Connect with us

    BANTWAL

    ಹಸುಗೂಸಿನ ಮೇಲೆ ದಾದಿಯ ಕ್ರೌರ್ಯ…ಬಂಟ್ವಾಳ ಮೂಲದ ಐರಿನ್ ಅರೆಸ್ಟ್.!

    Published

    on

    ಬಂಟ್ವಾಳ : ಬಂಟ್ವಾಳ ಬಾಂಬಿಲಪದವು ಮೂಲದ ಯಮರೂಪಿ ಮಹಿಳೆಯ ಹೀನಾಯ ಕೃತ್ಯ ಬಯಲಾಗಿದ್ದು ಸಾಹುಕಾರನ ಸೂರನ್ನೇ ಸೂತಕದ ನಿವಾಸ ಮಾಡಲೆತ್ನಿಸಿದ ಸೂಲಗಿತ್ತಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

    ಮುಂಬೈ ಉಪನಗರ ನವಿಮುಂಬಯಿ ವಾಶಿ ಇಲ್ಲಿನ ಮಂಗಳೂರು ಮೂಲದ ಶ್ರೀಮಂತ ಮತ್ತು ಪ್ರತಿಷ್ಠಿತ ಸೆರಾವೋ ಕುಟುಂಬದ ನವದಂಪತಿ ನವಜಾತ ಶಿಶುವೊಂದರ ಆಗಮನದ ನಿರೀಕ್ಷೆಯಲ್ಲಿತ್ತು.

    ಅದೂ ಶ್ರೀಮಂತರ ಬಂಗಲೆಯಲ್ಲಿ ಹುಟ್ಟುವ ಮೊದಲಮಗು ಎಂದಾಗ ಆಗುವ ಖುಷಿ ಅಷ್ಟಿಷ್ಟಲ್ಲ.

    ಎಲ್ಲರಂತೆ ಇಲ್ಲೂ ಎಲ್ಲರಲ್ಲೂ ಸಂತಸವೇ ಸಂತಸ. ಅಂತೂ ಸಿಸೇರಿಯನ್ ಡೆಲಿವರಿಯೊಂದಿಗೆ ಹೆರಿಗೆ ಮುಗಿಸಿ ತನ್ನ ಬಂಗಲೋ ಮನೆಗೆ ಸ್ಟಾರ್ ಬೇಬಿ ಗಂಡುಮಗು ಜೊತೆ ಆಕೆ ಬಂದದ್ದೂ ಆಯಿತು.

    ಪೂರ್ವ ತಯಾರಿಯಂತೆ ಬಾಣಂತಿಯ ಆರೈಕೆಗಾಗಿ ಐರಿನ್ ವಾಸ್ ಅವರನ್ನು ಸೂಲಗತ್ತಿ (ದಾದಿ)ಯ ಸೇವೆಗೆ ನೇಮಕವೂ ಮಾಡಿದ್ದು ಆಕೆಯೂ ಅಲ್ಲಿದ್ದು ತನ್ನ ಬಾಹುಗಳಲ್ಲಿ ಮಗುವನ್ನು ಪಡೆದು ಶಿಶುಪಾಲನಾ ಕೆಲಸ ಆರಂಭಿಸಿದ್ದಾಯಿತು.

    ಒಂದುವಾರ ಎಲ್ಲವೂ ಸಂತೋಷಮಯ, ಸುಗಮವಾಗಿ ನಡೆಯಿತು. ವಾರದ ಬಳಿಕ ಮಗು ಏಕಾಏಕಿ ಬಿಕ್ಕಿಬಿಕ್ಕಿ ಅಳುವುದೇ ಅಳುವುದು ಎಂದಾಗ ಮನೆಒಡತಿ (ಅಜ್ಜಿ) ಮಗು ಆಳುತ್ತಿದೆಯೇ..? ಮಗುವಿಗೆ ಗ್ರೈಪ್ ವಾಟರ್ ಕುಡಿಸಿ…. ಅಂದು ಕುಡಿಸಿದರೂ ಮಗು ಇನ್ನಷ್ಟು ಜೋರಾಗಿ ಅಳುತ್ತಿತ್ತು.

    ದಿನೇದಿನೇ ಮಗುವಿನ ತಡೆಯಲಾರದ ರೋದನೆ ಕಂಡು ಪಾಲಕರು ಮಗುವನ್ನು ಕುಟುಂಬ ವೈದ್ಯರಲ್ಲಿ ಒಯ್ದರು.

    ಮಗುವನ್ನು ತಪಾಸನೆಗೈದ ವೈದ್ಯರು ಮಗುವಿನ ದೇಹ, ಕೈಕಾಲುಗಳಲ್ಲಿ ಹೆಪ್ಪುಗಟ್ಟಿದ ರಕ್ತದ ಕಲೆಗಳು ಮತ್ತು ಊತು ಕೊಂಡಿದ್ದ ಕೈಕಾಲುಗಳನ್ನು ಗಮನಿಸಿದರು.

