Saturday, May 21, 2022

ನಮ್ಮನ್ನು ಬದುಕಲು ಬಿಡಿ: ಕೆನರಾ ಉದ್ಯಮಿಗಳ ಒಕ್ಕೂಟ ದಿಂದ ಒಕ್ಕೊರಲ ಆಗ್ರಹ

ಉಡುಪಿ: ಕರ್ನಾಟಕ ಸರಕಾರ ತೆಗೆದುಕೊಂಡಿರುವ ನೈಟ್ ಕರ್ಫ್ಯೂ ಮತ್ತು ವಾರಾಂತ್ಯ ಕರ್ಫ್ಯೂ ನಂತಹ ತಪ್ಪು ನಿರ್ಧಾರಗಳನ್ನು ವಿರೋಧಿಸಿ ಜ.20ರಂದು ಉಡುಪಿ ಜಿಲ್ಲಾ ವರ್ತಕರ ಹಿತರಕ್ಷಣಾ ವೇದಿಕೆಯ ಪ್ರಾಯೋಜಕತ್ವದಡಿ ಹೋಟೆಲ್ ಓಶನ್‌ಪರ್ಲ್ ನಲ್ಲಿ 30 ವಿವಿಧ ಸಂಘಟನೆಗಳ ಪದಾಧಿಕಾರಿಗಳ ಜತೆಯಲ್ಲಿ ಕೆನರಾ ಉದ್ಯಮಿಗಳ ಒಕ್ಕೂಟದ ಸಭೆ ನಡೆಯಿತು.

ಸಭೆಯಲ್ಲಿ ಕರ್ನಾಟಕ ಸರಕಾರ ತೆಗೆದುಕೊಂಡಿರುವ ನೈಟ್ ಕರ್ಫ್ಯೂ ಮತ್ತು ವಾರಾಂತ್ಯ ಕರ್ಫ್ಯೂನಂತಹ ತಪ್ಪು ನಿರ್ಧಾರಗಳನ್ನು ವಿರೋಧಿಸಿ,

ಅವಿರೋಧವಾಗಿ ಖಂಡಿಸಿದ ಸರ್ವ ಉದ್ಯಮ ಸಂಘಟನೆಗಳು, ಶನಿವಾರ ಮತ್ತು ಆದಿತ್ಯವಾರ ತಮ್ಮ ತಮ್ಮ ವ್ಯವಹಾರಗಳನ್ನು ತೆರೆಯುವ ಮೂಲಕ ಅವೈಜ್ಞಾನಿಕ ಕರ್ಫ್ಯೂವನ್ನೂ ವಿರೋಧಿಸಲು ತೀರ್ಮಾನಿಸಲಾಯಿತು.

ಸಾಮಾಜಿಕ, ಧಾರ್ಮಿಕ ರಾಜಕೀಯ ಕಾರ್ಯಕ್ರಮಗಳು ರಾಜಾರೋಷವಾಗಿ ನಡೆಯುತ್ತಿದ್ದರೂ ಅದನ್ನು ತಡಗಟ್ಟಲು ಹೋಗದೆ, ಕೇವಲ ರಿಟೇಲ್ ಅಂಗಡಿಗಳನ್ನ ಮುಚ್ಚುವ ನಿರ್ಧಾರ ಯಾವ ರೀತಿಯ ವೈಜ್ಞಾನಿಕ ನಿರ್ಧಾರ? ಇದನ್ನು ನಿರ್ಧರಿಸಿದ ತಜ್ಞರ ಹೆಸರನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.

ಅಷ್ಟೇ ಅಲ್ಲದೆ ಲಾಕ್‌ಡೌನ್‌ನಿಂದಾಗಿ ಆರ್ಥಿಕವಾಗಿ ಸೋತು ಆತ್ಮಹತ್ಯೆ ಮಾಡಿಕೊಂಡ ಉದ್ಯಮಿಗಳಿಗೆ ಯಾವ ಸರಕಾರ ಪರಿಹಾರ ನೀಡಿಲ್ಲ. ಇದರ ಬಗ್ಗೆ ಸರಕಾರದಲ್ಲಿ ಅಂಕಿ ಸಂಖ್ಯೆಗಳು ಇವೆಯೇ?

ವಿಶ್ವ ಆರೋಗ್ಯ ಸಂಸ್ಥೆಯ ಭಾರತೀಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ರಾಷ್ಟ್ರೀಯ ಎನ್‌ಡಿ ಟಿವಿಗೆ ನೀಡಿದ ಸ0ದರ್ಶನದಲ್ಲಿ ಒಮಿಕ್ರಾನ್ ವೈರಸ್ ಮಾರಣಾಂತಿಕವಲ್ಲ.

ಆಸ್ಪತ್ರೆಯ ಹೊರ ರೋಗಿಗಳ ವಿಭಾಗಗಳಿಂದ ಚಿಕಿತ್ಸೆ ಪಡೆದರೆ ಸಾಕು ಎಂದು ಹೇಳಿದ್ದಾರೆ.

ಅಗತ್ಯ ವಸ್ತುಗಳು ಅವರವರ ಅಗತ್ಯತೆಗಳ ಮೇಲೆ ಅವಲಂಬಿತವಾಗಿದೆ. ಮನೆಯ ನೀರಿನ ನಳ್ಳಿ ಸೋರಿದರೆ ಅದನ್ನು ಬದಲಾಯಿಸಲು ಹಾರ್ಡ್ವೇರ್ ಅಂಗಡಿ ಕೂಡ ಅಗತ್ಯ ವಸ್ತುವೇ ಆಗುತ್ತದೆ.

