Monday, August 8, 2022

ನವಮಂಗಳೂರು ಬಂದರಿಗೆ 47 ನೇ ವರ್ಷದ ಸಂಭ್ರಮ : ಬಂದರು ಪ್ರವೇಶಿಸಿದ ಮೊದಲ ಹಡಗಿನ ಚಿತ್ರವನ್ನು ಹಂಚಿಕೊಂಡ NMPT..

ಮಂಗಳೂರು :  ಕರ್ನಾಟಕದ ಹೆಬ್ಬಾಗಿಲು ಮಂಗಳೂರಿನ ನವಮಂಗಳೂರು ಬಂದರಿಗೆ ಮೊದಲ ಹಡಗು ಆಗಮಿಸಿ ಜೂನ್ 10 ಕ್ಕೆ 47 ವರ್ಷಗಳು ಸಂದಿವೆ.

47 ವರ್ಷಗಳ ಹಿಂದೆ ಅಂದರೆ ಜೂನ್ 10, 1974 ನೇ ಇಸವಿಯಲ್ಲಿ ಎಂ ವಿ ಸತ್ಸು ಮರು ( MV satsu maru ) ಎಂಬ ಹಡಗು ಮೊದಲಾಗಿ ನವ ಮಂಗಳೂರು ಬಂದರು ಪ್ರವೇಶಿಸಿತ್ತು.

ಈ ಐತಿಹಾಸಿಕ ದಿನವನ್ನು ಹಡಗನ್ನು ಚಿತ್ರ ಸಮೇತ ಎನ್ ಎಂ ಪಿ ಟಿ ನೆನಪಿಸಿ ಶೇರ್ ಮಾಡಿಕೊಂಡಿದೆ.

ಈ ಐತಿಹಾಸಿಕ ಬಂದರಿನ ನಿರ್ಮಾಣದ ರೂವಾರಿ ಈ ಭಾಗದ ಸಂಸದರಾದ ಸತತ ಮೂರು ಬಾರಿ ಗೆಲುವು ಸಾಧಿಸಿದ್ದ ದಿವಂಗತ ಶ್ರೀವಾಸ್ ಮಲ್ಯರವರು.

1962 ರಲ್ಲಿ ಬಂದರಿನ ನಿರ್ಮಾಣ ಕಾರ್ಯ ಆರಂಭವಾಗಿ 1974 ರಲ್ಲಿ ಮುಕ್ತಾಯವಾಯಿತು. ಮೇ 4, 1974 ರಂದು ಆಗಿನ ಪ್ರಧಾನಿ ಇಂದಿರಾ ಗಾಂಧಿಯವರು ಬಂದರನ್ನು ಉದ್ಘಾಟಿಸಿ ಲೋಕಾರ್ಪಣೆಗೊಳಿಸಿದ್ದರು.

ನವ ಮಂಗಳೂರು ಬಂದರು ರಾಜ್ಯದ ಏಕೈಕ ಪ್ರಮುಖ ಸರ್ವ ಋತು ಬಂದರಾಗಿದೆ.ಮತ್ತು ಇದು ಪಶ್ಚಿಮ ಕರಾವಳಿಯಲ್ಲಿ ಆಳವಾದ ಒಳ ಬಂದರಾಗಿದೆ.

ಜೊತೆಗೆ ಭಾರತದ ಏಳನೇ ಅತಿ ದೊಡ್ಡ ಬಂದರಾಗಿದೆ. ಕರ್ನಾಟಕ ರಾಜ್ಯ ಮತ್ತು ಕೇರಳದ ಕೆಲವು ರಾಜ್ಯಗಳ ಒಳನಾಡಿಗೆ ಗಣನೀಯ ಸೇವೆ ಸಲ್ಲಿಸುತ್ತಿದ್ದು. ಕಬ್ಬಿಣದ ಅದಿರು , ಮ್ಯಾಂಗನೀಸ್, ಗ್ರಾನೈಟ್ ಕಲ್ಲುಗಳು, ಕಾಫಿ, ಗೋಡಂಬಿ ಮತ್ತು ಕಂಟೇನರ್ ಸೇವೆ ಹಾಗೂ ವಿಶ್ವ ದ ಆನೇಕ ಪ್ರವಾಸಿಗರ ಹಡಗುಗಳಿಗೆ ಪ್ರಮುಖ ಬಂದಾರಾಗಿದೆ. ಜೊತೆಗೆ ಕಚ್ಚಾ ಮತ್ತು ಪೆಟ್ರೋಲಿಯಂ ಉತ್ಪನ್ನಗಳು, ಎಲ್ಪಿಜಿ, ಮರದ ತಿರುಳು, ಮರದ ಲಾಗ್ , ಸಿದ್ಧಪಡಿಸಿದ ರಸಗೊಬ್ಬರಗಳು, ದ್ರವ ಅಮೋನಿಯಾ, ಫಾಸ್ಪರಿಕ್ ಆಸಿಡ್, ಇತರ ದ್ರವ ರಾಸಾಯನಿಕಗಳನ್ನು ಇಲ್ಲಿಂದ ನಿರ್ವಹಿಸಲಾಗುತ್ತಿದೆ.

