LATEST NEWS
ಮುಡಾ ಹಗರಣ: ಸಿಎಂ ಸಿದ್ಧರಾಮಯ್ಯ ವಿರುದ್ಧ FIR ದಾಖಲಿಸಲು ಕೋರ್ಟ್ ಸೂಚನೆ
ಬೆಂಗಳೂರು/ಮಂಗಳೂರು: ಅಕ್ರಮ ಮುಡಾ ಹಗರಣ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ FIR ದಾಖಲಿಸಲು ಕೋರ್ಟ್ ಆದೇಶ ನೀಡಿದೆ. 82ನೇ ಸಿಸಿಹೆಚ್ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಈ ಮಹತ್ವದ ಸೂಚನೆ ನೀಡಿದ್ದಾರೆ. ಮೈಸೂರು ಲೋಕಾಯುಕ್ತಕ್ಕೆ ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಸ್ ದಾಖಲಿಸಲು ಕೋರ್ಟ್ ನಿರ್ದೇಶನ ನೀಡಿದೆ.
CRPC ಸೆಕ್ಷನ್ 156(3) ಅಡಿ ಕೇಸ್ ರಿಜಿಸ್ಟರ್ ಮಾಡಲು ಆದೇಶ ನೀಡಲಾಗಿದ್ದು, ತನಿಖಾ ವರದಿ ನೀಡಲು 3 ತಿಂಗಳ ಗಡುವು ನೀಡಲಾಗಿದೆ. ಅಂದ್ರೆ ಡಿಸೆಂಬರ್ 24, 2024ಕ್ಕೆ ತನಿಖಾ ವರದಿ ನೀಡಲು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಸೂಚನೆ ನೀಡಿದೆ.
ಮೈಸೂರಿನ ಸ್ನೇಹಮಹಿ ಕೃಷ್ಣ ಅವರು ಸಿಎಂ ಸಿದ್ದರಾಮಯ್ಯ ಪತ್ನಿ ಹೆಸರಲ್ಲಿ ಅಕ್ರಮ ಮುಡಾ ಸೈಟ್ ಪಡೆದಿದ್ದಾರೆ ಅನ್ನೋ ದೂರು ನೀಡಿದ್ದರು. ಸ್ನೇಹಮಹಿ ಕೃಷ್ಣ ಸಲ್ಲಿಸಿದ್ದ ಪಿಸಿಆರ್ ಬಗ್ಗೆ ಇಂದು(ಸೆ.25) 82ನೇ ಸಿಸಿಹೆಚ್ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ನಲ್ಲಿ ಮಹತ್ವದ ವಿಚಾರಣೆ ನಡೆದಿದೆ.
ಮುಡಾ ಪ್ರಕರಣ : ಸಿಎಂ ಸಿದ್ಧರಾಮಯ್ಯ ಅರ್ಜಿ ವಜಾ..!
ಕಳೆದ ಆಗಸ್ಟ್ 13ರಂದೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಾದ ಆಲಿಸಿ ತೀರ್ಪು ಕಾಯ್ದಿರಿಸಲಾಗಿತ್ತು. ಸ್ನೇಹಮಹಿ ಕೃಷ್ಣ ಪರ ವಕೀಲೆ ಲಕ್ಷ್ಮಿ ಅಯ್ಯಾಂಗಾರ್ ಅವರು ನ್ಯಾಯಾಧೀಶ ಸಂತೋಷ ಗಜಾನನ ಭಟ್ ಅವರ ಪೀಠದಲ್ಲಿ ವಾದ ಮಂಡಿಸಿದ್ದರು. ಈ ವಾದ ಆಲಿಸಿದ್ದ ನ್ಯಾಯಪೀಠ 20/8/2024ಕ್ಕೆ ತೀರ್ಪು ಕಾಯ್ದಿರಿಸಿತ್ತು.
ಆದಾದ ನಂತರ ತನಿಖೆಗೆ ಅನುಮತಿ ನೀಡಿದ್ದ ಗವರ್ನರ್ ವಿರುದ್ಧ ಸಿಎಂ ಸಿದ್ದರಾಮಯ್ಯ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಜನಪ್ರತಿನಿಧಿಗಳ ಕೋರ್ಟ್ ಆದೇಶಕ್ಕೆ ತಡಯಾಜ್ಞೆ ನೀಡಿತ್ತು. ನಿನ್ನೆ ಹೈಕೋರ್ಟ್ ಏಕಸದಸ್ಯ ಪೀಠ ಗವರ್ನರ್ ಆದೇಶವನ್ನು ಎತ್ತಿ ಹಿಡಿದಿದ್ದು ಅಧೀನ ನ್ಯಾಯಾಲಯದ ಆದೇಶಕ್ಕೆ ನೀಡಿದ್ದ ತಡೆಯಾಜ್ಞೆಯನ್ನು ತೆರವು ಮಾಡಿತ್ತು.
