Connect with us

    DAKSHINA KANNADA

    ಮಾಸ್ಕ್ ನೆಪದಲ್ಲಿ ಡಾ.ಕಕ್ಕಿಲ್ಲಾಯರ ವಿರುದ್ಧ ಅಪಪ್ರಚಾರ, ಅವಹೇಳನ: ವಿಚಾರಣೆಗೆ ಹಾಜರಾಗಲು ಮೂವರಿಗೆ ನ್ಯಾಯಾಲಯ ಆದೇಶ.!

    Published

    on

    ಕೋವಿಡ್ ಕಾಲಘಟ್ಟದಲ್ಲಿ ಮಾಸ್ಕ್ ನೆಪದಲ್ಲಿ ಮಂಗಳೂರಿನ ಖ್ಯಾತ ವೈದ್ಯ ಡಾ. ಶ್ರೀನಿವಾಸ ಕಕ್ಕಿಲ್ಲಾಯರ ವಿರುದ್ಧ ಅಪಪ್ರಚಾರ, ಅವಹೇಳನ ಪ್ರಕರಣದ ವಿಚಾರಣೆಗೆ ಹಾಜರಾಗಲು ಮೂವರಿಗೆ ನಗರದ ನ್ಯಾಯಾಲಯ ಆದೇಶ ನೀಡಿದೆ.

    ಮಂಗಳೂರು : ಕೋವಿಡ್ ಕಾಲಘಟ್ಟದಲ್ಲಿ ಮಾಸ್ಕ್ ನೆಪದಲ್ಲಿ ಮಂಗಳೂರಿನ ಖ್ಯಾತ ವೈದ್ಯ ಡಾ. ಶ್ರೀನಿವಾಸ ಕಕ್ಕಿಲ್ಲಾಯರ ವಿರುದ್ಧ ಅಪಪ್ರಚಾರ, ಅವಹೇಳನ ಪ್ರಕರಣದ ವಿಚಾರಣೆಗೆ ಹಾಜರಾಗಲು ಮೂವರಿಗೆ ನಗರದ ನ್ಯಾಯಾಲಯ ಆದೇಶ ನೀಡಿದೆ.

    ಮಾಸ್ಕ್ ವಿಚಾರವಾಗಿ ನಗರದ ಖ್ಯಾತ ವೈದ್ಯ ಡಾ.ಶ್ರೀನಿವಾಸ ಕಕ್ಕಿಲ್ಲಾಯರಿಗೆ ಸಂಬಂಧಿಸಿದ ಸಿಸಿಟಿವಿ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ ಹಾಗೂ ಅವರ ತಂದೆ, ಸ್ವಾತಂತ್ರ್ಯ ಹೋರಾಟಗಾರ ಬಿ.ವಿ.ಕಕ್ಕಿಲ್ಲಾಯ ಮತ್ತು ವಿಚಾರವಾದಿ ಪ್ರೊ.ನರೇಂದ್ರ ನಾಯಕ್ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ ಧ್ವನಿ ಮುದ್ರಿಕೆಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಅಪರಾಧಿಗಳೆಂದು ಹೆಸರಿಸಿ ವಿಚಾರಣೆಗೆ ಹಾಜರಾಗುವಂತೆ ಮಂಗಳೂರಿನ ಜೆಎಂಎಫ್ ಸಿ 6ನೇ ನ್ಯಾಯಾಲಯ ಆದೇಶಿಸಿದೆ.

