Connect with us

    LATEST NEWS

    ರುಚಿಕರ ಜೇನು ಸಂಗ್ರಹಿಸುವ ಜೇನುಗೂಡಿನೊಳಗಿನ ವ್ಯವಸ್ಥೆ ಹೇಗಿರುತ್ತೆ ಗೊತ್ತಾ ?

    Published

    on

    ಪುತ್ತೂರು: ಜೇನು ತಿನ್ನಲು ಎಷ್ಟು ರುಚಿಕರವೋ, ಅದರ ಸಂಗ್ರಹಕಾರರಾದ ಜೇನುನೊಣಗಳ ಜೀವನ ಪದ್ಧತಿಯೂ ಅಷ್ಟೇ ಸ್ವಾರಸ್ಯಕರ. ಜೇನುನೊಣಗಳ ಕುಟುಂಬದಲ್ಲಿ ಮೊದಲ ಪ್ರಾಶಸ್ತ್ಯ ರಾಣಿ ಜೇನಿಗಾದರೆ, ಬಳಿಕ ಗಂಡು ಜೇನು ಆ ಬಳಿಕ ದಿನಪೂರ್ತಿ ದುಡಿಯುತ್ತದೆ.

    ಜೇನು ಕುಟುಂಬದಲ್ಲಿ ಕೆಲಸಗಾರರು ಸಾವಿರಾರು (Worker Bee). ಆದರೆ ವಂಶಾಭಿವೃದ್ಧಿಗಾಗಿ ಗಂಡಸರ ಸಂಖ್ಯೆ ನೂರರ ‌ಆಸುಪಾಸು (Drone Bee). ಮಹಾರಾಣಿ ಒಬ್ಬಳೇ (Queen Bee). ರಾಣಿ ಜೇನು ನೊಣದ ಆಯಸ್ಸು ಸುಮಾರು 3 ರಿಂದ ಮೂರುವರೆ ವರ್ಷ. ರಾಣಿ ಜೇನಿನ ದೇಹದ ಗಾತ್ರ ಕೆಲಸಗಾರ ನೊಣಕ್ಕಿಂತ ಸ್ವಲ್ಪ ದೊಡ್ಡದು. ಈಕೆಗೆ ಕೆಲಸಗಾರ ನೊಣದಂತೆ ಮಧುಕೋಶ, ರಾಜಶಾಹಿರಸಗ್ರಂಥಿ, ಪರಾಗಬುಟ್ಟಿ ಇಲ್ಲ. ಹೊಟ್ಟೆ ಭಾಗ ಸ್ವಲ್ಪ ಉದ್ದ.

    ಲಕ್ಷ್ಮೀ ಹೆಬ್ಬಾಳ್ಕರ್‌ಗೆ 1 ಕೆಜಿ ಬಂಗಾರದ ಆಫರ್‌ ನೀಡಿದ ಮಾಜಿ ಸಚಿವ

    ರಾಣಿಯ ಹಾರಾಟ ಗಂಡುನೊಣದೊಂದಿಗೆ ಮಿಲನಕ್ಕಾಗಿ ಮಾತ್ರ ಸೀಮಿತವಾಗಿರುತ್ತದೆ. ಒಮ್ಮೆ ಮಿಲನವಾದ ಬಳಿಕ ರಾಣಿ ಜೇನು ಗೂಡಿನಿಂದ ಹೊರಹೋಗುವುದಿಲ್ಲ. ದೊಡ್ಡ ಹೊಟ್ಟೆಯನ್ನು ಎತ್ತಿಕೊಂಡು ಹೋಗುವುದು ಈಕೆಗೆ ಕಷ್ಟಸಾಧ್ಯವೂ ಆಗುವುದರಿಂದ ಗೂಡಿನ ಒಳಗೆಯೇ ಅದು‌ ಉಳಿದುಕೊಳ್ಳುತ್ತದೆ. ಮನೆಯಲ್ಲಿ ಜನ ಜಾಸ್ತಿಯಾದರೆ, ಸ್ಥಳೀಯವಾಗಿ ಮಕರಂದದೂಟ ಸಿಗದಿದ್ದರೆ, ಗೂಡಿಗೆ ಇನ್ಯಾರದ್ದೋ ಹಾವಳಿ ಜಾಸ್ತಿಯಾದಾಗ ಕೆಲಸಗಾರರ ಒತ್ತಡಕ್ಕೆ ಮಣಿದು ಹೊಸ ಮನೆ ಹುಡುಕಿ ರಾಣಿ ಜೇನು ಹಾರಾಡುವುದುಂಟು.

