ಕಡಬ: ಗ್ರಾಮ ವಾಸ್ತವ್ಯದ ವೇಳೆ ಅಧಿಕಾರದ ಅಹಂ ಇಲ್ಲದೇ ಚಾಪೆಯಲ್ಲಿ ಕುಳಿತು ಎಂಡೋ ಸಂತ್ರಸ್ತೆ ಮಗುವಿಗೆ ಮತ್ತು ಕುಟುಂಬಕ್ಕೆ ಸಾಂತ್ವನ ಹೇಳಿ, ಸಮಸ್ಯೆ ಆಲಿಸಿ ಇಡೀ ರಾಜ್ಯಕ್ಕೆ ಮಾದರಿಯಾಗಿದ್ದು, ಸದ್ಯ ಈ ಸರಕಾರಿ ಅಧಿಕಾರಿಯ ಸರಳ ನಡೆ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.
ಕಡಬ ತಾಲೂಕಿನ ಆಲಂಕಾರಿನಲ್ಲಿ ನಡೆದ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಆಗಮಿಸಿದ ದಕ್ಷಿಣ ಕನ್ನಡ
ಜಿಲ್ಲಾಧಿಕಾರಿಗಳು ಅಲಂಕಾರು ಗ್ರಾಮದ ಗಾಂಣತಿ ಮನೆ ಶೀನಪ್ಪ ಎಂಬವರ ಪುತ್ರಿ ಎಂಡೋ ಸಂತ್ರಸ್ತೆ ಶ್ರೀಕೃಪಾ ಎಂಬ ಮಗುವನ್ನು ಭೇಟಿಯಾಗಲು ಆಗಮಿಸಿದರು. ಈಕೆಯ ಜೊತೆಗೆ ಮಾತುಕತೆಗೆ ಮುಂದಾದ ಜಿಲ್ಲಾಧಿಕಾರಿಗಳು ಮಗುವಿನ ಚಾಪೆಯಲ್ಲೇ ಕುಳಿತು ಯೋಗಕ್ಷೇಮ ವಿಚಾರಿಸಿದರು.
ಈ ಮೂಲಕ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರು ಸಾರ್ವಜನಿಕ ವಲಯದಲ್ಲಿ ತಮ್ಮ ಸರಳ ನಡೆಯಿಂದ ಎಲ್ಲರ ಮೆಚ್ಚುಗೆ ಪಾತ್ರರಾದರು.
ಇವರ ಜೊತೆಗೆ ಪುತ್ತೂರು ಉಪ ಆಯುಕ್ತರ ಗಿರಿನಂದನ್, ತಹಶೀಲ್ದಾರ್ ಅನಂತ ಶಂಕರ್ ರವರೂ ಇದ್ದರು. ನಂತರದಲ್ಲಿ ಗುಡಿ ಕೈಗಾರಿಕೆಯಾದ ಕುಂಬಾರಿಕೆ ನಡೆಸುವ ಸ್ಥಳಕ್ಕೂ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಸಮಸ್ಯೆ ಆಲಿಸಿದರು.