Connect with us

    ಸದ್ಯಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ಕೊರೊನಾ ಪಾಸಿಟಿವ್ ದಾಖಲಾಗಿಲ್ಲ

    Published

    on

    ಸದ್ಯಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ಕೊರೊನಾ ಪಾಸಿಟಿವ್ ದಾಖಲಾಗಿಲ್ಲ

    ಮಂಗಳೂರು: ದ.ಕ. ಜಿಲ್ಲೆಯಲ್ಲಿ ನಿನ್ನೆ (ಎಪ್ರಿಲ್ 7) ಕೂಡ ಯಾವುದೇ ಕೊರೊನಾ ಪಾಸಿಟಿವ್  ದಾಖಲಾಗಿಲ್ಲ.

    ಒಟ್ಟಾರೆ ಜಿಲ್ಲೆಯಲ್ಲಿ ಇದುವರೆಗೆ 12 ಪ್ರಕರಣಗಳು ಪತ್ತೆಯಾಗಿದ್ದುವು, ಇವರಲ್ಲಿ ನಾಲ್ವರು ಗುಣಮುಖರಾಗಿ ವೆನ್ಲಾಕ್ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ತೆರಳಿದ್ದಾರೆ.

    ಇನ್ನು ಹತ್ತಿರದ ಉಡುಪಿ ಜಿಲ್ಲೆಯಲ್ಲೂ ಯಾವುದೇ ಕೊರೊನಾ ಪಾಸಿಟಿವ್ ವರದಿಯಾಗಿಲ್ಲ. ಉಡುಪಿ ಜಿಲ್ಲೆಯಲ್ಲಿ ಇದುವರೆಗೆ ಕನಿಷ್ಠ ಅಂದರೆ ಕೇವಲ 3 ಪ್ರಕರಣ ಮಾತ್ರ ಪತ್ತೆಯಾಗಿದೆ.

    ಆದರೆ ನೆರೆಯ ಮತ್ತೊಂದು ಗಡಿ ಜಿಲ್ಲೆ ಕಾಸರಗೋಡಿನಲ್ಲಿ ಮತ್ತೆ 4 ಪ್ರಕರಣಗಳು ದಾಖಲಾಗಿವೆ. ಇದರಿಂದ ಜಿಲ್ಲೆಯಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 155ಕ್ಕೆ ಏರಿಕೆಯಾಗಿದೆ. ಇದರಲ್ಲಿ ಹತ್ತು ವರ್ಷದ  ಬಾಲಕ ಕೂಡ ಸೇರಿದ್ದಾನೆ.

    ಸೋಂಕಿತರು ಪಳ್ಳಿಕೆರೆ, ಮೊಗ್ರಾಲ್, ಉದುಮ, ಮಧೂರಿನ ವ್ಯಕ್ತಿಗಳಾಗಿದ್ದಾರೆ. ಈ ಪೈಕಿ ಇಬ್ಬರು ದುಬೈಯಿಂದ ಬಂದವರಾಗಿದ್ದಾರೆ.

    ಉಳಿದ ಇಬ್ಬರಿಗೆ ಸೋಂಕಿತರ ಸಂಪರ್ಕದಿಂದ ಬಂದಿದೆ. ನಿನ್ನೆ 32 ಸ್ಯಾಂಪಲ್ ಗಳನ್ನು ಕಳುಹಿಸಿಕೊಡಲಾಗಿದೆ.

    ಸೋಮವಾರ ಜಿಲ್ಲೆಯಲ್ಲಿ ಓರ್ವ ಗುಣಮುಖನಾಗಿದ್ದು, ಇನ್ನೂ 624 ಮಂದಿಯ ವೈದ್ಯಕೀಯ ಪರೀಕ್ಷಾ ವರದಿ ಲಭಿಸಬೇಕಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

    ಕೊರೋನ ವೈರಸ್ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ನಿರ್ಬಂಧಗಳನ್ನು ಮತ್ತಷ್ಟು ಬಿಗಿಗೊಳಿಸಲಾಗಿದ್ದು, ಜನರು ಮನೆಯಿಂದ ಹೊರ ಬರದಂತೆ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದಾರೆ.

    ಮೊಗ್ರಾಲ್ ಪುತ್ತೂರು, ಚೆಮ್ನಾಡ್, ಮಧೂರು, ಉದುಮ, ಪಳ್ಳಿಕೆರೆ, ಚೆಂಗಳ ಹಾಗೂ ಕಾಸರಗೋಡು ನಗರಸಭಾ ವ್ಯಾಪ್ತಿಯಲ್ಲಿ ಕೋವಿಡ್ ಬಾಧಿತ ವಲಯ ಎಂದು ಘೋಷಿಸಲಾಗಿದೆ.

