ಉಳ್ಳಾಲ: ರಸ್ತೆ ಬದಿ ನಿಲ್ಲಿಸಿದ್ದ ಕಂಟೈನರ್ ಲಾರಿಯ ಹ್ಯಾಂಡ್ ಬ್ರೇಕ್ ಫೇಲ್ ಆಗಿ ಟೋಲ್‌ಗೇಟ್‌ಗೆ ಗುದ್ದಿ ಹಾನಿಗೊಳಿಸಿದ ಘಟನೆ ನಿನ್ನೆ ತಡರಾತ್ರಿ ತಲಪಾಡಿಯಲ್ಲಿ ನಡೆದಿದೆ.
ದೆಹಲಿಯಿಂದ ಕೊಚ್ಚಿಗೆ ಫ್ರಿಡ್ಜ್ ಸಾಗಾಟ ನಡೆಸುತ್ತಿದ್ದ ಗಣಪತಿ ಲಾಜಿಸ್ಟಿಕ್ಸ್ ಸಂಸ್ಥೆಗೆ ಸೇರಿದ ಲಾರಿ ಚಾಲಕ ಜೈವೀರ್ ಸಿಂಗ್ ನಿನ್ನೆ ರಾತ್ರಿ 9.30ರ ಸುಮಾರಿಗೆ ತಲಪಾಡಿ ಟೋಲ್ ಬಳಿ ಚಹಾ ಕುಡಿಯಲು ಕಂಟೈನರ್ ಲಾರಿಯನ್ನು ಹೆದ್ದಾರಿ ಬಳಿ ಹ್ಯಾಂಡ್ ಬ್ರೇಕ್ ಎಳೆದು ನಿಲ್ಲಿಸಿ ಕೆಳಗಿಳಿದು ಹತ್ತಿರದ ಹೊಟೇಲ್‌ನಲ್ಲಿ ಚಹಾ ಕುಡಿಯುತ್ತಿದ್ದರು.
ಈ ವೇಳೆ ತನ್ನಿಂತಾನೇ ಲಾರಿ ಹಿಂಬದಿ ಚಲಿಸಿ ನಿಲ್ಲಿಸಲಾಗಿದ್ದ ರಿಕ್ಷಾ ಹಾಗೂ ಬೈಕ್ ವೊಂದಕ್ಕೆ ಒರೆಸುತ್ತಾ, ಹಿಂಬದಿ ಚಲಿಸಿ ಟೋಲ್ ಗೇಟ್ ನಲ್ಲಿರುವ ಸೆನ್ಸರ್ ಕಂಬ, ಸೆಕ್ಯುರಿಟಿ ಚೇರ್ , ಹಾಗೂ ತಡೆಗಲ್ಲಿಗೆ ಗುದ್ದಿ ನಿಂತಿದೆ.
ಈ ನಡುವೆ ಟೋಲ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರು ಸೆಕ್ಯುರಿಟಿ ಹಾಗೂ ಅದೇ ವೇಳೆ ಕೇರಳ ಕಡೆಗೆ ಸ್ಕೂಟರ್ ನಲ್ಲಿ ತೆರಳುತ್ತಿದ್ದ ದಂಪತಿ ಪವಾಡಸದೃಶವಾಗಿ ಪಾರಾಗಿದ್ದಾರೆ. ಘಟನೆಯಿಂದ ರೂ.1 ಲಕ್ಷದಷ್ಟು ನಷ್ಟ ಉಂಟಾಗಿದೆ.