LATEST NEWS
ನಂಬಿ ಬಂದ ಹೆಂಡತಿಯನ್ನೇ ಪರಪುರುಷನ ಜೊತೆ ಮಲಗಿಸಿ ವಿಡಿಯೋ ಮಾಡುತ್ತಿದ್ದ ಕಿರಾತಕ ಗಂಡ..!
ತನ್ನನ್ನು ನಂಬಿ ಬಂದ ಪತ್ನಿಯನ್ನೇ ಪರ ಪುರುಷರೊಂದಿಗೆ ಮಲಗಿಸಿ ಅದನ್ನು ವಿಡಯೋ ರೆಕಾರ್ಡ್ ಮಾಡಿ ವಿಕೃತಿ ಮೆರೆಯುತ್ತಿದ್ದ ಕಿರಾತಕ ಪತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು: ತನ್ನನ್ನು ನಂಬಿ ಬಂದ ಪತ್ನಿಯನ್ನೇ ಪರ ಪುರುಷರೊಂದಿಗೆ ಮಲಗಿಸಿ ಅದನ್ನು ವಿಡಯೋ ರೆಕಾರ್ಡ್ ಮಾಡಿ ವಿಕೃತಿ ಮೆರೆಯುತ್ತಿದ್ದ ಕಿರಾತಕ ಪತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ವಿಕೃತ ಕಾಮಿ ಬೆಂಗಳೂರಿನ ಸಂಪಿಗೆಹಳ್ಳಿ ನಿವಾಸಿ ಜಾನ್ ಪಾಲ್ ಬಂಧಿತ ಆರೋಪಿಯಾಗಿದ್ದಾನೆ.
ತನ್ನ ಜೊತೆ ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿದ ಪತ್ನಿಯನ್ನು ಸ್ನೇಹಿತರೊಂದಿಗೆ ಮಲಗಿಸಿ ವಿಡಿಯೋ ಮಾಡಿ ಈ ಪಾಪಿ ವಿಕೃತಿ ಮೆರೆಯುತ್ತಿದ್ದನು.
ವಿಕೃತ ಮನಸ್ಸಿನ ಗಂಡನ ಈ ಈ ಹಿಂಸೆ ತಾಳಲಾರದೇ ಗಂಡನ ವಿರುದ್ದ ಪತ್ನಿ ದೂರು ನೀಡಿದ್ದು, ತನ್ನ ಗಂಡ ಇನ್ನೂ ಹಲವು ವಿಕೃತಗಾಮಿ ಚಟುವಟಿಕೆಗಳನ್ನು ನಡೆಸುತ್ತಿದ್ದ ಬಗ್ಗೆ ಪೊಲೀಸರ ಮುಂದೆ ಪತ್ನಿ ಹೇಳಿಕೊಂಡಿದ್ದಾಳೆ.
2011 ರ ಏಪ್ರಿಲ್ ನಲ್ಲಿ ಜಾನ್ ಪಾಲ್ ಅವರನ್ನು ಮಹಿಳಾ ಟೆಕ್ಕಿ ವಿವಾಹವಾಗಿದ್ದಳು. ಮೊದಲ ನಾಲ್ಕು ವರ್ಷಗಳು ಚೆನ್ನಾಗಿಯೇ ಸಂಸಾರ ಮಾಡಿಕೊಂಡಿದ್ದು, ನಂತರ 2015 ರಿಂದ ಆರೋಪಿ ಪತಿ ಜಾನ್ ಪಾಲ್ ತನ್ನ ವಿಕೃತಿ ಶುರು ಮಾಡಿದ್ದನು ಎಂದು ಪತ್ನಿ ದೂರಿನಲ್ಲಿ ತಿಳಿಸಿದ್ದಾಳೆ.
ಮನೆಗೆ ತನ್ನ ಗೆಳೆಯರನ್ನು ಕರೆದು ಪಾರ್ಟಿ ಮಾಡಿ ಗೆಳೆಯರೊಂದಿಗೆ ಬೆಡ್ ಶೇರ್ ಮಾಡುವಂತೆ ಹಿಂಸೆ ನೀಡುತ್ತಿದ್ದನು.
