Connect with us

    LATEST NEWS

    ದಾವಣಗೆರೆ ಹೆದ್ದಾರಿ ದರೋಡೆ, ಕೊಲೆ ಪ್ರಕರಣಕ್ಕೆ ತಿರುವು: ಚಾಲಕ ಸೇರಿ ನಾಲ್ವರು ಆರೋಪಿಗಳ ಬಂಧನ..!

    Published

    on

    ದಾವಣಗೆರೆ: ಇತ್ತೀಚಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿ ಮೂವರು ಮೃತಪಟ್ಟಿದ್ದ ಪ್ರಕರಣವೀಗ ಹೊಸ ತಿರುವು ಪಡೆದುಕೊಂಡಿದ್ದು, ಚಾಲಕ ಸೇರಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ದರೋಡೆಕೊರರ ಮೇಲೆ ಲಾರಿ ಹತ್ತಿಸಿಕೊಂಡು ಹೋಗಿದ್ದ ಲಾರಿಯನ್ನು ಚೆನ್ನೈ ನಲ್ಲಿ ಪತ್ತೆ ಮಾಡಿದ್ದು, ಆರೋಪಿ ಉತ್ತರಪ್ರದೇಶದ ಚಾಲಕ ಭೋಲೆ ಯಾದವ್‌ನನ್ನು ಪೊಲೀಸರು ಬಂಧಿಸಿದ್ದಾರೆ.

    ದಾವಣಗೆರೆಯ ಶ್ರೀರಾಮನಗರದ ಪರಶುರಾಮ್, ಶಿವುಕುಮಾರ್, ಸಂದೇಶ್ ಎಂಬವರು ಕಾಟಿಹಳ್ಳಿಯಲ್ಲಿ ಜಾತ್ರೆ ಮುಗಿಸಿಕೊಂಡು ಬೈಕ್‌ನಲ್ಲಿ ಬರುವಾಗ ಆನಗೋಡು ಬಳಿ ಲಾರಿ ಢಿಕ್ಕಿ ಹೊಡೆದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪತ್ರಿಕೆಗಳಲ್ಲಿ ಸುದ್ದಿ ಪ್ರಕಟವಾಗಿತ್ತು.

    ಆದರೆ, ಪರಶುರಾಮ, ನಾಗರಾಜ, ಸಂದೇಶ, ಗಣೇಶ, ರಾಹುಲ್ ಮತ್ತು ಶಿವುಕುಮಾರ್ ಎಂಬವರು ಕಳೆದ ಫೆ.11ರಂದು ಬೆಳಗಿನ ಜಾವ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಆನಗೋಡು ಗ್ರಾಮದ ಸಮೀಪದ ರಾಪ್ಟ್ರೀಯ ಹೆದ್ದಾರಿಯಲ್ಲಿ ಲಾರಿ ನಿಲ್ಲಿಸಿ ಲಾರಿ ಚಾಲಕನನ್ನು ಹೆದರಿಸಿ ಹಲ್ಲೆ ಮಾಡಿದ್ದಾರೆ.

    ಬಳಿಕ ಚಾಲಕನಿಂದ 8 ಸಾವಿರ ನಗದು, ಮೊಬೈಲ್ ಹಾಗೂ ಇತರ ವಸ್ತು ದರೋಡೆ ಮಾಡಿ ಪರಾರಿ ಆಗುವ ಸಂದರ್ಭದಲ್ಲಿ ಲಾರಿ ಚಾಲಕ ದರೋಡೆ ಮಾಡಿ ಬೈಕ್‌ನಲ್ಲಿ ಹೋಗುತ್ತಿದ್ದ ಅವರ ಮೇಲೆ ಲಾರಿ ಹತ್ತಿಸಿ ಹೋಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಬೈಕ್‌ನಲ್ಲಿದ್ದ ಪರಶುರಾಮ, ಶಿವುಕುಮಾರ್ ಮತ್ತು ಸಂದೇಶ ಸ್ಥಳದಲ್ಲಿಯೇ ಮೃತಪಟ್ಟಿದ್ದರು.

