DAKSHINA KANNADA
ಪುತ್ರಿಯರ ಮೇಲೆ ಅತ್ಯಾಚಾರ ಅರೋಪ ಪ್ರಕರಣ- ಆರೋಪಿ ತಂದೆ ಖುಲಾಸೆಗೊಳಿಸಿ ಮಂಗಳೂರು ಪೋಕ್ಸೋ ನ್ಯಾಯಾಲಯ ತೀರ್ಪು..!
ಇಬ್ಬರು ಪುತ್ರಿಯರು ತಮ್ಮ ತಂದೆಯ ಮೇಲೆ ಮಾಡಿದ ಅತ್ಯಾಚಾರ ಆರೋಪದ ಪೈಕಿ ಎರಡನೇ ಪ್ರಕರಣದಲ್ಲೂ ಆರೋಪಿ ತಂದೆಯನ್ನು ಮಂಗಳೂರಿನ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿ ಮಹತ್ವದ ತೀರ್ಪು ನೀಡಿದೆ.
ಮಂಗಳೂರು : ಇಬ್ಬರು ಪುತ್ರಿಯರು ತಮ್ಮ ತಂದೆಯ ಮೇಲೆ ಮಾಡಿದ ಅತ್ಯಾಚಾರ ಆರೋಪದ ಪೈಕಿ ಎರಡನೇ ಪ್ರಕರಣದಲ್ಲೂ ಆರೋಪಿ ತಂದೆಯನ್ನು ಮಂಗಳೂರಿನ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿ ಮಹತ್ವದ ತೀರ್ಪು ನೀಡಿದೆ.
ಇದೊಂದು ವಿಶೇಷ ಪ್ರಕರಣವಾಗಿದ್ದು, 2021ರ ಜೂನ್ ತಿಂಗಳಿನಲ್ಲಿ ಮಂಗಳೂರಿನ ಕಾಟಿಪಳ್ಳದ ನಿವಾಸಿ 48 ವರ್ಷ ಪ್ರಾಯದ ವ್ಯಕ್ತಿ ವಿರುದ್ದ ವಿರುದ್ಧ ಅವರ ಇಬ್ಬರು ಪುತ್ರಿಯರು ತಾವು ಅಪ್ರಾಪ್ತ ವಯಸ್ಕರಾಗಿದ್ದ ಸಂದರ್ಭದಲ್ಲಿ ತಮ್ಮ ತಂದೆಯಿಂದ ಅತ್ಯಾಚಾರಕ್ಕೆ ಒಳಗಾಗಿದ್ದೆವು ಎಂದು ಆರೋಪ ಮಾಡಿದ್ದರು.
ಈ ಕುರಿತೆಂತೆ ಮಂಗಳೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ಪೋಕ್ಸೋ ಕಾಯ್ದೆಯಡಿ ದಾಖಲಾಗಿದ್ದವು.
ಆರೋಪಿಯ ಕಿರಿಯ ಪುತ್ರಿ ತನ್ನ ತಂದೆಯು ಸತತ ಮೂರು ವರ್ಷಗಳಿಂದ ಅತ್ಯಾಚಾರ ಎಸಗಿದ್ದರೆಂದು ಆರೋಪಿಸಿದ್ದಳು.
ಈ ಪ್ರಕರಣದಲ್ಲಿ ನ್ಯಾಯಾಲಯವು ಕಳೆದ ಎರಡು ತಿಂಗಳ ಹಿಂದೆ ಪೂರಕ ಸಾಕ್ಷ್ಯಾಧಾರ ಇಲ್ಲ ಎಂದು ಪರಿಗಣಿಸಿ ಆರೋಪಿಯನ್ನು ಖುಲಾಸೆಗೊಳಿಸಿತ್ತು.
ಇದೀಗ ಹಿರಿಯ ಪುತ್ರಿ ನೀಡಿದ್ದ ದೂರಿನಲ್ಲಿಯೂ ಆರೋಪ ಸಾಬೀತುಪಡಿಸುವಂತಹ ಯಾವುದೇ ಸೂಕ್ತ ಸಾಕ್ಷ್ಯಾಧಾರ ಇರುವುದಿಲ್ಲ ಎಂದು ಪರಿಗಣಿಸಿ ನ್ಯಾಯಾಲಯವು ಆರೋಪಿಯನ್ನು ಮಂಗಳೂರಿನ ಹೆಚ್ಚುವರಿ ಸತ್ರ ಮತ್ತು ಎರಡನೇ ಎಫ್ ಟಿಎಸ್ ಸಿ ಪೋಕ್ಸೋ ನ್ಯಾಯಾಲಯ ಖುಲಾಸೆಗೊಳಿಸಿ ತೀರ್ಪು ನೀಡಿದೆ.