ತನ್ನ ಪತಿಯ ಹಿಂಸೆ ತಾಳಲಾರದೆ ಗೆಳೆಯರೊಂದಿಗೆ ದೈಹಿಕ ಸಂಪರ್ಕಕ್ಕೆ ಒಪ್ಪಿದ್ದಳು.
ಆರೋಪಿಯು ತನ್ನ ಸ್ನೇಹಿತರಾದ ಸಜೀಶ್ ಹಾಗೂ ನಾಜಿ ಎಂಬುವವರ ಜೊತೆ ಪತ್ನಿಯನ್ನು ಮಲಗಿಸಿದ್ದನು.
ಸ್ವಂತ ಪತ್ನಿಯನ್ನು ಗೆಳೆಯರೊಂದಿಗೆ ಮಲಗಿಸಿ ಪೋಟೋ, ವಿಡಿಯೋ ಚಿತ್ರೀಕರಣವನ್ನೂ ಮಾಡುವ ಮೂಲಕ ವಿಕೃತಿ ಮೆರೆಯುತ್ತಿದ್ದನು.
ಪ್ರತಿ ವಾರ ಇದೇ ರೀತಿ ನಡೆಯುತ್ತಿದ್ದು, ಈ ಘಟನೆಗಳಿಂದ ಬೇಸತ್ತು ಗಲಾಟೆ ಮಾಡಿದರೂ ತನ್ನನ್ನು ಗಂಡ ಬಿಡುತ್ತಿರಲಿಲ್ಲ ಎಂದು ದೂರಿನಲ್ಲಿ ಆಕೆ ತಿಳಿಸಿದ್ದಾಳೆ.
ಆರೋಪಿ ಪತಿ ತನ್ನ ಪತ್ನಿಯ ಮೇಲೆ ವಿಕೃತಿ ಮೆರೆದಿದ್ದಲ್ಲದೆ ನಾದಿನಿಗೂ ತನ್ನೊಡನೆ ಮಲಗುವಂತೆ ಕಿರುಕುಳ ನೀಡುತ್ತಿದ್ದನು.
ಇದರಿಂದ ಬೇಸತ್ತ ಪತ್ನಿ ಗಂಡನಿಗೆ ವಿಚ್ಛೇದನ ನೀಡಲು ಮುಂದಾಗಿದ್ದಾಳೆ. ಈ ವೇಳೆ ಆತ ತನ್ನ ಗೆಳೆಯರೊಂದಿಗೆ ಪತ್ನಿ ಮಲಗಿದ್ದ ವಿಡಿಯೋ, ಹಾಗೂ ಅಶ್ಲೀಲ ಪೋಟೊ ವೈರಲ್ ಮಾಡುವುದಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದ ಎನ್ನಲಾಗಿದೆ.
ಇಷ್ಟಕ್ಕೆ ಮುಗಿಯದೆ ತನ್ನ ಮಧ್ಯವ್ಯಸನದ ಪ್ರಭಾವ ಹೆಚ್ಚಿಸಿಕೊಳ್ಳಲೆಂದು ಗಾಂಜಾ ಸೇವನೆಯನ್ನೂ ಕೂಡ ಮಾಡುತ್ತಿದ್ದ.
ಮನೆಯಲ್ಲಿಯೇ ಗಾಂಜಾ ಸಸಗಳನ್ನು ನೆಟ್ಟು ಬೆಳೆಸಿ ಗಾಂಜಾ ವ್ಯಸನ ಮಾಡುತ್ತಿದ್ದನು ಎನ್ನಲಾಗಿದೆ.
ಈ ಎಲ್ಲಾ ವಿಕೃತಿಗಳನ್ನು ಸಹಿಸಲಾರದೆ ನೊಂದ ಪತ್ನಿ ಸಂಪಿಗೆ ಹಳ್ಳಿ ಠಾಣಾ ಪೊಲೀಸರಿಗೆ ದೂರು ನೀಡಿದ್ದಾಳೆ.