    ಮಂಗಳೂರಿನ ಜಿಮ್ಮೀಸ್ ಸೂಪರ್ ಮಾರ್ಕೆಟ್ ನ  ಮಾಲಕ ರಯಾನ್ ರೊಸಾರಿಯೋ ಮತ್ತು ಡೊನಾಲ್ಡ್ ರೊಸಾರಿಯೋ ಹಾಗೂ ಇವರಿಬ್ಬರಿಗೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಗುರುದೇವ ಪೈ ಎಂಬವರ ವಿರುದ್ಧ ಡಾ.ಶ್ರೀನಿವಾಸ ಕಕ್ಕಿಲ್ಲಾಯ ಮಂಗಳೂರಿನ ಜೆಎಂಎಫ್ಸಿ 6ನೇ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಿದ್ದರು. ಈ ಮೊಕದ್ದಮೆಯನ್ನು ಮಾನ್ಯ ಮಾಡಿರುವ ನ್ಯಾಯಾಲಯವು ಫೆಬ್ರವರಿ 23ರಂದು ಈ ಮೂವರನ್ನೂ ಅಪರಾಧಿಗಳೆಂದು ಹೆಸರಿಸಿ ವಿಚಾರಣೆಗೆ ಹಾಜರಾಗುವಂತೆ ಆದೇಶಿಸಿದೆ.

    ಮೇ 19, 2021ರಂದು ಮಂಗಳೂರಿನ ಜಿಮ್ಮೀಸ್ ಸೂಪರ್ ಮಾರ್ಕೆಟ್ ಎಂಬ ಅಂಗಡಿಯಲ್ಲಿ ಮಾಸ್ಕ್ ವಿಚಾರವಾಗಿ ಡಾ.ಶ್ರೀನಿವಾಸ ಕಕ್ಕಿಲ್ಲಾಯ ಮತ್ತು ಅಂಗಡಿ ಮಾಲಕರ ನಡುವೆ ವಾಗ್ವಾದ ನಡೆದಿತ್ತು. ಇದರ ಸಿಸಿಟಿವಿ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತಲ್ಲದೆ, ಈ ಬಗ್ಗೆ ಡಾ.ಕಕ್ಕಿಲ್ಲಾಯರ ವಿರುದ್ಧ ಪೊಲೀಸರು ಅಪರಾಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನೂ ಸಲ್ಲಿಸಿದ್ದರು. ಈ ಆರೋಪ ಪಟ್ಟಿಯನ್ನು ರದ್ದುಪಡಿಸುವಂತೆ ಕೋರಿ  ಡಾ.ಕಕ್ಕಿಲ್ಲಾಯ ಹೈಕೋರ್ಟ್ ಮೆಟ್ಟಿಲೇರಿದ್ದರು. ಅದರಂತೆ 2021ರ ಆಗಸ್ಟ್ 31ರಂದು ಆರೋಪ ಪಟ್ಟಿಯ ವಿಚಾರಣೆಯನ್ನು ತಡೆಹಿಡಿಯುವಂತೆ ನ್ಯಾಯಾಲಯ ಮಧ್ಯಂತರ ಆದೇಶ ಹೊರಡಿಸಿತ್ತು.

    ಬಳಿಕ ಅಂದಿನ ಘಟನೆಯ ಮೂಲ ವೀಡಿಯೋವನ್ನು ತಿರುಚಿ ಸುಳ್ಳುಗಳನ್ನು ಸೇರಿಸಿ ತೀರಾ ಅವಹೇಳನಕಾರಿಯಾಗಿ ಪ್ರಸಾರ ಮಾಡಿದ್ದಲ್ಲದೆ, ಯಾವುದೇ ಮಾಹಿತಿಯಿಲ್ಲದೆ, ಸತ್ಯಾಸತ್ಯತೆ ಪರಿಶೀಲಿಸದೆ ತನ್ನ ತೇಜೋವಧೆ ಮಾಡಲು ಮತ್ತು ತನ್ನ ಬಗ್ಗೆ ಜನರಲ್ಲಿ ಅಪನಂಬಿಕೆ ಹುಟ್ಟಿಸುವುದಕ್ಕೆ ವಿಡಿಯೋ ಹಾಗೂ ಪತ್ರಿಕಾ ಹೇಳಿಕೆಗಳನ್ನು ಹಂಚಿದ್ದಾಗಿ ಆರೋಪಿಸಿ ಭಾರತೀಯ ವೈದ್ಯಕೀಯ ಸಂಘ ಹಾಗೂ ಅಸೋಸಿಯೇಶನ್ ಆಫ್ ಮೆಡಿಕಲ್ ಕನ್ಸಲ್ಟೆಂಟ್ಸ್ ನ ಪದಾಧಿಕಾರಿಗಳ ಮೇಲೆ ಹಾಗೂ ‘ಕಹಳೆ ನ್ಯೂಸ್’ ಚಾನೆಲ್ ಮೇಲೆ ಡಾ.ಶ್ರೀನಿವಾಸ ಕಕ್ಕಿಲ್ಲಾಯ ಮಂಗಳೂರಿನ ಜೆಎಂಎಫ್ ಸಿ 2ನೇ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನಹಾನಿ ಪ್ರಕರಣ ದಾಖಲಿಸಿದ್ದರು.