ಅದನ್ನು ಬಿಟ್ಟು ಬೀದಿಬದಿ ವ್ಯಾಪಾರಕ್ಕೆ ಅನುವು ಮಾಡುವ ಸರಕಾರದ ನಿರ್ಧಾರ ವು ಜಿ.ಎಸ್‌.ಟಿ ಸಂಗ್ರಹಿಸುವ ಉದ್ಯಮಗಳು ಕೂಡ ಅನಿವಾರ್ಯವಾಗಿ ಬೀದಿಬದಿ ವ್ಯಾಪಾರ ಮಾಡಲು ಪ್ರೇರೇಪಿಸುತ್ತವೆ

ಎಂದು ಕೆನರಾ ಉದ್ಯಮಗಳ ಒಕ್ಕೂಟದ ಅಧ್ಯಕ್ಷರಾದ ಸಂತೋಷ್ ಕುಮಾರ್ ಪ್ರಶ್ನಿಸಿದರು.

ಈ ಎಲ್ಲಾ ಕಾರಣಗಳಿಂದ ಸರಕಾರ ನಿಗದಿಪಡಿಸಿದ ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂಗಳನ್ನ ಕೂಡಲೇ ರದ್ದು ಪಡಿಸಲು ಈ ಮೂಲಕ ಸರ್ವ ಉದ್ಯಮ ಸಂಘಟನೆಗಳು ಕೆನರಾ ಉದ್ಯಮಿಗಳ ಒಕ್ಕೂಟದ ಮೂಲಕ ಹಕ್ಕೊತ್ತಾಯ ಮಂಡಿಸುತ್ತದೆ.

ನಾವು ಈ ಬಗ್ಗೆ ಸರ್ಕಾರಿ ಅಧಿಕಾರಿಗಳಿಗೆ , ಜನಪ್ರತಿನಿಧಿಗಳಿಗೆ ಸಾಕಷ್ಟು ಮನವಿ ನೀಡಿದ್ದೇವೆ. ಕನಿಷ್ಠ ನಮ್ಮ ಬಳಿ ಸೌಜನ್ಯಕ್ಕೂ ಉತ್ತರ ನೀಡಿಲ್ಲ.

ಅದಕ್ಕಾಗಿ ವ್ಯಾಪಾರಿಗಳು ಅಂಗಡಿ ಮುಂಗಟ್ಟು ತೆರೆದಿಟ್ಟು ಪ್ರತಿಭಟಿಸಲು ನಿರ್ಧರಿಸಿದ್ದೇವೆ ಎಂದು ಕೆನರಾ ವಾಣಿಜ್ಯ ಒಕ್ಕೂಟ ತಿಳಿಸಿದೆ.

LEAVE A REPLY

Please enter your comment!
Please enter your name here

Hot Topics

‘ಶಿವಲಿಂಗ’ ಪತ್ತೆ ಕುರಿತಂತೆ ಆಕ್ಷೇಪಾರ್ಹ ಪೋಸ್ಟ್: ದೆಹಲಿ ವಿವಿ ಪ್ರಾಧ್ಯಾಪಕನ ಬಂಧನ

ನವದೆಹಲಿ: ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ 'ಶಿವಲಿಂಗ' ಪತ್ತೆ ಕುರಿತಂತೆ ಹೇಳಿಕೆಗಳನ್ನು ಉಲ್ಲೇಖಿಸಿ ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದಕ್ಕಾಗಿ ದೆಹಲಿ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ರತನ್ ಲಾಲ್ ಅವರನ್ನು ನಿನ್ನೆ ರಾತ್ರಿ ದೆಹಲಿಯ ಉತ್ತರ...

ನಾರಾಯಣ ಗುರು ಹೆಸರಿನಲ್ಲಿ ಪದ್ಮರಾಜ್‌ ಟಿಕೆಟ್‌ ಲಾಬಿ: ಹರಿಕೃಷ್ಣ ಬಂಟ್ವಾಳ್‌ ವಾಗ್ದಾಳಿ

ಮಂಗಳೂರು: ಕುದ್ರೋಳಿ ಗೋಕರ್ಣ ಕ್ಷೇತ್ರದಲ್ಲೊ ಒಬ್ಬರು ಇದ್ದಾರೆ. ಅವರಿಗೆ ಕಾಂಗ್ರೆಸ್‌ನಿಂದ ಟಿಕೆಟ್‌ ಬೇಕು. ಬರ್ಬೇಕಾದ್ರೆ ಕಾಂಗ್ರೆಸ್‌ ಅಂಗಳದಲ್ಲಿ ಒಂದು ಜಾಗ ಬೇಕು ಅಲ್ವಾ. ಅದಕ್ಕಾಗಿ ಇದನ್ನು ಎಬ್ಬಿಸಿ ಜಾಗ ಕೊಡ್ತಾರಾ ಅಂತ ನೋಡ್ತಾರೆ...

ಕಾಂಗ್ರೆಸ್‌ನಲ್ಲಿ ಯೌವನ ನಿರ್ಧಾರವಾಗುವುದು 50 ರ ನಂತರವೇ: ಬಿಜೆಪಿ ಪ್ರಶ್ನೆ

ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಯೌವನ ನಿರ್ಧಾರವಾಗುವುದು 50 ರ ನಂತರವೇ? ಕಾಂಗ್ರೆಸ್‌ ಪಕ್ಷದಲ್ಲಿರುವ ಯುವ ನಾಯಕರು ಯಾರು? ಎಂದು ಕಾಂಗ್ರೆಸ್‌ ಅನ್ನು ಬಿಜೆಪಿ ಟ್ವೀಟ್‌ನಲ್ಲಿ ಕುಟುಕಿದೆ.ಈ ಬಗ್ಗೆ ಶನಿವಾರ ಸರಣಿ ಟ್ವೀಟ್ ಮಾಡಿರುವ...