Connect with us

DAKSHINA KANNADA

ಮಂಗಳೂರಿನಲ್ಲಿ ನಿಷೇಧಿತ ಮಾದಕವಸ್ತು MDMA ಸಾಗಾಟ : 3.90 ಲಕ್ಷದ ಡ್ರಗ್ ವಶ..

Published

on

ಮಂಗಳೂರು : ಕೆಲ ಸಮಯದಿಂದ ಕೊಂಚ ಇಳಿಮುಖವಾಗಿದ್ದ ಡ್ರಗ್ ದಂಧೆ ಕರಾವಳಿಯಲ್ಲಿ ಮತ್ತೆ ತಲೆ ಎತ್ತಿದೆ. ಕಳೆದ ಶುಕ್ರವಾರ 16 ಲಕ್ಷದ ಮೌಲ್ಯದ 840 ಎಲ್ಎಸ್‌ ಡಿ ಸ್ಟ್ರಿಪ್ ಗಳನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದರು.

ಇದೀಗ ಮತ್ತೆ ನಿಷೇಧಿತ ಮಾದಕ ವಸ್ತು ಎಂಡಿಎಂಎಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಕೊಣಾಜೆ ಠಾಣೆಯ ಪೊಲೀಸರು 3.90 ಲಕ್ಷ ರೂ. ಮೌಲ್ಯದ 65 ಗ್ರಾಂ ಎಂಡಿಎಂಎಯನ್ನು ವಶಪಡಿಸಿಕೊಂಡಿದ್ದಾರೆ.

ಕಾಸರಗೋಡು ನಿವಾಸಿಗಳಾದ ಶಫೀಕ್ ಮತ್ತು ಅಲ್ತಾಫ್ ಬಂಧಿತ ಆರೋಪಿಗಳೆಂದು ತಿಳಿದು ಬಂದಿದೆ.

ಆರೋಪಿಗಳು ನಿಷೇಧಿತ ಮಾದಕ ವಸ್ತು ಎಂಡಿಎಂಎಯನ್ನು ಅಕ್ರಮವಾಗಿ ಮೆಲ್ಕಾರ್, ಮುಡಿಪು, ನಾಟೆಕಲ್ ದಾರಿಯಾಗಿ ಸಾಗಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ.

3.90 ಲಕ್ಷ ರೂ. ಮೌಲ್ಯದ ಎಂಡಿಎಂಎ ವಶಸರಿಯಾದ ಮಾಹಿತಿ ಮೇರೆಗೆ ಕೊಣಾಜೆ ಠಾಣೆಯ ಪೊಲೀಸ್ ಉಪ ನಿರೀಕ್ಷಕ ಮಲ್ಲಿಕಾರ್ಜುನ್ ಬಿರಾದರ್ ಹಾಗೂ ತಂಡ ಮಂಜನಾಡಿ ಗ್ರಾಮದ ನಾಟೆಕಲ್, ವಿಜಯನಗರ ಎಂಬಲ್ಲಿ ಆರೋಪಿಗಳ ಮೇಲೆ ದಾಳಿ ನಡೆಸಿದ್ದಾರೆ.

ಈ ಸಂದರ್ಭ ತಪಾಸಣೆ ನಡೆಸಿದಾಗ ಆರೋಪಿಗಳ ಬಳಿ 3.90 ಲಕ್ಷ ರೂ. ಮೌಲ್ಯದ 65 ಗ್ರಾಂ ಎಂಡಿಎಂಎ ಪತ್ತೆಯಾಗಿದೆ.

