Connect with us

    ಕೊರೊನಾ ವೈರಸ್ ನಿಯಂತ್ರಣದಲ್ಲಿ ಕಾರ್ಮಿಕರ ಸಹಕಾರ ಅಪಾರ: ಶಾಸಕ ಯು.ಟಿ.ಖಾದರ್

    Published

    on

    ಕೊರೊನಾ ವೈರಸ್ ನಿಯಂತ್ರಣದಲ್ಲಿ ಕಾರ್ಮಿಕರ ಸಹಕಾರ ಅಪಾರ: ಶಾಸಕ ಯು.ಟಿ.ಖಾದರ್

    ಬಂಟ್ವಾಳ: ಲಾಕ್‍ ಡೌನ್‍ನಿಂದಾಗಿ ಒಂದೂವರೆ ತಿಂಗಳಿನಿಂದ ಕೆಲಸವಿಲ್ಲದೆ ಕುಟುಂಬದ ನಿರ್ವಹಣೆ ಹಾಗೂ ಊಟಕ್ಕೆ ಕಷ್ಟವಾದರೂ,

    ಕೊರೊನಾ ವೈರಸ್ ಹರಡುವುದನ್ನು ನಿಯಂತ್ರಿಸಲು ಆಟೋ ರಿಕ್ಷಾ, ಗೂಡ್ಸ್ ವಾಹನ, ಪ್ರವಾಸಿ ಕಾರುಗಳ ಚಾಲಕರು ಹಾಗೂ ಕಾರ್ಮಿಕ ವರ್ಗ ಸಂಪೂರ್ಣ ಸಹಕಾರ ನೀಡಿದೆ.

    ಇದಕ್ಕಾಗಿ ಇಡೀ ಸಮಾಜ ಅವರಿಗೆ ವಿಶೇಷವಾಗಿ ಕೃತಜ್ಞತೆ ಸಲ್ಲಿಸಬೇಕು ಎಂದು ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.

    ಕಾರ್ಮಿಕರ ದಿನದ ಅಂಗವಾಗಿ ಫರಂಗಿಪೇಟೆ ಮತ್ತು ಮೇರಮಜಲು ಗ್ರಾಮದ 280 ಆಟೋ ರಿಕ್ಷಾ, ಗೂಡ್ಸ್ ವಾಹನ ಹಾಗೂ ಪ್ರವಾಸಿ ಕಾರುಗಳ ಚಾಲಕರಿಗೆ ವೈಯಕ್ತಿಕ ಖರ್ಚಿನಲ್ಲಿ ಶುಕ್ರವಾರ ಫರಂಗಿಪೇಟೆಯಲ್ಲಿ ಆಹಾರ ಸಮಾಗ್ರಿ ಹಾಗೂ ತರಕಾರಿ ಕಿಟ್‍ ವಿತರಿಸಿ ಅವರು ಮಾತನಾಡಿದರು.

    ದೇಶದ ಅಭಿವೃದ್ಧಿಯಲ್ಲಿ ಕಾರ್ಮಿಕರು, ಆಟೋ ರಿಕ್ಷಾ, ಗೂಡ್ಸ್ ವಾಹನ, ಪ್ರವಾಸಿ ಕಾರುಗಳ ಚಾಲಕರ ಕೊಡುಗೆ ಅಪಾರವಾಗಿದೆ.

    ವರ್ಷ ಪೂರ್ತಿ ಬೆವರು ಸುರಿಸಿ ಅವರು ಪಡುವ ಶ್ರಮದಿಂದ ದೇಶ ಅಭಿವೃದ್ಧಿಯಾಗುತ್ತಿದೆ. ಆದರೆ ದೇಶದ ಅಭಿವೃದ್ಧಿಯಲ್ಲಿ ಅವರ ಪಾತ್ರ ಸಮಾಜಕ್ಕೆ ಕಾಣುತ್ತಿಲ್ಲ.

    ಎಲ್ಲಾ ಕಾರ್ಮಿಕ ವರ್ಗದವರಿಗೆ ಕಾರ್ಮಿಕ ದಿನದ ಶುಭಾಶಯಗಳು ಎಂದು ಹೇಳಿದರು.ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಸರಕಾರ ಹತ್ತುಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ.