ಈ ಹಿನ್ನೆಲೆಯಲ್ಲಿ ನ್ಯಾಯಾಧೀಶ ಕೆ.ಎಂ ರಾಧಾಕೃಷ್ಣ ಅವರು ಆರೋಪಿಯನ್ನು ಬಿಡುಗಡೆ ಮಾಡಲು ಆದೇಶಿಸಿದ್ದಾರೆ.
ಇದರಿಂದಾಗಿ, ಆರೋಪಿ ತನ್ನಿಬ್ಬರು ಪುತ್ರಿಯರು ಮಾಡಿದ್ದ ಅತ್ಯಾಚಾರ ಪ್ರಕರಣದಲ್ಲಿ, ದೂರು ದಾಖಲಾದ ಎರಡೇ ವರ್ಷಗಳಲ್ಲಿ ದೋಷಮುಕ್ತಗೊಳ್ಳುವಂತಾಗಿದೆ.
ಆರೋಪಿಯ ಪರವಾಗಿ ಲೆಕ್ಸ್ ಜ್ಯೂರಿಸ್ ಲಾ ಚೇಂಬರ್ ಮಂಗಳೂರು ಇದರ ವಕೀಲರಾದ ಆಸಿಫ್ ಬೈಕಾಡಿ, ರುಬಿಯಾ ಅಕ್ತರ್, ಮಹಮ್ಮದ್ ಅಸ್ಗರ್ ಮುಡಿಪು, ಶ್ರೀನಿಧಿ ಪ್ರಕಾಶ್, ನಿರೀಕ್ಷಾ ಅವರು ವಾದ ಮಂಡಿಸಿದ್ದರು.
DAKSHINA KANNADA
ದೇವರಿಗೆ ತುಪ್ಪದಲ್ಲಿ ದೀಪ ಹಚ್ಚುವುದು ಶುಭವೇ..?
ಮಂಗಳೂರು: ಮನೆಯ ದೇವರ ಕೊಣೆಯಲ್ಲಿ ಅಥವಾ ದೇವಸ್ಥಾನದಲ್ಲಿ ತುಪ್ಪ, ಎಣ್ಣೆ, ಸಾಸಿವೆ, ಎಳ್ಳು ಅಥವಾ ಮಲ್ಲಿಗೆಯ ಎಣ್ಣೆಯ ದೀಪವನ್ನು ಹಚ್ಚುವ ಪದ್ಧತಿ ಇದೆ. ಈ ರೀತಿಯಾಗಿ ಪ್ರತಿಯೊಂದು ಎಣ್ಣೆಯ ದೀಪವನ್ನು ಸುಡುವುದು ವಿಭಿನ್ನ ಮಹತ್ವವನ್ನು ಹೊಂದಿದೆ. ತುಪ್ಪದ ದೀಪವನ್ನು ಹಚ್ಚುವುದು ದುಬಾರಿಯಾದ ಕಾರಣ ಜನರು ಎಣ್ಣೆಯ ದೀಪಗಳನ್ನು ಹೆಚ್ಚು ಹಚ್ಚುತ್ತಾರೆ. ಎಣ್ಣೆ ಅಥವಾ ತುಪ್ಪದ ದೀಪಕ್ಕಿಂತ ಯಾವುದರ ದೀಪ ಹಚ್ಚುವುದು ಹೆಚ್ಚು ಮಂಗಳಕರ ಎಂಬುದನ್ನು ತಿಳಿದುಕೊಳ್ಳೋಣ.
ಯಾವ ದೀಪವನ್ನು ಬೆಳಗಬೇಕು?
ತುಪ್ಪದ ದೀಪವನ್ನು ಯಾವಾಗಲೂ ಹೂವಿನಾಕಾರದ ದೀಪದಲ್ಲಿ ಬಿಳಿ ಎಂಬ ಬೆಳಕಿನಿಂದ ಬೆಳಗಿಸಲಾಗುತ್ತದೆ ಮತ್ತು ಎಣ್ಣೆ ದೀಪವನ್ನು ಉದ್ದವಾದ ದೀಪದಿಂದ ಬೆಳಗಿಸಲಾಗುತ್ತದೆ. ಆದರೆ, ಎಳ್ಳಿನ ಎಣ್ಣೆಯ ದೀಪವನ್ನು ಹಚ್ಚಿದರೆ ಅದರಲ್ಲಿ ಕೆಂಪು ಅಥವಾ ಹಳದಿ ದೀಪವನ್ನು ಬಳಸಬೇಕು.