ದೂರಿನ ಅನ್ವಯ ಲೈಂಗಿಕ ಕಿರುಕುಳ, ಎನ್.ಡಿ.ಪಿ.ಎಸ್ ಹಾಗೂ ಐಟಿ ಆಕ್ಟ್ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
DAKSHINA KANNADA
ಕೋಟಿ ಗಾಯತ್ರಿ ಯಾಗ: ಸೆ. 29ರಂದು ಚಿತ್ರಾಪುರ ಮಠದಲ್ಲಿ ಸಂಕಲ್ಪ ದಿನ
ಮಂಗಳೂರು : ಅಖಿಲ ಭಾರತ ಬ್ರಾಹ್ಮಣ ಮಹಾಸಭಾ ವತಿಯಿಂದ ಅಕ್ಟೋಬರ್ 26 ಮತ್ತು 27ರಂದು ನಡೆಯಲಿರುವ ಕೋಟಿ ಗಾಯತ್ರಿ ಯಾಗದ ಪೂರ್ವಭಾವಿಯಾಗಿ ಸೆ. 29ರ ಭಾನುವಾರ ಮುಂಜಾನೆ ಸಂಕಲ್ಪ ದಿನವನ್ನು ಮಂಗಳೂರಿನ ಚಿತ್ರಾಪುರ ಮಠದಲ್ಲಿ ನಡೆಲು ಉದ್ದೇಶಿಸಲಾಗಿದೆ ಎಂದು ಪ್ರಧಾನ ಸಂಚಾಲಕ ಶ್ರೀಧರ ಹೊಳ್ಳ ಹೇಳಿದರು. ಚಿತ್ರಾಪುರ ಮಠದಲ್ಲಿ ನಡೆದ ಬ್ರಾಹ್ಮಣ ಸಮುದಾಯದ ಸಮಸ್ತರ ಸಭೆಯಲ್ಲಿ ಕೋಟಿ ಗಾಯತ್ರಿ ಯಾಗದ ಯಶಸ್ವಿಗಾಗಿ ನಾನಾ ಸಮಿತಿಗಳನ್ನು ರಚನೆಯ ಬಗ್ಗೆ ಚರ್ಚಿಸಿ ನಿರ್ಣಯಿದ ಬಳಿಕ ನಡೆದ ಸಭೆಯಲ್ಲಿ ಮಾತನಾಡಿದರು.
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಬ್ರಾಹ್ಮಣ ಸಮುದಾಯವು ಈಗಾಗಲೇ ಗಾಯತ್ರಿ ಯಜ್ಞದ ಪೂರ್ವಭಾವಿಯಾಗಿ ಜಪದ ಸಂಕಲ್ಪ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಹೊರಭಾಗದಲ್ಲಿರುವ ಜಿಲ್ಲೆಯ ಬ್ರಾಹ್ಮಣರು ಕೂಡಾ ಹೆಸರು ನೋಂದಾಯಿಸಿಕೊಳ್ಳುತ್ತಿದ್ದಾರೆ. ಇನ್ನೂ ಹೆಚ್ಚಿನ ಮಂದಿ ಹೆಸರು ನೋಂದಾಯಿಸುವ ನಿಟ್ಟಿನಲ್ಲಿ ಪ್ರೇರೇಪಿಸುವ ಕೆಲಸವಾಗಬೇಕು ಎಂದರು. ಬ್ರಾಹ್ಮಣ ಸಮಾಜದ ಎಲ್ಲಾ ಬಾಂಧವರು ಒಂದೇ ಸೂರಿನಡಿ ಸೇರಿಸಿ, ಹೊರ ಜಗತ್ತಿಗೆ ಬ್ರಾಹ್ಮಣ ಎಂಬ ಸಂದೇಶ ಮುಟ್ಟಿಸುವಂತಾಗಬೇಕು. ಇದೊಂದು ವಿಶೇಷ ಕಾರ್ಯಕ್ರಮ ಈ ಕಾರ್ಯಕ್ರಮವು ಗಾಯತ್ರಿ ಸಂಗಮವಾಗಿದೆ. ’ಸಾಮರಸ್ಯದಿ ಜಗವ ಬೆಳಗುವ ಬ್ರಹ್ಮ ತೇಜದ ಬೆಳಕಲಿ’ ಶೀರ್ಷಿಕೆಯಡಿ ಜರಗಲಿದೆ. ಆದುದರಿಂದ ರಚನೆಯಾದ ಸಮಿತಿಯ ಸದಸ್ಯರು ಎಲ್ಲರೂ ಒಂದಾಗಿ ತಮ್ಮ ಮನೆ ಕಾರ್ಯಕ್ರಮ ಎಂಬ ರೀತಿಯಲ್ಲಿ ದುಡಿಯಬೇಕು. ಆ ಮೂಲಕ ಸಮಾಜಕ್ಕೆ ನಮ್ಮ ಒಗ್ಗಟ್ಟನ್ನು ತೋರಿಸಿಕೊಡಬೇಕು ಎಂದು ಸಮಿತಿಯ ಕಾರ್ಯಾಧ್ಯಕ್ಷ ನ್ಯಾಯವಾದಿ ಶ್ರೀ ಮಹೇಶ್ ಕಜೆ ಹೇಳಿದರು.
