Connect with us

LATEST NEWS

ಕರಾವಳಿ ಕಂಬಳ ಕೋಣದ ಅಲಂಕಾರದ ಹಿಂದೆ ಯಾರಿದ್ದಾರೆ ಗೊತ್ತಾ..!

Published

on

ಕರಾವಳಿ ಕಂಬಳ ಕೋಣದ ಅಲಂಕಾರದ ಹಿಂದೆ ಯಾರಿದ್ದಾರೆ ಗೊತ್ತಾ..!

ಮೂಡಬಿದ್ರೆ;ಅವಿಭಜಿತ ಮೂರು ಜಿಲ್ಲೆಗಳ ಜಾನಪದ ಕ್ರೀಡೆಯಾಗಿರುವ ಕಂಬಳವನ್ನು ನೋಡಲು ಹಿಂದಿನಿಂದಲೂ ಜನರು ಕಿಕ್ಕಿರಿದು ಸೇರುತ್ತಿದ್ದರು.

ಕಂಬಳದಲ್ಲಿ ಬರೀ ಕೋಣಗಳನ್ನು ಓಡಿಸುವುದನ್ನು ನೋಡಲು ಮಾತ್ರ ಜನರು ಸೇರುವುದಲ್ಲ ಬದಲಾಗಿ ಬಣ್ಣ ಬಣ್ಣದ ಆಲಂಕಾರಿಕ ವಸ್ತುಗಳನ್ನು ತಮ್ಮ ತಲೆ, ನೆತ್ತಿ, ಮುಖ ಮೇಲೆ ಹಾಕಿಕೊಂಡು ಮದುಮಗನಂತೆ ಸಿಂಗರಿಸಿಕೊಂಡು ಕಂಬಳದ ಕರೆಯಲ್ಲಿ ಓಡುವ ಕೋಣಗಳನ್ನು ನೋಡಲೆಂದೇ ಬರುವ ಕಂಬಳಾಭಿಮಾನಿಗಳ ಸಂಖ್ಯೆಯೂ ಹೆಚ್ಚಿದೆ.

ಕಂಬಳದ ಕೋಣಗಳಿಗೆ ಮದುಮಗನ ರೀತಿಯಲ್ಲಿ ಶೃಂಗಾರಗೊಳ್ಳಲು ಅದಕ್ಕೆ ಬೇಕಾದ ನೆತ್ತಿ ಹಗ್ಗ, ಓಡಿಸುವ ಹಗ್ಗ, ಪನಕೆ, ಬೆತ್ತ ಮುಂತಾದುವುಗಳನ್ನು ಬಣ್ಣ ಬಣ್ಣದ ದಪ್ಪದ ತಂಗೀಸು ನೂಲು ಸಹಿತ ಪ್ಲಾಸಿಕ್ ಹಗ್ಗಗಳಿಂದ ತಯಾರು ಮಾಡಿ ಕೋಣಗಳು ಸುಂದರವಾಗಿ ಕಾಣುವಂತೆ ರೂಪು ಕೊಡುವವರು ಮೂಡುಬಿದಿರೆ ತಾಲೂಕಿನ ಕಡಂದಲೆ ಸಮೀಪದ ಗಣೇಶ್ ಬಲ್ಲಾಡಿ ಅವರು.

ಹಿಂದೆ ನಡೆಯುತ್ತಿದ್ದ ಕಂಬಳಗಳನ್ನು ನೋಡಿದರೆ ಕಂಬಳದ ಕೋಣಗಳಿಗೆ ಅಷ್ಟೇನೂ ಅಲಂಕಾರಿಕ ವಸ್ತುಗಳನ್ನು ತೊಡಿಸುತ್ತಿರಲಿಲ್ಲ. ಚೌರಿಯಿಂದ ಮಾಡಿದ ಬೆತ್ತ, ಮಾಮೂಲಿ ಹಗ್ಗ, ನೇಗಿಲಿನಲ್ಲಿ ಕಟ್ಟಿ ಕೋಣಗಳನ್ನು ಓಡಿಸುತ್ತಿದ್ದರು.ಆದರೆ ಇದೀಗ ಕಂಬಳ ಹೇಗೆ ರಾಷ್ಟ್ರ-ಅಂತರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆಯೋ ಹಾಗೇ ಕಂಬಳದ ಕೋಣಗಳು ಕೂಡಾ ತಮ್ಮ ವೇಗದ ಓಟ ಮತ್ತು ಆಲಂಕಾರಿಕ ವಸ್ತುಗಳೊಂದಿಗೆ ಗಮನ ಸೆಳೆಯುತ್ತಿವೆ.

