Friday, August 19, 2022

ದ.ಕ.ದಲ್ಲಿ ಕೋವಿಡ್ ನಿಯಂತ್ರಣಕ್ಕೆ ವಾರದ ಗಡುವು..! ಎಲ್ಲದರಲ್ಲೂ ಮಾದರಿಯಾಗಿದ್ದ ಕೊರೊನಾ ನಿಯಂತ್ರಣದಲ್ಲಿ ಹಿಂದೆ..!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪ್ರಮಾಣ ನಿಯಂತ್ರಣಕ್ಕೆ ಬಾರದ್ದರಿಂದ ಇದೀಗ ಮತ್ತೊಂದು ವಾರ ಲಾಕ್‌ಡೌನ್‌ ವಿಸ್ತರಣೆ ಮಾಡಲಾಗಿದೆ.

ಈ ಒಂದು ವಾರದಲ್ಲಿ ಸೋಂಕಿನ ಪ್ರಮಾಣ ಇಳಿಸುವ ಅನಿವಾರ್ಯತೆ ಇದೀಗ ಆರೋಗ್ಯ ಇಲಾಖೆ, ಜಿಲ್ಲಾಡಳಿತದ ಮುಂದಿರುವುದರಿಂದ ಒಂದು ವಾರದ ಅವಧಿ ಜಿಲ್ಲೆಗೆ ನಿರ್ಣಾಯಕವಾಗಿದೆ.

ಇಡೀ ರಾಜ್ಯದಲ್ಲಿ ಕೊರೊನಾ ನಿಯಂತ್ರಣದಲ್ಲಿದೆ. ತೀವ್ರ ಏರುಗತಿಯಲ್ಲಿದ್ದ ಪಕ್ಕದ ಉಡುಪಿ ಜಿಲ್ಲೆಯಲ್ಲೂ ಕೊರೊನಾ ಸಂಪೂರ್ಣ ನಿಯಂತ್ರಣದಲ್ಲಿದ್ದು ಕೊರೊನಾ ಕೇವಲ ಶೇಕಡ 7 ರಷ್ಟಿದೆ.

ಜಿಲ್ಲಾಡಳಿತದ ವೈಫಲ್ಯ..!

ಆದರೆ ಸದಾ ಎಲ್ಲದರಲ್ಲೂ ಮಾದರಿಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಕೊರೊನಾ ಮಾತ್ರ ಕಂಟ್ರೋಲ್ ಆಗಲೇ ಇಲ್ಲ. ಕಳೆದ ವರ್ಷದ ಮೊದಲ ಅಲೆಯನ್ನು ಜಿಲ್ಲೆಯಲ್ಲಿ ಸಮರ್ಥವಾಗಿ ಎದುರಿಸಲಾಗಿತ್ತು.

ಆದರೆ ಈ ಬಾರಿಯ 2 ನೇ ಅಲೆಯನ್ನು ಸಮರ್ಥವಾಗಿ ಎದುರಿಸುವಲ್ಲಿ ದಕ್ಷಿಣ ಕನ್ನಡ ಸಂಪೂರ್ಣ ಅಸಮರ್ಥವಾಗಿತ್ತು.

ದಿನವೂ ಸೋಂಕಿತರ ಸಂಖ್ಯೆ ಹೆಚ್ಚಾಗುವುದರೊಂದಿಗೆ ಸಾವಿನ ಸಂಖ್ಯೆಯೂ ತೀವ್ರ ಏರುಗತಿಯಲ್ಲಿ ಹೋಗುತ್ತಿರುವುದು ಜಿಲ್ಲಾಡಳಿತಕ್ಕೂ ತಲೆ ನೋವು ತಂದಿತ್ತು.

ಗ್ರಾಮೀಣ ಭಾಗದಲ್ಲಂತೂ ಸೋಂಕು ಮಿತಿ ಮೀರಿ ಅಪಾಕಾರಿ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಎಲ್ಲದಕ್ಕೂ ಜನರ ಪಾಲು ದೊಡ್ಡದಾಗಿದ್ದರು.

ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯ ಅಸಮರ್ಪಕ ನಿಲುವುಗಳು, ಪಾಲಿಕೆಯ ಅಸಹಕಾರ, ಇಲಾಖೆಗಳ ಮಧ್ಯೆ ಇಲ್ಲದ ಹೊಂದಾಣಿಕೆ ಮತ್ತು ಕಾಟಾಚಾರದ ಲಾಕ್ ಡೌನ್ ಗಳೇ ಪ್ರಮುಖ ಕಾರಣವೆಂದು ವಿಶ್ಲೇಷಿಸಲಾಗುತ್ತಿದೆ.

ಹಲವು ಸಾವು ನೋವುಗಳನ್ನು ಕಂಡ ಬಳಿಕ ಎಚ್ಚೆತ್ತ ಜಿಲ್ಲಾ ಉಸ್ತುವಾರಿ ಸಚಿವರು ಇದೀಗ ತುರ್ತು ಸಭೆ ನಡೆಸಿ ಕೋವಿಡ್-19 ನಿಯಂತ್ರಣಕ್ಕೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದ್ದಾರೆ.

ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ತಗ್ಗಿಸಲು ಇದೀಗ ಉಡುಪಿ ಜಿಲ್ಲೆಯ ಮಾದರಿಯನ್ನು ಅಳವಡಿಸಿಕೊಳ್ಳಲು ಜಿಲ್ಲಾಡಳಿತ ಮುಂದಾಗಿದೆ.

ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೇ ಐದಾರು ದಿನ ಸಂಪೂರ್ಣ ಲಾಕ್‌ಡೌನ್‌ ಜಾರಿಗೊಳಿಸುವ ಮೂಲಕ ಉಡುಪಿಯಲ್ಲಿ ಕೋವಿಡ್-19 ನಿಯಂತ್ರಣ ಮಾಡಲಾಗಿದ್ದು, ಜೂನ್‌ 14 ರ ನಂತರ ಅನ್‌ಲಾಕ್‌ ಪ್ರಕ್ರಿಯೆ ಆರಂಭವಾಗಲಿದೆ.

ಅದೇ ಮಾದರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಂಕು ಹೆಚ್ಚಾಗಿರುವ 40 ಗ್ರಾಮಗಳು ಹಾಗೂ ಉಳ್ಳಾಲ, ಸೋಮೇಶ್ವರ, ಕೋಟೆಕಾರು, ಬೆಳ್ತಂಗಡಿಯ ನಗರ ಪ್ರದೇಶಗಳನ್ನು ಸಂಪೂರ್ಣ ಲಾಕ್‌ಡೌನ್ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ.

ಕೋವಿಡ್: ಕರಾವಳಿಯಲ್ಲಿ 6 ಸಾವು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ 618 ಮಂದಿಗೆ ಕೋವಿಡ್-19 ದೃಢವಾಗಿದ್ದು, 524 ಜನರು ಗುಣಮುಖರಾಗಿದ್ದಾರೆ. ಮೃತಪಟ್ಟ ನಾಲ್ವರಿಗೆ ಕೋವಿಡ್ ಇರುವುದು ಶನಿವಾರ ದೃಢವಾಗಿದೆ.

ಉಡುಪಿ: ಜಿಲ್ಲೆಯಲ್ಲಿ 258 ಮಂದಿಗೆ ಕೋವಿಡ್-19 ದೃಢಪಟ್ಟಿದ್ದು, 625 ಮಂದಿ ಗುಣಮುಖರಾಗಿದ್ದಾರೆ. ಮೃತಪಟ್ಟ ಇಬ್ಬರಿಗೆ ಕೋವಿಡ್ ಇರುವುದು ದೃಢವಾಗಿದೆ. 3,348 ಸಕ್ರಿಯ ಪ್ರಕರಣಗಳಿವೆ.

LEAVE A REPLY

Please enter your comment!
Please enter your name here

Hot Topics

ಲಾಠಿ ಹಿಡಿದ ಕೈಯಲ್ಲಿ ಪೊರಕೆ ಹಿಡಿದು ಕಲ್ಲಡ್ಕ ಬಸ್ಟ್ಯಾಂಡ್ ಕ್ಲೀನ್: ಮೆಲ್ಕಾರ್ ಟ್ರಾಫಿಕ್ ಪೊಲೀಸರ ಸಮಾಜಮುಖಿ ಕಾರ್ಯ

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ‌ ಧೂಳು ಕೆಸರಿನಿಂದ ಕೂಡಿದ್ದ ಬಸ್ ನಿಲ್ದಾಣವನ್ನು ಪ್ರತಿ ವಾರಕ್ಕೊಮ್ಮೆ ಪೊಲೀಸರ ತಂಡ ನೀರು ಹಾಕಿ ತೊಳೆಯುವ ಅದ್ಭುತ ಘಟನೆ ಬಂಟ್ವಾಳದ ಕಲ್ಲಡ್ಕದಲ್ಲಿ ನಡೆಯುತ್ತಿದೆ.ಕಲ್ಲಡ್ಕದ ಪೇಟೆಯಲ್ಲಿರುವ ಬಸ್ ನಿಲ್ದಾಣ...

ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ಎಂಟು ಲಕ್ಷ ಪಂಗನಾಮ…!

ಕಾಸರಗೋಡು: ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ಎಂಟು ಲಕ್ಷ ಪಂಗನಾಮ ಹಾಕಿದ ಘಟನೆಗೆ ಸಂಬಂಧಿಸಿದಂತೆ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ ಘಟನೆ ಕಾಸರಗೋಡಿನಲ್ಲಿ ನಡೆದಿದೆ.ಸುರತ್ಕಲ್ ನ ಬಿನೋಯ್ ಯಾನೆ ಸನತ್ ಶೆಟ್ಟಿ ಬಂಧಿತ ಆರೋಪಿ.ಈತ ಸಂಗಮ್...

ಕೆಎಂಎಫ್‌ನಲ್ಲಿ ಕೆಲಸ ಕೊಡಿಸುತ್ತೇನೆಂದು 3.50 ಕೋ.ರೂ ವಂಚಿಸಿದ ರಾಮ್‌ಪ್ರಸಾದ್‌ ಸೇರಿ ನಾಲ್ವರ ವಿರುದ್ಧ FIR

ಮಂಗಳೂರು: ಕೆಎಂಎಫ್‌ನಲ್ಲಿ ಕೆಲಸ ಕೊಡಿಸುತ್ತೇನೆಂದು 100ಕ್ಕೂ ಅಧಿಕ ಮಂದಿಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮ್‌ ಪ್ರಸಾದ್‌ ಸೇರಿ ಒಟ್ಟು ನಾಲ್ವರ ಮೇಲೆ ಮಂಗಳೂರು ನಗರ ಸೆನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ರಾಮ್‌ ಪ್ರಸಾದ್‌...