ಮೂಡಬಿದ್ರೆ: ಆನೆಯ ಘೀಳಿನ ಶಬ್ದಕ್ಕೆ ಹೆದರಿ ಓಡಿ ಹೋಗುವಾಗ ಕಾಲು ಜಾರಿ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಮೂಡಬಿದ್ರೆಯ ಕೊಡ್ಯಡ್ಕ ದೇವಸ್ಥಾನದಲ್ಲಿ ಸೋಮವಾರ ಸಂಜೆ ನಡೆದಿದೆ.
ಕೊಡ್ಯಡ್ಕ ದೇವಸ್ಥಾನದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಕಾರ್ಕಳ ಇಂಡಸ್ಟ್ರಿಯಲ್ ಬಳಿಯ ನಿವಾಸಿ ವಿಶ್ವನಾಥ ದೇವಾಡಿಗ (58) ಮೃತಪಟ್ಟ ವ್ಯಕ್ತಿ.
ಇವರು ದೇವಸ್ಥಾನದ ಆನೆಯ ಸಮೀಪ ಕೆಲಸ ಮಾಡುತ್ತಿದ್ದ ಸಂದರ್ಭ ಆನೆ ಘೀಳಿಟ್ಟಿದ್ದು, ಈ ಸಂದರ್ಭ ಹೆದರಿ ಓಡಿ ಹೋಗುವಾಗ ಬಿದ್ದು ತಲೆಗೆ ಏಟು ಬಿದ್ದು ಗಂಭೀರ ಗಾಯಗೊಂಡಿದ್ದರು.
ತಕ್ಷಣ ಅವರನ್ನು ಮೂಡುಬಿದಿರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾರೆ.
ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.