    ಆದರೆ ಸರಕಾರದ ಯಾವುದೇ ಕಾರ್ಯಕ್ರಮಗಳು ಕಾರ್ಮಿಕರಿಗೆ ತಲುಪುತ್ತಿಲ್ಲ. ಇಂದು ಕಾರ್ಮಿಕರು ಭಾರೀ ಸಂಕಷ್ಟದಲ್ಲಿದ್ದು, ಕಾರ್ಮಿಕರ ಎಲ್ಲಾ ಸವಲತ್ತುಗಳನ್ನು ಕಾರ್ಮಿಕರಿಗೆ ತಲುಪಿಸುವ ಕೆಲಸವನ್ನು ಸರಕಾರ ಕೂಡಲೇ ಮಾಡಬೇಕು.

    ಕಾರ್ಮಿಕರ ಕುಟುಂಬಗಳು ಸ್ವಾಭಿಮಾನದಿಂದ ಜೀವನ ನಡೆಸಲು ಸರಕಾರ ಅನುವು ಮಾಡಿ ಕೊಡಬೇಕು ಎಂದು ಅವರು ಆಗ್ರಹಿಸಿದರು.

    ಲಾಕ್‍ ಡೌನ್‍ನಿಂದ ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ಸರಕಾರ ಸ್ಪಂದಿಸಬೇಕು.

    ಕರ್ನಾಟಕ ಸರಕಾರ ಕಾರ್ಮಿಕರು, ಆಟೋ ರಿಕ್ಷಾ, ಗೂಡ್ಸ್ ವಾಹನ, ಪ್ರವಾಸಿ ಕಾರುಗಳ ಚಾಲಕರಿಗೆ ಕೇರಳ ಸರಕಾರದ ಮಾದರಿಯಲ್ಲಿ ಭತ್ಯೆ ನೀಡಬೇಕು.

    ಕಾರ್ಮಿಕರಿಗೆ ಭತ್ಯೆ ನೀಡುವುದು ಕೇರಳದಲ್ಲಿ ಸಾಧ್ಯವಾಗುವುದಾದರೆ ನಮ್ಮ ರಾಜ್ಯದಲ್ಲಿ ಯಾಕೆ ಸಾಧ್ಯವಾಗುವುದಿಲ್ಲ ಎಂದು ಪ್ರಶ್ನಿಸಿದ ಯು.ಟಿ.ಖಾದರ್, ಕಾರ್ಮಿಕರ ಸಂಕಷ್ಟಗಳಿಗೆ ಸ್ಪಂದಿಸುವ ಮೂಲಕ ಸರಕಾರ ಕಾರ್ಮಿಕ ದಿನಾಚರಣೆಯನ್ನು ಆಚರಿಸಬೇಕು ಎಂದರು.

    ಈ ಸಂದರ್ಭದಲ್ಲಿ ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಲ್ಲ, ಉಪಾಧ್ಯಕ್ಷೆ ಲಿಡಿಯಾ ಪಿಂಟೋ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಉಮರ್ ಫಾರೂಕ್, ತಾಲೂಕು ಪಂಚಾಯತ್ ಮಾಜಿ ಸದಸ್ಯ ಆಸೀಫ್ ಇಕ್ಬಾಲ್, ಪುದು ಗ್ರಾಮ ಪಂಚಾಯತ್ ಸದಸ್ಯರಾದ ಇಕ್ಬಾಲ್ ಸುಜೀರ್,

    ರಂದ ಪೂಜಾರಿ, ಮುಹಮ್ಮದ್ ಮೋನು, ಭಾಸ್ಕರ್ ರೈ, ಝಾಹಿರ್, ಮೇರ ಮಜಲು ಗ್ರಾಮ ಪಂಚಾಯತ್ ಸದಸ್ಯರಾದ ಅನಿಲ್, ಪುದು ವಲಯ ಕಾಂಗ್ರೆಸ್ ಅಧ್ಯಕ್ಷ ರಫೀಕ್ ಪೇರಿಮಾರ್,

    ಯೂತ್ ಕಾಂಗ್ರೆಸ್ ಉಪಾಧ್ಯಕ್ಷ ಮಜೀದ್ ಫರಂಗಿಪೇಟೆ, ಮಾರಿಪಲ್ಲ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಜಾಫರ್ ಸುಜೀರ್, ಉಪಾಧ್ಯಕ್ಷ ಇಂಶಾದ್ ಮಾರಿಪಲ್ಲ,

    ಮೇರಮಜಲು ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಮುಹಮ್ಮದ್ ಮೋನು, ಪ್ರವಾಸಿ ಕಾರು ಚಾಲಕ ಮಾಲಕರ ಸಂಘದ ಅಧ್ಯಕ್ಷ ಇಮ್ರಾನ್,