DAKSHINA KANNADA
ಫ್ರಾಡ್ ಕಾಲ್; ಬ್ಯಾಂಕ್ ಖಾತೆಯಿಂದ 76 ಸಾವಿರ ವಂಚನೆ
ಕಾರ್ಕಳ: ಬ್ಯಾಂಕ್ ಅಕೌಂಟ್‌ನಲ್ಲಿ ಸಮಸ್ಯೆಯಾಗಿದ್ದು, ಅದನ್ನು ನಿವಾರಿಸುವುದಾಗಿ ವ್ಯಕ್ತಿಯೊಬ್ಬರಿಗೆ 76 ಸಾವಿರ ರೂ. ವಂಚನೆ ಮಾಡಿರುವ ಘಟನೆ ಕಾರ್ಕಾಳದಲ್ಲಿ ನಡೆದಿದೆ.
ಕಸಬಾ ಗ್ರಾಮದ ಬಾಲಚಂದ್ರ ಅವರು ಆಕ್ಸಿಸ್ ಬ್ಯಾಂಕ್ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್‌ಗಳಲ್ಲಿ ಕ್ರೆಡಿಟ್ ಕಾರ್ಡ್ ಹೊಂದಿದ್ದರು. ಸೆ. 30 ರಂದು ಮನೋಜ್ ಶರ್ಮಾ ಕರೆ ಮಾಡಿ, ಎಚ್‌ಡಿಎಫ್‌ಸಿ ಬ್ಯಾಂಕ್ ಸಮಸ್ಯೆಯನ್ನು ನಿವಾರಿಸುತ್ತೇವೆ ಎಂದು ಹೇಳಿ ಎಲ್ಲಾ ಮಾಹಿತಿಗಳನ್ನು ತೆಗೆದುಕೊಂಡು, ಕೊನೆಯದ್ದಾಗಿ ಒಟಿಪಿ ಪಡೆದುಕೊಂಡನು.
ಅ.1 ರಂದು ಸಂಜೆ 4 ರಿಂದ 6 ರ ಅವಧಿಯಲ್ಲಿ ಎರಡೂ ಬ್ಯಾಂಕ್‌ನ ಕ್ರೆಡೀಟ್ ಕಾರ್ಡ್ ಮೂಲಕ 76,118 ರೂ. ಕಡಿತವಾಗಿತ್ತು. ಈ ಬಗ್ಗೆ ಕಾರ್ಕಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಸುತ್ತಿದ್ದಾರೆ.
LATEST NEWS
SHOCKING NEWS : ಮತ್ತೆ ಮೂವರು ಪಾಕಿಸ್ತಾನಿ ಪ್ರಜೆಗಳ ಬಂಧನ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿರುವ ಪಾಕಿಸ್ತಾನಿ ಪ್ರಜೆಗಳ ಹಾವಳಿ ಹೆಚ್ಚಾಗುತ್ತಿದ್ದು, ಪೀಣ್ಯದಲ್ಲಿ ವಾಸವಿದ್ದ ಮೂವರು ಪಾಕಿಸ್ತಾನಿ ಪ್ರಜೆಗಳನ್ನು ಗುರುವಾರ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೆಲವು ದಿನಗಳ ಹಿಂದೆ ಬೆಂಗಳೂರು ಹೊರವಲಯದ ಜಿಗಣಿಯಲ್ಲಿ ನಾಲ್ವರನ್ನು ಬಂಧಿಸಿಲಾಗಿತ್ತು. ಇದೀಗ ಪೀಣ್ಯದಲ್ಲಿ ಗಂಡ, ಹೆಂಡತಿ ಮತ್ತು ಅವರ ಮಗಳನ್ನು ವಶಕ್ಕೆ ಪಡೆಯಲಾಗಿದೆ. ಇವರು ಕೂಡಾ ಜಿಗಣಿಯಲ್ಲಿದ್ದಂತೆ ನಕಲಿ ಗುರುತಿನ ಚೀಟಿ ಬಳಸುತ್ತಿದ್ದರು ಎಂದು ತಿಳಿದು ಬಂದಿದೆ.