 

LEAVE A REPLY

Please enter your comment!
Please enter your name here

Hot Topics

ಡ್ರಾಪ್‌ ಕೊಡುವ ನೆಪದಲ್ಲಿ ಟ್ರಕ್‌ಗೆ ಹತ್ತಿಸಿ ಲೈಂಗಿಕ ಕಿರುಕುಳ ನೀಡಿ ಚಲಿಸುತ್ತಿದ್ದಾಗಲೇ ಹೊರದಬ್ಬಿದ ಚಾಲಕ..!

ಮಥುರಾ: ರಸ್ತೆ ಬದಿ ಕಾಯುತ್ತಿದ್ದ ಮಹಿಳೆಗೆ ಡ್ರಾಪ್‌ ಕೊಡುವ ನೆಪದಲ್ಲಿ ಟ್ರಕ್‌ಗೆ ಹತ್ತಿಸಿಕೊಂಡು ಲೈಂಗಿಕ ಕಿರುಕುಳ ನೀಡುತ್ತಿದ್ದಾಗ ವಿರೋಧಿಸಿದಾಗ ಚಲಿಸುತ್ತಿದ್ದ ಟ್ರಕ್‌ನಿಂದಲೇ ಹೊರದಬ್ಬಿರುವ ಕ್ರೂರ ಘಟನೆ ಉತ್ತರ ಪ್ರದೇಶದ ಮಥುರಾ ಬಳಿಯ ದೆಹಲಿ–ಆಗ್ರಾ...

ಇನ್ನೂ 3-4 ದಿನ ಭಾರೀ ಮಳೆ: ಹಲವು ಕಡೆಗಳಲ್ಲಿ ಪ್ರವಾಹ ಭೀತಿ-ಹವಾಮಾನ ಇಲಾಖೆ ಎಚ್ಚರಿಕೆ

ಹೊಸದಿಲ್ಲಿ: ಕೇಂದ್ರ ಭಾರತ ಮತ್ತು ಪಶ್ಚಿಮ ಕರಾವಳಿ ಪ್ರದೇಶದಲ್ಲಿ ಮುಂದಿನ 3-4 ದಿನಗಳವರೆಗೆ 200 ಮಿಲಿಮೀಟರ್ ಮಳೆಯಾಗುವ ಸಾಧ್ಯತೆಯಿದ್ದು, ಹಲವು ಕಡೆಗಳಲ್ಲಿ ಪ್ರವಾಹ ಭೀತಿ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.ಶನಿವಾರ...

ಶಾಲೆ ಬಿಟ್ಟು ಮನೆಗೆ ಹಿಂತಿರುಗುತ್ತಿದ್ದ 7 ರ ಬಾಲಕಿ ಕಾಲುಸಂಕದಿಂದ ಬಿದ್ದು ನಾಪತ್ತೆ..!

ಉಡುಪಿ: ಶಾಲೆ ಬಿಟ್ಟು ವಾಪಾಸಾಗುತ್ತಿದ್ದ 7ರ ಪ್ರಾಯದ ಬಾಲಕಿ ಮರದ ಕಾಲು ಸಂಕ ದಾಟುತ್ತಿದ್ದಾಗ ಹೊಳೆಗೆ ಜಾರಿ ಬಿದ್ದು ನಾಪತ್ತೆಯಾದ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದ ಬಿಜಮಕ್ಕಿ ನಡೆದಿದೆ.ಸನ್ನಿಧಿ...