    ಚಿಕಿತ್ಸೆ ನೀಡಿದ ವೈದ್ಯರು ಸೂಲಗಾತಿ ನಡೆಯಲ್ಲಿ ಮೇಲೆ ನಿಗಾ ಇರಿಸುವಂತೆ ಸೂಚಿಸಿದ್ದು ಮನೆಮಾಲೀಕರು ಅಂದೇ ಸಿಸಿಟಿವಿ ಕ್ಯಾಮೆರಾ ಅಳವಡಿಸಿದರು.

    ಅಷ್ಟರಲ್ಲೇ ಬಯಲಾಯಿತು ಯಮರೂಪಿ ಬಾಣಂತಿ ಆರೈಕೆ ಆಳಿನ ಕರ್ಮಕಾಂಡ.

    ಇದನ್ನು ಕಂಡ ಮನೆಮಂದಿ ಬೆಚ್ಚಿಬಿದ್ದಿದ್ದರು. ಮಹಾರಾಣಿಯಂತೆ ಸೋಫಾದಲ್ಲಿ ಕುಳಿತು ಮಗುವನ್ನು ಮಲಗಿಸುವ ವೇಳೆಗೆ ಮಗು ಮೌನವಾಗಿ ನಿದ್ರಿಸದೇ ಇರುವುದಕ್ಕೆ ಆಟಿಕೆಯ ಮಗು (ಗೊಂಬೆ-ಡಾಲ್) ತರಹ ಮಗುವಿನ ಕೈ, ಕಾಲು, ಕತ್ತು, ತಲೆಯನ್ನು ಯದ್ವಾತದ್ವಾ ಬೆಂಡೆತ್ತಿ ಮಗುವನ್ನು ಉಂಡೆ ತರಹ ಮಾಡಿ ತೀವ್ರವಾಗಿ ಚಿತ್ರಹಿಂಸೆಯನ್ನಿತ್ತು ಮಗುವಿನ ಪ್ರಾಣವನ್ನೇ ಹಿಂಡುತ್ತಾ ತನ್ನ ಕೋಪವನ್ನೆಲ್ಲಾ ಮಗುವಿನಲ್ಲಿ ತೆಗೆಯುತ್ತಿರುವುದು ಗಮನಕ್ಕೆ ಬಂದಿತು.

    ಇನ್ನೂ ಕಣ್ಣು ಬಿಡದೆ ಲೋಕ ಕಾಣದ ಮುಗ್ಧ ಹಸುಗೂಸುವಿನ ಸೇವೆ ಮಾಡಬೇಕಿದ್ದ ಐರಿನ್ ಹಸುಳೆಯಲ್ಲಿ ರಾಕ್ಷಸಿ ರೌದ್ರಾವತಾರ ತೋರಿದ ಅಮಾನುಷ ಕೃತ್ಯಗಳೆಲ್ಲವನ್ನೂ ಮನೆಮಂದಿ ಸಿಸಿಟಿವಿ ಕ್ಯಾಮೆರಾ ಮೂಲಕ ಸೆರೆಹಿಡಿದು ಆಕೆಯನ್ನು ರೆಡ್‍ಹ್ಯಾಂಡ್ ಆಗಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

    ಈಕೆಯ ವರ್ತನೆಯಲ್ಲೇ ಸಂಶಯ ವ್ಯಕ್ತಪಡಿಸಿದ್ದ ಫ್ಯಾಮಿಲಿ ಡಾಕ್ಟರ್ ನುಡಿದದ್ದೇ ಸತ್ಯವಾಗಿತ್ತು . ಶಿಶುವಿನ ಸೇವೆಗೈದು ಉಂಡುತಿಂದು ಮಹಾರಾಣಿಯಂತೆ ಮೆರೆಯಬೇಕಾಗಿದ್ದ ಐರಿನ್ ಸದ್ಯ ಪೆಲಿಸರ ಅತಿಥಿ ಆಗಿದ್ದಾಳೆ. ಪ್ರಕರಣದ ಇಡೀ ತನಿಖೆ ನಡೆಸಿದ ವಾಶಿ ಪೊಲೀಸ್ ಠಾಣಾಧಿಕಾರಿ ಸಬ್ ಇನ್ಸ್‍ಪೆಕ್ಟರ್ ರೇಶ್ಮಾ ಬಿ.ಮೊಮಿನ್ ಪ್ರಕರಣವನ್ನು ದಾಖಲಿಸಿ ನ್ಯಾಯಲಯಕ್ಕೆ ಒಪ್ಪಿಸಿದ್ದರು.