    ಈ ದೂರನ್ನು ಮಾನ್ಯ ಮಾಡಿದ ನ್ಯಾಯಾಲಯವು ಪುತ್ತೂರಿನ ವೈದ್ಯ ಡಾ.ಗಣೇಶ್ ಪ್ರಸಾದ್ ಮುದ್ರಾಜೆ, ಕಹಳೆ ನ್ಯೂಸ್ನ ಶ್ಯಾಮ್ ಸುದರ್ಶನ್ ಹೊಸಮೂಲೆ, ಮಂಗಳೂರಿನ ವೈದ್ಯರಾದ ರಾಮಚಂದ್ರ ಕಾಮತ್, ಪ್ರಶಾಂತ್ ಭಟ್, ಅನಿಮೇಶ್ ಜೈನ್, ಎಂ.ಎ.ಆರ್.ಕುಡ್ವ ಹಾಗೂ ಕುಮಾರಸ್ವಾಮಿ ಎಂಬ ಏಳು ಮಂದಿಯನ್ನು ಎಪ್ರಿಲ್ 8, 2022ರಂದು ಅಪರಾಧಿಗಳೆಂದು ಹೆಸರಿಸಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಈ ಪೈಕಿ ಎಂಎಆರ್ ಕುಡ್ವ ಮೃತಪಟ್ಟಿದ್ದರೆ, ಉಳಿದ ಆರು ಮಂದಿ ಜಾಮೀನು ಪಡೆದುಕೊಂಡಿದ್ದಾರೆ ಎಂದು ಡಾ.ಶ್ರೀನಿವಾಸ ಕಕ್ಕಿಲ್ಲಾಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    Ancient Mangaluru

    ಮಂಗಳೂರಿನ ನರ್ಸಿಂಗ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ನೀ*ರುಪಾಲು

    Published

    on

    ಮಂಗಳೂರು : ವೆಣೂರಿನ ಬರ್ಕಜೆ ಸಮೀಪದಲ್ಲಿರುವ ಸ್ನೇಹಿತನ ಮನೆಗೆ ತೆರಳಿದ್ದ ಮೂವರು ನರ್ಸಿಂಗ್ ವಿದ್ಯಾರ್ಥಿಗಳು ನೀರು ಪಾಲಾಗಿದ್ದಾರೆ. ಮದ್ಯಾಹ್ನದ ಊಟ ಮುಗಿಸಿ ಸಮೀಪದ ನದಿಗೆ ಈಜಲು ತೆರಳಿದ್ದ ಮೂವರು ನೀರಿನ ಸೆಳೆತಕ್ಕೆ ಸಿಲುಕಿ ಪ್ರಾ*ಣ ಕಳೆದುಕೊಂಡಿದ್ದಾರೆ.