    ಇನ್ನುಳಿದ ನಾಗರಾಜ, ಗಣೇಶ ಮತ್ತು ರಾಹುಲ್‌ಗೆ ಗಾಯಗಳಾಗಿದ್ದು, ಘಟನಾ ಸ್ಥಳದಿಂದ ತಪ್ಪಿಸಿಕೊಂಡು ಹೋಗಿದ್ದರು ಎಂದು ಪೊಲೀಸರು ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ.

    ಪ್ರಕರಣ ದಾಖಲಿಸಿಕೊಂಡ ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸರು ತಪ್ಪಿಸಿಕೊಂಡು ಹೋಗಿದ್ದ ಮೂವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ದರೋಡೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ದಾವಣಗೆರೆ ಜಿಲ್ಲಾ ಪೊಲೀಸ್ ಕಚೇರಿಯ ಡಿಸಿಐಬಿ ವಿಭಾಗದ ತಂಡ, ದರೋಡೆಕೊರರ ಮೇಲೆ ಲಾರಿ ಹತ್ತಿಸಿಕೊಂಡು ಹೋಗಿದ್ದ ಲಾರಿಯನ್ನು ಚೆನ್ನೈ ನಲ್ಲಿ ಪತ್ತೆ ಮಾಡಿದ್ದು, ಆರೋಪಿ ಉತ್ತರಪ್ರದೇಶದ ಭೋಲೆ ಯಾದವ್‌ನನ್ನು ಬಂಧಿಸಿದೆ.

    ಈಗ ಮೂವರು ದರೋಡೆಕೋರರು ಹಾಗೂ ಲಾರಿ ಚಾಲಕನನ್ನು ನ್ಯಾಯಾಲಯ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಹೆಚ್ಚುವರಿ ಎಸ್ಪಿ ರಾಮಗೊಂಡ ಬಿ.ಬಸರಗಿ, ಎಎಸ್ಪಿ ಕನ್ನೀಕಾ ಸಿಕ್ರೀವಾಲಾ ಮಾರ್ಗದರ್ಶನದಲ್ಲಿ ಪಿಐ ಲಿಂಗನಗೌಡ ನೆಗಳೂರು, ಎಚ್.ಪಿ.ನಾರಪ್ಪ, ಜಗದೀಶ, ದೇವೇಂದ್ರನಾಯ್ಕ, ಅಣ್ಣಯ್ಯ, ಮಂಜುನಾಥ್, ಮಹಮ್ಮದ್ ಯೂಸಫ್ ಅತ್ತಾರ್, ನಾಗರಾಜಯ್ಯ ಮತ್ತು ಡಿಸಿಐಬಿ ವಿಭಾಗದ ಸಿಬ್ಬಂದಿ ಮಜೀದ್, ಆಂಜನೇಯ, ರಾಘವೇಂದ್ರ, ಮಾರುತಿ, ಅಶೋಕ, ಸುರೇಶ, ಮಲ್ಲಿಕಾರ್ಜುನ, ರಮೇಶನಾಯ್ಕ, ನಟರಾಜ, ಚಾಲಕ ನೂರುಲ್ಲಾ ಶರೀಫ್ ಹಾಗೂ ಎಸ್ಪಿ ಕಚೇರಿಯ ರಾಘವೇಂದ್ರ, ಶಾಂತರಾಜು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

    ಎಸ್ಪಿ ಸಿ.ಬಿ.ರಿಷ್ಯಂತ್, ಹೆಚ್ಚುವರಿ ಎಸ್ಪಿ ರಾಮಗೊಂಡ ಬಿ.ಬಸರಗಿ ಅಭಿನಂದನೆ ಸಲ್ಲಿಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಆಶ್ರಮದ ಸ್ವಾಮಿಜಿಗೆ ಮೆಣಸಿನ ಪುಡಿಯಿಂದ ಅಭಿಷೇಕ; ಏನಿದು ಸುದ್ಧಿ !?