    ಪೊಲೀಸ್ ಕಸ್ಟಡಿಯಲ್ಲಿದ್ದ ಐರಿನ್ ವಾಸ್ ಷರತ್ತುಬದ್ಧ ಜಾಮೀನು ಮೇಲೆ ಬಿಡುಗಡೆ ಆಗಿದ್ದಾಳೆ. ಸದ್ಯ ಐರಿನ್ ಮಲಾಡ್ ಅಲ್ಲಿನ ಸಂಬಂಧಿಕರ ಮನೆಯಲ್ಲಿದ್ದು ಷರತ್ತಿನಂತೆ ದಿನಾಲೂ ಠಾಣೆಗೆ ಬಂದು ಹಾಜರಾಗಬೇಕಾಗಿದೆ.

    ಸೆರಾವೋ ಕುಟುಂಬದಲ್ಲಿ ಏಳೆಂಟು ಶಿಶುಗಳ ಹಾರೈಕೆ ಮಾಡಿದ್ದವಳು ಮತ್ತೊಂದು ಕಡೆ ಜವಾಬ್ದಾರಿ ವಹಿಸಿದ್ದ ಕಾರಣ ಆಕೆ ಐರಿನ್‍ಳ ಪರಿಚಯ ಮಾಡಿಸಿದ್ದಳು ಎನ್ನಲಾಗಿದೆ.

    ಬಂಟ್ವಾಳ ಅಮ್ಟಾಡಿ ಗ್ರಾಮದ ಬಾಂಬಿಲ ಪದವು ಮೆಕ್ಸಿಮ್ ವಿನ್ಸೆಂಟ್ ಲಾಸ್ರದೋ ಇವರ ಪತ್ನಿ ಆಗಿರುವ ಐರಿನ್ ತಾನೊಬ್ಬ ನಿಪುಣ ಬಾಣಂತಿ ಎಕ್ಸ ಪರ್ಟ್ ಆಗಿದ್ದು ತಿಂಗಳಿಗೆ ಬರೋಬ್ಬರಿ ಐವತ್ತು ಸಾವಿರ ಸಂಬಳಕ್ಕೆ ಒಪ್ಪಿದ್ದಳು.

    ಮಿಕ್ಕಿದ್ದು ಬೇರೆ ಜೊತೆಗೆ ಇನ್ನಿತರ ಷರತ್ತುಗಳು ಅನ್ವಯ ಎಂದೆಲ್ಲಾ ಸೇವೆಗೆ ಬದ್ಧವಾಗಿ ಬಂದಿದ್ದಳು. ಈಕೆಗೆ ಬಂಗಲೆಯಲ್ಲೇ ಉಳಕೊಳ್ಳಲು ವ್ಯವಸ್ಥೆಯೂ ಮಾಡಲಾಗಿತ್ತು.

    ಈಗ ಪೊಲೀಸರ ಅತಿಥಿಯಾಗಿ ಮಾಡಿದ್ದನ್ನು ಉಣ್ಣು ಮಾರಾಯ ಎಂಬಂತೆ ಮಾಡಿದ ಕರ್ಮಕ್ಕೆ ಶಿಕ್ಷೆ ಅನುಭವಿಸ ಬೇಕಾಗಿದೆ.

    Click to comment

    Leave a Reply

    Your email address will not be published. Required fields are marked *

    BANTWAL

    ಬಂಟ್ವಾಳ: ಜ್ವರದಿಂದ ಬಳಲುತ್ತಿದ್ದ ಯುವಕ ಮೃ*ತ್ಯು

    Published

    on

    ಬಂಟ್ವಾಳ: ಜ್ವರದಿಂದ ಬಳಲುತ್ತಿದ್ದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಸಂಜೆ ಮೃ*ತಪಟ್ಟಿದ್ದಾರೆ.

    ನೇರಳಕಟ್ಟೆ ಸಮೀಪದ ಪಂತಡ್ಕ ನಿವಾಸಿ ಅಟೋ ರಿಕ್ಷಾ ಮೆಕೇನಿಕ್ ಸಿ.ಎಚ್. ಹನೀಫ್ ಅವರ ಪುತ್ರ ಬಾತಿಷಾ( 22) ಮೃ*ತಪಟ್ಟವರು.