    Click to comment

    Leave a Reply

    Your email address will not be published. Required fields are marked *

    LATEST NEWS

    ಚಾಲಕನ ನಿಯಂತ್ರಣ ತಪ್ಪಿ 30 ಅಡಿ ಎತ್ತರದಿಂದ ಪಂಚಾಯ್ತಿ ಆವರಣಕ್ಕೆ ಬಿದ್ದ ಕಾರು

    Published

    on

    ಚಿಕ್ಕಮಗಳೂರು: ದಟ್ಟ ಮಂಜು ಕವಿದಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಪ್ರವಾಸಿ ಕಾರೊಂದು 30 ಅಡಿ ಎತ್ತರದ ಪ್ರದೇಶದಿಂದ ಪಂಚಾಯ್ತಿ ಆವರಣದೊಳಗೆ ಬಿದ್ದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಸುಂಕಸಾಲೆ ಗ್ರಾಮದ ಬಳಿ ನಡೆದಿದೆ.

    ಬೆಂಗಳೂರಿನಿಂದ ಹೊರನಾಡಿಗೆ ಹೋಗುತ್ತಿದ್ದ ಪ್ರವಾಸಿ ಕಾರು ರಸ್ತೆಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಚಾಲಕ ವೇಗವಾಗಿ ಕಾರು ಚಲಾಯಿಸುತ್ತಿದ್ದದ್ದು ಅಪಘಾತಕ್ಕೆ ಒಂದು ಕಾರಣ ಎಂದು ತಿಳಿದು ಬಂದಿದೆ. 30 ಅಡಿ ಎತ್ತರದ ಪ್ರದೇಶದಿಂದ ಬಿದ್ದ ಕಾರು ಸುಂಕಸಾಲೆ ಗ್ರಾಮ ಪಂಚಾಯ್ತಿಯ ಆವರಣದ ಒಳಕ್ಕೆ ಬಿದ್ದಿದೆ. ಕಾರಿನಲ್ಲಿ ಐವರು ಪ್ರಯಾಣಿಕರಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

    ಕಾರು ಬಿದ್ದ ರಭಸಕ್ಕೆ ಕಾರು ಬಹುತೇಕ ಜಖಂಗೊಂಡಿದೆ. ಘಟನೆಯಲ್ಲಿ ಮೂವರಿಗೆ ಗಂಭೀರ ಗಾಯವಾಗಿದ್ದು, ಗಾಯಾಳುಗಳನ್ನ ಮೂಡಿಗೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಿಂದ ಜಾವಳಿ, ಸುಂಕಸಾಲೆ, ಹಿರೇಬೈಲು ಮಾರ್ಗವಾಗಿ ಕಳಸ-ಹೊರನಾಡಿಗೆ ಹೋಗುವ ಮಾರ್ಗ ಎತ್ತರದ ಪ್ರದೇಶ ಹಾಗೂ ಕಾಫಿತೋಟಗಳ ಮಧ್ಯೆ ಹಾವುಬಳುಕಿನ ಮೈಕಟ್ಟಿನ ರಸ್ತೆಯಲ್ಲಿ ಸಾಗಬೇಕು. ಹಾಗಾಗಿ, ಪ್ರವಾಸಿಗರು ಅತ್ಯಂತ ಜಾಗರೂಕರಾಗಿ ವಾಹನ ಚಲಾಯಿಸಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

    Continue Reading

    LATEST NEWS

    ಬೆಂಗಳೂರಿನಲ್ಲಿ ಮಹಿಳೆಯ ಬರ್ಬರ ಹ*ತ್ಯೆ – 20ಕ್ಕೂ ಹೆಚ್ಚು ತುಂಡು ಮಾಡಿ ಫ್ರಿಡ್ಜ್‌ನಲ್ಲಿಟ್ಟು ಆರೋಪಿ ಎಸ್ಕೇಪ್

    Published

    on

    ಬೆಂಗಳೂರು: ಮಹಿಳೆಯೊಬ್ಬರನ್ನು ಭೀಕರವಾಗಿ ಕೊ*ಲೆ ಮಾಡಿ 20ಕ್ಕೂ ಹೆಚ್ಚು ತುಂಡುಗಳನ್ನಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟು ಆರೋಪಿ ಎಸ್ಕೇಪ್ ಆಗಿರುವ ಘಟನೆ ಬೆಂಗಳೂರಿನ ವೈಯಾಲಿಕಾವಲ್‌ನ ವಿನಾಯಕ ನಗರದಲ್ಲಿ ನಡೆದಿದೆ.

