Connect with us

    LATEST NEWS

    ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರಿಯ ಮನೆ ಮೇಲೆ ED ದಾಳಿ

    Published

    on

    ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರಿ ಹಸೀನಾ ಪಾರ್ಕರ್ ನಿವಾಸ ಮೇಲೆ ಇಂದು ಬೆಳ್ಳಂ ಬೆಳಗ್ಗೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ಮಾಡಿದ್ದಾರೆ.


    ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ಭೂಗತ ಜಗತ್ತಿನೊಂದಿಗೆ ನಂಟು ಹೊಂದಿದ್ದಾರೆ ಎನ್ನಲಾದ ಹಲವು ಸ್ಥಳಗಳಲ್ಲಿ ಮಹತ್ವದ ದಾಖಲೆಗಳಿಗಾಗಿ ಇಡಿ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ.
    ದಾವೂದ್ ಗ್ಯಾಂಗ್‌ನ ಹವಾಲಾ ನೆಟ್‌ವರ್ಕ್ ಮತ್ತು ನಾರ್ಕೋ-ಭಯೋತ್ಪಾದನೆ ಕುರಿತ ತನಿಖೆ ಹಿನ್ನೆಲೆ ಈ ದಾಳಿ ನಡೆದಿದೆ ಎನ್ನಲಾಗಿದೆ. ದಾವೂದ್‌ನ ಭದ್ರಕೋಟೆ ನಾಗ್ಪಾಡ ಪ್ರದೇಶದ ಮೇಲೂ ಇಡಿ ದಾಳಿ ಆಗಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಇತ್ತೀಚೆಗೆ ಸಲ್ಲಿಸಿದ ವರದಿ ಮತ್ತು ಗುಪ್ತಚರ ಮಾಹಿತಿ ಆಧರಿಸಿ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

    LATEST NEWS

    ವಿಶ್ವದ ಹಿರಿಯ ವ್ಯಕ್ತಿ ಇ*ನ್ನಿಲ್ಲ; ಜಾನ್‌ ಟಿನ್ನಿಸ್ವುಡ್ (112) ನಿ*ಧನ

    Published

    on

    ಮಂಗಳೂರು/ಲಿವರ್‌ಫೂಲ್‌(ಇಂಗ್ಲೆಂಡ್‌): ವಿಶ್ವದ ಅತಿ ಹಿರಿಯ ವ್ಯಕ್ತಿ ಇಂಗ್ಲೆಂಡ್‌ನ ಜಾನ್ ಟಿನ್ನಿಸ್ವುಡ್ (112) ಸೋಮವಾರ (ನ.25) ಮೃ*ತಪಟ್ಟಿದ್ದಾರೆ.

    ಇಂಗ್ಲೆಂಡ್‌ನ ಲಿವರ್‌ಫೂಲ್‌ನಲ್ಲಿ 1912ರಲ್ಲಿ ಜನಿಸಿದ್ದ ಜಾನ್ ಅವರನ್ನು ಇದೇ ವರ್ಷ ಏಪ್ರಿಲ್‌ನಲ್ಲಿ ‘ವಿಶ್ವದ ಹಿರಿಯ ವ್ಯಕ್ತಿ’ ಎಂದು ಗುರುತಿಸಿ ಗಿನ್ನಿಸ್ ವರ್ಲ್ಡ್‌ ರೆಕಾರ್ಡ್‌ ಸಂಸ್ಥೆ ಘೋಷಿಸಿತ್ತು.‘ವಾಯವ್ಯ ಇಂಗ್ಲೆಂಡ್‌ನ ಸೌತ್‌ಪೋರ್ಟ್‌ನಲ್ಲಿರುವ ಕೇರ್ ಹೋಮ್‌ನಲ್ಲಿ ಟಿನ್ನಿಸ್ವುಡ್ ಸೋಮವಾರ ನಿ*ಧನರಾಗಿದ್ದಾರೆ’ ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.