    ಮಂಗಳೂರಿನ ಬಟ್ಟೆ ಅಂಗಡಿಯೊಂದರಲ್ಲಿ ಸೇಲ್ಸ್ ಮೇನ್ ಆಗಿ ಕೆಲಸ ಮಾಡುತ್ತಿದ್ದ ಈತನಿಗೆ ವಾರದ ಹಿಂದೆ ಜ್ವರ ಬಂದಿದ್ದು ಚಿಕಿತ್ಸೆ ಪಡೆಯುತ್ತಿದ್ದ, ಗುರುವಾರ ಬೆಳಿಗ್ಗೆ ಜ್ವರ ಉಲ್ಬಣಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಂಜೆ ವೇಳೆಗೆ ಮೃ*ತಪಟ್ಟಿದ್ದಾರೆ

    Continue Reading

    BANTWAL

    ಬಂಟ್ವಾಳ: ಭಾರೀ ಗಾಳಿ ಮಳೆಗೆ ತಾಲೂಕಿನ ಕೆಲ ಭಾಗಗಳಲ್ಲಿ ಹಾನಿ

    Published

    on

    ಬಂಟ್ವಾಳ: ರಾತ್ರಿ ಬೀಸಿದ ಗಾಳಿ ಮಳೆಗೆ ಬಂಟ್ವಾಳ ತಾಲೂಕಿನ ಕೆಲವು ಭಾಗದಲ್ಲಿ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಹಾನಿಯಾದ ಘಟನೆ ವರದಿಯಾಗಿದೆ.

    ಬಿಸಿ ರೋಡಿನ ಸರ್ಕಲ್ ಸಹಿತ ಅನೇಕ ಭಾಗದಲ್ಲಿ ವಿದ್ಯುತ್ ಕಂಬ, ಕಾಂಪೌಂಡ್, ಮರಗಳು ಉರುಳಿಬಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.

    ಮಂಗಳವಾರ ರಾತ್ರಿ ಸುಮಾರು 9.30ರ ವೇಳೆ ಭಾರಿ ಗಾಳಿ ಮಳೆಯಾಗಿದ್ದು, ಇದರಿಂದ ಬಿ.ಸಿ.ರೋಡ್ ಸರ್ಕಲ್ ಬಳಿ ಸಹಿತ ಹಲವೆಡೆ ಒಟ್ಟು 5 ವಿದ್ಯುತ್ ಕಂಬಗಳು ಉರುಳಿಬಿದ್ದು ಮೆಸ್ಕಾಂ ಇಲಾಖೆಗೆ ಲಕ್ಷಾಂತರ ರೂ ನಷ್ಟ ಸಂಭವಿಸಿದೆ. ಬಿ.ಸಿ.ರೋಡ್ ಸ್ಪರ್ಶ ಕಲಾ ಮಂದಿರ ಬಳಿ ಬೃಹತ್ ಮರವೊಂದು ಉರುಳಿಬಿದ್ದಿದ್ದು, ಅನಾಹುತವನ್ನೇ ಉಂಟುಮಾಡಿದೆ.

    ಇನ್ನು ಬಂಟ್ವಾಳ ತಾಲೂಕಿನ ಮಾಧ್ವ ಬಳಿ ಮನೆಯ ಕಾಂಪೌಂಡ್ ಕುಸಿದು ಬಿದ್ದಿದ್ದು, ಅಪಾರ ಹಾನಿಯಾಗಿದೆ.

    Continue Reading

    BANTWAL

    ವಿಟ್ಲ: ಯುವಕ ನೇಣು ಬಿಗಿದು ಆತ್ಮಹ*ತ್ಯೆ..!

    Published

    on

    ವಿಟ್ಲ: ವಿಟ್ಲ ಬುಡೋಳಿ ಮಡಲ ನಿವಾಸಿ ಸುಶಾಂತ್(25 ವ) ಮನೆಯಲ್ಲಿ ನೇಣು ಬಿಗಿದು ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಸುಶಾಂತ್ ರವರು ಇತ್ತೀಚೆಗೆ ಮಿನಿ ಬಸ್‌ ಖರೀದಿಸಿದ್ದು ಬಸ್ಸನ್ನು ತಾನೇ ಚಾಲನೆ ಮಾಡಿಕೊಂಡು ಕೆಲಸ ನಿರ್ವಹಿಸುತ್ತಿದ್ದರು. ಈತ ಸಂಘಟನೆಯ ಜೊತೆಗೆ ಸಾಮಾಜಿಕ ಸೇವಾಕಾರ್ಯಗಳನ್ನು ಮಾಡಿಕೊಂಡಿದ್ದರು. ಗ್ರಾಮದಲ್ಲಿ ಉತ್ತಮ ಯುವಕನಾಗಿ ಗುರುತಿಸಿಕೊಂಡಿದ್ದ ಈತನ ಸಾವಿಗೆ ಸ್ಪಷ್ಟ ಕಾರಣ ಇನ್ನೂ ತಿಳಿದು ಬಂದಿಲ್ಲ. ವಿಟ್ಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.

    ಸುರತ್ಕಲ್: ಖಾಸಗಿ ಬಸ್ ಢಿ*ಕ್ಕಿ; ದ್ವಿಚಕ್ರ ಸವಾರನಿಗೆ ಗಾ*ಯ

    Continue Reading

    LATEST NEWS

    Trending