ಮೊದಮೊದಲಿಗೆ ಸಣ್ಣ ಸಣ್ಣ ಕೋಣಗಳಿಗೆ ಬೇಕಾಗುವ ಅಲಂಕಾರಿಕ ವಸ್ತುಗಳನ್ನು ಮಾಡುತ್ತಿದ್ದ ಅವರು ಕ್ರಮೇಣ  ದೊಡ್ಡ ಕೋಣಗಳಿಗೆ ಬೇಕಾಗುವ ವಸ್ತುಗಳನ್ನು ಮಾಡಿಕೊಡಲು ಆರಂಭಿಸಿದ್ದು ಈಗ ಹೆಚ್ಚಿನ ಕೋಣಗಳ ಯಜಮಾನರುಗಳು ಅವರ ಬಳಿಯೇ ಅಲಂಕಾರಿಕಾ ವಸ್ತುಗಳನ್ನು ಮಾಡಿಸಿಕೊಳ್ಳುತ್ತಾರೆ.
ಕಂಬಳದ ವಾರ್ಷಿಕ ಋತುವಿನಲ್ಲಿ ನಡೆಯುವ ಕಂಬಳಗಳಲ್ಲಿ ಹಿರಿಯ ವಿಭಾಗದ ಕೋಣಗಳು ಮದುಮಗನ ರೀತಿಯಲ್ಲಿ ಶೃಂಗಾರ ಮಾಡಿಸಿಕೊಂಡು ಕರೆಗಳಿಗೆ ಇಳಿಯುವಾಗಲೇ ತಮ್ಮ ಆಲಂಕಾರದ ಮೂಲಕ ಗಮನಸೆಳೆಯುತ್ತವೆ ಅಲ್ಲದೆ ಕರೆಯಲ್ಲಿ ಓಡಿಕೊಂಡು ಬರುವಾಗಲಂತೂ ಇನ್ನೂ ಹೆಚ್ಚಿನ ಸೌಂದರ್ಯದೊಂದಿಗೆ ಕಾಣುತ್ತವೆ.

ಗಣೇಶ್ ಅವರು ತಮ್ಮ 12ನೇ ವಯಸ್ಸಿನಲ್ಲಿಯೇ ಕಂಬಳಗಳಿಗೆ ಅಣ್ಣನ ಜತೆಗೂಡಿ ಹೋಗುವ ಮೂಲಕ ಕಂಬಳದ ಬಗ್ಗೆ ಆಸಕ್ತಿಯನ್ನು ಬೆಳೆಸಿಕೊಂಡವರು.

ಮಹಾಬಲ ಬಲ್ಲಾಡಿ-ಕಲ್ಯಾಣಿ ದಂಪತಿಯ ಪುತ್ರರಾಗಿರುವ ಇವರು ಕೋಣಗಳಿಗೆ ಅಲಂಕಾರಿಕ ವಸ್ತುಗಳನ್ನು ತಯಾರಿ ಮಾಡುವುದಲ್ಲದೆ ಕಂಬಳದ ಕರೆಯಲ್ಲಿ ಓಟದ ಕೋಣಗಳನ್ನು ತಿರುಗಿಸಿ ಬಿಡುವಲ್ಲಿಯೂ ನೈಪುಣ್ಯತೆಯನ್ನು ಹೊಂದಿದ್ದಾರೆ.

ಅದರಂತೆ ಇರುವೈಲ್ ಪಾಣಿಲ, ಪದವು ಕಾನಡ್ಕ, ಕಾಂತಾವರ ಅಂಬೋಡಿಮಾರ್, ಪಡಿವಾಳ್ಸ್‍ನ ಕೋಣಗಳನ್ನು ಕರೆಯಲ್ಲಿ ತಿರುಗಿಸಿ ಬಿಡುತ್ತಾರೆ. ಇವುಗಳಿಗೆಲ್ಲಾ ಹಲವು ಪದಕಗಳು ಲಭಿಸಿವೆ.

