Connect with us

bangalore

ವಂಚನೆ- ಅತ್ಯಾಚಾರ ಆರೋಪ : ಸ್ಯಾಂಡಲ್ ವುಡ್ ನಿರ್ಮಾಪಕ ವಿರುದ್ದ ನಟಿ ದೂರು..!

Published

on

ಸಿನಿಮಾದಲ್ಲಿ ಅವಕಾಶ ಕೊಡಿಸುತ್ತೇನೆ ಮತ್ತು ಹಾಕಿದ ಬಂಡವಾಳಕ್ಕೆ ಡಬಲ್ ಹಣ ಕೊಡುತ್ತೇನೆ ಎಂದು ಸ್ಯಾಂಡಲ್ ವುಡ್ ನಿರ್ಮಾಪಕರೊಬ್ಬರು ವಂಚಿಸಿ ಲೈಂಗಿಕವಾಗಿ ಬಳಸಿಕೊಂಡ ಆರೋಪದಲ್ಲಿ ನಟಿಯೊಬ್ಬರು ಬೆಂಗಳೂರಿನ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬೆಂಗಳೂರು: ಸಿನಿಮಾದಲ್ಲಿ ಅವಕಾಶ ಕೊಡಿಸುತ್ತೇನೆ ಮತ್ತು ಹಾಕಿದ ಬಂಡವಾಳಕ್ಕೆ ಡಬಲ್ ಹಣ ಕೊಡುತ್ತೇನೆ ಎಂದು ಸ್ಯಾಂಡಲ್ ವುಡ್ ನಿರ್ಮಾಪಕರೊಬ್ಬರು ವಂಚಿಸಿ ಲೈಂಗಿಕವಾಗಿ ಬಳಸಿಕೊಂಡ ಆರೋಪದಲ್ಲಿ ನಟಿಯೊಬ್ಬರು ಬೆಂಗಳೂರಿನ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕೊಟಗಾನಹಳ್ಳಿ ರಾಮಯ್ಯ ಅವರ ಕಥೆಯನ್ನು ಆಧರಿಸಿದ ‘ದಿ ಕಲರ್ಸ್ ಆಫ್ ಟೊಮ್ಯಾಟೊ’ ಸಿನಿಮಾ ಈ ಹಿಂದೆ ಸೆಟ್ಟೇರಿತ್ತು.

1 ಟು 100 ಡ್ರೀಮ್ ಮೂವೀಸ್ ಬ್ಯಾನರ್ ಅಡಿ ಕುಮಾರ್ ಎನ್ನುವವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು.

ಇದೇ ಕುಮಾರ್ ನಟಿಗೆ ಸಿನಿಮಾದಲ್ಲಿ ಅವಕಾಶ ಕೊಡಿಸುತ್ತೇನೆ ಮತ್ತು ಹಾಕಿದ ಬಂಡವಾಳಕ್ಕೆ ಡಬಲ್ ಹಣ ಕೊಡುತ್ತೇನೆ ಎಂದು ದುಡ್ಡು ಪಡೆದು, ಲೈಂಗಿಕವಾಗಿ ಬಳಸಿಕೊಂಡು ಮೋಸ ಮಾಡಿದ್ದಾನೆ.

‘ನಾನು ಸಿನಿಮಾ ರಂಗದಲ್ಲಿ ಬೆಳೆಯಬೇಕು ಎಂದು ಕನಸು ಕಂಡಿದ್ದ ನಟಿ. ಈ ಹೊತ್ತಿನಲ್ಲಿ ಕುಮಾರ್ ಅವರು ನನಗೆ ಪರಿಚಯವಾದರು.

ಸಿನಿಮಾಗಳಲ್ಲಿ ಅವಕಾಶ ಕೊಡಿಸುತ್ತೇನೆ ಹಾಗೂ ಸಿನಿಮಾಗೆ 75 ಲಕ್ಷ ರೂಪಾಯಿ ಬಂಡವಾಳ ಹಾಕಿದರೆ, ಸಿನಿಮಾ ಹಿಟ್ ಆದ ನಂತರ ಒಂದು ಕೋಟಿ ಐವತ್ತು ಲಕ್ಷ ರೂಪಾಯಿ ಕೊಡುವುದಾಗಿ ಹೇಳಿದ್ದರು.