ರಾಜ್ಯ ಹಾಗೂ ದೇಶದ ವಿವಿಧ ಭಾಗಗಳಲ್ಲಿ ನೆಲೆಸಿರುವ ಇತರರನ್ನು ಗುರುತಿಸಲು ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
DAKSHINA KANNADA
ಮಂಗಳೂರಿಗೆ ಬಂದ ಕರ್ನಾಟಕ ಸುವರ್ಣ ರಥ
ಮಂಗಳೂರು: ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷ ಪೂರೈಸಿದ ಹಿನ್ನೆಯಲ್ಲಿ ರಾಜ್ಯದಾದ್ಯಂತ ಸಂಚರಿಸುತ್ತಿರುವ ಸುವರ್ಣ ಕರ್ನಾಟಕ ರಥ ಮಂಗಳೂರಿಗೆ ಆಗಮಿಸಿದೆ.
ರಾಜ್ಯದ ಪ್ರತಿ ಜಿಲ್ಲೆ, ತಾಲೂಕಿನಲ್ಲಿ ಸಂಚರಿಸುವ ಈ ರಥವನ್ನು ದಕ್ಷಿಣ ಕನ್ನಡ ಜಿಲ್ಲೆಗೆ ಸ್ವಾಗತಿಸುವ ಕಾರ್ಯಕ್ರಮ ಸರಳ ರೀತಿಯುಲ್ಲಿ ನಡೆಯಿತು. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇರುವ ಕಾರಣ ಆಧಿಕಾರಿಗಳು ರಥವನ್ನು ಸ್ವಾಗತಿಸಿದ್ದಾರೆ. ಕುದ್ಮುಲ್ ರಂಗರಾವ್ ಸಭಾಂಗಣದಲ್ಲಿ ರಥಕ್ಕೆ ಸ್ವಾಗತ ಕೋರಲಾಗಿದ್ದು, ಅಧಿಕಾರಿಗಳಿಂದಲೇ ಸರಳ ಕಾರ್ಯಕ್ರಮ ಕೂಡಾ ಆಯೋಜಿಸಲಾಗಿದೆ.
ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಸಿ.ಎಲ್. ಆನಂದ್ ಅವರ ನೇತೃತ್ವದಲ್ಲಿ ರಥವನ್ನು ಸ್ವಾಗತಿಸಲಾಗಿದ್ದು, ಜಿಲ್ಲೆಯ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು. ಕಳೆದ ವರ್ಷ ನವೆಂಬರ್ 1 ರಿಂದ ಈ ರಥ ರಾಜ್ಯದಾದ್ಯಂತ ಸಂಚರಿಸಿ ಕರ್ನಾಟಕ ಸುವರ್ಣ ಸಂಭ್ರಮದ ಸಂದೇಶ ಸಾರುತ್ತಿದೆ.
- DAKSHINA KANNADA7 days ago
ಕೆಬಿಬಿಯಲ್ಲಿ ಮಿಂಚಿದ ಮಂಗಳೂರು ಬೆಡಗಿ; ಕೊನೆಗೂ ನನಸಾದ ಅಪೂರ್ವ ಶೆಟ್ಟಿ ಕನಸು
- BIG BOSS4 days ago
BBK11 ವೇದಿಕೆಗೆ ಬರುತ್ತಿದ್ದಂತೆ ರೀಲ್ಸ್ ಸ್ಟಾರ್ ಮೇಲೆ ಕೋಪಗೊಂಡ ಕಿಚ್ಚ: ಇಂತವರನ್ನ ಏಕೆ ಕರೆಸಿದ್ರಿ ಎಂದು ಗರಂ?
- BIG BOSS4 days ago
ಚೈತ್ರಾ ಕುಂದಾಪುರಗೆ ಮೊದಲ ದಿನವೇ ಹೊಸ ಬಿರುದು ಕೊಟ್ಟ ಲಾಯರ್ ಜಗದೀಶ್
- BIG BOSS4 days ago
ಭ್ರಷ್ಟರ ವಿರುದ್ಧ ಗುಡುಗಿದ ಸ್ಪರ್ಧಿ ಲಾಯರ್ ಜಗದೀಶ್ಗೆ ಕಿಚ್ಚ ವಾರ್ನಿಂಗ್..!