ನಾನಾ ಸಮಿತಿಗಳ ಜವಾಬ್ದಾರಿ, ಹೋಮದ ರೂಪು ರೇಶೆ, ಹೋಮದ ಉದ್ದೇಶ, ಕಾರ್ಯಯೋಜನೆಯ ಕುರಿತು ಮಾಹಿತಿ ನೀಡಿದ ವಿದ್ವಾನ್ ಕಶೆಕೋಡಿ ಸೂರ್ಯನಾರಾಯಣ ಭಟ್ ಸಾಂದರ್ಭಿಕವಾಗಿ ಮಾತನಾಡಿದರು. ಅ. 26ರಂದು ಮಹಿಳೆಯರಿಗಾಗಿ ಮಾತೃ ಸಂಗಮ ಕಾರ್ಯಕ್ರಮ ಆಯೋಜಿಸಲಾಗಿದೆ. ಎಲ್ಲ ಮಾತೆಯರು ಈ ಸಂಗಮದಲ್ಲಿ ಭಾಗವಹಿಸಬೇಕು. ಮುಂದಿನ ದಿನಗಳಲ್ಲಿ ಈ ವೇದಿಕೆಯೇ ಇಡೀ ಸಮಾಜದ ಮುಖವಾಗಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು. ಈ ಹಿಂದೆ ಗಾಯತ್ರಿ ಯಾಗ ಮಾಡಿ ಅನುಭವ ಇರುವ ವಿದ್ವಾನ್ ಬಂದಗದ್ದೆ ನಾಗರಾಜ್ ಮಾತನಾಡಿ, ಗಾಯತ್ರಿ ಮಂತ್ರ ಅನುಷ್ಠಾನ ಮಾಡುವುದರಿಂದ ಸಿಗುವ ಲಾಭ, ಮಾನಸಿಕ ವಿಕಸನದ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡರು.
ವಿದ್ವಾನ್ ಕಟೀಲಿನ ಶ್ರೀಹರಿ ನಾರಾಯಣದಾಸ ಆಸ್ರಣ್ಣ ಮಾತನಾಡಿ, ಎಲ್ಲಾ ವಿಪ್ರ ಸಮಾಜ ಬಾಂಧವರು ಒಟ್ಟು ಸೇರಿ ಈ ಯಜ್ಞ ಕಾರ್ಯದಲ್ಲಿ ಭಾಗಿಗಳಾಗೋಣ, ಪ್ರತಿಯೊಬ್ಬ ಬ್ರಾಹ್ಮಣನು ಸಹ ಕುಟುಂಬ ಸಹಿತ ಪಾಲ್ಗೊಳ್ಳಬೇಕು ಹಾಗೂ ಸೆ.೨೯ರ ಸಂಕಲ್ಪ ಕಾರ್ಯದಲ್ಲಿ ಕನಿಷ್ಠ ೫೦೦ ಜನ ಬಾಂಧವರು ಸೇರಬೇಕು ಎಂದರು. ಬ್ರಾಹ್ಮಣ ಮಹಾಸಭಾ ಸುರತ್ಕಲ್‌ನ ಗೌರವಾಧ್ಯಕ್ಷ ಪಿ. ಪುರುಷೋತ್ತಮ ರಾವ್ ಇದು ನಮ್ಮೆಲ್ಲರ ಕಾರ್ಯಕ್ರಮ ಪ್ರತಿಯೊಬ್ಬರು ತಾನು ಮನ ಧನಗಳಿಂದ ಸಾಹಕರಿಸೋಣ ಎಂದರು.