ತಕ್ಷಣ ಆರೋಪಿಗಳನ್ನು ಬಂಧಿಸಿರುವ ಪೊಲೀಸರು 5 ಲಕ್ಷ ರೂ. ಮೌಲ್ಯದ ಸ್ವಿಫ್ಟ್ ಕಾರು, 4 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click to comment

Leave a Reply

Your email address will not be published. Required fields are marked *

DAKSHINA KANNADA

ನಿರ್ಮಾಣ ಹಂತದ ಸೇತುವೆ ಕುಸಿದು 7 ಮಂದಿಗೆ ಗಾಯ

Published

on

ವಿಟ್ಲ: ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿದ ಪರಿಣಾಮ 7 ಮಂದಿ ಕಾರ್ಮಿಕರು ಗಾಯಗೊಂಡ ಘಟನೆ ಪುಣಚ ಗ್ರಾಮದ ಬರೆಂಜ-ಕುರುಡಕಟ್ಟೆ ಸಂಪರ್ಕ ರಸ್ತೆಯ ಮಲ್ಪಿಪ್ಪಾಡಿ ಎಂಬಲ್ಲಿ ನಡೆದಿದೆ.

ಈ ಸೇತುವೆಯ ಕೊನೆಯ ಕ್ಷಣದ ಸ್ಲ್ಯಾಬ್ ನಿರ್ಮಾಣಕ್ಕಾಗಿ ಕಾಂಕ್ರಿಟ್ ಕಾಮಗಾರಿ ನಡೆಯುತ್ತಿದ್ದ ವೇಳೆ ಈ ಅವಘಡ ನಡೆದಿದೆ. ಕಾಂಕ್ರಿಟ್ ಕಾಮಗಾರಿ ಸೇತುವೆ ತಳಭಾಗದಿಂದ ತಾತ್ಕಾಲಿಕವಾಗಿ ಅಳವಡಿಸಿದ್ದ ಕಬ್ಬಿಣದ ರಾಡ್ ಆಕಸ್ಮಿಕವಾಗಿ ಜಾರಿದ್ದರಿಂದ ಕಬ್ಬಿಣದ ರಾಡ್, ಕಾಂಕ್ರಿಟ್ ಮಿಕ್ಸ್ ಎಲ್ಲವೂ ಕುಸಿದು ಬಿದ್ದಿದೆ.

ಸೇತುವೆ ಸಾಮಾಗ್ರಿಯ ನಡುವಿನಲ್ಲಿ ಓರ್ವ ವ್ಯಕ್ತಿ ಸಿಕ್ಕಿ ಹಾಕಿಕೊಂಡಿದ್ದು, ಆರು ಮಂದಿ ಗಾಯಗೊಂಡವರನ್ನು ಕೂಡಲೇ ಪುತ್ತೂರು ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಸ್ಥಳದಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಒರ್ವ ವ್ಯಕ್ತಿಯನ್ನು ಕಾರ್ಯಾಚರಣೆಯ ಮೂಲಕ ರಕ್ಷಣೆ ಮಾಡಲಾಗಿದೆ.

Continue Reading

DAKSHINA KANNADA

ಮಂಗಳೂರಿನ ಮೊದಲ ಬಸ್ ಇದೇ ನೋಡಿ…!

Published

on

ಹಿಂದಿನ ಕಾಲದಲ್ಲಿ ಮಂಗಳೂರಿನಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಂಚಾರ ಮಾಡಬೇಕಿದ್ದರೆ ಒಂದಾ ಎತ್ತಿನಗಾಡಿ ಇಲ್ಲದಿದ್ದರೆ ಕುದುರೆಗಾಡಿಯಲ್ಲಿ ಹೋಗಬೇಕಿತ್ತು. ಇದೂ ಎರಡೂ ಇಲ್ಲದಿದ್ದರೆ ನಡೆದುಕೊಂಡೇ ಹೋಗಬೇಕಿತ್ತು. ಆ ಸಮಯದಲ್ಲಿ ಮಂಗಳೂರಿಗೆ ಮೊದಲ ಬಸ್ಸಿನ ಪರಿಚಯ ಆಗ್ತದೆ. ಅದು ಯಾವಾ ಬಸ್. ಎಲ್ಲೆಲ್ಲ ತಿರ್ಗಾಡುತ್ತಾ ಇತ್ತು. ನೋಡೋಣ ಬನ್ನಿ.