    ಕೆಲಸಗಾರರು ತಂದು ಇಟ್ಟದ್ದನ್ನು, ಬಾಯಿಗೆ ಕೊಟ್ಟದನ್ನು ತಿನ್ನುವುದು, ಮೊಟ್ಟೆ ಇಡುವುದು ರಾಣಿ ಜೇನಿನ ಕೆಲಸ. ಈಕೆಯ ಮೈ ಉಜ್ಜಲು, ಮೊಟ್ಟೆ ಇಡುವುದಕ್ಕಾಗಿ ವ್ಯವಸ್ಥೆ ಮಾಡಿಕೊಡಲು, ಮಕ್ಕಳನ್ನು ನೋಡಿಕೊಳ್ಳಲು ಸುಮಾರು ಜನ ಕೆಲಸಗಾರ ಜೇನುಗಳು ಜೇನುಗೂಡಿನೊಳಗೆ ಸಿದ್ಧವಿರುತ್ತವೆ.

    ರಾಣಿ ಗಂಡುನೊಣದೊಂದಿಗೆ ಮಿಲನವಾಗುವುದು ಜೀವನದಲ್ಲಿ ಒಮ್ಮೆ ಮಾತ್ರ. ಈ ವೇಳೆ ಗರ್ಭಾಶಯದಲ್ಲಿ 15-20 ಲಕ್ಷ ವೀರ್ಯಾಣುಗಳನ್ನು ಹಿಡಿದಿಟ್ಟುಕೊಳ್ಳುತ್ತದೆ. ಮಿಲನ ಕಾರ್ಯ ಆಕಾಶದಲ್ಲಿ ನಡೆಯುತ್ತದೆ. ರಾಣಿ ಜೇನು ಸಾಮಾನ್ಯವಾಗಿ ಒಂದು ಅಥವಾ ಹೆಚ್ಚು ಗಂಡು‌ ನೊಣದೊಂದಿಗೆ ಸೇರುತ್ತದೆ. ಬಳಿಕ ದಿನಕ್ಕೆ ಸಾವಿರ ಮೊಟ್ಟೆ ಇಡುವ ಸಾಮರ್ಥ್ಯವನ್ನು ರಾಣಿ ಜೇನು ಪಡೆಯುತ್ತದೆ.

    ರಾಣಿ ದೇಹದಲ್ಲಿ ಸುಮಾರು 40 ಬಗೆಯ ರಾಸಾಯನಿಕ ಪೆರಮೋನ್/ ವಸ್ತುಸಾರ ಉತ್ಪಾದನೆ ಆಗುವುದು. ಎಲ್ಲರನ್ನು ಒಗ್ಗಟ್ಟಿನಲ್ಲಿ ಇಟ್ಟುಕೊಳ್ಳಲು, ಜೇನು ತರುವ ಕಾರ್ಯಕ್ಕೆಂದು ಹೊರ ಹೋದ ಕೆಲಸಗಾರರು ಮತ್ತೆ ಅದೇ ಮನೆಗೆ ಸೇರಲು‌ ಪೆರಮೋನ್ ಕಾರಣ. ಒಂದು ವೇಳೆ ರಾಣಿ ವಯಸ್ಸಿನ ಕಾರಣದಿಂದಲೋ, ಅನಾರೋಗ್ಯದಿಂದಲೋ ವಸ್ತುಸಾರ ಹಂಚಲು ಅಸಮರ್ಥಳಾದರೆ, ಕೆಲಸಗಾರರು ರೊಚ್ಚಿಗೇಳುತ್ತವೆ. ಮತ್ತು ರಾಣಿ ಜೇನಿನ ಸ್ಥಾನಕ್ಕೆ ಹೊಸ ರಾಣಿ ಜೇನನ್ನು ಹುಡುಕುವ ಕಾರ್ಯವನ್ನೂ ಈ ಕೆಲಸಗಾರ ಜೇನುಗಳು ಮಾಡುತ್ತವೆ.