ಅಲಂಕಾರಿಕಾ ವಸ್ತುಗಳನ್ನು ರೆಡಿ ಮಾಡಲು ತಾಳ್ಮೆ ಮುಖ್ಯ. ಒಂದು ಜೊತೆ ನೆತ್ತಿ ಹಗ್ಗಕ್ಕೆ ರೂ 5,000 ದಷ್ಟು ವೆಚ್ಚವಿದೆ .ಓಡಿಸುವ ಹಗ್ಗಕ್ಕೆ 1500 ವೆಚ್ಚವಿದೆ.

ಕಂಬಳ ಋತುವಿನಲ್ಲಿ ಒಟ್ಟು 20 ಜೋಡಿಗೆ ಬೇಕಾಗುವ ಅಲಂಕಾರಿಕ ವಸ್ತುಗಳ ತಯಾರಿಗೆ ಅವಕಾಶಗಳು ಬರುತ್ತಿವೆ. ತಾನು ಈ ಕೃಷಿಯ ಜೊತೆಗೆ ಕಂಬಳದಲ್ಲಿ ಮತ್ತು ಅಲಂಕಾರಿಕ ವಸ್ತುಗಳ ತಯಾರಿಯನ್ನು ಮಾಡುತ್ತಿರುವುದರಿಂದ ಆರ್ಥಿಕವಾಗಿ ತೊಂದರೆಯಾಗಿಲ್ಲವೆಂದು ಗಣೇಶ್ ಅವರು ಹೇಳುತ್ತಾರೆ.

Click to comment

Leave a Reply

Your email address will not be published. Required fields are marked *

DAKSHINA KANNADA

ನಾಲ್ಕು ತಿಂಗಳ ಮಗುವಿಗೆ ಹಾಲಿನಲ್ಲಿ ಆಲ್ಕೋಹಾಲ್ ಬೆರೆಸಿದ ಅಜ್ಜಿ..! ಅಜ್ಜಿ ಮಾಡಿದ ಎಡವಟ್ಟಿಗೆ ಕೋಮಾಗೆ ಜಾರಿದ ಮಗು !!

Published

on

ಮಂಗಳೂರು/ಇಟಲಿ: ಇಟಲಿಯಲ್ಲೊಂದು ಆಘಾತಕಾರಿ ಘಟನೆ ನಡೆದಿದೆ. ಅಜ್ಜಿಯೊಬ್ಬರು ನಾಲ್ಕು ತಿಂಗಳ ಮಗುವಿಗೆ ಕುಡಿಯುವ ಹಾಲಿನಲ್ಲಿ ಆಲ್ಕೋಹಾಲ್‌ ಬೆರೆಸಿರುವ ಘಟನೆ ನಡೆದಿದೆ.

feed

ಮೊಮ್ಮಗು ಕುಡಿಯುವ ಹಾಲಿಗೆ ಅಜ್ಜಿ ತಪ್ಪಾಗಿ ಆಲ್ಕೋಹಲ್ ಬೆರೆಸಿದ್ದಾರೆ. ಮಗು ಅರ್ಧ ಹಾಲು ಕುಡಿದ ಬಳಿಕ ಮಗು ಅಳಲು ಆರಂಭಿಸಿದೆ. ಅಜ್ಜಿಗೆ ಅನುಮಾನ ಬಂದು ತಾನು ಕುಡಿಸಿದ ಹಾಲಿನ ವಾಸನೆಯನ್ನು ತೆಗೆದು ಪರಿಶೀಲನೆ ಮಾಡಿದಾಗ ಅದರಲ್ಲಿ ಆಲ್ಕೋಹಾಲ್‌ ಮಿಶ್ರಣ ಹಾಕಿರುವುದು ಬೆಳಕಿಗೆ ಬಂದಿದೆ.  ಇದರಿಂದ ಆಘಾತಕ್ಕೊಳಗಾದ ವೃದ್ಧೆ ಮಗುವನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಮುಂದೆ ಓದಿ..; ಜೀವಾಂತ್ಯವಾದ ಕಾಂತಾಬಾರೆ-ಬೂದಬಾರೆ ಜನ್ಮಕ್ಷೇತ್ರದ ಮರ..! ಇತಿಹಾಸದ ಜೀವಂತ ಸಾಕ್ಷಿಯ ಅಂತ್ಯ..!