    Published

    on

    ಮಂಗಳೂರು/ಆಂಧ್ರಪ್ರದೇಶ: ಭಕ್ತರು ದೇವರಿಗೆ ಹಾಲಿನ ಅಭಿಷೇಕ, ಹೂವಿನ ಅಭಿಷೇಕ ನೀರು, ಚಂದನ ಅಥವಾ ಗಂಧದ ಅಭಿಷೇಕ ಮುಂತಾದವುಗಳನ್ನು ಅರ್ಪಿಸುವುದು ಸಾಮಾನ್ಯವಾಗಿದೆ. ಆದರೆ, ಆಂಧ್ರಪ್ರದೇಶದ ಏಲೂರು ಜಿಲ್ಲೆಯ ಶ್ರೀ ಶಿವದತ್ತ ಸ್ವಾಮಿಜಿ ಭಕ್ತರಿಂದ ಮೆಣಸಿನ ಪುಡಿ ಅಭಿಷೇಕ ಮಾಡಿಸಿಕೊಂಡಿರುವ ಸುದ್ಧಿ ಫುಲ್ ವೈರಲ್ ಆಗುತ್ತಿದೆ.


    ಆಂಧ್ರಪ್ರದೇಶದ ಪ್ರತ್ಯಂಗಿರ ಆಶ್ರಮದಲ್ಲಿ ಈ ವಿಶಿಷ್ಟವಾದ ಅಭಿಷೇಕ ನಡೆದಿದ್ದು, ಸುಮಾರು 100 ಕೆಜಿ ಮೆನಸಿನಕಾಯಿಯನ್ನು ಬಳಸಲಾಗಿದ್ದು, ಇದನ್ನು ಮಾಡುವುದರಿಂದ ಭಕ್ತರ ಕಷ್ಟಗಳು ದೂವಾಗುತ್ತದೆ ಎಂಬ ನಂಬಿಕೆ ಇದೆ. ಪ್ರತ್ಯಂಗಿರಿ ದೇವಿಗೆ ಮೆಣಸಿನಕಾಯಿ ಎಂದರೆ ತುಂಬಾ ಇಷ್ಟ. ದೇವಿಯ ಕೊರಳಿಗೆ ಕೆಂಪು ಮೆಣಸಿನಕಾಯಿ ಮಾಲೆ ಹಾಕಿ ಪೂಜಿಸಲಾಗಿದ್ದು, ಇದನ್ನು ‘ಕರಂ ಅಭಿಷೇಕ’ ಎಂದು ಕೂಡ ಕರೆಯಲಾಗುತ್ತದೆ.

    ಇದನ್ನು ಓದಿ:ಯೂಟ್ಯೂಬ್​ನಲ್ಲಿ ಸಿನಿಮಾ ವಿಮರ್ಶೆ ಮಾಡುವುದರ ಮೇಲೆ ಬಿತ್ತು ನಿಷೇಧ

    ಕಳೆದ 14 ವರ್ಷಗಳಿಂದ ಪ್ರತ್ಯಂಗಿರ ಆಶ್ರಮದಲ್ಲಿ ಮೆಣಸಿನಕಾಯಿಯಿಂದ ಅಭಿಷೇಕ ನಡೆಸಿಕೊಂಡು ಬರುತ್ತಿದೆ. ಪ್ರತೀ ವರ್ಷ ಈ ಅಭಿಷೇಕದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಮೆಣಸಿನ ಪುಡಿ ಸಮರ್ಪಿಸುತ್ತಾರೆ. ಈ ಕ್ರಮ ಭಕ್ತರ ನಂಬಿಕೆಯೋ, ದೇವರ ಪವಾಡವೋ ಗೋತ್ತಿಲ್ಲ, ಆದರೆ ಇಂತಹ ಆಚರಣೆ ಆಧುನಿಕ ಯುಗದಲ್ಲಿ ಎಷ್ಟು ಸರಿ ಎಂಬುವುದು ಚಿಂತಾದಾಯಕ ವಿಷಯವಾಗಿದೆ.

