Friday, August 19, 2022

ನಾಪತ್ತೆಯಾಗಿ ಒಂದು ವಾರ ಕಳೆದರೂ ಪತ್ತೆಯಾಗದ ಮಾಜಿ ಕಾರ್ಪೊರೇಟರ್ ಪತಿ: ಪೊಲೀಸರಿಗೆ ತಲೆನೋವು

ಬೆಂಗಳೂರು: ನಾಪತ್ತೆಯಾಗಿ ಒಂದು ವಾರ ಕಳೆದರೂ ಮಾಜಿ ಕಾರ್ಪೊರೇಟರ್ ಪತಿ ಪತ್ತೆಯಾಗದೇ ಪೊಲೀಸರಿಗೆ ತಲೆನೋವಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.


ಬಿನ್ನಿಪೇಟೆ ಮಾಜಿ ಕಾರ್ಪೊರೇಟರ್ ಐಶ್ವರ್ಯಾ ಪತಿ ಲೋಹಿತ್‌ ಮಾರ್ಚ್ 29ರಂದು ನಂದಗುಡಿ‌ಯ ಜಮೀನಿಗೆ ಹೋಗಿ ಬರುತ್ತೇನೆಂದು ಹೋದವರು ಏಕಾಏಕಿ ನಾಪತ್ತೆಯಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ನಂದಗುಡಿ ಬಳಿ ಹೆದ್ದಾರಿ ಪಕ್ಕದಲ್ಲಿ ಲೋಹಿತ್ ಕಾರು ಪತ್ತೆಯಾಗಿತ್ತು.

ದೇಗುಲ ಬಳಿ ಟೈರ್ ಪಂಕ್ಚರ್ ಆದ ಸ್ಥಿತಿಯಲ್ಲಿ ಕಾರು ಪತ್ತೆಯಾಗಿತ್ತು. ದೇಗುಲದ ಬಳಿ ಲೋಹಿತ್ ಚಪ್ಪಲಿ, ಬೆಲ್ಟ್ ಪತ್ತೆಯಾಗಿತ್ತು. 2 ವಿಶೇಷ ಪೊಲೀಸ್ ತಂಡ ಸಿದ್ಧಪಡಿಸಲಾಗಿತ್ತು.

4 ಸಾವಿರಕ್ಕೂ ಹೆಚ್ಚು ಫೋನ್ ಕರೆಗಳ ಬಗ್ಗೆ ಪರಿಶೀಲನೆ ನಡೆಸಿ ಹೊಸಕೋಟೆ ಟೋಲ್ ಬಳಿಯ ಸಿಸಿ ಕ್ಯಾಮರಾ ಸೇರಿದಂತೆ, ರಸ್ತೆಬದಿಯ 100ಕ್ಕೂ ಅಧಿಕ‌ ಸಿಸಿ ಕ್ಯಾಮರಾಗಳ ಪರಿಶೀಲನೆ ನಡೆಸಲಾಗಿತ್ತು.


ಸದ್ಯ ಈ ಘಟನೆ ಬೇಧಿಸಲು ಎರಡು ವಿಶೇಷ ಪೊಲೀಸ್‌ ತಂಡವನ್ನು ಸಿದ್ದಪಡಿಸಲಾಗಿದೆ. ಅಲ್ಲದೆ ಈ ವೇಳೆ ಲೋಹಿತ್ ಕಾರು ಆಗಮಿಸಿದ್ದ ಒಂದು ಗಂಟೆ ಒಳಗಿನ ಎಲ್ಲಾ ಕಾರುಗಳ ಪರಿಶೀಲನೆ ನಡೆಸಲಾಗಿತ್ತು.

ನಂದಗುಡಿ ಮೀಸಲು ಅರಣ್ಯ ಪ್ರದೇಶದಲ್ಲಿಯೂ ನೀಲಗಿರಿ ತೋಪುಗಳಲ್ಲಿ ಡ್ರೋನ್ ಮೂಲಕ ಸರ್ಚಿಂಗ್ ಮಾಡಲಾಗಿತ್ತು.