    ಗೂಡ್ಸ್ ಟೆಂಪೊ ಚಾಲಕ ಮಾಲಕರ ಸಂಘದ ಅಧ್ಯಕ್ಷ ಇಸ್ಮಾಯೀಲ್ ಹತ್ತನೇಮೈಲುಗಲ್ಲು ಸಹಿತ ಪ್ರಮುಖರಾದ ಎಂ.ಕೆ.ಮುಹಮ್ಮದ್,

    ಇಮ್ತಿಯಾಝ್ ಆಲ್ಫಾ ತುಂಬೆ, ಇಬ್ರಾಹೀಂ ವಲವೂರು, ಹುಸೈನ್ ಪಡಿ, ಸಲಾಂ ಮಲ್ಲಿ, ಮಜೀದ್ ಪೇರಿಮಾರ್, ಇಸ್ಮಾಯೀಲ್ ಹತ್ತನೇಮೈಲುಗಲ್ಲು, ಗಫೂರ್ ಫರಂಗಿಪೇಟೆ, ಹಕೀಂ ಮಾರಿಪಲ್ಲ, ಹಾಶಿಂ ಮಾರಿಪಲ್ಲ ಮೊದಲಾದವರು ಉಪಸ್ಥಿತರಿದ್ದರು.

    Click to comment

    Leave a Reply

    Your email address will not be published. Required fields are marked *

    LATEST NEWS

    ಅಣ್ಣನ ಪ್ರೀತಿಗೆ ತಮ್ಮ ಬ*ಲಿ; ತಾಯಿಯ ಮುಂದೆಯೇ ಮಗನ ಕೊ*ಲೆ

    Published

    on

    ಮಂಗಳೂರು/ಕಲಬುರಗಿ: ಯುವ ಸಮಾಜದ ಪ್ರೀತಿಗೆ ಮನೆಯಲ್ಲಿ ವಿರೋಧ ಬರುವುದು ಸಹಜ. ಅದರಲ್ಲೂ ಹುಡುಗಿಯ ವಿಚಾರದಲ್ಲಿ ಇದು ಹೆಚ್ಚಾಗಿಯೇ ಕಾಣಬಹುದು. ವಿಪರ್ಯಾಸವೆಂದರೆ ಅಣ್ಣನ ಪ್ರೇಮದ ವಿಚಾರದಲ್ಲಿ ತಮ್ಮ ಬಲಿ*ಯಾದ ಘಟನೆ ನಡೆದಿದೆ.