    Continue Reading

    LATEST NEWS

    ಪ್ರೊಡಕ್ಷನ್ ನಂಬರ್ 1 ತುಳು ಸಿನಿಮಾದ ಭಾಗ 1ರ ಮುಹೂರ್ತ ಸಮಾರಂಭ

    Published

    on

    ಮಂಗಳೂರು: ಪ್ರೊಡಕ್ಷನ್ ನಂಬರ್ 1 ತುಳು ಸಿನಿಮಾದ ಭಾಗ 1ರ ಮುಹೂರ್ತ ಸಮಾರಂಭ ಗುರುವಾರ ಬೆಳಗ್ಗೆ ಪಡುಬಿದ್ರಿ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಜರುಗಿತು. ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

    ಬಳಿಕ ಮಾತಾಡಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರು, “ತುಳು ಭಾಷೆ, ಸಂಸ್ಕೃತಿ, ಆಹಾರ ಪದ್ಧತಿಯನ್ನು ವಿಶ್ವದಗಲ ಮೆಚ್ಚಿಕೊಂಡ ಅಸಂಖ್ಯ ಜನರಿದ್ದಾರೆ. ತುಳು ಭಾಷೆಯ ಬೆಳವಣಿಗೆಗೆ ತುಳು ನಾಟಕ, ಸಿನಿಮಾ ಮತ್ತು ತುಳು ಕಲಾವಿದರು ಬಹಳಷ್ಟು ಪ್ರಯತ್ನ ಪಡುತ್ತಿದ್ದಾರೆ. ಪಡುಬಿದ್ರಿಯ ಮಹಾಗಣಪತಿ ಸನ್ನಿಧಿಯಲ್ಲಿ ಪ್ರಾರ್ಥನೆ ಮಾಡಿದರೆ ನಮ್ಮ ಇಷ್ಟಾರ್ಥ ಸಿದ್ಧಿಯಾಗುತ್ತದೆ. ಈ ಸಿನಿಮಾ ಯಶಸ್ಸು ಕಾಣಲಿ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅತೀವ ಸಂತಸವಾಗುತ್ತಿದೆ“ ಎಂದು ಶುಭ ಹಾರೈಸಿದರು.

    ಹಿರಿಯ ರಂಗಕರ್ಮಿ ವಿಜಯ ಕುಮಾರ್ ಕೊಡಿಯಾಲ್ ಬೈಲ್ ಮಾತಾಡಿ, ”ತುಳು ಚಿತ್ರರಂಗಕ್ಕೆ ಈಗ ಪರ್ವಕಾಲ. ಮಂಗಳೂರಿನಲ್ಲಿ 9 ಸಿನಿಮಾಗಳಿಗೆ ಚಿತ್ರೀಕರಣ ನಡೆಯುತ್ತಿವೆ. ಒಳ್ಳೊಳ್ಳೆ ಸಿನಿಮಾಗಳನ್ನು ಜನರು ಖಂಡಿತ ಸ್ವೀಕರಿಸುತ್ತಾರೆ. ಸಿನಿಮಾ ತಂಡದ ಪ್ರಯತ್ನಕ್ಕೆ ತುಳುವರು ಬೆಂಬಲ ನೀಡಬೇಕು, ಚಿತ್ರತಂಡಕ್ಕೆ ಶುಭವಾಗಲಿ“ ಎಂದರು.

    ಕುಸೆಲ್ದರಸೆ ನವೀನ್ ಡಿ. ಪಡೀಲ್ ಮಾತನಾಡಿ, ”ಸಿನಿಮಾ ಯಶಸ್ಸು ಕಾಣಲಿ. ತುಳುನಾಡಿನಲ್ಲಿ ಸಿನಿಮಾ ಒಳ್ಳೆಯ ಹೆಸರು ಮಾಡಲಿ“ ಎಂದರು.