‘50’ ಮತ್ತು ‘ದಿ ಕಲರ್ಸ್ ಆಫ್ ಟೊಮ್ಯಾಟೊ’ ಸಿನಿಮಾ ಮಾಡುತ್ತಿರುವುದರಿಂದ ದುಡ್ಡಿನ ಅವಶ್ಯಕತೆ ಇದೆ ಎಂದು ಹೇಳಿದ್ದರು. ಈ ಕಾರಣದಿಂದಾಗಿ ನಾನು ದುಡ್ಡು ಕೊಟ್ಟಿದ್ದೇನೆ.

ನಂತರದ ದಿನಗಳಲ್ಲಿ ದುಡ್ಡು ಕೊಡದೇ ತಮಗೆ ಮೋಸ ಮಾಡಿದ್ದಾರೆ’ ಎಂದು ನಟಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ ಕೇವಲ ದುಡ್ಡಿನ ವಿಚಾರ ಮಾತ್ರವಲ್ಲ, ನಂತರದ ದಿನಗಳಲ್ಲಿ ನಿನಗೆ ಬಾಳು ಕೊಡುತ್ತೇನೆ ಎಂದು ಬಲವಂತವಾಗಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ.

ನನಗೆ ವಾಪಸ್ಸು ಹಣ ಕೊಡಿ ಎಂದು ಕೇಳಿದಾಗ ಚೆಕ್ ಕೊಡುತ್ತೇನೆ ಬಾ ಎಂದು ಕರೆಯಿಸಿಕೊಂಡು ಅತ್ಯಾಚಾರ ಎಸಗಿದ್ದಾನೆ ‘ ಎಂದು ದೂರಿನಲ್ಲಿ ನಟಿ ಬರೆದಿದ್ದಾರೆ.

ನಟಿ ನೀಡಿದ ದೂರಿನ ಮೇರೆಗೆ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ನಿರ್ಮಾಪಕನ ವಿರುದ್ದ ಪ್ರಕರಣ ದಾಖಲಾಗಿದೆ.

bangalore

FILM: ಎಲ್ಲೆಲ್ಲೂ ‘ನಾನು ನಂದಿನಿ ಬೆಂಗಳೂರಿಗ್ ಬಂದೀನಿ’ ಸಾಂಗ್ ಹವಾ

Published

on

‘ನಾನು ನಂದಿನಿ ಬೆಂಗಳೂರಿಗ್ ಬಂದೀನಿ’ ಹಾಡು ಸೋಷಿಯಲ್ ಮೀಡಿಯಾದಲ್ಲಿ ಮಿಲಿಯನ್ ಗಟ್ಟಲೇ ವೀಕ್ಷಣೆಯಾಗುವ ಮೂಲಕ ಹೊಸ ಸಂಚಲನ ಸೃಷ್ಟಿಸಿದೆ..

ಬೆಂಗಳೂರು: ಕೆಲ ದಿನಗಳ ಹಿಂದೆ ಕನ್ನಡದ ‘ಅನ್ಯಾಯಕಾರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೇ’ ರೀಲ್ಸ್ ಭಾರೀ ವೈರಲ್ ಆಗಿತ್ತು. ರಾತ್ರಿ ಬೆಳಗಾಗೋದ್ರಲ್ಲಿ ಇದನ್ನು ಹಾಡಿದ ಗಾಯಕ ಮಳವಳ್ಳಿ ಮಹಾದೇವಸ್ವಾಮಿ ಸೆಲೆಬ್ರಿಟಿ ಲೆವೆಲ್ ಗೆ ಸುದ್ದಿಯಾಗಿದ್ರು.

ಇದೀಗ ‘ನಾನು ನಂದಿನಿ ಬೆಂಗಳೂರಿಗ್ ಬಂದೀನಿ’ ಹಾಡು ಬಿಡುಗಡೆಗೊಂಡ ದಿನ 5 ಮಿಲಿಯನ್ ವೀಕ್ಷಣೆಯಾಗುವ ಮೂಲಕ ಹೊಸ ಸಂಚಲನ ಸೃಷ್ಟಿಸಿದೆ.. ‘I am barbie girl’ ಎಂಬ ಇಂಗ್ಲಿಷ್ ಹಾಡಿನ ಟ್ಯೂನ್​ಗೆ ‘ನಾನು ನಂದಿನಿ ಬೆಂಗಳೂರಿಗೆ ಬಂದೀನಿ’ ಎಂಬ ಸಾಹಿತ್ಯ ರಚಿಸಿ ಹಾಡಿದ್ದಾರೆ.

