Connect with us

    LATEST NEWS

    ಗಂಡಸ್ತನ ಇದೆಯಾ ಅಂತ ಕರಿಯೋದು ಬಿಜೆಪಿ ಸಂಸ್ಕೃತಿನಾ: ಸಂಸದ ಡಿ.ಕೆ ಸುರೇಶ್‌ ಗುಡುಗು

    Published

    on

    ಬೆಂಗಳೂರು: ನಿನ್ನೆ ರಾಮನಗರದಲ್ಲಿ ನಡೆದ ಸಂಸದ ಮತ್ತು ಸಚಿವರ ಜಟಾಪಟಿಗೆ ಇಂದು ಮತ್ತೆ ಸಂಸದ ಡಿ.ಕೆ ಸುರೇಶ್ ಪ್ರತಿಕ್ರಿಯಿಸಿದ್ದಾರೆ.

    ರಾಮನಗರಕ್ಕೆ ಬಂದು ಗಂಡಸ್ತನದ ಬಗ್ಗೆ ಮಾತಡ್ತೀರಲ್ಲಾ. ರಾಮನಗರ ಸ್ವಾಭಿಮಾನವನ್ನು ಕೆಣಕುವ ಕೆಲಸ ಮಾಡಿದ್ದಾರೆ. ಗಂಡಸ್ತನ ಇದೆಯಾ ಅಂತ ಕರೆಯೋದು ನಿಮ್ಮ ಸಂಸ್ಕೃತಿನಾ ಎಂದು ಬಿಜೆಪಿಗೆ ಪ್ರಶ್ನಿಸಿದ್ದಾರೆ.


    ಇಲ್ಲಿ ಡಿ.ಕೆ ಸುರೇಶ್ ನೆಪ ಮಾತ್ರ, ರಾಮನಗರದ ಜನರ ಸ್ವಾಭಿಮಾನ ಕೆಣಕುವ ಕೆಲಸ ಮಾಡಿದ್ದಾರೆ.

    ನಿನ್ನೆ ಸಿಎಂ ಸಭೆಯಲ್ಲಿ ಸಚಿವ ಅಶ್ವತ್ಥ ನಾರಾಯಣಗೆ ಸ್ವತಃ ಸಿಎಂ ನೀವು ಭಾಷಣ ಮಾಡಿದ್ದು ಸರಿ ಇಲ್ಲ, ಸಾಕು ಅಂತ ಹೇಳಿದರೂ ಸಹ ಕರ್ನಾಟಕದ ಎಲ್ಲಾ ಯುವಕರಿಗೆ ಅವಮಾನ ಮಾಡೋ ಕೆಲಸ ಸಚಿವರು ಮಾಡಿದಾರೆ.

    ರಾಮನಗರ ಜಿಲ್ಲೆಗೆ ಬಂದು ಗಂಡಸ್ತನದ ಮಾತನಾಡಿದ್ದಾರೆ. ಗಂಡಸ್ತನ ಬಗ್ಗೆ ಚರ್ಚೆ ಮಾಡಲು ಸಮಯ ನಿಗದಿ ಮಾಡಿ ಅಂತ ಸಿಎಂ ಎದುರೇ ಹೇಳಿದ್ದೇನೆ. ನನಗೆ ಪಲಾಯನ ಮಾಡಬೇಕಿಲ್ಲ. ಇದು ನಿಮ್ಮ ಪಕ್ಷದ ಕಾರ್ಯಕ್ರಮ ಅಲ್ಲ. ಅದು ಸರ್ಕಾರದ ಅಧಿಕೃತ ಕಾರ್ಯಕ್ರಮ. ಜಿಲ್ಲೆಯಲ್ಲಿ ಆದ ಘಟನೆಗೆ ಸಿಎಂ ಕ್ಷಮೆ ಕೇಳಿದ್ದೇನೆ
    ನನಗೆ ಪಲಾಯನ ಮಾಡುವ ಅವಶ್ಯಕತೆ ಡಿ.ಕೆ ಸುರೇಶ್‌ಗೆ ಇಲ್ಲ ಎಂದು ಗುಡುಗಿದರು.

    DAKSHINA KANNADA

    ಮುಲ್ಕಿ : ಪ್ರೀತಿಸಿದ ಹುಡುಗಿ ಆತ್ಮಹ*ತ್ಯೆ ಬೆನ್ನಲ್ಲೇ ರೈಲಿಗೆ ತಲೆಕೊಟ್ಟು ಇಹಲೋಕ ತ್ಯಜಿಸಿದ ಯುವಕ!

    Published

    on

    ಮುಲ್ಕಿ : ಅತಿಕಾರಿಬೆಟ್ಟು ಮೈಲೊಟ್ಟು ರೈಲ್ವೇ ಗೇಟ್ ಬಳಿ ಯುವಕನೋರ್ವ ರೈಲಿಗೆ ತಲೆಕೊಟ್ಟು ಆತ್ಮಹ*ತ್ಯೆ ಮಾಡಿಕೊಂಡ ಘಟನೆ ಭಾನುವಾರ ನಡೆದಿದೆ. ಸ್ಥಳೀಯ ನಿವಾಸಿ ಕಾರ್ತಿಕ್ ಪೂಜಾರಿ (೨೦) ಅತ್ಮಹತ್ಯೆ ಮಾಡಿಕೊಂಡ ಯುವಕ ಎಂದು ಗುರುತಿಸಲಾಗಿದೆ.