    ಕಲಬುರಗಿ ನಗರದ ಹೊರವಲಯದಲ್ಲಿರುವ ನಾಗನಹಳ್ಳಿ ಗ್ರಾಮದಲ್ಲಿ ಸುಮಿತ್‌ ಮಲ್ಲಾಬಾದ್ ಎಂಬ 19 ವರ್ಷದ ಯುವಕನನ್ನು ಭೀಕ*ರವಾಗಿ ಕೊ*ಲೆ ಮಾಡಲಾಗಿದೆ. ತಂದೆ-ತಾಯಿಯೊಂದಿಗೆ ಮುಂಬೈನಲ್ಲಿ ವಾಸವಾಗಿದ್ದ ಸುಮಿತ್‌, ಮುಂಬೈನಲ್ಲಿ ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದ. ಕಳೆದ ವಾರವಷ್ಟೇ ತಾಯಿಯೊಂದಿಗೆ ಕಲಬುರಗಿಗೆ ಆಗಮಿಸಿದ್ದ. ಊರಲ್ಲಿ ಸುಮಿತ್ ಸಹೋದರ ಸಚಿನ್ ಮನೆಯಲ್ಲಿ ವಾಸವಾಗಿದ್ದ. ಸಚಿನ್ ನಾಗನಹಳ್ಳಿ ಗ್ರಾಮದ ತನ್ನದೆ ಏರಿಯಾದ ಯುವತಿಯನ್ನು ಪ್ರೀತಿಸುತ್ತಿದ್ದನಂತೆ. ಈ ವಿಚಾರ ಯುವತಿಯ ಮನೆಯವರಿಗೆ ಗೊತ್ತಾಗಿ ಸಾಕಷ್ಟು ಭಾರಿ ನ್ಯಾಯ ಪಂಚಾಯಿತಿ ಮಾಡಿದ್ದರಂತೆ‌. ಆದರೆ ಅದು ಬಗೆಹರೆದಿರಲಿಲ್ಲ. ನಿನ್ನೆ ಸಂಜೆ (ಸೆ.21) ಸಚಿನ್ ಮನೆಗೆ ಯುವತಿಯ ಸಹೋದರ ಮತ್ತು ಆತನ ಕೆಲ ಸ್ನೇಹಿತರು ಬಂದಿದ್ದಾಗ ಸಚಿನ್ ಮನೆಯಲ್ಲಿರದ ಕಾರಣ ಆತನ ತಾಯಿ ಮತ್ತು ಸಹೋದರನ ಜೊತೆ ಗಲಾಟೆ ತೆಗೆದಿದ್ದಾರೆ. ಬಳಿಕ ಗಲಾಟೆ ವಿಕೋಪಕ್ಕೆ ತೆರಳಿ ಸುಮಿತ್​​ನನ್ನ ಚಾ*ಕುವಿನಿಂದ ಚು*ಚ್ಚಿ ಎಸ್ಕೇಪ್ ಆಗಿದ್ದಾರೆ.
    ಇತ್ತ ಸುಮಿತ್‌ಗೆ ಚಾ*ಕು ಚುಚ್ಚಿ*ದ್ದನ್ನು ಕಂಡ ತಾಯಿ, ಮಗನನ್ನ ಉಳಿಸಿಕೊಳ್ಳಲು ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹನ್ನೆರೆಡು ಗಂಟೆಗಳ ಕಾಲ ನಡೆದ ಚಿಕಿತ್ಸೆ ಫಲಕಾರಿಯಾಗಿದೆ ಇಂದು ಬೆಳಗ್ಗೆ (ಸೆ.22) ಸಾವನ್ನ*ಪ್ಪಿದ್ದಾನೆ.
    ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಅದೇನೆ ಆಗಲಿ ಯುವತಿಯ ವಿಚಾರದಲ್ಲಿ ಏನು ಮಾಡದ ಅಮಾಯಕ ಯುವಕ ಬಲಿಯಾಗಿರೋದು ನಿಜಕ್ಕೂ ದುರಂತವೆ ಸರಿ.

    Continue Reading

    LATEST NEWS

    ತಿರುಪತಿಯಿಂದ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ತುಪ್ಪ ಸಾಗಿಸುವ ಟ್ಯಾಂಕರ್‌ಗಳಿಗೆ ಜಿಪಿಎಸ್‌ ಅಳವಡಿಕೆ

    Published

    on

    ಆಂಧ್ರಪ್ರದೇಶ/ಮಂಗಳೂರು: ತಿರುಪತಿ ತಿರುಮಲದಲ್ಲಿ ಲಡ್ಡು ವಿವಾದ ಉಂಟಾದ ಬಳಿಕ ಸರಕಾರ ನಂದಿನಿ ತುಪ್ಪಕ್ಕೆ ಬೇಡಿಕೆ ಇಟ್ಟಿದೆ.  ಒಂದು ತಿಂಗಳ ಹಿಂದೆ ಟಿಟಿಡಿ ಕೆಎಂಎಫ್‌ಗೆ ಟೆಂಡರ್ ನೀಡಿದ ನಂತರ ನಂದಿನಿ ತುಪ್ಪ ಪೂರೈಕೆಯನ್ನು ಪುನಃ ಆರಂಭಿಸಲಾಗಿದೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಂ ಕೆ ಜಗದೀಶ್ ಹೇಳಿದ್ದಾರೆ.

    ತಿರುಪತಿ ಲಡ್ಡು ವಿವಾದದ ಬಳಿಕ ಕೆಎಮ್‌ಎಫ್‌ ಹೈ ಅಲರ್ಟ್‌:
    “ನಾವು ಒಂದು ತಿಂಗಳ ಹಿಂದೆ ತುಪ್ಪವನ್ನು(ಟಿಟಿಡಿಗೆ) ಸರಬರಾಜು ಮಾಡುತ್ತಿದ್ದೇವೆ. ನಾವು ವಾಹನಗಳಿಗೆ ಜಿಪಿಎಸ್ ಸಿಸ್ಟಮ್ ಮತ್ತು ಜಿಯೋ ಲೊಕೇಶನ್ ಸಾಧನಗಳನ್ನು ಅಳವಡಿಸಿದ್ದೇವೆ. ಇದರಿಂದ ವಾಹನ ಎಲ್ಲಿ ನಿಲ್ಲುತ್ತವೆ ಎಂಬುದನ್ನು ನಾವು ಕಂಡುಹಿಡಿಯಬಹುದು. ಇದು ಎಲ್ಲಿಯೂ ಕಲಬೆರಕೆ ಮಾಡದಂತೆ ನೋಡಿಕೊಳ್ಳಲು ಸಹಾಯಕವಾಗುತ್ತದೆ” ಎಂದು ಜಗದೀಶ್ ತಿಳಿಸಿದ್ದಾರೆ.