ಈಗ ‘ನಾನು ನಂದಿನಿ ಬೆಂಗಳೂರಿಗ್ ಬಂದೀನಿ’ ಎಂಬ ರೀಲ್ಸ್ ಸೋಷಿಯಲ್ ಮೀಡಿಯಾದಲ್ಲಿ ಮಾಡುತ್ತಿರುವ ಮೋಡಿ ಅಷ್ಟಿಷ್ಟಲ್ಲ.

‘ನಾನು ನಂದಿನಿ ಬೆಂಗಳೂರಿಗ್ ಬಂದೀನಿ. ಪಿಜಿಲಿ ಇರ್ತೀನಿ ಐಟಿ ಕೆಲಸ ಮಾಡ್ತೀನಿ. ಊಟ ಸರಿ ಇಲ್ಲ ಅಂದ್ರೂನೂ ತಿಂತೀನಿ. ಬಂದಿದ್ ದುಡ್ ಎಲ್ಲಾ ಮನೇಗ್​ ಕಳಸ್ತೀನಿ. ಬಾರೇ ನಂದಿನಿ ಗೋಬಿ ತಿನ್ನಸ್ತೀನಿ. ಬಾರೇ ನಂದಿನಿ

ಬೆಂಗಳೂರ್ ತೋರಸ್ತೀನಿ. ಬಾರೆ ನಂದಿನಿ ಪೇಢಾ ತಿನ್ನಸ್ತೀನಿ. ಬಾರೇ ನಂದಿನಿ ಪಿಚ್ಚರ್ ತೋರಸ್ತೀನಿ ಎನ್ನುವ ವಿಕಿ ಪೀಡಿಯಾ ವಿಕಾಸ್ ಅವರ ರೀಲ್ಸ್ ಗೆ ಜನಾ ಫಿದಾ ಆಗಿದ್ದಾರೆ.

ಒಂದು ದಿನದ ಹಿಂದೆಯಷ್ಟೇ ಫೇಸ್​ಬುಕ್​ನಲ್ಲಿ ಮತ್ತು ಇನ್​ಸ್ಟಾಗ್ರಾಂನಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ.

ಲಕ್ಷಾಂತರ ಜನರು ಲೈಕ್ ಮಾಡಿದ್ದು ಸಾವಿರಾರು ಜನರು ಈ ಪೋಸ್ಟ್​ ಅನ್ನು ಹಂಚಿಕೊಂಡಿದ್ದಾರೆ.

ಈ ಹಾಡನ್ನು ಕ್ರಿಯೇಟ್ ಮಾಡಿದವರು ವಿಕಿಪಿಡಿಯಾ ಖ್ಯಾತಿಯ ವಿಕ್ಕಿ ಎಂಬುವವರು. ಬಹುತೇಕರಿಗೆ ಇವರ ಪರಿಚಯ ಮಾಡಬೇಕಾಗಿಲ್ಲ. ಸಾಕಷ್ಟು ಹಾಸ್ಯದ ವೀಡಿಯೋಗಳನ್ನು ಇವರು ಕ್ರಿಯೇಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುತ್ತಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವೈರಲ್ ಆಗಿದ್ದಲ್ಲದೇ ವಿಕ್ಕಿ ಅವರಿಗೆ ಬಹಳಷ್ಟು ಪ್ರಸಿದ್ದಿ ತಂದುಕೊಟ್ಟಿದೆ.

Continue Reading

bangalore

ಮುಂದಿನ ವಾರವೇ ‘ಸಪ್ತಸಾಗರದಾಚೆ ಎಲ್ಲೋ’ ತೆಲುಗು ವರ್ಷನ್‌- ರಿಲೀಸ್ ಡೇಟ್?

Published

on

ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್ ನಟನೆಯ ‘ಸಪ್ತಸಾಗರದಾಚೆ ಎಲ್ಲೋ’ ತೆಲುಗು ವರ್ಷನ್   ಸೆ.22ರಂದು ರಿಲೀಸ್ ಆಗುತ್ತಿದೆ. 

ಬೆಂಗಳೂರು: ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್ ನಟನೆಯ ‘ಸಪ್ತಸಾಗರದಾಚೆ ಎಲ್ಲೋ’ ತೆಲುಗು ಭಾಷೆಯಲ್ಲಿ ಬರಲು ಸಜ್ಜಾಗಿದೆ.