    ನಾಯಕ ನಟ ಶೋಧನ್ ಶೆಟ್ಟಿ ಮಾತನಾಡಿ, ”2019ರಲ್ಲಿಯೇ ಸಿನಿಮಾ ಮಾಡಲು ತಯಾರಿ ಮಾಡಿದ್ದೆ. ಆದರೆ ಕಾರಣಾಂತರದಿಂದ ವಿಳಂಬವಾಯಿತು. ಈಗ ಕಾಲ ಕೂಡಿಬಂದಿದೆ. ನಿಮ್ಮೆಲ್ಲರ ಸಹಕಾರದಿಂದ ಸಿನಿಮಾ ಚೆನ್ನಾಗಿ ಮೂಡಿಬರಲಿದೆ. ಭಾಗ 1ರ ಚಿತ್ರೀಕರಣ ಮುಗಿದ ಬಳಿಕ ಟೈಟಲ್ ಲಾಂಚ್ ಮಾಡಲಿದ್ದೇವೆ“ ಎಂದರು.

    ದೇವಸ್ಥಾನದ ಮೊಕ್ತೇಸರ ಭವಾನಿ ಶಂಕರ್ ಹೆಗ್ಡೆ, ಉಮೇಶ್ ಶೆಟ್ಟಿ, ನಟ ಶೋಧನ್ ಶೆಟ್ಟಿ, ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ, ಡಾ ಪ್ರತೀಕ್ಷಾ, ಡಾ ನಿಖಿಲ್ ಶೆಟ್ಟಿ, ಸಂಜಯ್ ಶೆಟ್ಟಿ ಗೋಣಿಬೀಡು, ಡಾ ವೈಎನ್ ಶೆಟ್ಟಿ, ಮಿಥುನ್, ನವೀನ್ ಚಂದ್ರ ಶೆಟ್ಟಿ, ಜಗನ್ನಾಥ ಶೆಟ್ಟಿ ಕುಳಾಯಿ, ವಿಠಲ್ ಶೆಟ್ಟಿ ಕನಕಪಾಡಿ, ಶಾಂತಾರಾಮ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

    ಉದ್ಯಮಿ ಪಲ್ಲವಿ ಸಂತೋಷ್ ಶೆಟ್ಟಿ ಕೆಮರಾ ಚಾಲನೆ ಮಾಡಿದರು. ಶಾಹಿಲ್ ರೈ ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ ಕುರಿತು:

    ಶುಭಾ ಶೆಟ್ಟಿ ಪ್ರೊಡಕ್ಷನ್ಸ್ ಲಾಂಛನದಡಿಯಲ್ಲಿ ಧನರಾಜ್ ಶೆಟ್ಟಿ, ಉಮೇಶ್ ಶೆಟ್ಟಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಶರತ್ ಪೂಜಾರಿ ಬಗ್ಗತೋಟ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದು ಸಂದೀಪ್ ಉಡುಪಿ ಕೆಮರಾ ಕಣ್ಣಲ್ಲಿ ಸಿನಿಮಾ ಮೂಡಿಬರಲಿದೆ. ರವಿರಾಜ್ ಗಾಣಿಗ ಎಡಿಟರ್, ಪ್ರಸಾದ್ ಕೆ.ಶೆಟ್ಟಿ ಸಂಗೀತ ಸಂಯೋಜನೆ ಸಿನಿಮಾಕ್ಕಿರಲಿದೆ.

    ಕಲಾವಿದರಾಗಿ ನವೀನ್ ಡಿ. ಪಡೀಲ್, ಅರವಿಂದ್ ಬೋಳಾರ್, ಪ್ರಸನ್ನ ಶೆಟ್ಟಿ ಬೈಲೂರು, ರಮೇಶ್ ಶೆಟ್ಟಿ, ಸೂರಜ್ ಸನಿಲ್, ನಿತೇಶ್ ಶೆಟ್ಟಿ, ಕೀರ್ತನಾ ಸಾಲಿಯಾನ್, ಶೋಭಾ ಪ್ರಿಯಾ ನಾಯರ್, ಸಂದೀಪ್ ಪೂಜಾರಿ ಬಣ್ಣ ಹಚ್ಚಲಿದ್ದಾರೆ. ಕಟೀಲು, ಪಡುಬಿದ್ರಿ ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆ.

