Connect with us

LATEST NEWS

PFI ಬ್ಯಾನ್‌ಗೆ ಕೇಂದ್ರ ಕೊಟ್ಟ ಕಾರಣಗಳೇನು ಗೊತ್ತಾ…?

Published

on

ಹೊಸದಿಲ್ಲಿ: ಕೇಂದ್ರ ಸರ್ಕಾರ ಪಾಪ್ಯುಲರ್ ಫ್ರಂಟ್‌ ಆಫ್‌ ಇಂಡಿಯಾ ಹಾಗೂ ಅದರ ಸಹ ಸಂಘಟನೆಗಳ ಮೇಲೆ ಐದು ವರ್ಷಗಳ ಕಾಲ ನಿಷೇಧ ಹೇರಿ ಇಂದು ಬೆಳಿಗ್ಗೆ ಆದೇಶ ಹೊರಡಿಸಿದ ಬೆನ್ನಲ್ಲೇ ಪಿಎಫ್‌ಐ ಬ್ಯಾನ್‌ಗೆ ಕೇಂದ್ರ ಸರ್ಕಾರ ಕಾರಣಗಳನ್ನು ಕೂಡಾ ನೀಡಿದೆ.

ಪಿಎಫ್‌ಐ ಸಂಘಟನೆಯು ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಕೊಂಡಿದೆ ಎಂದು ಹೇಳಿರುವ ಕೇಂದ್ರ ಸರ್ಕಾರ, ಕಾನೂನುಬಾಹಿರ ಚಟುವಟಿಕೆಗಳ ಕಾಯಿದೆಯಡಿ ಪಿಎಫ್‌ಐ ಸಂಘಟನೆಯ ಮೇಲೆ ನಿಷೇಧ ಹೇರಿದೆ.

2006 ರಲ್ಲಿ ಕೇರಳದಲ್ಲಿ ಹುಟ್ಟು ಪಡೆದ ಪಿಎಫ್‌ಐ ಸಂಘಟನೆಯು ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿತ್ತು. ಇದು ದೇಶದ ಭದ್ರತೆ ಹಾಗೂ ಕೋಮು ಸೌಹಾರ್ದಕ್ಕೆ ಮಾರಕವಾಗಿ ನಡೆದುಕೊಂಡಿದೆ.

ಪಿಎಫ್‌ಐ ಹಾಗೂ ಅದರ ಸಹ ಸಂಘಟನೆಗಳು ದೇಶದ್ರೋಹಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದವು. ಅಷ್ಟೇ ಅಲ್ಲದೆ ಪಿಎಫ್‌ಐನ ಸಂಸ್ಥಾಪಕ ಸದಸ್ಯರು ನಿಷೇಧಿತ ಭಯೋತ್ಪಾದನಾ ಸಂಘಟನೆಯಾದ ಸ್ಟೂಡೆಂಟ್ಸ್‌ ಇಸ್ಲಾಮಿಕ್‌ ಮೂವ್‌ಮೆಂಟ್‌ ಆಫ್‌ ಇಂಡಿಯಾ ಸಂಘಟನೆಯೊಂದಿಗೆ ಪಿಎಫ್‌ಐಗೆ ನಂಟು ಇತ್ತು.

ಪಿಎಫ್‌ಐ ಸಂಘಟನೆಗೆ ಜಾಗತಿಕ ಉಗ್ರ ಸಂಘಟನೆಯಾದ ಇಸ್ಲಾಮಿಕ್‌ ಸ್ಟೇಟ್‌ ಆಫ್‌ ಇರಾಕ್‌ ಆಂಡ್ ಜತೆಗೂ ನಂಟು ಇತ್ತು ಎಂದು ಕೇಂದ್ರ ಸರ್ಕಾರ ಹೇಳಿದೆ. ಪಿಎಫ್‌ಐ ಸಂಘಟನೆಯು ಮೂಲಭೂತವಾದಕ್ಕೆ ಬೆಂಬಲ ಕೊಡುತ್ತಿತ್ತು ಹಾಗೂ ದೇಶದಲ್ಲಿ ಅಭದ್ರತೆ ಸೃಷ್ಠಿಗೆ ಕಾರಣವಾಗಿತ್ತು ಎಂದು ಕೇಂದ್ರ ಸರ್ಕಾರ ಹೇಳಿದೆ.

ಈ ಎಲ್ಲಾ ಕಾರಣಗಳಿಗಾಗಿ ಪಿಎಫ್‌ಐ ಸಂಘಟನೆಯನ್ನು ನಿಷೇಧಗೊಳಿಸಿ ಕೇಂದ್ರ ಸರ್ಕಾಋ ಸೂಚನೆಯನ್ನು ಹೊರಡಿಸಿದೆ.

 

DAKSHINA KANNADA

ಬೈಕ್-ಕಾರು ನಡುವೆ ಅಪ*ಘಾತ; ಓರ್ವ ಮೃ*ತ್ಯು

Published

on

ಅರಂತೋಡು: ಬೈಕ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪ*ಘಾತದಲ್ಲಿ ಬೈಕ್‌ನ ಹಿಂಬದಿ ಸವಾರ ಮೃ*ತಪಟ್ಟ ಘಟನೆ ಸಂಪಾಜೆ ಕಲ್ಲುಗುಂಡಿ ಸಮೀಪ ದೊಡ್ಡಡ್ಕ ಎಂಬಲ್ಲಿ ಗುರುವಾರ ತಡರಾತ್ರಿ ಸಂಭವಿಸಿದೆ.


