Connect with us

DAKSHINA KANNADA

ಮಣಿಪುರ ವಿಚಾರ ಮುಚ್ಚಿಹಾಕುವ ಬಿಜೆಪಿ ವಿರುದ್ಧ ಖಂಡನೆ- ಜು. 31ರಂದು ಕಾಂಗ್ರೆಸ್ ನಿಂದ ಬೃಹತ್ ಪ್ರತಿಭಟನೆ

Published

on

ಮಣಿಪುರದಲ್ಲಿ ನಡೆದಿರುವ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣವನ್ನು ಖಂಡಿಸಿ, ಸದನದಲ್ಲಿ ಕೇಂದ್ರ ಸರಕಾರದ ಅಸಹಾರ ಧೋರಣೆ, ಪ್ರಧಾನಿಗಳ ಮೌನ, ಮಣಿಪುರದಲ್ಲಿ ಕೇಂದ್ರ ಸರಕಾರದ ವೈಫಲ್ಯಗಳನ್ನು ಖಂಡಿಸಿ ಜು. 31ರಂದು ಲಾಲ್‌ಭಾಗ್‌ನ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಹೇಳಿದ್ದಾರೆ.

ಮಂಗಳೂರು: ಮಣಿಪುರದಲ್ಲಿ ನಡೆದಿರುವ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣವನ್ನು ಖಂಡಿಸಿ, ಸದನದಲ್ಲಿ ಕೇಂದ್ರ ಸರಕಾರದ ಅಸಹಾರ ಧೋರಣೆ, ಪ್ರಧಾನಿಗಳ ಮೌನ, ಮಣಿಪುರದಲ್ಲಿ ಕೇಂದ್ರ ಸರಕಾರದ ವೈಫಲ್ಯಗಳನ್ನು ಖಂಡಿಸಿ ಜು. 31ರಂದು ಲಾಲ್‌ಭಾಗ್‌ನ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಣಿಪುರದಲ್ಲಿ ವಿರೋಧ ಪಕ್ಷದವರಿಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ.

ಅಗತ್ಯ ವಿಚಾರಗಳ ಬಗ್ಗೆ ಚರ್ಚೆ ಮಾಡಲು ಸಂವಿಧಾನದಲ್ಲಿ ಅವಕಾಶ ಇದ್ದರೂ ಅವಕಾಶ ನಿರಾಕರಿಸಲಾಗಿದೆ.

ದೇಶದಾದ್ಯಂತ ವ್ಯಾಪಕ ಪ್ರತಿಭಟನೆ ನಡೆಯುತ್ತಿದೆ. ಪ್ರಧಾನಿ ಮಣಿಪುರದ ವಿಚಾರವನ್ನೇ ಮರೆತಿದ್ದಾರೆ.

ಮಣಿಪುರದ ಗಲಭೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತಲೇ ಇಲ್ಲ ಎಂದರು.

ಸಬ್‌ಕಾ ಸಾಥ್‌ ಸಬ್‌ ಕಾ ವಿಕಾಸ್ ಎಲ್ಲಿ ಹೋಗಿದೆ. ಮಣಿಪುರವನ್ನು ಸರಕಾರ ಏಕೆ ಕಡೆಗಣಿಸಿದೆ ಎಂದು ಪ್ರಶ್ನಿಸಿದರು.

ಮಣಿಪುರದ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಗಲಭೆ ನಿಯಂತ್ರಿಸಬೇಕು.

ಉಕ್ರೇನ್ ಯುದ್ಧದ ಬಗ್ಗೆ ಪಿಎಂ ಇಂಟರ್ ಫಿಯರ್ ಮಾಡ್ತಾರೆ. ಆದರೆ ನಮ್ಮ ರಾಜ್ಯದ ಗಲಭೆ ಬಗ್ಗೆ ಯಾಕೆ ಕ್ರಮ ಇಲ್ಲ ? ಎಂದು ಪ್ರಶ್ನಿಸಿದರು.

ಮಣಿಪುರ ಪ್ರಕರಣ ಮುಚ್ಚಿಹಾಕಲು ಉಡುಪಿಯ ವಿಡಿಯೋ ಪ್ರಕರಣದಲ್ಲಿ ಬಿಜೆಪಿ ಗಲಭೆ ಎಬ್ಬಿಸುತ್ತಿದೆ.

ಹಿಜಾಬ್ ಖ್ಯಾತಿಯ ಉಡುಪಿ ಶಾಸಕ ಸಮಾಜದಲ್ಲಿ ಅಶಾಂತಿ ಸೃಷ್ಟಿ ಮಾಡ್ತಿದ್ದಾರೆ, ಮಣಿಪುರದ ಬೆತ್ತಲೆ ಪ್ರಕರಣದ ಬಗ್ಗೆ ಈ ಶಾಸಕರು ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಎಬಿವಿಪಿಯವರು ದಲಿತ ಹೆಣ್ಮಕ್ಕಳನ್ನು ಅತ್ಯಾಚಾರ ಮಾಡಿ ದಾರಿಯಲ್ಲಿ ಎಸೆದು ಹೋದ ಸಂಧರ್ಭದಲ್ಲಿ ಬಿಜೆಪಿಯವರು ಮಾತನಾಡಿಲ್ಲ.