    ‘ದೀರ್ಘಾಯುಷ್ಯವನ್ನು ಹೊಂದುವುದು ಅಥವಾ ಕಡಿಮೆ ಕಾಲ ಬದುಕುವುದು ಒಬ್ಬರ ಅದೃಷ್ಟದ ಮೇಲೆ ನಿಂತಿದೆ. ಈ ವಿಚಾರದಲ್ಲಿ ನಮಗೆ ಏನು ಮಾಡಲು ಸಾಧ್ಯವಿಲ್ಲ’ ಎಂದು ಸಂದರ್ಶವೊಂದರಲ್ಲಿ ಜಾನ್ ಹೇಳಿದ್ದರು.ಟೈಟಾನಿಕ್ ಹಡಗು ದುರಂತ ನಡೆದ ವರ್ಷವೇ ಜನಿಸಿದ್ದ ಜಾನ್‌ ಅವರು ಎರಡು ಮಹಾಯುದ್ಧಗಳು ಮತ್ತು ಕೋವಿಡ್‌ನಂತಹ ಜಾಗತಿಕ ಸಾಂಕ್ರಾಮಿಕ ರೋಗದ ನಡುವೆಯು ಬದುಕುಳಿದು ವಿಶ್ವದ ಹಿರಿಯಜ್ಜ ಎನಿಸಿಕೊಂಡಿದ್ದರು.

    Continue Reading

    LATEST NEWS

    ಶಬರಿಮಲೆಯ 18 ಮೆಟ್ಟಿಲುಗಳ ಮೇಲೆ ನಿಂತು ಫೋಟೋಶೂಟ್ ಮಾಡಿಸಿದ ಪೊಲೀಸರಿಗೆ ಬಿಗ್‌ಶಾಕ್

    Published

    on

    Sabarimala Temple: ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಿಯ 18 ಮೆಟ್ಟಿಲುಗಳ ಮೇಲೆ ನಿಂತು ಪೊಲೀಸರು ಫೋಟೋಶೂಟ್ ಮಾಡಿಸಿರುವುದು ಇದೀಗ ತೀವ್ರ ವಿವಾದಕ್ಕೀಡಾಗಿದೆ. ಈ ಘಟನೆ ಕುರಿತು ಕೇರಳದ ಎಡಿಜಿಪಿ, ದೇವಸ್ಥಾನದ ವಿಶೇಷ ಅಧಿಕಾರಿ ಬಳಿ ವರದಿ ಕೇಳಿದ್ದಾರೆ.

    ದೇವಸ್ಥಾನದಲ್ಲಿ ತಮ್ಮ ಕರ್ತವ್ಯದ ನಂತರ ಮೊದಲ ಬ್ಯಾಚ್‌ನ ಪೊಲೀಸರು 18 ಮೆಟ್ಟಿಲುಗಳ ಮೇಲೆ ನಿಂತು ಕ್ಯಾಮೆರಾಗೆ ಪೋಸ್ ನೀಡಿದರು. ಇದಕ್ಕೆ ಸಂಬಂಧಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಭಕ್ತರಿಂದ ತೀವ್ರ ಟೀಕೆಗಳು ವ್ಯಕ್ತವಾದ ಬಳಿಕ ವಿವಾದ ಭುಗಿಲೆದ್ದಿದೆ. ಸರ್ಕಾರಕ್ಕೆ ಭಕ್ತರ ಬಿಸಿ ತಟ್ಟುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ ದೇವಸ್ಥಾನದ ಆಡಳಿತ ಮಂಡಳಿಯ ಬಳಿ ವರದಿ ಕೇಳಿದೆ.

