ಉಡುಪಿ: ಮೂರು ಕಾರು ಮತ್ತು ಒಂದು ಬೈಕ್ ಗಳ ಮಧ್ಯೆ ಸರಣಿ ಅಪಘಾತ ಸಂಭವಿಸಿ ಅದೃಷ್ಟವಶಾತ್ ಎಲ್ಲಾ ವಾಹನ ಚಾಲಕರು ಅಪಾಯದಿಂದ ಪಾರಾದ ಘಟನೆ ಉಡುಪಿಯ ಶಿರ್ವದ ಮಸೀದಿ ಬಳಿಯ ಜೋಡು ಪೆಲತ್ತ ಕಟ್ಟೆ ಎಂಬಲ್ಲಿ ನಡೆದಿದೆ.
ಶಿರ್ವ ಕಡೆಗೆ ಸಾಗುತ್ತಿದ್ದ ಫೋರ್ಡ್ ಕಾರು, ಐಟೆನ್, ಮಾರುತಿ ಡಿಸಾಯರ್ ಕಾರು ಮತ್ತು ಪಲ್ಸರ್ ಬೈಕ್ ಮಧ್ಯೆ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಎಲ್ಲ ವಾಹನ ಸವಾರರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.