ನಳಿನ್‌ ಕುಮಾರ್ ಕಟೀಲು, ಶೋಭಾ, ಡಿ ವಿ ಸದಾನಂದ ಏಕೆ ಮಾತನಾಡಿಲ್ಲ ಎಂದು ಪ್ರಶ್ನಿಸಿದರು.

ಇಂಥ ಪರಿಸ್ಥಿತಿಯಲ್ಲಿ ಬಿಜೆಪಿಯವರ ಮನೋಭಾವ ಖಂಡನೀಯ. ದೇಶದ ಬಗ್ಗೆ ಇವರಿಗೆ ಚಿಂತನೆ ಇಲ್ಲ.

ಶೋಭಾಕ್ಕನ ಬಾಯಲ್ಲಿ ಲವ್ ಜಿಹಾದ್ ಬಗ್ಗೆ ಅವರಿಗೆ ಆಸಕ್ತಿಯೆ ಹೊರತು ಮಹಿಳಾ ರಕ್ಷಣೆ ಬಗ್ಗೆ ಚಿಂತನೆ ಇಲ್ಲ ಎಂದರು.

Click to comment

Leave a Reply

Your email address will not be published. Required fields are marked *

DAKSHINA KANNADA

ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂ*ಬ್ ಬೆದರಿಕೆ! ಇ ಮೇಲ್ ನಲ್ಲಿ ಏನಿದೆ?

Published

on

ಮಂಗಳೂರು : ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂ*ಬ್ ಬೆದರಿಕೆ ಹಾಕಲಾಗಿದೆ. ಹೀಗಾಗಿ ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಯಾಗಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ರಾಮೇಶ್ವರಂ ಕೆಫೆ ಸ್ಫೋ*ಟ ಪ್ರಕರಣವೇ ಇನ್ನೂ ಜೀವಂತವಿದೆ. ಅಲ್ಲದೇ, ಶಾಲೆಗಳಿಗೂ ಬೆದರಿಕೆ ಕರೆ ಬಂದಿದ್ದವು. ಇದೀಗ ಮಂಗಳೂರು ವಿಮಾನ ನಿಲ್ದಾಣಕ್ಕೆ ಬೆದರಿಕೆ ಕರೆ ಬಂದಿದೆ.


ಇ ಮೇಲ್ ಮೂಲಕ ಬಂತು ಬೆದರಿಕೆ :

ಕಳೆದ ಎಪ್ರಿಲ್‌ 29 ರಂದು ದೇಶದ ವಿವಿಧ ವಿಮಾನ ನಿಲ್ದಾಣಗಳಿಗೆ ಬಾಂಬ್‌ ಬೆದರಿಕೆ ಸಂದೇಶಗಳು ಇ-ಮೇಲ್ ಮೂಲಕ ರವಾನೆಯಾಗಿದ್ದು, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಅದೇ ದಿನ ಬಾಂಬ್‌ ಬೆದರಿಕೆ ಸಂದೇಶ ಬಂದಿತ್ತು ಎಂದು ತಡವಾಗಿ ಬೆಳಕಿಗೆ ಬಂದಿದೆ.
ಎಪ್ರಿಲ್‌ 29 ರಂದು ಬೆಳಗ್ಗೆ 9.37 ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಇ – ಮೇಲ್ ಐಡಿ ಗೆ ಅಪರಿಚಿತ ವ್ಯಕ್ತಿಯೊಬ್ಬ ತನ್ನ ಇ – ಮೇಲ್‌ ನಿಂದ ‘ವಿಮಾನ ನಿಲ್ದಾಣದಲ್ಲಿ ಮತ್ತು ವಿಮಾನದ ಒಳಗಡೆ ಸ್ಫೋಟಕಗಳನ್ನು ಇರಿಸಿದ್ದು, ಈ ಸ್ಫೋಟಕಗಳನ್ನು ಸ್ಫೋಟಿಸಿ ಜೀವ ಹಾನಿ ಮಾಡುವುದಾಗಿ’ ಬೆದರಿಕೆ ಸಂದೇಶ ಕಳುಹಿಸಿದ್ದನು.