ಲೋಹಿತ್ ಪತ್ತೆಗಾಗಿ ಎಲ್ಲಾ ಆಯಾಮಗಳಲ್ಲಿಯೂ ಶೋಧ ನಡೆದಿದೆ. ಆದ್ರೆ ಎಷ್ಟೇ ಪ್ರಯತ್ನ ಮಾಡಿದರೂ ಯಾವುದೇ ಸುಳಿವು ಸಿಕ್ಕಿಲ್ಲ.

ಲೋಹಿತ್ ಸುಳಿವು ಸಿಗದ ಹಿನ್ನೆಲೆ ಕುಟುಂಬಸ್ಥರಲ್ಲಿ ಆತಂಕ ಹೆಚ್ಚಾಗಿದೆ. ಜತೆಗೆ ಪೊಲೀಸರಿಗೆ ತಲೆ ನೋವಾಗಿದೆ

LEAVE A REPLY

Please enter your comment!
Please enter your name here

Hot Topics

ಚಿಕ್ಕಮಗಳೂರಿನಲ್ಲೂ ಸಿದ್ದರಾಮಯ್ಯ ವಾಹನಕ್ಕೆ ಕಪ್ಪು ಬಟ್ಟೆ ಪ್ರದರ್ಶನ

ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ಮೆಣಸೆಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ಸಮೀಪ ಬಿಜೆಪಿಯವರು ಸಿದ್ದರಾಮಯ್ಯ ವಾಹನಕ್ಕೆ ಕಪ್ಪು ಬಟ್ಟೆ ಪ್ರದರ್ಶಿಸಿದರು.ಪ್ರತಿಯಾಗಿ ಕಾಂಗ್ರೆಸ್‌ನವರು ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಬಾವುಟ ಪ್ರದರ್ಶಿಸಿದರು. ಕಾಂಗ್ರೆಸ್ ಮತ್ತು ಬಿಜೆಪಿ ಗುಂಪುಗಳ...

ಫಾಝಿಲ್ ಕೊಲೆ ಪ್ರಕರಣ: ಆರೋಪಿ ಹರ್ಷಿತ್‌ಗೆ 14 ದಿನ ನ್ಯಾಯಾಂಗ ಬಂಧನ

ಮಂಗಳೂರು: ನಗರ ಹೊರವಲಯದ ಸುರತ್ಕಲ್‌ ಮಂಗಳಪೇಟೆ ನಿವಾಸಿ ಫಾಝಿಲ್ ಕೊಲೆ ಪ್ರಕರಣದಲ್ಲಿ ಬುಧವಾರ ಬಂಧಿಸಲಾಗಿದ್ದ ಆರೋಪಿ ಹರ್ಷಿತ್‌ಗೆ ಜೆಎಂಎಫ್ಸಿ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.ಆರೋಪಿ ಹರ್ಷಿತ್ ಮೇಲೆ ಫಾಝಿಲ್ ಅವರ...

“ಹಿಂದೂಗಳು ಸತ್ರೆ BJPಗೆ ಓಟು ಬರುತ್ತದೆ-ಅಲ್ಪಸಂಖ್ಯಾತರು ಸತ್ತರೆ ಓಟ್ ಸಿಗಲ್ಲ”

ಮಂಗಳೂರು: ಬಿಜೆಪಿಗರಿಗೆ ಹಿಂದೂಗಳು ಸತ್ತರೆ ಅದ್ರಲ್ಲೂ ಬಿಲ್ಲವರು ಸತ್ತರೆ ಮಾತ್ರ ಓಟು ಬರುತ್ತದೆ. ಅಲ್ಪಸಂಖ್ಯಾತರು ಸತ್ತರೆ ಓಟು ಬರೋದಿಲ್ಲ. ಅದಕ್ಕಾಗಿ ಹರೀಶ್ ಪೂಜಾರಿಯವರ ಹತ್ಯೆಯಾಯ್ತು. ಕಾಂಗ್ರೆಸ್ ಪಕ್ಷ ಯಾವಾಗಲೂ ಸಾಮರಸ್ಯವನ್ನು ಬಯಸುವ ಪಕ್ಷ....