    ಕೆಎಂಎಫ್, ಟಿಟಿಡಿಗೆ 350 ಟನ್ ತುಪ್ಪ ಪೂರೈಸುವ ಗುತ್ತಿಗೆ ಪಡೆದುಕೊಂಡಿದೆ. ಅಗತ್ಯ ಬಿದ್ದಾಗ ತುಪ್ಪ ಪೂರೈಕೆ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ. ವಿಶ್ವವಿಖ್ಯಾತ ತಿರುಪತಿ ಲಡ್ಡು ತಯಾರಿಕೆಯಲ್ಲಿ ಗುಣಮಟ್ಟವಿಲ್ಲದ ಪದಾರ್ಥಗಳು ಮತ್ತು ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿದೆ ಎಂದು ಸ್ವತಃ ಆಂಧ್ರ ಪ್ರದೇಶ ಮುಖ್ಯಮಂತ್ರಿ ಆರೋಪ ಮಾಡಿದ್ದರು. ಅಲ್ಲದೆ ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬು, ಮೀನಿನ ಎಣ್ಣೆ ಬಳಸಿರುವುದು ಲ್ಯಾಬ್ ವರದಿಯಲ್ಲಿ ದೃಢಪಟ್ಟಿದೆ.

    Continue Reading

    LATEST NEWS

    ಪಂಚೆ ಉಟ್ಟು ದೇಸೀ ಸ್ಟೈಲ್ ಅಡುಗೆ ಮಾಡಿದ ಬ್ರಿಟಿಷ್ ಬಾಣಸಿಗ..! ಫಿದಾ ಆದ ನೆಟ್ಟಿಗರು

    Published

    on

    ಹೆಲ್ಸ್ ಕಿಚನ್ ಹಾಗೂ ಮಾಸ್ಟರ್ ಚೆಫ್ ನಂತಹ ಜನಪ್ರಿಯ ಕಾರ್ಯಕ್ರಮಗಳ ನಿರೂಪಕ ಗಾರ್ಡನ್ ರಾಮ್ಸೆ ಇದೀಗ ತನ್ನ ವೇಷಭೂಷಣದ ಮೂಲಕ ಗಮನ ಸೆಳೆದಿದ್ದಾರೆ. ಬ್ರಿಟಿಷ್ ಸೆಲೆಬ್ರಿಟಿ ಬಾಣಸಿಗ ಗಾರ್ಡನ್ ಜೇಮ್ಸ್ ರಾಮ್ಸೆ ಅವರು ತಮ್ಮ ಡಿಫರೆಂಟ್ ಶೈಲಿಯ ಕುಕಿಂಗ್ ಗಳಿಗೆ ಹೆಸರುವಾಸಿಯಾಗಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ಅವತಾರದಲ್ಲಿ ಅಡುಗೆ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಸ್ಟೈಲ್‌ಆಗಿ ಪಂಚೆ ತೊಟ್ಟು ದಕ್ಷಿಣ ಕನ್ನಡ ಭಾರತೀಯ ಶೈಲಿಯ ಅಡುಗೆಗಳನ್ನು ಮಾಡಿದ್ದು ಈ ಕುರಿತ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಕಾಶ್ಮೀರದಿಂದ ಕರ್ನಾಟಕಕ್ಕೆ ಬರುತ್ತಿದ್ದ ಸೇನೆಯ ರೈಲನ್ನು ಸ್ಫೋಟಿಸಲು ಯತ್ನ

    ಈ ಕುರಿತ ವಿಡಿಯೋವನ್ನು historyinmemes(ಹಿಸ್ಟೋರಿ ಇನ್‌ ಮೀಮ್ಸ್) ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಸ್ಥಳೀಯ ಭಾರತೀಯ ಉಡುಗೆ ತೊಟ್ಟು ಅಡುಗೆ ಮಾಡಿದ ಗಾರ್ಡನ್ ರಾಮ್ಸೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ಸೆ.20ರದು ಹಂಚಿಕೊಂಡಿದ್ದ ವೀಡಿಯೋ 12 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.

    Continue Reading

    LATEST NEWS

    Trending