ವಿವಿಧ ಬ್ರಾಹ್ಮಣ ಸಮಾಜದ ಪ್ರಮುಖರಾದ ಕರ್ಗಿ ಶ್ರೀನಿವಾಸ ಅಚಾರ್, ಶ್ರೀನಿವಾಸ್ ಚಿತ್ರಾಪುರ, ಸುರೇಶ್ ರಾವ್ ಚಿತ್ರಾಪುರ, ಶ್ರೀಕರ ದಾಮ್ಲೆ, ಎಂ.ಟಿ. ಭಟ್, ಉದಯ ಕುಮಾರ್, ಉದಯ ಕುಮಾರ್ ಸುರತ್ಕಲ್, ಕಾತ್ಯಾಯಿನಿ ರಾವ್, ಶೋಭಾ ಚಿತ್ರಾಪುರ, ಸಾವಿತ್ರಿ ಹೆಚ್ ಭಟ್, ಹೊಸಬೆಟ್ಟು, ರಮಾ.ವಿ ರಾವ್, ಯಮುನಾ ಪಿ ರಾವ್, ಎಂ ಸದಾಶಿವ ಕುಳಾಯಿ, ಪ್ರಕಾಶ್ ಕೋಟೆಕಾರ್, ಜಯಪ್ರಕಾಶ್ ಹೆಬ್ಬಾರ್, ಜಯರಾಮ್ ಭಟ್, ಸುಬ್ರಹ್ಮಣ್ಯ ವಿ ಭಟ್, ಗೋಪಾಲಕೃಷ್ಣ ಮಯ್ಯ, ಜ್ಯೋತಿಷಿ ರಂಗ ಐತಾಳ್ ಕದ್ರಿ, ವಿದ್ವಾನ್ ಸತ್ಯಕೃಷ್ಣ ಭಟ್ ಮೊದಲಾದ ಪ್ರಮುಖರು ಉಪಸ್ಥಿತರಿದ್ದರು.
LATEST NEWS
ಪೋಕ್ಸೋ ಪ್ರಕರಣ: ಖ್ಯಾತ ಜ್ಯೋತಿಷಿ ಬಂಧನ
ಸುಳ್ಯ: ತಾಲೂಕಿನ ಬೆಳ್ಳಾರೆಯ ಪೊಲೀಸರು ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಜ್ಯೋತಿಷಿಯೊಬ್ಬನನ್ನು ಬಂಧಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆಯಲ್ಲಿ ಧಾರ್ಮಿಕ ಉಪನ್ಯಾಸದ ಜೊತೆಗೆ ಜ್ಯೋತಿಷ್ಯ ಶಾಸ್ತ್ರದ ಮೂಲಕ ಫೇಮಸ್ ಆಗಿದ್ದ ನರಸಿಂಹ ಪ್ರಸಾದ್ ಪಾಂಗಣೇಯ ಬಂಧಿತ ಆರೋಪಿ.
ಕಾಣಿಯೂರಿನ ಬೆಳಂದೂರು ನಿವಾಸಿಯಾಗಿರುವ ಈತನ ಮನೆಗೆ ಮುಂಜಾನೆಯ ವೇಳೆ ದಾಳಿ ಮಾಡಿದ ಪೊಲೀಸರು ಪ್ರಸಾದ್ ಪಾಂಗಣೇಯನನ್ನು ಬಂಧಿಸಿದ್ದಾರೆ. ಮಂಗಳೂರಿನಲ್ಲಿ ಬಾಲಕಿಯೊಬ್ಬಳ ಕೌನ್ಸಿಲಿಂಗ್ ವೇಳೆ ಸಿಕ್ಕ ಮಾಹಿತಿಯ ಆಧಾರದಲ್ಲಿ ಈ ಬಂಧನ ಆಗಿದೆ ಎಂಬ ಮಾಹಿತಿ ದೊರೆತಿದೆ.
