಹೃದಯಾಘಾತದಿಂದ ಪಾರಾಗಬಹುದು.

Continue Reading

DAKSHINA KANNADA

ದೇವಸ್ಥಾನದಲ್ಲಿ ಚಪ್ಪಲಿ ಕಳೆದುಹೋದರೆ ಒಳ್ಳೆಯದಾ..? ಕೆಟ್ಟದ್ದಾ..?

Published

on

ಸಾಮಾನ್ಯವಾಗಿ ಎಲ್ಲರೂ ಚಪ್ಪಲಿ ತೆಗೆದುಕೊಳ್ಳುವಾಗ ಕೊಟ್ಟಂತಹ ಗಮನವನ್ನ ಅದನ್ನು ತೆಗೆದುಕೊಂಡು ಆದ ಮೇಲೆ ಯಾರೂ ಅದನ್ನ ಗಮನಕ್ಕೆ ತೆಗೆದುಕೊಳ್ಳುವುದಿಲ್ಲ. ಚಪ್ಪಲಿಯನ್ನ ಇನ್ನು ಮುಂದೆ ನಿರ್ಲಕ್ಷ್ಯ ಮಾಡಬೇಡಿ. ಚಪ್ಪಲಿ ಸಹ ನಮ್ಮ ನಸೀಬನ್ನ ಬದಲಿಸಿ ನಮ್ಮ ಜೀವನದಲ್ಲಿ ಬದಲಾವಣೆಯನ್ನು ತರಬಲ್ಲದು.

ನಾವು ಫ್ಯಾಶನೇಬಲ್ ಆದ್ರೆ ಮಾತ್ರ ಬೇರೆಯವರ ಗಮನವನ್ನು ನಮ್ಮ ಕಡೆಗೆ ಸೆಳೆಯಬಹುದು ಅಂತ ತುಂಬಾ ಜನ ಅಂದುಕೊಂಡು ಇರುತ್ತಾರೆ. ಫ್ಯಾಶನೇಬಲ್ ಬಟ್ಟೆ, ಟ್ರೆಂಡೀ ಶೂ ಅಥವಾ ಚಪ್ಪಲಿಗಳಿರಬಹುದು ಅಥವಾ ಫ್ಯಾಶನೇಬಲ್ ಜ್ಯುವೆಲ್ಲರಿ ಆಗಿರಬಹುದು ಈ ರೀತಿ ಟ್ರೆಂಡಿಯಾಗಿ ಡ್ರೆಸ್ ಮಾಡಿದ್ರೆ ಎಲ್ಲರ ಗಮನ ನಮ್ಮ ಹತ್ತಿರ ತಿರುಗುತ್ತೆ. ಭಾರತೀಯ ಸಂಸ್ಕೃತಿಯಲ್ಲಿ ಮನೆಯೊಳಗೆ ಚಪ್ಪಲಿಯನ್ನು ಹಾಕಿಕೊಂಡು ಹೋಗುವುದು ಸೂಕ್ತವಲ್ಲ. ನಾವು ಚಪ್ಪಲಿಯನ್ನು ಹೊರಗಡೆ ಎಲ್ಲಿಗೂ ಹೋಗುವಾಗಲು ಹಾಕುತ್ತೇವೆ.

ಹೀಗೆ ದೇವಸ್ಥಾನಕ್ಕೆ ಹೋಗುವಾಗ ಚಪ್ಪಲಿಯನ್ನು ಹಾಕಿಕೊಂಡು ಹೋಗುತ್ತೇವೆ. ಕೆಲವೊಂದು ದೊಡ್ಡ ದೊಡ್ಡ ದೇವಸ್ಥಾನಗಳಲ್ಲಿ ತುಂಬಾ ಭಕ್ತಾಧಿಗಳು ಹೋಗುತ್ತಾ ಬರುತ್ತಾ ಇರುತ್ತಾರೆ. ಅಲ್ಲಿ ಚಪ್ಪಲಿಗೆಂದೇ ಸ್ಟ್ಯಾಂಡ್ ಇಟ್ಟಿರುತ್ತಾರೆ. ನಾವು ಹಣ ಕೊಟ್ಟು ನಮ್ಮ ಚಪ್ಪಲಿಯನ್ನ ಅಲ್ಲಿ ಕಾಪಾಡಬಹುದು. ಆದ್ರೆ ಕೆಲವರು ಚಪ್ಪಲಿಯನ್ನು ಹೊರಗಡೇ ಇಟ್ಟು ಹೋಗುತ್ತಾರೆ. ದೇವರ ದರ್ಶನ ಮಾಡಿ ಹೊರಗೆ ಬರುವಾಗ ಆ ಚಪ್ಪಲಿ ಕಾಣುವುದಿಲ್ಲ. ಕೆಲವೊಮ್ಮೆ ರಶ್ ಇರಬೇಕಾದ್ರೆ ತಿಳಿಯದೇ ಜನರು ಹಾಕಿಕೊಂಡು ಹೋಗುತ್ತಾರೆ. ಕೆಲವೊಮ್ಮೆ ಬೇಕುಬೇಕಂತಲೆ ಅದನ್ನು ಕದ್ದುಕೊಂಡು ಹೋಗುತ್ತಾರೆ. ದೇವಸ್ಥಾನಗಳಲ್ಲಿ ಚಪ್ಪಲಿ ಕಳುವಾದ್ರೆ ಅದು ಒಳ್ಳೆಯದೇ ಎನ್ನುವ ನಂಬಿಕೆ ಕೂಡ ಇದೆ.