    LATEST NEWS

    ಕೊಲ್ಲೂರು ದೇಗುಲ ವ್ಯವಸ್ಥಾಪನ ಸಮಿತಿಗೆ ಡಾ.ಅಭಿಲಾಷ್ ಪಿ.ವಿ ಆಯ್ಕೆ.

    Published

    on

    ಮಂಗಳೂರು ( ಕೊಲ್ಲೂರು ) : ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದ ವ್ಯವಸ್ಥಾಪನ ಸಮಿತಿ ಸದಸ್ಯರಾಗಿ ಮಂಗಳೂರಿನ ಡಾ। ಅಭಿಲಾಷ್ ಪಿ.ವಿ. ನೇಮಕವಾಗಿದ್ದಾರೆ.


    2011ರಿಂದ 17ರ ವರೆಗೆ 2 ಅವಧಿಗೆ ರಾಜೀವ್ ಗಾಂಧಿ ಆರೋಗ್ಯ ವಿ.ವಿ. ಸೆನೆಟ್ ಸದಸ್ಯರಾಗಿದ್ದ ಅವರು ಮೆಸ್ಕಾಂ ನಿರ್ದೇಶಕರಾಗಿ, ಕೇಂದ್ರೀಯ ಸೆನ್ಸಾರ್ ಮಂಡಳಿ ಸದಸ್ಯರಾಗಿ, 2018ರಿಂದ 2021ರ ವರೆಗೆ ಕೊಲ್ಲೂರು ದೇಗುಲದ ಟ್ರಸ್ಟಿಯಾಗಿದ್ದರು. ಲಕ್ಷ್ಮೀ ಮೆಮೋರಿಯಲ್ ಕಾಲೇಜ್ ಆಫ್ ಫಿಸಿಯೋ ಥೆರಪಿಯಲ್ಲಿ ಅಸೋಸಿ ಯೆಟ್ ಪ್ರೊಫೆಸರ್ ಹಾಗೂ ಪಿಆರ್‌ಒ ಆಗಿ ಅವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

    Continue Reading

    chikkamagaluru

    ಗೈರು ಹಾಜರಾದ ವಿದ್ಯಾರ್ಥಿಗಳಿಂದ ಹಣ ವಸೂಲಿ ಸಂಚು; ತಾವು ಬೀಸಿದ ಬಲೆಗೆ ತಾವೇ ಸಿಕ್ಕಿಬಿದ್ದ ಆರೋಪಿಗಳು

    Published

    on

    ಮಂಗಳೂರು/ಚಿಕ್ಕಮಗಳೂರು: ಅನಿವಾರ್ಯ ಕಾರಣಗಳಿಂದ ಕಾಲೇಜಿಗೆ ವಿದ್ಯಾರ್ಥಿಗಳು ಗೈರು ಹಾಜರಾಗುವುದು ಸಹಜ. ಹಾಗೆ ಬಾರದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಬೇಕೆಂದಿದ್ದರೆ, ಹಣ ನೀಡುವಂತೆ ಆದೇಶಿಸಿದ್ದ ಬೀರೂರು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಮತ್ತು ಪ್ರಥಮ ದರ್ಜೆ ಸಹಾಯಕ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.


    ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕ ಬಿ.ಟಿ.ಹರೀಶ್‌ ಮುಖಾಂತರ ಹಣದ ಬೇಡಿಕೆಯನ್ನಿಟ್ಟಿದ್ದ ಹಿನ್ನಲೆಯಲ್ಲಿ ಇಬ್ಬರನ್ನೂ ಬಂಧಿಸಲಾಗಿದೆ.
    ಪ್ರಥಮ ದರ್ಜೆ ಸಹಾಯಕ ಸದಾಶಿವಯ್ಯ ಫೋನ್‌ ಪೇ ಮೂಲಕ 10 ಸಾವಿರ ಹಾಗೂ ಪ್ರಾಂಶುಪಾಲ ಎಂ.ಕೆ.ಪ್ರವೀಣ್ ಕುಮಾರ್‌ 5 ಸಾವಿರ ರೂ. ಕಸಿದುಕೊಂಡಿರುವುದಾಗಿ ಪ್ರಕರಣ ದಾಖಲಾಗಿದೆ.
    ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ತಿರುಮಲೇಶ್, ಬಿ.ಮಲ್ಲಿಕಾರ್ಜುನ್‌, ಅನಿಲ್ ರಾಥೋಡ್ ಇತರರು ಪಾಲ್ಗೊಂಡಿದ್ದರು.