    ಮಹಿಳೆಯನ್ನು ಕೊಂ*ದು ನಂತರ ಮೃ*ತದೇಹವನ್ನು ಪೀಸ್ ಪೀಸ್ ಆಗಿ ಕತ್ತರಿಸಿ ಬಳಿಕ ಫ್ರಿಡ್ಜ್‌ನಲ್ಲಿಟ್ಟು ಆರೋಪಿ ಪರಾರಿಯಾಗಿದ್ದಾನೆ. ಹ*ತ್ಯೆ ಬಳಿಕ ಮಾಂಸದ ಗುಡ್ಡೆ ಮಾಡಿ ಫ್ರಿಡ್ಜ್‌ನಲ್ಲಿ ಇರಿಸಿ ಮಗುವನ್ನು ಮನೆಯಲ್ಲೇ ಬಿಟ್ಟು ಆರೋಪಿ ಎಸ್ಕೇಪ್ ಆಗಿದ್ದಾನೆ. 15 ದಿನಗಳ ಹಿಂದೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    2-3 ತಿಂಗಳಿನಿಂದ ಮನೆಯಲ್ಲಿ ಬಾಡಿಗೆಗಿದ್ದರು. ಇಂದು ಸಂಬಂಧಿಕರು ಬೀಗ ಒಡೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ವೈಯಾಲಿಕಾವಲ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ವೈಯಾಲಿಕಾವಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಯ ಪತ್ತೆಗಾಗಿ ತನಿಖೆ ಮುಂದುವರೆದಿದೆ.

    Continue Reading

    LATEST NEWS

    ಶಿರೂರು ಗುಡ್ಡ ಕುಸಿತ; ಕೊನೆಗೂ ನಾಪತ್ತೆಯಾಗಿದ್ದ ಟ್ರಕ್‌ ಪತ್ತೆ

    Published

    on

    ಕಾರವಾರ: ಶಿರೂರು ಭೂ ಕುಸಿತದ ಬಳಿಕ ಗಂಗಾವಳಿ ನದಿಯಾಳದಲ್ಲಿ ಬಿದ್ದ ಟ್ರಕ್‌ ಕೊನೆಗೂ ಪತ್ತೆಯಾಗಿದೆ.

    ಜುಲೈ 16 ರಂದು ಭೂ ಕುಸಿತ ಸಂಭವಿಸಿದ ಬಳಿಕ ಕೇರಳದ ಅರ್ಜುನ್‌ ಚಲಾಯಿಸುತ್ತಿದ್ದ ಟ್ರಕ್‌ ಗಂಗಾವಳಿ ನದಿಗೆ ಬಿದ್ದಿತ್ತು. ನದಿಯಲ್ಲಿ ನೀರಿನ ಪ್ರಮಾಣ ಜಾಸ್ತಿ ಇದ್ದ ಕಾರಣ ಟ್ರಕ್‌ ಪತ್ತೆ ಮಾಡಲು ಕಷ್ಟವಾಗಿತ್ತು. ಮುಳುಗು ತಜ್ಞ ಈಶ್ವರ ಮಲ್ಪೆ ಅವರು ಟ್ರಕ್‌ ಪತ್ತೆಗೆ ನಿರಂತರ ಪ್ರಯತ್ನ ನಡೆಸುತ್ತಿದ್ದರು.

    ಈಗ ಟ್ರಕ್‌ ಗುಡ್ಡ ಕುಸಿತಗೊಂಡ ಜಾಗದ ಬಳಿಯೇ ಸಿಕ್ಕಿ ಬಿದ್ದಿದೆ. ಟ್ರಕ್‌ ಮೇಲೆ ಸಾಕಷ್ಟು ಕಲ್ಲು ಮತ್ತು ಮಣ್ಣುಗಳಿವೆ. ಹೀಗಾಗಿ ಮಣ್ಣು ಮತ್ತು ಕಲ್ಲುಗಳನ್ನು ತೆಗೆದು ಟ್ರಕ್‌ ಮೇಲಕ್ಕೆ ಎತ್ತಲು ಸಿದ್ಧತೆ ನಡೆಯುತ್ತಿದೆ.

    ಜುಲೈ 16 ರಂದು ಭೂಕುಸಿತ ಸಂಭವಿಸಿದಾಗ ಅರ್ಜುನ್ ಮರ ತುಂಬಿಸಿಕೊಂಡು ಟ್ರಕ್‌ನಲ್ಲಿ ಕೋಝಿಕ್ಕೋಡ್‌ ಕಡೆಗೆ ಹೋಗುತ್ತಿದ್ದರು.

    Continue Reading

    LATEST NEWS

    Trending