    ಪೊಲೀಸರ ಫೋಟೋಶೂಟ್ ವಿರುದ್ಧ ವಿಶ್ವ ಹಿಂದು ಪರಿಷತ್ ಹರಿಹಾಯ್ದಿದೆ. ಹದಿನೆಂಟು ಮೆಟ್ಟಿಲನ್ನು ಅಯ್ಯಪ್ಪ ಭಕ್ತರು ಆಶೀರ್ವಾದ ಎಂದು ಪರಿಗಣಿಸುತ್ತಾರೆ. ಒಂದೊಂದು ಮೆಟ್ಟಿಲಿಗೂ ಒಂದೊಂದು ಅರ್ಥವಿದೆ. 18 ಮೆಟ್ಟಿಲನ್ನು ಇಳಿಯುವಾಗಲೂ ಭಕ್ತರು ದೇವರಿಗೆ ಬೆನ್ನು ತೋರುವುದಿಲ್ಲ. ಪತಿತಂಪಾಡಿ ವಿಧಿವಿಧಾನದಲ್ಲಿರುವಾಗಲೂ ಅಯ್ಯಪ್ಪನಿಗೆ ಬೆನ್ನು ತೋರಿಸಿ ಅಯ್ಯಪ್ಪ ಭಕ್ತರು ಫೋಟೋಶೂಟ್ ಮಾಡುವಂತಿಲ್ಲ. ಹೀಗಿರುವಾಗ ಪೊಲೀಸರು ಈ ರೀತಿ ಮಾಡಬಹುದೇ ಎಂದು ವಿಶ್ವ ಹಿಂದು ಪರಿಷತ್ ಕೇರಳ ಘಟಕ ಸ್ಪಷ್ಟಪಡಿಸಿದೆ.

    ವಿಶ್ವ ಹಿಂದು ಪರಿಷತ್‌ ರಾಜ್ಯಾಧ್ಯಕ್ಷ ವಿ.ಜಿ.ತಂಪಿ, ಪ್ರಧಾನ ಕಾರ್ಯದರ್ಶಿ ವಿ.ಆರ್.ರಾಜಶೇಖರನ್‌ ಮಾತನಾಡಿ, ಪೊಲೀಸ್ ಅಧಿಕಾರಿಗಳಿಗೆ ಬೆಂಬಲ ನೀಡಿದ ಮುಖ್ಯಮಂತ್ರಿಗಳ ಮೊದಲ ಆರೋಪಿಯಾಗಿದ್ದಾರೆ ಎಂದು ಕಿಡಿಕಾರಿದರು. ಈ ಘಟನೆ ಕುರಿತು ವರದಿ ನೀಡುವಂತೆ ದೇವಸ್ಥಾನದ ಆಡಳಿತ ಮಂಡಳಿಗೆ ಕೇರಳದ ಎಡಿಜಿಪಿ ಸೂಚನೆ ನೀಡಿದ್ದಾರೆ.

    Continue Reading

    FILM

    ಭಾರತದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯೋ ಹೀರೋ ಇವರೇ !

    Published

    on

    ಮಂಗಳೂರು : ಫೋರ್ಬ್ಸ್ ಇಂಡಿಯಾ ವರದಿಯ ಪ್ರಕಾರ, ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯೋ ಹೀರೋ ಯಾರು ಎಂಬುದು ಬಹಿರಂಗಗೊಂಡಿದೆ.


    ಬಾಲಿವುಡ್ ನಲ್ಲಿ ಸಲ್ಮಾನ್ ಖಾನ್, ಶಾರುಖ್ ಖಾನ್, ಅಮೀರ್ ಖಾನ್ ಇದ್ದಾರೆ. ತಮಿಳಿನಲ್ಲಿ ದಳಪತಿ ವಿಜಯ್, ರಜನಿಕಾಂತ್ ಇದ್ದಾರೆ. ಇವರ ಕಾಲ್ ಶೀಟ್ ಪಡೆಯಬೇಕು ಎಂದರೆ 100 ಕೋಟಿ ರೂಪಾಯಿಗಿಂತ ಹೆಚ್ಚು ಹಣ ಕೊಟ್ಟು ಕಾಲ್ ಶೀಟ್ ಪಡೆಯಬೇಕು. ಈಗ ಫೋರ್ಬ್ಸ್ ಇಂಡಿಯಾ ವರದಿಯ ಪ್ರಕಾರ ಭಾರತದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ಹೀರೋಗಳ ಪಟ್ಟಿ ಬಿಡುಗಡೆಗೊಳಿಸಿದೆ.