    Continue Reading

    LATEST NEWS

    ದೇಶದ ಯಾವುದೇ ಭಾಗವನ್ನು ಪಾಕಿಸ್ತಾನ ಎಂದು ಕರೆಯುವಂತಿಲ್ಲ-ಸುಪ್ರೀಂ ಕೋರ್ಟ್ ಎಚ್ಚರಿಕೆ

    Published

    on

    ನವದೆಹಲಿ: ದೇಶದ ಯಾವುದೇ ಭಾಗವನ್ನು ಪಾಕಿಸ್ತಾನ ಎಂದು ಕರೆಯುವಂತಿಲ್ಲ, ಭಾರತದ ಯಾವುದೇ ಭಾಗವನ್ನು ಪಾಕಿಸ್ತಾನ ಎನ್ನಲು ಸಾಧ್ಯವಿಲ್ಲ. ಭಾರತದ ಯಾವುದೇ ಭಾಗವನ್ನು ಯಾರೂ ಪಾಕಿಸ್ತಾನ ಎಂದು ಕರೆಯಲು ಸಾಧ್ಯವಿಲ್ಲ. ಆ ರೀತಿ ಕರೆಯುವುದು ಮೂಲಭೂತವಾಗಿ ರಾಷ್ಟ್ರದ ಪ್ರಾದೇಶಿಕ ಸಮಗ್ರತೆಗೆ ವಿರುದ್ಧವಾಗಿದೆ” ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್‌ ಹೇಳಿದ್ದಾರೆ.

    ಇತ್ತೀಚೆಗೆ ಪ್ರಕರಣವೊಂದರ ವಿಚಾರಣೆ ವೇಳೆ ಬೆಂಗಳೂರಿನ ಗೋರಿಪಾಳ್ಯ ಪಾಕಿಸ್ತಾನದಲ್ಲಿದೆಯೇ ಎಂಬ ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿ ವೇದವ್ಯಾಸಾಚಾರ್‌ ಶ್ರೀಶಾನಂದ ಅವರ ವಿರುದ್ದ ಸುಮೋಟೋ ಪ್ರಕರಣದ ವಿಚಾರಣೆ ವೇಳೆ ಭಾರತದ ಯಾವುದೇ ಭಾಗವನ್ನೂ ಪಾಕಿಸ್ತಾನ ಎಂದು ಕರೆಯುವಂತಿಲ್ಲ ಎಂದು ಹೇಳಿದೆ.

    ನ್ಯಾಯಮೂರ್ತಿ ವೇದವ್ಯಾಸಾಚಾರ್‌ ಶ್ರೀಶಾನಂದ ಅವರ ಹೇಳಿಕೆ ವಿರುದ್ಧ ಸುಪ್ರೀಂ ಕೋರ್ಟ್‌ ‘ಸು ಮೋಟೊ’ (ಸ್ವಯಂ ಪ್ರೇರಿತ) ಪ್ರಕರಣ ದಾಖಲಿಸಿತ್ತು. ನ್ಯಾಯಮೂರ್ತಿ ಶ್ರೀಶಾನಂದ ವಿರುದ್ಧದ ‘ಸು ಮೋಟೊ’ ಪ್ರಕರಣದ ವಿಚಾರಣೆಯಲ್ಲಿ ಚಂದ್ರಚೂಡ್‌ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠ ವಿಚಾರಣೆ ನಡೆಸಿತ್ತು. ಇದೀಗ ನ್ಯಾಯಮೂರ್ತಿ ಶ್ರೀಶಾನ೦ದ ಅವರು ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ವು ಸುಪ್ರೀಂ ಕೋರ್ಟ್‌ ಈ ಪ್ರಕರಣದ ವಿಚಾರಣೆಯನ್ನು ಮುಕ್ತಾಯಗೊಳಿಸಿದೆ.

    Continue Reading

    LATEST NEWS

    Trending