1914ರಲ್ಲಿ ಕೆನರಾ ಪಬ್ಲಿಕ್ ಕನ್ವೆಯನ್ಸ್ ಕಂಪೆನಿ (ಸಿಪಿಸಿ) ಇವರು ಮೊದಲ ಖಾಸಗಿ ಬಸ್ ಸಂಚಾರವನ್ನು ಪ್ರಾರಂಭ ಮಾಡ್ತಾರೆ. 1914 ಮಾರ್ಚ್‌ 23 ತಾರೀಕಿನಂದು ಮಂಗಳೂರಿನಿಂದ ಬಂಟ್ವಾಳಕ್ಕೆ ಮೊದಲ ಸಿಪಿಸಿ ಬಸ್ ಹೊರಡ್ತದೆ. ಪ್ರತಿದಿನ ಕೂಡ 2 ಟ್ರಿಪ್ ಇರ್ತಾ ಇತ್ತು. ಒಂದು ಸಲಕ್ಕೆ 22 ಜನರನ್ನು ಮಾತ್ರ ಕರೆದುಕೊಂಡು ಹೋಗುವ ಸಾಮಾರ್ಥ್ಯ ಈ ಬಸ್ಸಿಗೆ ಇತ್ತಂತೆ.

ವಿಶೇಷವೆಂದರೆ ಈ ಬಸ್ ಅನ್ನು ಜರ್ಮನ್‌ನಿಂದ ಮಂಗಳೂರಿಗೆ ಶಿಪ್‌ನಲ್ಲಿ ತಂದದ್ದು. ಆ ಕಾಲದಲ್ಲಿ ಅದಕ್ಕೆ 2500 ರೂಪಾಯಿ ಮಾತ್ರ ಖರ್ಚಾಗಿತ್ತು. ತದನಂತರ 1916ರಲ್ಲಿ ಹಿಂದೂ ಟ್ರಾಸಿಸ್ಟ್ ಎನ್ನುವ ಹೊಸ ಸಾರಿಗೆ ಸಂಸ್ಥೆ ಆರಂಭವಾಯಿತು. 1917ರಲ್ಲಿ ಮಂಗಳೂರಿನಿಂದ ಪುತ್ತೂರಿಗೆ ಬಸ್ ಸಂಚಾರ ಪ್ರಾರಂಭವಾಯಿತು. ಇದಾದ ಮೇಲೆ ಒಂದೊಂದೆ ಬಸ್ಸಿನ ಸಂಖ್ಯೆ ಎಚ್ಚಾಗುತ್ತಾ ಬಂತು.

ದುರ್ಗಾಪರಮೇಶ್ವರಿ ಮೋಟಾರ್ ಸರ್ವೀಸ್, ಶಂಕರ್ ವಿಠಲ್, ಮಂಜುನಾಥ್ ಟ್ರಾನ್ಸ್‌ಪೋರ್ಟ್‌, ಶೆಟ್ಟಿ ಮೋಟಾರ್ಸ್, ಹನುಮಾನ್ ಟ್ರಾನ್ಸ್‌ಪೋರ್ಟ್‌, ಬಲ್ಲಾಳ್ ಮೋಟಾರ್ಸ್ ಹೀಗೆ ಹಲವು ಬಗೆಯ ಖಾಸಗಿ ಸಂಸ್ಥೆಗಳು ಶುರುವಾಯಿತು. ಆ ಸಮಯದಲ್ಲಿ ಮಂಗಳೂರಿನಿಂದ ಉಡುಪಿಗೆ ಬಸ್ಸ್‌ನಲ್ಲಿ ಹೋಗಬೇಕಿದ್ದರೆ ಸಾಧಾರಣ 5 ಗಂಟೆ ಬೇಕಿತ್ತು.