LATEST NEWS
ಗೌರವಧನ ಸರಿಯಾಗಿ ನೀಡದೇ ಇದ್ದಲ್ಲಿ ಕೆಲಸ ಸ್ಥಗಿತ: ಅಂಗನವಾಡಿ ಕಾರ್ಯಕರ್ತೆಯರಿಂದ ಎಚ್ಚರಿಕೆ
ಉಡುಪಿ: ವಿವಿಧ ಬೇಡಿಕೆಗಳನ್ನು ಈಡೇರಿಸಿ ಅಂತ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಪ್ರತಿಭಟನೆ ನಡೆಸಿದ್ದಾರೆ.
ಉಡುಪಿ ಜಿಲ್ಲೆಯ ಅಂಗನವಾಡಿ ಕಾರ್ಯಕರ್ತರೆಯರು ಹಾಗೂ ಸಹಾಯಕಿಯರು ಈ ಪ್ರತಿಭಟನೆ ನಡೆಸಿದ್ದಾರೆ. ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದ್ದಾರೆ.
ಪ್ರಮುಖವಾಗಿ ಗೌರವಧನವನ್ನು ಪ್ರತಿ ತಿಂಗಳ ಸರಿಯಾಗಿ ಪಾವತಿ ಮಾಡಬೇಕು ಹಾಗೂ ಮೊಟ್ಟೆ ವಿತರಣೆಗೆ ತಗಲುವ ಖರ್ಚನ್ನು ಮುಂಚಿತವಾಗಿ ನೀಡಬೇಕು ಮತ್ತು ಮಾರುಕಟ್ಟೆ ದರದಲ್ಲಿ ಏರಿಳಿತಕ್ಕೆ ತಕ್ಕಂತೆ ಮೊಟ್ಟದರವನ್ನು ನಿಗದಿ ಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ನಮ್ಮನ್ನು ದುಡಿಸಿಕೊಳ್ಳೂತ್ತಿರುವ ಸರ್ಕಾರ ನಮಗೆ ಸಾಮಾಜಿಕ ಮತ್ತು ಆರ್ಥಿಕ ಭದ್ರತೆಯನ್ನು ನೀಡದೆ ಶೋಷಣೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಈ ವೇಳೆ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷೆ ಫಿಲೋಮಿನಾ ಫೆರ್ನಾಂಡಿಸ್ ಸರ್ಕಾರ ಸೂಕ್ತವಾಗಿ ಸ್ಪಂಧಿಸದೇ ಇದ್ದಲ್ಲಿ ಕೆಲಸ ಸ್ಥಗಿತಗೊಳಿಸುವುದಾಗಿ ಎಚ್ಚರಿಸಿದ್ದಾರೆ.
- DAKSHINA KANNADA6 days ago
ಫುಟ್ ಬೋರ್ಡ್ನಲ್ಲಿ ನೇತಾಡಿ ಪ್ರಯಾಣಿಸಿದ ವಿದ್ಯಾರ್ಥಿಗಳು; ಬಸ್ ಸೀಝ್
- LATEST NEWS3 days ago
ಆಪಲ್ ಮೊಬೈಲ್ ವಿರುದ್ಧ ಗ್ರಾಹಕರ ಪ್ರತಿಭಟನೆ
- International news3 days ago
ಖಾಸಗಿ ಬಾಹ್ಯಾಕಾಶ ನಡಿಗೆ ಯಶಸ್ವಿ; ಸುರಕ್ಷಿತವಾಗಿ ಭೂಮಿಗೆ ಮರಳಿದ ಗಗನಯಾತ್ರಿಗಳು
- BELTHANGADY6 days ago
ಬೆಳ್ತಂಗಡಿ: ತಂದೆ ತೀರ್ಪುಗಾರ… ಮಗಳಿಗೆ ಪ್ರಥಮ ಸ್ಥಾನ