    ಬೆಳ್ತಂಗಡಿ ತಾಲೂಕಿನ ವೇಣೂರಿನ ಮೂಡಕೋಡಿ ಗ್ರಾಮದ ವಾಲ್ಟರ್ ಎಂಬವರ ಮನೆಗೆ ಮೂಡಬಿದ್ರೆಯ ಲಾರೆನ್ಸ್ 20 ವರ್ಷ, ಬೆಳ್ತಂಗಡಿ ತಾಲೂಕಿನ ಪಾರೆಂಕಿ ಗ್ರಾಮದ ಸೂರಜ್ 19 ವರ್ಷ, ಹಾಗೂ ಬಂಟ್ವಾಳದ ವಗ್ಗ ಗ್ರಾಮದ ಜೈಸನ್ 19 ವರ್ಷ ಈ ಮೂವರು ಹೋಗಿದ್ದಾರೆ. ಮದ್ಯಾಹ್ನದ ಊಟವನ್ನು ಮುಗಿಸಿದ ಇವರು ಜೊತೆಯಾಗಿ ಬರ್ಕಜೆ ಸಮೀಪದ ಡ್ಯಾಂ ಬಳಿ ನದಿಯಲ್ಲಿ ಈಜಲು ಹೋಗಿದ್ದಾರೆ. ನದಿಯಲ್ಲಿ ಈಜಾಡುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಮೂವರೂ ನೀರುಪಾಲಾಗಿದ್ದು, ವಿಷಯ ತಿಳಿಯುತ್ತಿದ್ದಂತೆ ಸ್ಥಳಿಯರು ರಕ್ಷಣೆಗೆ ನದಿಗೆ ದುಮಿಕಿದ್ದಾರೆ. ಆದ್ರೆ ಮೂವರನ್ನು ನದಿಯಿಂದ ಮೇಲೆತ್ತುವ ಮೊದಲೇ ಇ*ಹಲೋಕ ತ್ಯಜಿಸಿದ್ದಾರೆ. ಮೂವರೂ ಮಂಗಳೂರಿನ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳಾಗಿದ್ದಾರೆ.

    Continue Reading

    BANTWAL

    ಬಂಟ್ವಾಳ: ಅಟೋ ಮತ್ತು ಬೈಕ್ ನಡುವೆ ಅ*ಪಘಾತ; ಮೂವರು ಗಂ*ಭೀರ

    Published

    on

    ಬಂಟ್ವಾಳ : ಬಂಟ್ವಾಳ ತಾಲೂಕಿನ ಸಾಲೆತ್ತೂರು ಸಮೀಪದ ಕಾಡುಮಠದ ಬಳಿ ಅಟೋ ಹಾಗೂ ಬೈಕ್ ಒಂದರ ನಡುವೆ ಅ*ಪಘಾತ ಸಂಭವಿಸಿ ಮೂವರು ಗಾ*ಯಗೊಂಡಿದ್ದಾರೆ.

    ಸಾಲೆತ್ತೂರಿನ ಅಟೋ ಚಾಲಕ ರಫೀಕ್, ಬೈಕ್ ಸವಾರರಾದ ಕಡಂಬು ನಿವಾಸಿ ಉಮ್ಮರ್ ಮತ್ತು ರಾದುಕಟ್ಟೆ ನಿವಾಸಿ ಅಬೂಬಕ್ಕರ್ ಅವರು ಗಾ*ಯಗೊಂಡಿದ್ದಾರೆ. ಅ*ಪಘಾತದ ತೀವ್ರತೆಗೆ ಮೂವರಿಗೂ ಗಂಭೀರ ಗಾ*ಯಗಳಾಗಿದ್ದು, ರಸ್ತೆಯಲ್ಲಿ ಸಂಚಾರ ಸ್ಥಗಿತವಾಗಿತ್ತು. ಇದೇ ವೇಳೆ ಸ್ಥಳದಲ್ಲಿದ್ದ ಕೆ.ಎಸ್. ಹೆಗ್ಡೆ ವೈದ್ಯಕೀಯ ಕಾಲೇಜಿನ ಬಸ್‌ನಲ್ಲಿದ್ದ ವಿದ್ಯಾರ್ಥಿಗಳು ಗಾ*ಯಾಳುಗಳ ನೆರವಿಗೆ ಧಾವಿಸಿ ಬಂದಿದ್ದಾರೆ.

    ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ರವಾನಿಸುವ ಕೆಲಸ ಮಾಡಿದ್ದಾರೆ. ಮೂವರು ಗಾ*ಯಾಳುಗಳು ಕೂಡಾ ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಾಗಿದ್ದು, ಓರ್ವನ ಸ್ಥಿತಿ ಗಂ*ಭೀರವಾಗಿದೆ ಎಂದು ಮಾಹಿತಿ ಲಭಿಸಿದೆ. ಈ ಅ*ಪಘಾತದ ಕುರಿತಾಗಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    DAKSHINA KANNADA

    ಅಸುವು ರಾಷ್ಟ್ರ ಸಮರ್ಪಿತ ಕಾರ್ಯಕ್ರಮ; ದಾಳಿಯಲ್ಲಿ ಮ*ಡಿದ ಯೋಧರಿಗೆ ಗೌರವಾರ್ಪಣೆ

    Published

    on

    ಮಂಗಳೂರು: ಮುಂಬೈ ನಗರದ ಮೇಲೆ ಭಯೋತ್ಪಾದಕರು ನಡೆಸಿದ ದಾ*ಳಿಯ ಸಂದರ್ಭದಲ್ಲಿ ಉಗ್ರರ ವಿರುದ್ಧ ಹೋರಾಡಿ ಪ್ರಾ*ಣವನ್ನು ಬ*ಲಿದಾನ ಮಾಡಿದ ಹುತಾತ್ಮರನ್ನು ಸ್ಮರಿಸುವ ರಾಷ್ಟ್ರಜಾಗೃತಿಯ ಅಸುವು ರಾಷ್ಟ್ರ ಸಮರ್ಪಿತ ಕಾರ್ಯಕ್ರಮವು ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆ ವತಿಯಿಂದ ಜರುಗಿತು.

    ಕದ್ರಿ ಯುದ್ಧ ಸ್ಮಾರಕದ ಬಳಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಸಂತ ಅಲೋಶಿಯಸ್ ಕಾಲೇಜಿನ ಉಪಕುಲಪತಿ ವಂದನೀಯ ಡಾ ಪ್ರವೀಣ ಮಾರ್ಟಿಸ್‌ ವಹಿಸಿದ್ದರು. ಡಾ ವಾದಿರಾಜ ಗೋಪಾಡಿ ದಿಕ್ಸೂಚಿ ಭಾಷಣ ಮಾಡಿದರು.

    ಈ ಸಂದರ್ಭದಲ್ಲಿ ಎನ್‌ಎಂ ಪಿಎ ಸಿಐಎಸ್ಎಫ್‌ನ ಡೆಪ್ಯುಟಿ ಕಮಾಂಡೆಂಟ್‌  ರಾಜೇಂದ್ರ ಪ್ರಸಾದ್ ಪಾಠಕ್, ಕಾರ್ಯಕ್ರಮ ಸಂಘಟಕ ಡಾ ಶೇಷಪ್ಪ, ಡಾ ನಿಶ್ಚಿತ್‌ ಡಿ ಸೋಜಾ,  ಹಿರಿಯ ಪೊಲೀಸ್ ಅಧಿಕಾರಿ ಅಜ್ಜತ್ ಆಲಿ, ಸಾರ್ಜೆಂಟ್ ಶ್ರೀಕಾಂತ್ ಶೆಟ್ಟಿ ಬಾಳ, ನ್ಯಾಯವಾದಿ ಬಿ. ನಯನ ಪೈ. ವಿದುಷಿ ಗುರು ಶ್ರೀಮತಿ ಸೌಮ್ಯ ಸುಧೀಂದ್ರ ರಾವ್, ಕಾರ್ಪೋರೇಟರ್‌ ಶಕೀಲಾ ಕಾವ ಮೊದಲಾದವರಿದ್ದರು. ನೃತ್ಯಸುಧಾ ಮಂಗಳೂರು ಇಲ್ಲಿನ ವಿದ್ಯಾರ್ಥಿನಿಯರಿಂದ ಹುತಾತ್ಮ ಸೈನಿಕರಿಗೆ ನೃತ್ಯನಮನ ನಡೆಯಿತು.

    Continue Reading

    LATEST NEWS

    Trending