ಯಾವ ದೀಪ ಸೂಕ್ತ?
ತುಪ್ಪದ ದೀಪವನ್ನು ದೇವರಿಗೆ ಸಮರ್ಪಿಸಲಾಗುತ್ತದೆ. ಆದರೆ ಇಷ್ಟಾರ್ಥಗಳ ಈಡೇರಿಕೆಗಾಗಿ ಎಣ್ಣೆಯ ದೀಪವನ್ನು ಬೆಳಗಿಸಲಾಗುತ್ತದೆ. ಆರ್ಥಿಕ ಮುಗ್ಗಟ್ಟಿನಿಂದ ಮುಕ್ತಿ ಹೊಂದಲು ತುಪ್ಪದ ದೀಪವನ್ನು ಹಚ್ಚುವುದು ಹೆಚ್ಚು ಪ್ರಯೋಜನಕಾರಿ. ಇದರಿಂದ ದೇವರುಗಳು ಮತ್ತು ದೇವತೆಗಳು ಸಂತೋಷಪಡುತ್ತಾರೆ.
ತುಪ್ಪದ ದೀಪವನ್ನು ಹಚ್ಚುವುದು ಅತ್ಯಂತ ಮಂಗಳಕರ
ಮನೆ ಅಥವಾ ದೇವಸ್ಥಾನದಲ್ಲಿ ತುಪ್ಪದ ದೀಪವನ್ನು ಬೆಳಗಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಇದು ಎಲ್ಲಾ ರೀತಿಯ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ ಜೊತೆಗೆ ಮನೆಯ ವಾಸ್ತು ದೋಷಗಳು ಸಹ ನಿವಾರಣೆಯಾಗುತ್ತದೆ. ಇದು ಎಲ್ಲಾ ರೀತಿಯ ನೋವನ್ನು ನಾಶಪಡಿಸುತ್ತದೆ. ಶಿವ ಪುರಾಣದ ಪ್ರಕಾರ ಪ್ರತಿದಿನ ತುಪ್ಪದ ದೀಪವನ್ನು ಹಚ್ಚುವುದರಿಂದ ಮನೆಯಲ್ಲಿ ಸುಖ, ಸಮೃದ್ಧಿ ಮತ್ತು ಶಾಂತಿ ನೆಲೆಸುತ್ತದೆ ಎಂದು ಹೇಳಲಾಗಿದೆ.
ತುಪ್ಪದ ದೀಪವನ್ನು ಹಚ್ಚಿದರೆ ಗಾಳಿಯು ಶುದ್ಧವಾಗುತ್ತದೆ ಮತ್ತು ಗಾಳಿಯಲ್ಲಿರುವ ರೋಗಾಣುಗಳು ನಾಶವಾಗುತ್ತದೆ. ಇದರ ಸುವಾಸನೆಯು ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ ಮತ್ತು ಖಿನ್ನತೆಯನ್ನು ಹೋಗಲಾಡಿಸುತ್ತದೆ. ತುಪ್ಪವು ಚರ್ಮದ ರಕ್ತ ಕಣಗಳನ್ನು ಸಕ್ರಿಯಗೊಳಿಸುವ ವಿದ್ಯುತ್ಕಾಂತೀಯ ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಲಾಗುತ್ತದೆ, ಇದರಿಂದಾಗಿ ಯಾವುದೇ ಚರ್ಮ ರೋಗಗಳು ಬರುವುದಿಲ್ಲ.
DAKSHINA KANNADA
ಆಂಬುಲೆನ್ಸ್ – ಕಾರು ನಡುವೆ ಭೀಕರ ಅ*ಪಘಾತ..! ಮೂವರ ದುರ್ಮ*ರಣ.!
ಕಾಸರಗೋಡು: ಆ್ಯಂಬುಲೆನ್ಸ್ ಮತ್ತು ಕಾರೊಂದರ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿಯ ಮಂಜೇಶ್ವರದಲ್ಲಿ ಇಂದು ನಡೆದಿದೆ.