ಕನ್ನಡಿಗರನ್ನು ಸಪ್ತ ಸಾಗರದಾಚೆ ಎಲ್ಲೋ ಕರೆದೊಯ್ದಿದ್ದ ರಕ್ಷಿತ್‌ ಶೆಟ್ಟಿ ಮತ್ತು ರುಕ್ಮಿಣಿ ವಸಂತ್‌, ಇದೀಗ ಇದೇ ಚಿತ್ರವನ್ನು ತೆಲುಗು ಭಾಷೆಗೂ ಡಬ್‌ ಮಾಡಿ ಅಲ್ಲಿನವರನ್ನು ಸೆಳೆಯಲು ಸಜ್ಜಾಗಿದ್ದಾರೆ.

ಎಸ್. ಸೆ.22ರಂದು ‘ಸಪ್ತಸಾಗರದಾಚೆ ಎಲ್ಲೋ’ ತೆಲುಗು ವರ್ಷನ್‌ನಲ್ಲಿ ಬರುತ್ತಿದೆ.ಹೇಮಂತ್ ನಿರ್ದೇಶಿಸಿದ ದೃಶ್ಯ ಕಾವ್ಯಕ್ಕೆ ಕನ್ನಡಿಗರು ಫಿದಾ ಆಗಿದ್ದಾರೆ.

ಮನು-ಪ್ರಿಯಾ ಜೋಡಿಯ ಪ್ರೇಮ್ ಕಹಾನಿ ನೋಡಿ ಪ್ರೇಕ್ಷಕರು ಚಪ್ಪಾಳೆ ತಟ್ಟಿದ್ದಾರೆ. ಹಾಗಾಗಿ ತೆಲುಗು ಅಂಗಳಕ್ಕೆ ಹಾರಲು ಸಜ್ಜಾಗಿದೆ. ‘ಸಪ್ತ ಸಾಗರಲು ದಾಟಿ’ ಎಂಬ ಟೈಟಲ್‌ನಲ್ಲಿ ತೆಲುಗು ಸಿನಿಮಾ ಸೆ.22ರಂದು ಗ್ರ್ಯಾಂಡಾಗಿ ಬಿಡುಗಡೆಯಾಗುತ್ತಿದೆ.

ತೆಲುಗು ಆಡಿಯನ್ಸ್ ಗೂ ರಕ್ಷಿತ್‌ ಶೆಟ್ಟಿ ಅವರದ್ದು ಪರಿಚಿತ ಮುಖ. ಶ್ರೀಮನ್ನಾರಾಯಣ ಮತ್ತು ಚಾರ್ಲಿ ಸಿನಿಮಾಗಳಿಂದಲೇ ರಕ್ಷಿತ್‌ ಹೆಚ್ಚು ಸದ್ದು ಮಾಡಿದ್ದರು.

ಅದರಲ್ಲೂ 777 ಚಾರ್ಲಿ ಚಿತ್ರವನ್ನು ಬಹುವಾಗಿ ಇಷ್ಟಪಟ್ಟಿದ್ದರು. ಇದೀಗ ಸೂಪರ್ ಡೂಪರ್ ಹಿಟ್ ಸಿನೆಮಾ ತೆಲುಗಿನ ಅಂಗಳಕ್ಕೂ ಕಾಲಿಡಲು ಮುಂದಾಗಿದೆ. ಚಿತ್ರ್ಕೆ ತೆಲುಗು ಆಡಿಯನ್ಸ್ ಎಷ್ಟು ಮಾರ್ಕ್ಸ್ ಕೊಡ್ತಾರೆ ಎನ್ನೋದನ್ನ ಕಾದು ನೋಡಬೇಕು.

Continue Reading

bangalore

ಬೆಂಗಳೂರಿನಲ್ಲಿ 3 ದಿನ ಕಂಬಳೋತ್ಸವ : ಖ್ಯಾತ ನಟಿ ಅನುಷ್ಕಾ ಶೆಟ್ಟಿ ಉದ್ಘಾಟನೆ

Published

on

ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದೊಂದಿಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಕಂಬಳ ಉದ್ಘಾಟನೆಗೆ ಮಂಗಳೂರು ಮೂಲದ ದಕ್ಷಿಣ ಭಾರತದ ಜನಪ್ರಿಯ ನಟಿ ಅನುಷ್ಕಾ ಶೆಟ್ಟಿ ಆಗಮನ.

 

ಬೆಂಗಳೂರು: ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಕಂಬಳ ಉದ್ಘಾಟನೆಗೆ ಮಂಗಳೂರು ಮೂಲದ ದಕ್ಷಿಣ ಭಾರತದ ಜನಪ್ರಿಯ ನಟಿ ಅನುಷ್ಕಾ ಶೆಟ್ಟಿ ಅವರನ್ನು ಆಹ್ವಾನಿಸಲಾಗಿದೆ.

ಇದೇ ನವೆಂಬರ್ 24, 25 ಮತ್ತು 26ರಂದು ಕಂಬಳವನ್ನು ಆಯೋಜನೆ ಮಾಡಿದ್ದು, ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಭಾಗಿಯಾಗಲಿದ್ದಾರೆ.

ಮೂಲತಃ ಮಂಗಳೂರಿನಾಕೆಯೇ ಆಗಿರುವ ಅನುಷ್ಕ ಶೆಟ್ಟಿ ಕಂಬಳಾಭಿಮಾನಿಯೂ ಹೌದು. ಊರಿನ ಅಥವ ಕುಟುಂಬದ ಯಾವುದೇ ಕಾರ್ಯಕ್ರಮಗಳಿಗೂ ಸ್ವೀಟಿ ತಪ್ಪದೇ ಹಾಜರಿರುತ್ತಾರೆ. ದೈವ-ದೇವರುಗಳ ಕಾರ್ಯಗಳಿಗೆ ಅನುಷ್ಕ ಶೆಟ್ಟಿ ಮೊದಲ ಪ್ರಾಶಸ್ತ್ಯವನ್ನು ನೀಡುತ್ತಾರೆ.

ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಕಂಬಳ ಆಯೋಜನೆಯಾಗಿದ್ದು, ಇದಕ್ಕಾಗಿ ಭಾರೀ ಸಿದ್ಧತೆ ಕೂಡ ಮಾಡಲಾಗುತ್ತಿದೆ.

ಈ ವರ್ಷ ತುಳು ಕೂಟಕ್ಕೆ 50 ವರ್ಷ ತುಂಬಿರುವ ಹಿನ್ನೆಲೆ ಬೆಂಗಳೂರಿನಲ್ಲಿ‌ ಕಂಬಳ‌ ಮಾಡಲು ಸಿದ್ದತೆ ನಡೆಯುತ್ತಿದೆ.ರಾಜಧಾನಿಗೆ ಬರಲು ಕಂಬಳದ ಕೋಣಗಳು ಸಿದ್ದಗೊಂಡಿದ್ದು, ಸಿಲಿಕಾನ್ ಸಿಟಿ ಜನರಿಗೆ ಇದು ಕೊಂಚ ವಿಶೇಷ ಹಾಗೂ ವಿಭಿನ್ನ ಕ್ರೀಡೆ ಎನಿಸುವುದರಲ್ಲಿ ಸಂದೇಹ ಇಲ್ಲ.

ಕಂಬಳ, ಕರಾವಳಿ ಕರ್ನಾಟಕದ ಒಂದು ಜಾನಪದ ಕ್ರೀಡೆ. ದಷ್ಟ- ಪುಷ್ಟವಾಗಿ ಬೆಳಸಿದ ಕೋಣಗಳನ್ನ ಹಸನಾಗಿ ಹದ ಮಾಡಿ ಮಣ್ಣಿನ ಗದ್ದೆಯಲ್ಲಿ ಓಡಿಸುವ ಸ್ಪರ್ಧೆಯೇ ಕಂಬಳ.ಇದು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಕ್ರೀಡೆ.
‘ಬೆಂಗಳೂರು ಕಂಬಳ, ನಮ್ಮ ಕಂಬಳ’ ಎಂಬ ಶಿರ್ಷಿಕೆಯಡಿ ಕಂಬಳ ಆಯೋಜಿಸಲಾಗಿದ್ದು, ಸುಮಾರು 150 ಕೋಣಗಳು ಭಾಗಿಯಾಗಲಿವೆ ಎಂದು ಹೇಳಲಾಗುತ್ತಿದೆ.

Continue Reading

LATEST NEWS

Trending