ಇವತ್ತಿನ ನಮ್ಮ ಮಂಗಳೂರಿನಲ್ಲಿ ಬಸ್ ವ್ಯವಸ್ಥೆ ಎನ್ನುವಂತದ್ದು ಭಾರೀ ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಆದ್ರೆ ಅದರ ಹಿಂದೆ ಇಷ್ಟೆಲ್ಲಾ ಇಂಟ್ರೆಸ್ಟಿಂಗ್ ಸಂಗತಿಗಳು ಇವೆ.

Continue Reading

DAKSHINA KANNADA

ನೀರು ಕುಡಿಯುವ ನೆಪದಲ್ಲಿ ದರೋಡೆಗೆ ಯತ್ನ..!!

Published

on

ಪಡುಬಿದ್ರೆ: ಕುಡಿಯಲು ನೀರು ಕೇಳುವ ನೆಪದಲ್ಲಿ ಬಂದ ಕೂಲಿ ಕಾರ್ಮಿಕರೊಬ್ಬ ಮನೆಗೆ ಬಂದು ಮನೆಯೊಡತಿಯ ಮಾಂಗಲ್ಯ ದೋಚಲು ಮುಂದಾಗಿರುವ ಘಟನೆ ಪಡುಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸದ್ಯ ಆರೋಪಿಯನ್ನು ಪೊಲೀಸರು ಬಂದಿಸಿದ್ದಾರೆ.

ಎಲ್ಲರೂ ಗ್ರಾಮದ ದಳಂತ್ರ ಕೆರೆ ಸಮೀಪದ ಕೃಷ್ಣರಾಜ ಹೆಗಡೆ ಅವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಕೃಷ್ಣ ರಾಜ್‌ ಅವರ ಪತ್ನಿ ಸುನೀತಿ ಹೆಗಡೆ ಅವರ ಮಾಂಗಲ್ಯ ಎಳೆಯಲು ಪ್ರಯತ್ನಿಸಿದ್ದಾನೆ. ಪಾಲಡ್ಕ ನಿವಾಸಿ ಶರತ್ ಎಂಬಾತ ಈ ಹಿಂದೆ ಈ ಮನೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ. ಅದೇ ಪರಿಚಯದಲ್ಲಿ ಮನೆಗೆ ಬಂದು ಮನೆಯ ಯಜಮಾನಿಯಲ್ಲಿ ನೀರು ಕೇಳಿದ್ದಾನೆ.

ನೀರು ತರಲು ಒಳ ಹೋದಾಗ ಸುನೀತಿ ಹೆಗಡೆಯವರನ್ನು ಹಿಂಬಾಲಿಸಿಕೊಂಡು ಹೋಗಿದ್ದಾನೆ. ಬಳಿಕ ಅಡುಗೆ ಮನೆಯಿಂದ ಸ್ನಾನದ ಮನೆಯವರೆಗೂ ಅವರನ್ನು ಎಳೆದೊಯ್ದು ಬಾತ್ ಟವಲ್‌ನಿಂದ ಉಸಿರುಗಟ್ಟಿಸಿದ್ದಾನೆ . ಇದೇ ವೇಳೆ ಅವರ ಕತ್ತಿನಲ್ಲಿದ್ದ ಬಂಗಾರದ ಕರಿಮಣಿ ಕಸಿಯಲು ಮುಂದಾಗಿದ್ದ. ಈ ವೇಳೆ ಪತ್ನಿಯ ಬೊಬ್ಬೆ ಕೇಳಿ ಹೊರಗಡೆ ಇದ್ದ ಕೃಷ್ಣರಾಜ ಹೆಗಡೆಯವರು ಓಡಿ ಬಂದಿದ್ದಾರೆ. ಈ ಸಮಯದಲ್ಲಿ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆ ನಡೆದು 12 ಗಂಟೆಯಲ್ಲಿ ಪೊಲೀಸರು ಮುದರಂಗಡಿಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

Continue Reading

LATEST NEWS

Trending