    ಪ್ರೀತಿ…ಮದುವೆಗೆ ನಿರಾಕರಣೆ :

    ಮೃತ ಕಾರ್ತಿಕ್ ಪೂಜಾರಿ ತನ್ನ ತಾಯಿ ಅಜ್ಜಿ ಜೊತೆ ಮೈಲೊಟ್ಟಿನಲ್ಲಿ ನೆಲೆಸಿದ್ದು, ಕಳೆದ ಕೆಲವು ತಿಂಗಳ ಹಿಂದೆ ಚಿತ್ರದುರ್ಗದಲ್ಲಿ ಸಂಬಂಧಿಕರ ಗ್ಯಾರೇಜ್ ನಲ್ಲಿ ಮೆಕ್ಯಾನಿಕ್ ಆಗಿ ಕೆಲಸಕ್ಕೆ ಸೇರಿದ್ದನು. ಈ ನಡುವೆ ಕಾಲೇಜಿನಲ್ಲಿರುವಾಗ ಕಾರ್ತಿಕ್ ಪೂಜಾರಿ ಸಹಪಾಠಿ ಶರಣ್ಯ ಎಂಬಳನ್ನು ಪ್ರೀತಿಸುತ್ತಿದ್ದ. ಇಬ್ಬರು ಅಪ್ರಾಪ್ತರಾದ ಕಾರಣ ಮದುವೆಗೆ ಅನುಮತಿ ಸಿಕ್ಕಿಲ್ಲ. ಪ್ರಾಪ್ತರಾದ ಬಳಿಕ ಮದುವೆ ಮಾಡುವ ಬಾಂಡ್ ಪೇಪರ್ ಮೂಲಕ ಸಮ್ಮತಿ ದೊರೆತಿತ್ತು ಎನ್ನಲಾಗಿದೆ.
    ಈ ನಡುವೆ ಶರಣ್ಯ ಮಾನಸಿಕ ಖಿನ್ನತೆಗೆ ಒಳಗಾಗಿ ಮೂಡುಬಿದ್ರೆಯ ತನ್ನ ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಆತ್ಮಹ*ತ್ಯೆ ಮಾಡಿಕೊಂಡಿದ್ದಳು. ಮೂಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ಇದನ್ನೂ ಓದಿ : ಠಾಣೆಗೆ ನುಗ್ಗಿ ಉದ್ಧಟತನದ ವರ್ತನೆ..! ಹರೀಶ್ ಪೂಂಜಾ ಮೇಲೆ ಕೇಸ್‌..!

    ನೊಂದು ರೈಲಿಗೆ ತಲೆಕೊಟ್ಟ ಯುವಕ :

    ಪ್ರೀತಿಸಿದ ಹುಡುಗಿ ಆತ್ಮಹ*ತ್ಯೆ ಮಾಡಿಕೊಂಡಿದ್ದೇ ತಡ, ಚಿತ್ರದುರ್ಗದಲ್ಲಿದ್ದ ಕಾರ್ತಿಕ್ ಪೂಜಾರಿ ಏಕಾಏಕಿ ಶನಿವಾರ ಸಂಜೆ ಮನೆಗೆ ಬಂದಿದ್ದಾನೆ. ತಾಯಿ ಕೇರಳಕ್ಕೆ ಹೋಗಿ ಭಾನುವಾರ ಬೆಳಗ್ಗೆ ಬರುವಷ್ಟರಲ್ಲಿ ಕಾರ್ತಿಕ್ ತನ್ನ ಮನೆಯ ಅಣತಿ ದೂರದಲ್ಲಿರುವ ರೈಲ್ವೇ ಹಳಿಯಲ್ಲಿ ಮಂಗಳೂರಿನಿಂದ ಮುರ್ಡೇಶ್ವರ ರೈಲಿನಡಿಗೆ ಬಿದ್ದು ಆತ್ಮಹ*ತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಮುಲ್ಕಿ ಪೊಲೀಸ್ ಇನ್ಸ್ಪೆಕ್ಟರ್ ವಿದ್ಯಾಧರ್ ಭೇಟಿ ನೀಡಿ ಪರಿಶೀಲಿಸಿದ್ದು, ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    LATEST NEWS

    ವಿದ್ಯುತ್ ತಂತಿ ತಗುಲಿ ವ್ಯಕ್ತಿ ಸಾ*ವು

    Published

    on

    ಉಡುಪಿ: ವಿದ್ಯುತ್ ತಂತಿ ತಗುಲಿ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತ ಪಟ್ಟ ಘಟನೆ ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ನಡೆದಿದೆ. ಬೈಂದೂರು ತಾಲೂಕಿನ ಶಿರೂರಿನಲ್ಲಿ ಈ ಘಟನೆ ನಡೆದಿದ್ದು, ಇರ್ಷಾದ್(56ವ) ಮೃ*ತಪಟ್ಟವರು. ಮನೆಯಿಂದ ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಈ ದುರಂತ ನಡೆದಿದೆ.