ಚಪ್ಪಲಿ ಹಾಳತ್ತಾಗಿದ್ದರೆ ಕಳೆದು ಹೋದರೂ ಬೇಜಾರಿಲ್ಲ. ಆದರೆ ಹೊಸತ್ತಾದರೆ ತುಂಬಾ ಬೇಜಾರ್ ಆಗುತ್ತದೆ. ಇಂತ ಸಮಯದಲ್ಲಿ ಕೆಲವರು ಹೇಳುತ್ತಾರೆ ಚಪ್ಪಲಿ ಕಳೆದು ಹೋದರೆ ನಿನ್ನ ದಾರಿದ್ರ್ಯ ಹೋಯಿತು. ಇನ್ನು ಮುಂದಕ್ಕೆ ನಿನಗೆ ಒಳ್ಳೆಯದಾಗುತ್ತದೆ ಎಂದು ಹೇಳುತ್ತಾರೆ.

ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಭ ಚಿಹ್ನೆ:

ಚಪ್ಪಲಿ ಕಳೆದುಹೋದರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಭ ಚಿಹ್ನೆ ಎಂದು ಹೇಳುತ್ತಾರೆ. ಅದರಲ್ಲೂ ವಿಶೇಷವಾಗಿ ಶನಿವಾರ ಚಪ್ಪಲಿ ಕಳೆದುಹೋದರೆ ಪಾದರಕ್ಷೆಯೊಂದಿಗೆ ನಿಮ್ಮ ಶನಿಯು ದೂರವಾಯಿತು ಎಂದು ಅರ್ಥ. ನಮ್ಮ ದೇಹದ ಭಾಗಗಳು ಗ್ರಹಗಳಿಂದ ಪ್ರಭಾವಿತವಾಗಿರುತ್ತದೆ. ಶನಿ ಚರ್ಮ ಮತ್ತು ಪಾದಗಳಲ್ಲಿ ವಾಸಿಸುತ್ತಾನೆ. ಹೀಗೆ ಪಾದರಕ್ಷೆ ಕಳುವಾದ್ರೆ ನಿಮ್ಮ ಸಮಸ್ಯೆ ದೂರವಾಯ್ತು ಎಂದು ಹೇಳುತ್ತದೆ ಜ್ಯೋತಿಷ್ಯ ಶಾಸ್ತ್ರ.

Continue Reading

DAKSHINA KANNADA

ULLALA : ಮಲಗಿದ್ದಲ್ಲೇ ಹೃದಯಾಘಾ*ತಕ್ಕೆ ಬ*ಲಿಯಾದ ಯುವಕ

Published

on

ಉಳ್ಳಾಲ : ಇತ್ತೀಚೆಗಿನ ದಿನಗಳಲ್ಲಿ ಹೃದಯಾಘಾ*ತ ಪ್ರಕರಣಗಳು ಹೆಚ್ಚುತ್ತಿವೆ. ಹೃದಯಾಘಾ*ತ ಸಂಭವಿಸಲು ವಯಸ್ಸಿನ ಇತಿ ಮಿತಿ ಎಂಬುದಿಲ್ಲದಂತಾಗಿದೆ. ಇದೀಗ ಕೊಲ್ಯ ಕನೀರುತೋಟ ನಿವಾಸಿ 28 ರ ಹರೆಯದ ವಿವಾಹಿತರೊಬ್ಬರು ಮಲಗಿದ್ದಲ್ಲೇ ಹೃದಯಾಘಾ*ತಕ್ಕೀಡಾಗಿ ಸಾ*ವನ್ನಪ್ಪಿರುವ ಘಟನೆ ಮಂಗಳವಾರ ಸಂಭವಿಸಿದೆ.


ಕನೀರುತೋಟ ನಿವಾಸಿ ಜಿತೇಶ್ (28) ಸಾ*ವನ್ನಪ್ಪಿದವರು. ಜಿತೇಶ್ ಸೋಮವಾರ ರಾತ್ರಿ ಊಟ ಮುಗಿಸಿ ಮಲಗಿದ್ದರು. ಯಾವತ್ತೂ ಬೇಗ ಏಳುತ್ತಿದ್ದ ಜಿತೇಶ್ ಇನ್ನೂ ಯಾಕೆ ಎದ್ದಿಲ್ಲ ಎಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ : ಕಬಕ-ಮುರ ರೈಲ್ವೇ ಹಳಿಯಲ್ಲಿ ವ್ಯಕ್ತಿಯ ಶ*ವ ಪತ್ತೆ

ಮಂಗಳೂರಿನ ಕೆಟಿಎಂ ಷೋರೂಮಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜಿತೇಶ್, ಕೊರೊನಾ ಸಂದರ್ಭ ಪಂಡಿತ್ ಹೌಸ್ ನಿವಾಸಿ ಯುವತಿಯನ್ನು ವಿವಾಹವಾಗಿದ್ದರು. ಮೃ*ತರು ತಂದೆ, ತಾಯಿ, ಪತ್ನಿ, ಸಹೋದರ ಹಾಗೂ ಸಹೋದರಿಯನ್ನು ಅಗಲಿದ್ದಾರೆ.

Continue Reading

LATEST NEWS

Trending