ಮತದಾನ ಮಾಡಲು ಊರಿಗೆ ಬರುತ್ತಿದ್ದರು ಎಂದು ಹೇಳಲಾಗುತ್ತಿದ್ದು ಡಿ*ಕ್ಕಿಯ ರಭಸಕ್ಕೆ ಬೈಕ್‌ನ ಹಿಂಬದಿ ಸವಾರನಿಗೆ ಗಂಭೀರ ಗಾಯಗೊಂಡು ಮೃ*ತಪಟ್ಟರೆ ಇನ್ನೋರ್ವನಿಗೆ ಗಾಯವಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃ*ತರ ವಿವರ ಇನ್ನಷ್ಟೇ ತಿಳಿದುಬರಬೇಕಾಗಿದೆ.

Continue Reading

LATEST NEWS

ಅಯೋಧ್ಯೆಯ ಅಂಗಳದಲ್ಲಿ ಶೂಟಿಂಗ್ ಮಾಡಿದ ಮೊಟ್ಟ ಮೊದಲ ಕನ್ನಡ ಸೀರಿಯಲ್ ಇದು?

Published

on

ಮಹಿಳೆಯರಿಗೆ ಸೀರಿಯಲ್ ನೋಡುವುದಂದರೆ ಒಂತಾರ ಹುಚ್ಚು. ಮನೆಯಲ್ಲೇ ಇರುವ ಮಹಿಳೆಯರು ಕೆಲವೊಮ್ಮೆ ಬೆಳಗ್ಗೆಯಿಂದ ಸಂಜೆಯವರೆಗೆ ಟಿವಿಯಲ್ಲಿ ಸೀರಿಯಲ್ ನೋಡುತ್ತಾ ಇರುತ್ತಾರೆ. ಸೀರಿಯಲ್ ನೋಡೊದು ಮಾತ್ರ ಅಲ್ಲ ಅದರ ಬಗ್ಗೆ ಸಂವಾದ ಕೂಡ ಮನೆಯವರಲ್ಲಿ ಮಾಡುತ್ತಾ ಇರುತ್ತಾರೆ.

ಈ ನಡುವೆ ಅಯೋಧ್ಯೆ ರಾಮಮಂದಿರ ನಿರ್ಮಾಣದ ನಂತರ ದೇಶದ ಜನರು ತುಂಬಾ ಸಂತೋಷದಲ್ಲಿದ್ದಾರೆ. ಅದೆಷ್ಟೋ ಜನ ಹಿಂದೂಗಳ ಕನಸು ನನಸಾದ ಕ್ಷಣ ಎಂದು ಹೇಳಬಹುದು. ಒಮ್ಮೆಯಾದ್ರೂ ಅಯೋಧ್ಯೆಗೆ ಹೋಗಿಬರಬೇಕು ಅಂತಾ ಪ್ಲಾನ್ ಅಂತೂ ಮಾಡ್ತಾ ಇರೋದು ಕಂಡಿತ. ಕೆಲವರು ಹೋಗಿ ಬಂದಿದ್ದಾರೆ ಕೂಡ ಆದರೆ ಇನ್ನು ಕೆಲವರು ಇನ್ನು ಹೋಗಬೇಕು. ಇದುವರೆಗೆ ಅಯೋಧ್ಯೆ ರಾಮಮಂದಿರದಲ್ಲಿ ಯಾವೂದೇ ರೀತಿದ ಫಿಲ್ಮ್ ಶೂಟಿಂಗ್, ಸೀರಿಯಲ್, ಕಿರುಚಿತ್ರ ಯಾವೂದು ಶೂಟಿಂಗ್ ಆಗಲಿಲ್ಲ. ಆದರೇ ಇದೇ ಮೊದಲ ಬಾರಿಗೇ ಕನ್ನಡ ಸೀರಿಯಲ್ ಇಂಡಸ್ಟ್ರಿಯಲ್ಲಿ ಕನ್ಯಾದಾನ ಸೀರಿಯಲ್ ಹೊಸ ದಾಖಲೆ ಬರೆದಿದೆ.

ಉದಯ ಟಿವಿಯಲ್ಲಿ ಪ್ರಸಾರವಾಗೋ ಕನ್ಯಾದಾನ ಧಾರಾವಾಹಿ ಈಗ ಹೊಸ ದಾಖಲೆ ಬರೆದಿದ್ದಾರೆ. ಕನ್ನಡ ಟೆಲಿವಿಷನ್ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಅಯೋಧ್ಯೆಯಲ್ಲಿ ಚಿತ್ರೀಕರಣಗೊಂಡ ಮೊಟ್ಟ ಮೊದಲ ಸೀರಿಯಲ್ ಎಂಬ ಹೆಗ್ಗಳಿಕೆಗೆ ಕನ್ಯಾದಾನ ಧಾರಾವಾಹಿ ಪಾತ್ರವಾಗಿದೆ.