    ಇದನ್ನೂ ಓದಿ: ಮಂಗಳೂರು : ಮತ್ತೆ ಡ್ರಗ್ ಸೀಜ್; ಎಂಡಿಎಂಎ ಮಾರಾಟ ಮಾಡುತ್ತಿದ್ದ ಮೂವರ ಬಂಧನ
    ಭಾರತದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ಹೀರೋ ಎಂದು ಅಲ್ಲು ಅರ್ಜುನ್ ಅವರನ್ನು ಗುರುತಿಸಿದೆ. ಇನ್ನೂ ತಮಿಳಿನ ವಿಜಯ್ ತಮ್ಮ ಕೊನೆಯ ಚಿತ್ರಕ್ಕಾಗಿ 250 ಕೋಟಿ ರೂಪಾಯಿಗೂ ಅಧಿಕ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಶಾರುಖ್ ಖಾನ್ ಪ್ರತಿ ಚಿತ್ರಕ್ಕೆ 150ರಿಂದ 250 ಕೋಟಿ ರೂಪಾಯಿ ಪಡೆಯುತ್ತಾರೆ. ಈ ಪಟ್ಟಿಯಲ್ಲಿ ಶಾರುಖ್ ಮೂರನೇ ಸ್ಥಾನ ಪಡೆದಿದ್ದಾರೆ.

    ಸೂಪರ್ ಸ್ಟಾರ್ ರಜನಿಕಾಂತ್ 125ರಿಂದ 200 ಕೋಟಿ ರೂಪಾಯಿ ಪಡೆದರೆ, ಆಮೀರ್ ಖಾನ್ ಪ್ರತಿ ಸಿನಿಮಾಕ್ಕೆ 100ರಿಂದ 200 ಕೋಟಿ ಪಡೆಯುತ್ತಾರೆ. ಈಗಾಗೀ ಇಬ್ಬರು ಅನುಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನ ಪಡೆದಿದ್ದಾರೆ. ಆರನೇ ಸ್ಥಾನದಲ್ಲಿರುವ ಪ್ರಭಾಸ್ ಅವರು 100 ಕೋಟಿ ಸಂಭಾವನೆ ಪಡೆಯುತ್ತಾರೆ. ಆ ಬಳಿಕ ಅಜಿತ್ ಕುಮಾರ್, ಸಲ್ಮಾನ್ ಖಾನ್, ಕಮಲ್ ಹಾಸನ್ ಹಾಗೂ ಅಕ್ಷಯ್ ಕುಮಾರ್ ಇದ್ದಾರೆ. ಟಾಪ್ 10ರ ಪೈಕಿ ಆರು ಹೀರೋಗಳು ಇದ್ದಾರೆ.

    ಅಲ್ಲು ಅರ್ಜುನ್ ಸಂಭಾವನೆ ವಿಚಾರದಲ್ಲಿ ಶಾರುಖ್ ಖಾನ್, ಸಲ್ಮಾನ್ ಖಾನ್, ದಳಪತಿ ವಿಜಯ್, ರಜನಿಕಾಂತ್, ಪ್ರಭಾಸ್ ಎಲ್ಲರನ್ನು ಮೀರಿಸಿದ್ದಾರೆ. ಈಗ ಫೋರ್ಬ್ಸ್ ಇಂಡಿಯಾ ವರದಿ ಮಾಡಿರುವ ಪ್ರಕಾರ ಅಲ್ಲು ಅರ್ಜುನ್ ಅವರು ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಹೀರೋ ಆಗಿದ್ದಾರೆ. ಅವರು ಪ್ರತಿ ಚಿತ್ರಕ್ಕೆ 300 ಕೋಟಿ ರೂಪಾಯಿ ಪಡೆಯುತ್ತಾರೆ.

    Continue Reading

    LATEST NEWS

    Trending