    Continue Reading

    LATEST NEWS

    ಪ್ರತಿವರ್ಷ ಅಯ್ಯಪ್ಪ ಮಾಲೆ ಹಾಕುವ ಸ್ವಾಮಿಗಳ ಹೆಸರು ಯಾವುದು ಗೊತ್ತಾ ??

    Published

    on

    ‘ಶಬರಿಮಲೆ’ ಎಂದಾಕ್ಷಣ ನಮಗೆ ಮೊದಲು ನೆನಪಿಗೆ ಬರೋದು ಅಯ್ಯಪ್ಪ ಸ್ವಾಮಿ ಮತ್ತು ಭಕ್ತಿಯಿಂದ ಮಾಲೆ ಧರಿಸುವ ಭಕ್ತರು. ಕಾರ್ತಿಕ ಮಾಸ ಆರಂಭವಾಗುತ್ತಿದ್ದಂತೆ ಲಕ್ಷಾಂತರ ಜನ ಅಯ್ಯಪ್ಪ ಮಾಲೆಯನ್ನು ಧರಿಸುತ್ತಾರೆ. ಕೆಲವರು ಮಂಡಲ ದೀಕ್ಷಾ, ಇನ್ನು ಕೆಲವರು ಅರ್ಥ ಮಂಡಲ ದೀಕ್ಷಾ ತೆಗೆದುಕೊಳ್ಳುತ್ತಾರೆ. 41 ದಿನಗಳ ದೀಕ್ಷೆ ಪಡೆದು ಶಬರಿಮಲೆಗೆ ತೆರಳಿ ಅಯ್ಯಪ್ಪನ ದರ್ಶನ ಪಡೆದು ಬಂದ ಬಳಿಕ ಪೂಜೆಯೊಂದಿಗೆ ಅಯ್ಯಪ್ಪ ಮಾಲೆಯನ್ನು ತೆಗೆಯುತ್ತಾರೆ.

    ಪ್ರತಿವರ್ಷ ಭಕ್ತಿಯಿಂದ ಮಾಲೆ ಧರಿಸಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆಯುವ ಸ್ವಾಮಿಗಳಿಗೆ ಒಂದೊಂದು ಹೆಸರಿನಿಂದ ಕರೆಯಲಾಗುತ್ತದೆ ಎಂಬ ವಿಷಯ ಎಷ್ಟೋ ಜನರಿಗೆ ಗೊತ್ತೇ ಇರುವುದಿಲ್ಲ. ಸಾಮಾನ್ಯವಾಗಿ ಐದಕ್ಕಿಂತ ಹೆಚ್ಚು ಬಾರಿ ಮಾಲೆ ಧರಿಸಿ ಅಯ್ಯಪ್ಪನ ದರ್ಶನ ಪಡೆದವರನ್ನು ‘ಗುರು ಸ್ವಾಮಿ’ ಎನ್ನಲಾಗುತ್ತದೆ.
    ಇದಕ್ಕೆ ಹೊರತಾಗಿ ಪ್ರತಿವರ್ಷ ಮಾಲೆ ಹಾಕಿದವರನ್ನು ಒಂದೊಂದು ಹೆಸರುಗಳಿಂದ ಕರೆಯಲಾಗುತ್ತದೆ. ಆ ಹೆಸರುಗಳು ಯಾವುದ್ಯಾವುದು ಎಂಬ ವಿವರ ಇಲ್ಲಿವೆ.