ಜನವರಿ 22ರಂದು ಅಂದ್ರೆ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಯಾದ ನಂತರ ಇಲ್ಲಿಯವೆರೆಗೂ ಯಾವುದೇ ಸಿನಿಮಾವಾಗ್ಲಿ, ಅಥವಾ ಸೀರಿಯಲ್ ಆಗ್ಲಿ ಶೂಟ್ ಮಾಡಿರಲಿಲ್ಲ. ಆದ್ರೆ, ಕನ್ಯಾದಾನ ಧಾರವಾಹಿ ತಂಡ ಫಸ್ಟ್‌ಟೈಮ್‌ ಅಯೋಧ್ಯೆಗೆ ಹೋಗಿ ಚಿತ್ರೀಕರಣ ಮಾಡಿದೆ.

ಈ ಸೀರಿಯಲ್‌ನಲ್ಲಿ ಬಹುತೇಕ ಪಾತ್ರಗಳು ಒಂದಲ್ಲ ಒಂದು ಸಮಸ್ಯೆ ಎದುರಿಸ್ತಿವೆ. ಹಾಗಾಗಿ ರಾಮನ ದರ್ಶನ ಪಡೆದು ಆ ಕಷ್ಟಗಳಿಂದ ಹೊರಬರಬೇಕು ಎಂದು ನಿರ್ಧರಿಸಿ, ರಾಮಮಂದಿರಕ್ಕೆ ಹೋಗಿ ಬಾಲರಾಮನ ದರ್ಶನ ಪಡೆದಿದ್ದಾರೆ. ಅಯೋಧ್ಯೆಯಲ್ಲಿ ಶೂಟಿಂಗ್ ಮಾಡಿರೋ ಬಗ್ಗೆ ಸೀರಿಯಲ್​ ತಂಡ ಸಂತಸ ಹಂಚಿಕೊಂಡಿದೆ.

Continue Reading

LATEST NEWS

ಕೊಡಗು: ಮದುವೆ ಊಟ ಸೇವಿಸಿ ಅಸ್ವಸ್ಥ.. ಆಸ್ಪತ್ರೆ ಸೇರಿದ 150ಕ್ಕೂ ಹೆಚ್ಚು ಜನರು

Published

on

ಕೊಡಗು: ಮದುವೆಯಲ್ಲಿ ಊಟ ಮಾಡಿದ ನೂರಾರು ಜನತೆ ಅಸ್ವಸ್ಥಗೊಂಡ ಘಟನೆ ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಮದಲ್ಲಿ ನಡೆದಿದೆ. ಪರಿಣಾಮ ಸುಮಾರು 150 ಕ್ಕೂ ಹೆಚ್ಚು ಜನರು ಆಸ್ಪತ್ರೆ ಸೇರಿದ್ದಾರೆ.

ನಿನ್ನೆ ಮಧ್ಯಾಹ್ನ ಕೊಪ್ಪ ಗ್ರಾಮದಲ್ಲಿ ನಡೆದ ಮದುವೆಯಲ್ಲಿ ಊಟ ಜನರು ಸೇವಿಸಿದ್ದಾರೆ. ಊಟ ಸೇವಿಸಿದ ಬಳಿಕ ಸಂಜೆಯ ವೇಳೆಗೆ ಹಲವರಲ್ಲಿ ವಾಂತಿ ಕಾಣಿಸಿಕೊಂಡಿದೆ. ಅಸ್ವಸ್ಥಗೊಂಡ ಜನರು ಕೊಡಗಿನ ಕುಶಾಲನಗರ ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಕುಶಾಲನಗರ ಸರಕಾರಿ ಆಸ್ಪತ್ರೆಯಲ್ಲಿ ಸುಮಾರು 150 ಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಕೆಲವರು ಕುಶಾಲನಗರ ಖಾಸಗಿ ಆಸ್ಪತ್ರೆಯಲ್ಲೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪಿರಿಯಾಪಟ್ಟಣ ಆಸ್ಪತ್ರೆಯಲ್ಲೂ ಹಲವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕೊಡಗು ಆರೋಗ್ಯಾಧಿಕಾರಿ ಕುಶಾಲನಗರ ಆಸ್ಪತ್ರೆಗೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮದುವೆ ಊಟದಿಂದಾಗಿ ಕುಶಾಲನಗರದ ಆಸ್ಪತ್ರೆ ಕ್ಲೀನಿಕ್ ಗಳು ಫುಲ್ ಆಗಿವೆ. ಅತ್ತ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗದೆ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೂ ಹೊಗಿದ್ದಾರೆ. ಆಸ್ಪತ್ರೆಗೆ ಮಡಿಕೇರಿ ಕ್ಷೇತ್ರದ ಶಾಸಕ ಮಂತರ್ ಗೌಡ ಭೇಟಿ‌ ನೀಡಿ ಜನರ ಆರೋಗ್ಯ ವಿಚಾರಿಸಿದ್ದಾರೆ.

Continue Reading

LATEST NEWS

Trending