ಕೋಮಾಗೆ ಜಾರಿದ ಮಗು:

ಅದಾಗಲೇ ಮಗುವಿನ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಕೋಮ ಸ್ಥಿತಿಗೆ ಜಾರಿತ್ತು. ಬಳಿಕ ವೈದ್ಯರು ಚಿಕಿತ್ಸೆ ನೀಡಿದ ಬಳಿಕ ಚೇತರಿಸಿಕೊಂಡಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಮಗುವಿಗೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ಮಗುವಿನ ಆರೋಗ್ಯವನ್ನು ಸಂಪೂರ್ಣ ಪರಿಶೀಲಿಸಿದ ಬಳಿಕ ಅಜ್ಜಿ ವಿರುದ್ಧ ಪ್ರಕರಣ ದಾಖಲಿಸಲು ನಿರ್ಧರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

 

 

Continue Reading

DAKSHINA KANNADA

ಚಲಿಸುತ್ತಿದ್ದಾಗ ಒಡೆದ ಬಸ್ಸಿನ ಗಾಜು; ಇಬ್ಬರು ಮಕ್ಕಳು, ಚಾಲಕನಿಗೆ ಗಾ*ಯ

Published

on

ವಿಟ್ಲ : ಚಲಿಸುತ್ತಿದ್ದ ಕೇರಳ ರಾಜ್ಯದ ಬಸ್ಸಿನ ಗಾಜು ಒಡೆದ ಪರಿಣಾಮ ಇಬ್ಬರು ಮಕ್ಕಳು ಮತ್ತು ಚಾಲಕ ಗಾಯಗೊಂಡ ಘಟನೆ ಉರಿಮಜಲು ಎಂಬಲ್ಲಿ ಸಂಭವಿಸಿದೆ. ಪುತ್ತೂರು ಕಡೆಯಿಂದ ವಿಟ್ಲ ಮೂಲಕ ಕಾಸರಗೋಡಿಗೆ ಹೊರಟಿದ್ದ ಕೇರಳ ರಾಜ್ಯದ ಮಲಬಾರ್ ಬಸ್ ಉರಿಮಜಲು ಸೊಸೈಟಿ ತಲುಪುತ್ತಿದ್ದಂತೆ ಅದರ ಮುಂಭಾಗ ಗಾಜು ಹೊಡೆದಿದೆ.

ಇದನ್ನೂ ಓದಿ : ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕ್ರೇಟಾ..! ಕಾರು ಜಖಂ

ಇದರಿಂದ ಮುಂಭಾಗದಲ್ಲಿದ್ದ ಬಾಲಕ ಗಂಭೀರ ಗಾಯಗೊಂಡಿದ್ದು, ಚಾಲಕ ಮತ್ತು ಮತ್ತೊಂದು ಮಗು ಸಣ್ಣಪುಟ್ಟವಿಗೆ ಗಾಯಗಳಾಗಿವೆ. ಗಂಭೀರ ಗಾಯಗೊಂಡ ಬಾಲಕನನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರ ಗಾಯಗೊಂಡಿರುವ ಬಾಲಕ ಕೇರಳದ ಚೆರ್ಕಳ ನೆಲ್ಲಿಕಟ್ಟೆ ನಿವಾಸಿ ಎಂದು ಸ್ಥಳೀಯರು ತಿಳಿಸಿದ್ದಾರೆ.

ಬಿಸಿಲಿನ ತಾಪಕ್ಕೆ ಈ ಘಟನೆ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

 

Continue Reading

DAKSHINA KANNADA

ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕ್ರೇಟಾ..! ಕಾರು ಜಖಂ

Published

on

ವಿಟ್ಲ: ನಿಯಂತ್ರಣ ತಪ್ಪಿ ಕ್ರೇಟಾ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ವಿಟ್ಲ ಪುತ್ತೂರು ರಸ್ತೆಯ ಚಂದಳಿಕೆ ಎಂಬಲ್ಲಿ ನಡೆದಿದೆ.

accident

accident

ಕಾರು ಪಲ್ಟಿಯಾದ ಪರಿಣಾಮ ಕಾರು ಸಂಪೂರ್ಣ ನುಜ್ಜು ಗುಜ್ಜಾಗಿದ್ದು ಪವಾಡ ಎಂಬಂತೆ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ.

ಮುಂದೆ ಓದಿ..; ಪ್ರಾಂಶುಪಾಲೆ, ಶಿಕ್ಷಕಿ ನಡುವೆ ಹೊಯ್‌ ಕೈ..!! ವೀಡಿಯೋ ವೈರಲ್

accident

Continue Reading

LATEST NEWS

Trending