ಕಾರಿನಲ್ಲಿದ್ದ ತ್ರಿಶೂರು ಗುರುವಾಯೂರು ನಿವಾಸಿಗಳಾದ ಶ್ರೀನಾಥ್, ಶರತ್ ಮೆನೋನ್ ಎಂಬವರು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ. ಆ್ಯಂಬುಲೆನ್ಸ್ ನಲ್ಲಿದ್ದ ರೋಗಿಯೂ ಗಾಯಗೊಂಡಿದ್ದಾರೆ. ಕಾಸರಗೋಡಿನಿಂದ ಮಂಗಳೂರು ಕಡೆಗೆ ರೋಗಿಯೊಬ್ಬರನ್ನು ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ಮತ್ತು ಮಂಗಳೂರು ಕಡೆಯಿಂದ ಮಂಜೇಶ್ವರದತ್ತ ಬರುತ್ತಿದ್ದ ಕಾರು ನಡುವೆ ಈ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಇನ್ನೋರ್ವ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಆ್ಯಂಬುಲೆನ್ಸ್ ರಸ್ತೆಯಲ್ಲಿ ಮಗುಚಿ ಬಿದ್ದಿದೆ.
ಮುಂದೆ ಓದಿ..; ಆಸ್ಪತ್ರೆ ಸೆಲ್ ನಲ್ಲಿ ಕುಣಿಕೆಗೆ ಕೊರೊಳೊಡ್ಡಿದ ಖೈದಿ..!
DAKSHINA KANNADA
ಮದುವೆ ಸಭಾಂಗಣದ ಆವರಣದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ..! ರಕ್ತಸಿಕ್ತ ಸ್ಥಿತಿಯಲ್ಲಿದ್ದ ಶ*ವ.!!
ಮಂಗಳೂರು: ಹೆಸರಾಂತ ಮದುವೆ ಸಭಾಂಗಣದ ಆವರಣದಲ್ಲಿ ವ್ಯಕ್ತಿಯೋರ್ವನ ಮೃತದೇಹ ಪತ್ತೆಯಾಗಿದೆ. ತಲಪಾಡಿಯಲ್ಲಿರುವ ಬಂಟವಾಳದ ಭಂಟರ ಭವನದ ಆವರಣದ ಕಂಪೌಂಡ್ ಒಳಗಡೆ ವ್ಯಕ್ತಿಯೋರ್ವನ ಮೃತದೇಹ ರಕ್ತಸಿಕ್ತವಾಗಿ ಇದ್ದ ರೀತಿಯಲ್ಲಿ ಮೃತ ದೇಹ ಪತ್ತೆಯಾಗಿದೆ. ಉಪ್ಪಿನಂಗಡಿ ವಳಾಲು ಮೂಲದ ನಿವಾಸಿ ಸಂತೋಷ್ ಅವರ ಮೃತದೇಹ ಎಂದು ಗುರುತಿಸಲಾಗಿದೆ.
ಬಂಟರ ಭವನದ ಹೊರಗಡೆ ಸಂತೋಷ್ ಗೆ ಸೇರಿದ್ದ ಬೈಕ್ ಪತ್ತೆಯಾಗಿದೆ. ಬೈಕ್ ನಿಲ್ಲಿಸಿ ಕಂಪೌಂಡ್ ಮೇಲೆ ಕುಳಿತು ಕೊಂಡಿದ್ದು ಈ ವೇಳೆ ಕುಸಿದು ಕೆಳಗೆ ಬಿದ್ದು ಈ ಘಟನೆ ನಡೆದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಮುಂದೆ ಓದಿ.. ಧರ್ಮಸ್ಥಳ: ಸರಣಿ ಅಪ*ಘಾತ, 5 ವಾಹನಗಳಿಗೆ ಹಾನಿ
ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್, ಎಸ್.ಐ.ಹರೀಶ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.
- DAKSHINA KANNADA4 days ago
ಸುಬ್ರಹ್ಮಣ್ಯ: ಕೆಎಸ್ಸಾರ್ಟಿಸಿ ಬಸ್ಗಳ ಹಗಲು ದರೋಡೆ..! ಏನಿದು ಘಟನೆ?
- FILM6 days ago
ಬಿಗ್ ಬಾಸ್ ಬಗ್ಗೆ ಅಚ್ಚರಿ ಹೇಳಿಕೆ ಕೊಟ್ಟ ನಮ್ರತಾ ಗೌಡ!
- dehali5 days ago
ನಾಯಿಗಳಿಗೂ ಬಂತು ಆಧಾರ್ ಕಾರ್ಡ್.!! ಇನ್ಮುಂದೆ ನಾಯಿಗೂ ಸ್ಕ್ಯಾನ್ ಕಾರ್ಡ್..! ಏನಿದು?
- BELTHANGADY5 days ago
ವೇಷ ಕಳಚುವ ಮುನ್ನ ಇಹಲೋಕ ತ್ಯಜಿಸಿದ ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು