Connect with us

DAKSHINA KANNADA

ಅಡಿಕೆಯ ಕನಿಷ್ಟ ಆಮದು ದರ ಪರಿಷ್ಕರಣೆ ,ಮುಕ್ತ ಆಮದು ನೀತಿಯ ಬೇಡಿಕೆ ಈಡೇರಿಸಿದ ಪ್ರಧಾನಿಯನ್ನು ಅಭಿನಂದಿಸಿದ ಕಟೀಲ್..!

Published

on

ಮಂಗಳೂರು :ಅಡಿಕೆಯ ಕನಿಷ್ಟ ಆಮದು ದರ ಪರಿಷ್ಕರಣೆ ,ಮುಕ್ತ ಆಮದು ನೀತಿಯ ಬೇಡಿಕೆ ಈಡೇರಿಸಿದ ಪ್ರಧಾನಿಯನ್ನು ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅಭಿನಂದಿಸಿದ್ದಾರೆ.

ಈ ಬಗ್ಗೆ ಹೇಳಿಕೆ ಬಿಡುಗಡೆಗೊಳಿಸಿದ ಕಟೀಲ್ ಕನಿಷ್ಟ ಆಮದು ದರ ಪರಿಷ್ಕರಣೆ ಮತ್ತು ಮುಕ್ತ ಆಮದು ನೀತಿಯನ್ನು ಅಮೂಲಾಗ್ರವಾಗಿ ಬದಲಾಯಿಸುವ ಮೂಲಕ ಅಡಿಕೆ ಬೆಳೆಗಾರರ ಬಹುಕಾಲದ ಬೇಡಿಕೆಯನ್ನು ಕೇಂದ್ರ ಸರ್ಕಾರ ಈಡೇರಿಸಿದೆ.

ಪ್ರಧಾನಿ ನರೇಂದ್ರ ಮೋದಿಯವರಿಗೆ ಹಾಗೂ ಗೃಹಸಚಿವರಾದ ಅಮಿತ್ ಶಾ ಅವರಿಗೆ ಹಾಗೂ ಕೇಂದ್ರ ಸರಕಾರಕ್ಕೆ ಅಡಿಕೆ ಕೃಷಿ ಬಾಂಧವರ ಪರವಾಗಿ ಸಂಸದರೂ, ಭಾಜಪಾ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರು ಕೃತಜ್ಞತೆ ಅರ್ಪಿಸಿದ್ದಾರೆ.

ಇತ್ತೀಚೆಗೆ ಅಮಿತ್ ಶಾ ಅವರು ಪುತ್ತೂರಿನಲ್ಲಿ ನಡೆದ ಕ್ಯಾಂಪ್ಕೋ ಸುವರ್ಣ ಸಂಭ್ರಮದಲ್ಲಿ ಭಾಗವಹಿಸಿ ಈ ಭಾಗದ ಅಡಿಕೆ ಬೆಳೆಗಾರರ ಶ್ರಮವನ್ನು ಶ್ಲಾಘಿಸಿದ್ದರು.

ಇದೇ ಸಂದರ್ಭದಲ್ಲಿ ನಳಿನ್ ಕುಮಾರ್ ಕಟೀಲ್ ಅವರು ಅಡಿಕೆ ಬೆಳೆಗಾರರ ಮುಂದಿರುವ ಸವಾಲುಗಳ ಕುರಿತು ಅಮಿತ್ ಶಾ ಅವರಿಗೆ ವಿಶೇಷವಾಗಿ ಮನವರಿಕೆ ಮಾಡಿದ್ದರು.

DAKSHINA KANNADA

ಮುಲ್ಕಿ: ಚಿಪ್ಪು ಹೆಕ್ಕಲು ಹೋಗಿ ನೀರಲ್ಲಿ ಕಣ್ಮರೆಯಾದ ಯುವಕ.! ಪತ್ತೆಗೆ ಶೋಧ

Published

on

ಮಂಗಳೂರು: ಮುಲ್ಕಿ  ಕೊಳಚಿ ಕಂಬಳ ಬೀಚ್ ಬಳಿಯಿಂದ ಸಸಿಹಿತ್ಲು ಮುಂಡಾ ಬೀಚ್ ಬಳಿಯ ಸಮುದ್ರದ ಅಳಿವೆ ಬಾಗಿಲಿನಲ್ಲಿ  ಬಜಪೆಯ ಅದ್ಯಪಾಡಿಯಿಂದ ಬಂದ ಯುವಕರ ತಂಡ ಚಿಪ್ಪು ಹೆಕ್ಕಲು ಹೋಗಿದ್ದು ಓರ್ವ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾನೆ. ನಾಪತ್ತೆಯಾದ ಯುವಕನನ್ನು ಬಜಪೆಯ ಅದ್ಯಪಾಡಿಯ ಹಳೆ ವಿಮಾನ ನಿಲ್ದಾಣ ಬಳಿಯ ನಿವಾಸಿ ಅಭಿಲಾಶ್ (24) ಎಂದು ಗುರುತಿಸಲಾಗಿದೆ.

abhilash

ಬಜಪೆ ಸಮೀಪದ ಆದ್ಯಪಾಡಿಯ ಸುಮಾರು ಹತ್ತು ಮಂದಿಯ ಯುವಕರ ತಂಡ ಚಿಪ್ಪು ಮತ್ತು ಏಡಿ ಹಿಡಿಯಲು ಮುಲ್ಕಿಯ ಕೊಳಚಿ ಕಂಬಳ ಬೀಚ್ ಬಳಿಗೆ ಬಂದಿದ್ದಾರೆ. ಶಾಂಭವಿ ನದಿಯಲ್ಲಿ ನೀರಿನ ಇಳಿತ ವಿದ್ದ ಕಾರಣ ಸುಮಾರು ಎರಡು ಕಿಲೋಮೀಟರ್ ನಡೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಈ ಸಂದರ್ಭ ಸಸಿಹಿತ್ಲು ಮುಂಡಾ ಬೀಚ್ ಅಳಿವೆ ಬಾಗಿಲು ಬಳಿ ನೀರಿನ ಆಳ ಗೊತ್ತಾಗದೆ ಈಜು ಬಾರದ ಧನುಷ್ ಮತ್ತು ಜೀವನ್ ಎಂಬವರು ನೀರಿನಲ್ಲಿ ಮುಳುಗಿದ್ದಾರೆ.   ಈಜು ಅರಿತಿದ್ದ  ಅಭಿಲಾಶ್ ಅವರನ್ನು ರಕ್ಷಿಸಲು ಮುಂದಾಗಿದ್ದಾನೆ. ಅವರನ್ನು ರಕ್ಷಿಸುವ ಯತ್ನದಲ್ಲಿ ಉಳಿದವರ ಕಣ್ಣೆದುರೇ ನೀರಿನ ರಭಸಕ್ಕೆ ತಾನು ನೀರಿನಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ.

ಅಪಘಾತದಲ್ಲಿ ಕನ್ನಡದ ನಟಿಯ ದುರಂತ ಸಾ*ವು..!

ಈ ಸಂದರ್ಭ ಉಳಿದವರ ಬೊಬ್ಬೆ ಕೇಳಿ ಸ್ಥಳಕ್ಕೆ ಹೆಜಮಾಡಿ ಮೀನುಗಾರರ ತಂಡದ ಸದಾಶಿವ ಕೋಟ್ಯಾನ್  ಧಾವಿಸಿ ಧನುಷ್ ಮತ್ತು ಜೀವನ್ ರವರ ನ್ನು ರಕ್ಷಿಸಿದ್ದಾರೆ. ಆದರೆ ನೀರಿನಲ್ಲಿ ಮುಳುಗಿದ ಅಭಿಲಾಶ್ ಪತ್ತೆಯಾಗಿಲ್ಲ. ಅಭಿಲಾಶ್ ಅವಿವಾಹಿತನಾಗಿದ್ದು ಮಂಗಳೂರು ರೈಲ್ವೇ ಯಲ್ಲಿ ಗುತ್ತಿಗೆದಾರನಾಗಿ ಕಾರ್ಯನಿರ್ವಹಿಸುತ್ತಿದ್ದ. ಭಾನುವಾರ ರಜಾ ದಿನವಾದ ಕಾರಣ ಚಿಪ್ಪು ಹೆಕ್ಕಲು ಬಂದಿದ್ದ ಎಂದು ಮಿತ್ರರು ಹೇಳಿದ್ದಾರೆ. ಅಭಿಲಾಶ್ ಪತ್ತೆಗೆ ಎಸ್ ಡಿ ಆರ್ ಎಫ್ ತಂಡ,ಕರಾವಳಿ  ಕಾವಲು ಪಡೆಯ ಹೆಜ್ಮಾಡಿ, ಮುಲ್ಕಿ ಹಾಗೂ ಸುರತ್ಕಲ್ ಪೊಲೀಸರ ತಂಡ ಶ್ರಮಿಸುತ್ತಿದ್ದಾರೆ.

Continue Reading

DAKSHINA KANNADA

ದೇವರಿಗೆ ಇಟ್ಟ ಹೂವುಗಳನ್ನು ಒಣಗಿದ ನಂತರ ಹೀಗೆ ಮಾಡಿ..!

Published

on

ಮಂಗಳೂರು: ಹೂವುಗಳ ಅಲಂಕಾರದಿಂದ ದೇವರ ಕೋಣೆ ಸುಂದರವಾಗಿ ಕಾಣಿಸುತ್ತದೆ. ಅಲ್ಲದೇ ದೇವರ ಪೂಜೆ ಪೂರ್ಣವೆನಿಸುತ್ತದೆ. ಹೂವುಗಳು ಮನೆಯ ಶಕ್ತಿಯನ್ನು ಬದಲಾಯಿಸುತ್ತದೆ. ಆದರೆ ಅದೇ ಹೂಗಳು ನಿಮ್ಮ ಮನೆಯಲ್ಲಿ ದೋಷಗಳನ್ನು ಸೃಷ್ಟಿಸಲು ಪ್ರಾರಂಭಿಸುತ್ತದೆ.

ಒಣಗಿದ ಹೂವುಗಳನ್ನು ನಿಮ್ಮ ಮನೆಯಲ್ಲಿ ಇರಿಸಿದರೆ ಅಥವಾ ಅದನ್ನು ತೆಗೆಯದೇ ಹಾಗೇ ಬಿಟ್ಟರೆ, ಅದು ನಿಮ್ಮ ಮನೆಯ ಶಕ್ತಿಯನ್ನು ಹಾಳು ಮಾಡುತ್ತದೆ. ಹಾಗಾಗಿ ಒಣಗಿದ ಅಥವಾ ಬಾಡಿದ ಹೂವುಗಳನ್ನು ಮನೆಯಲ್ಲಿ ಇಡಬಾರದು. ದೇವರಿಗೆ ಆಗಿರಬಹುದು ಅಥವಾ ಮನೆಯಲ್ಲೇ ಆಗಿರಬಹುದು ಯಾವಾಗಲೂ ಪರಿಮಳಯಕ್ತ ಹೂವುಗಳನ್ನು ಮಾತ್ರ ಇಟ್ಟುಕೊಳ್ಳಬೇಕು.

ತಾಜಾ ಹೂವುಗಳಿಗೆ ಅದ್ಭುತವಾದ ಧನಾತ್ಮಕ ಶಕ್ತಿಯನ್ನು ಸೃಷ್ಟಿಸುವ ಸಾಮರ್ಥ್ಯವಿರುತ್ತದೆ. ಅವುಗಳಿಂದ ಉತ್ಪತ್ತಿಯಾಗುವ ಶಕ್ತಿಯು ಧನಾತ್ಮಕವಾಗಿ ನಮ್ಮ ಸುತ್ತಮುತ್ತಲಿನ ಸ್ಥಳವನ್ನು ಬದಲಾಯಿಸುತ್ತದೆ. ತಾಜಾ ಹೂವುಗಳು ಇರುವಲ್ಲೆಲ್ಲಾ ತಮ್ಮ ಸುತ್ತಲಿನ ಜೀವಿಗಳನ್ನು ಸಕಾರಾತ್ಮಕವಾಗಿರಿಸುತ್ತದೆ. ಅದೇ ಹೂವುಗಳು ಒಣಗಲು ಪ್ರಾರಂಭವಾದಾಕ್ಷಣ ಅದರಿಂದ ನಕಾರಾತ್ಮಕ ಕಂಪನಗಳು ಹರಡಲು ಪ್ರಾರಂಭವಾಗುತ್ತದೆ.

ಪೂಜೆಯಲ್ಲಿ ಒಣಗಿದ ಹೂವುಗಳನ್ನು ಬಳಸುವುದರಿಂದ ಆ ಪೂಜೆಯಿಂದ ಯಾವುದೇ ರೀತಿಯ ಫಲವನ್ನು ನಮಗೆ ಅನುಭವಿಸಲು ಸಾಧ್ಯವಾಗುವುದಿಲ್ಲ. ಮತ್ತೊಂದೆಡೆ ಪೂಜೆಯು ಯಾವುದೇ ಶುಭ ಫಲವನ್ನು ಪಡೆಯುವುದಿಲ್ಲ. ಬದಲಾಗಿ ಅಶುಭ ಫಲಗಳನ್ನು ಅನುಭವಿಸುವಂತಾಗುತ್ತದೆ.

ಅದಕ್ಕಾಗಿಯೇ ಹೂವುಗಳನ್ನು ಒಣಗುತ್ತಿದ್ದಂತೆ ಅವುಗಳನ್ನು ತಕ್ಷಣವೇ ಅಲ್ಲಿಂದ ಬದಲಾಯಿಸಬೇಕು. ಒಂದು ವೇಳೆ ಒಣಗಿದ ಹೂವುಗಳು ಇದ್ದರೆ ಅದು ಆರೋಗ್ಯದ ಮೇಲೆಯೂ ಮತ್ತಷ್ಟು ಕೆಟ್ಟ ಪರಿಣಾಮ ಬೀರಬಹುದು.

Continue Reading

DAKSHINA KANNADA

ಎಸ್ ಎಸ್ ಎಲ್ ಸಿ ಫಲಿತಾಂಶ: ಜಿಯಾ ಸ್ವೀಡಲ್ ಲಸ್ರಡೊಗೆ 599 ಅಂಕ

Published

on

ಪುತ್ತೂರು : ಸುದಾನ ರೆಸಿಡೆನ್ಶಿಯಲ್ ಸ್ಕೂಲ್, ನೆಹರು ನಗರ, ಮಂಜಲ್ಪಡ್ಪು ಇಲ್ಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿ
ಜಿಯಾ ಸ್ವೀಡಲ್ ಲಸ್ರಡೊ 599 ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಇವರು ಕೆದಿಲ ಗ್ರಾಮದ ಕಲ್ಲಾಜೆ ನಿವಾಸಿ ಪಾಟ್ರಿಕ್ ಲಸ್ರಡೊ, ಅಮಿತಾ ಲಸ್ರಡೊ ದಂಪತಿ ಪುತ್ರಿ.

Continue Reading

LATEST NEWS

Trending