     

    18 ವರ್ಷಗಳಿಂದ ಮಾಲೆ ಹಾಕುವ ಸ್ವಾಮಿಗಳ ಹೆಸರು :

    ಮೊದಲನೇ ಬಾರಿಗೆ ದೀಕ್ಷೆ ಪಡೆದುಕೊಂಡ ಸ್ವಾಮಿಗಳನ್ನು ಕನ್ನೆಸ್ವಾಮಿ ಎಂದು ಕರೆಯಲಾಗುತ್ತದೆ. ಎರಡನೇ ಬಾರಿಗೆ ಮಾಲೆ ಹಾಕಿದ ಸ್ವಾಮಿಗಳನ್ನು ಕತ್ತಿಸ್ವಾಮಿ, ಮೂರನೇ ಬಾರಿಗೆ ಮಾಲೆ ಹಾಕಿದವರನ್ನು ಗಂಟ ಸ್ವಾಮಿ, ನಾಲ್ಕನೇ ಬಾರಿಗೆ ಮಾಲೆ ಹಾಕಿದರೇ ಅವರನ್ನು ಗದಸ್ವಾಮಿ, ಆ ಬಳಿಕ ಮಾಲೆ ಹಾಕುವ ಸ್ವಾಮಿಗಳನ್ನು ಬಿಲ್ಲು ಸ್ವಾಮಿ, ಆರನೇ ಬಾರಿಗೆ ಮಾಲೆ ಹಾಕಿದ ಸ್ವಾಮಿಗಳನ್ನು ಜ್ಯೋತಿ ಸ್ವಾಮಿ, ಏಳನೇ ಬಾರಿಗೆ ಸೂರ್ಯ ಸ್ವಾಮಿ, ಎಂಟನೇ ಬಾರಿಗೆ ಚಂದ್ರ ಸ್ವಾಮಿ, ಒಂಬತ್ತನೇ ಬಾರಿಗೆ ಮಾಲೆ ಹಾಕಿದವರನ್ನು ವೇಲು ಸ್ವಾಮಿ, ಹತ್ತನೇ ಬಾರಿಗೆ ಮಾಲೆ ಹಾಕಿದರೆ ಅವರನ್ನು ವಿಷ್ಣು ಚಕ್ರ ಸ್ವಾಮಿ ಎಂದು ಕರೆಯಲಾಗುತ್ತದೆ. ಹನ್ನೊಂದನೇ ಬಾರಿಗೆ ಮಾಲೆ ಹಾಕಿದರೆ ಶಂಖಾದರ ಸ್ವಾಮಿ, ಹನ್ನೆರಡನೇ ಬಾರಿಗೆ ಮಾಲೆ ಹಾಕಿದವರನ್ನು ನಾಗಾಭರಣ ಸ್ವಾಮಿ, ಬಳಿಕ ಹದಿಮೂರನೇ ಬಾರಿಗೆ ಮಾಲೆ ಹಾಕುವ ಸ್ವಾಮಿಗಳನ್ನು ಶ್ರೀಹರಿ ಸ್ವಾಮಿ, ಹದಿನಾಲ್ಕನೇ ಬಾರಿಗೆ ಮಾಲೆ ಹಾಕುವ ಸ್ವಾಮಿಗಳನ್ನು ಪದ್ಮಸ್ವಾಮಿ, ಹದಿನೈದನೇ ಬಾರಿಗೆ ಮಾಲೆ ಹಾಕುವ ಸ್ವಾಮಿಗಳನ್ನು ತ್ರಿಶೂಲಸ್ವಾಮಿ ಎಂದು ಹೇಳಲಾಗುತ್ತದೆ.ಹದಿನಾರನೇ ಬಾರಿಗೆ ಮಾಲೆ ಹಾಕಿದರೆ ಅಂತಹ ಸ್ವಾಮಿಯನ್ನು ಶಬರಿಗಿರಿಸ್ವಾಮಿ, ಹದಿನೇಳನೇ ಬಾರಿಗೆ ಮಾಲೆ ಹಾಕುವ ಸ್ವಾಮಿಯನ್ನು ಓಂಕಾರ ಸ್ವಾಮಿ, ಹದಿನೆಂಟನೇ ಬಾರಿಗೆ ಮಾಲೆ ಹಾಕಿದರೆ ಅವರನ್ನು ನಾರಿಕೇಳಸ್ವಾಮಿ ಎಂದು ಕರೆಯಲಾಗುತ್ತದೆ.

    Continue Reading

    LATEST NEWS

    Trending