    ಶನಿವಾರ(ಮೇ.18) ರಾತ್ರಿ ಸುರಿದ ಬಿರುಗಾಳಿ ಮಳೆಗೆ ವಿದ್ಯುತ್ ತಂತಿ ತುಂಡಾಗಿ ನೆಲದ ಮೇಲೆ ಬಿದ್ದಿತ್ತು. ಇದನ್ನು ಗಮನಿಸದ ಇರ್ಷಾದ್ ಅವರು ವಿದ್ಯುತ್ ತಂತಿಯನ್ನು ತುಳಿದಿದ್ದಾರೆ. ತಂತಿಯಲ್ಲಿ ವಿದ್ಯುತ್ ಪ್ರವಹಿಸುತ್ತಿದ್ದ ಕಾರಣ ತಕ್ಷಣ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಮೆಸ್ಕಾಂ ಸಿಬ್ಬಂದಿ ತುಂಡಾದ ತಂತಿಯನ್ನು ಸರಿ ಪಡಿಸಿದ್ದಾರೆ. ಬೈಂದೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಕೇಸು ದಾಖಲಿಸಿಕೊಂಡಿದ್ದಾರೆ.

    Read More..; ಠಾಣೆಗೆ ನುಗ್ಗಿ ಉದ್ಧಟತನದ ವರ್ತನೆ..! ಹರೀಶ್ ಪೂಂಜಾ ಮೇಲೆ ಕೇಸ್‌..!

    Continue Reading

    BELTHANGADY

    ಠಾಣೆಗೆ ನುಗ್ಗಿ ಉದ್ಧಟತನದ ವರ್ತನೆ..! ಹರೀಶ್ ಪೂಂಜಾ ಮೇಲೆ ಕೇಸ್‌..!

    Published

    on

    ಮಂಗಳೂರು : ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಕೇಸು ದಾಖಲಿಸಿಕೊಂಡಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪೊಲೀಸರ ಜೊತೆಯಲ್ಲಿ ಉದ್ಧಟತನದಿಂದ ವರ್ತಿಸಿದ್ದ ಶಾಸಕರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

    ಬೆಳ್ತಂಗಡಿಯ ಮೇಲಂತಬೆಟ್ಟು ಎಂಬಲ್ಲಿ ಅಕ್ರಮ ಗಣಿಗಾರಿಕೆಗೆ ಪೊಲೀಸರ ಸಹಕಾರ ಪಡೆದು ತಹಶೀಲ್ದಾರ್ ದಾಳಿ ನಡೆಸಿದ್ದರು. ಈ ವೇಳೆ ಅದು ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಶಶಿರಾಜ್ ಶೆಟ್ಟಿ ಹಾಗೂ ಬಿಜೆಪಿ ಮುಖಂಡ ಪ್ರಮೋದ್ ಗೌಡ ಎಂಬವರಿಗೆ ಸೇರಿದ್ದಾಗಿ ತಿಳಿದು ಬಂದಿತ್ತು. ಈ ಹಿನ್ನಲೆಯಲ್ಲಿ ಶಶಿರಾಜ್ ಶೆಟ್ಟಿಯನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆದು ತಂದಿದ್ದರು. ಈ ವಿಚಾರ ತಿಳಿದು ಠಾಣೆಗೆ ಆಗಮಿಸಿದ್ದ ಶಾಸಕ ಹರೀಶ್ ಪೂಂಜಾ ಠಾಣೆಯಲ್ಲಿ ಪೊಲೀಸರ ಜೊತೆಯಲ್ಲಿ ಅನುಚಿತವಾಗಿ ವರ್ತಿಸಿ ಬೆದರಿಕೆ ಕೂಡಾ ಹಾಕಿದ್ದರು.

    ಶಾಸಕ ಹರೀಶ್ ಪೂಂಜಾ ನಡವಳಿಕೆಯ ಬಗ್ಗೆ ವ್ಯಾಪಕ ಟೀಕೆ ಕೂಡಾ ವ್ಯಕ್ತವಾಗಿದ್ದು, ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯಿಸಲಾಗಿತ್ತು. ಇದೀಗ ಹಿರಿಯ ಅಧಿಕಾರಿಗಳ ಸೂಚನೆಯಂತೆ ಶಾಸಕ ಹರೀಶ್ ಪೂಂಜಾ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. IPC 353 ,504 ಅಡಿಯಲ್ಲಿ ಕೇಸು ದಾಖಲಿಸಿಕೊಂಡಿದ್ದಾರೆ.

    Continue Reading

    LATEST NEWS

    Trending