ಇದನ್ನೂ ಓದಿ : ಉಪ್ಪಿನಂಗಡಿ : ಹೃದಯಾ*ಘಾತದಿಂದ ಮಲಗಿದ್ದಲ್ಲೇ ಇಹಲೋಕ ತ್ಯಜಿಸಿದ ಯುವಕ

ಈ ಬಗ್ಗೆ ವಿಮಾನ ನಿಲ್ದಾಣದ ಮುಖ್ಯ ಭದ್ರತಾ ಅಧಿಕಾರಿ ಮೋನಿಶ ಕೆ.ಜಿ. ಅವರು ನೀಡಿದ ದೂರಿನ ಆಧಾರದಲ್ಲಿ ಬಜಪೆ ಪೊಲೀಸ್‌ ಠಾಣೆಯಲ್ಲಿ ಐಪಿಸಿ 507 ಕಲಂ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯಲ್ಲಿದೆ ಎಂದು ಪೊಲೀಸ್‌ ಕಮಿಷನರ್‌ ಅನುಪಮ್‌ ಅಗರ್ವಾಲ್‌ ತಿಳಿಸಿದ್ದಾರೆ.
ಈ ಕುರಿತು ತನಿಖೆ ನಡೆಸಿದಾಗ ಅಪರಿಚಿತ ವ್ಯಕ್ತಿಯು ಇದೇ ರೀತಿ ಮಂಗಳೂರು ವಿಮಾನ ನಿಲ್ದಾಣ ಸೇರಿದಂತೆ ದೇಶದ 25 ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳಿಗೆ ಬೆದರಿಕೆ ಸಂದೇಶಗಳನ್ನು ಕಳುಹಿಸಿರುವುದು ಕಂಡು ಬಂದಿದೆ. ಆರೋಪಿಯ ಪತ್ತೆಗಾಗಿ ಬಜಪೆ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ ಎಂದು ಪೊಲೀಸ್‌ ಕಮಿಷನರ್‌ ವಿವರಿಸಿದ್ದಾರೆ.

ಇ ಮೇಲ್ ನಲ್ಲಿ ಏನಿದೆ ?

ಇ ಮೇಲ್ ನಲ್ಲಿ, ‘ಮಂಗಳೂರು ವಿಮಾನ ನಿಲ್ದಾಣದ ಆವರಣದಲ್ಲಿ ಸ್ಪೋಟಕಗಳನ್ನು ಇಡಲಾಗಿದೆ. ಮೂರು ವಿಮಾನದಲ್ಲಿಯೂ ಬಾಂಬ್ ಇಡಲಾಗಿದೆ. ಕೆಲವೇ ಗಂಟೆಗಳಲ್ಲಿ ದೊಡ್ಡಮಟ್ಟದ ರಕ್ತಪಾತ ನಡೆಯಲಿದೆ. ಈ ಕೃತ್ಯದ ಹಿಂದೆ ಟೆರರೈಸರ್ಸ್ 111 ಕೈವಾಡವಿದೆ’ ಎಂದು ಸಂದೇಶದಲ್ಲಿ ಬರೆಯಲಾಗಿದೆ.

Continue Reading

DAKSHINA KANNADA

ಮನೆಯಲ್ಲಿ ಒಂದಕ್ಕಿಂತ ಹೆಚ್ಚು ತುಳಸಿ ಗಿಡ ನೆಟ್ಟರೆ ಏನಾಗುತ್ತದೆ ನೋಡಿ..!

Published

on

ಮಂಗಳೂರು: ನಾವು ಯಾವುದೇ ಹಿಂದೂ ಧರ್ಮದವರ ಮನೆಗೆ ಹೋದಾಗ ಅಲ್ಲಿ ಏನು ನೋಡುತ್ತೇವೊ ಗೊತ್ತಿಲ್ಲ ಆದರೆ ಮನೆಯ ಎದುರೊಂದು ತುಳಸಿ ಗಿಡ ಇದ್ದೇ ಇರುತ್ತದೆ. ಯಾಕೆಂದರೆ ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ಪೂಜನೀಯ ಸ್ಥಾನ ಕೊಡುತ್ತಾರೆ. ಬೆಳಗ್ಗೆ ಎದ್ದ ಕೂಡಲೇ ಮಹಿಳೆಯರು ದೇವರಿಗೆ ದೀಪ ಇಟ್ಟು ಬಳಿಕ ತುಳಸಿ ಗಿಡಕ್ಕೆ ಕಲಶದಲ್ಲಿ ನೀರನ್ನು ಹಾಕುತ್ತಾರೆ.

ಕೆಲವರ ಮನೆಯಲ್ಲಿ ಒಂದೇ ತುಳಸಿ ಗಿಡವನ್ನು ನೋಡಿದರೆ ಇನ್ನು ಕೆಲವರ ಮನೆಯಲ್ಲಿ ಒಂದಕ್ಕಿಂತ ಹೆಚ್ಚು ತುಳಸಿ ಗಿಡ ಇರುತ್ತದೆ. ಆರೋಗ್ಯದ ಪ್ರಯೋಜನವಾಗಿಯೂ ಇದನ್ನು ಬಳಸುತ್ತಾರೆ. ಆದರೆ ಕೆಲವೊಂದು ನಿಯಮವನ್ನು ಅನುಸರಿಸುವುದು ಮುಖ್ಯವಾಗಿರುತ್ತದೆ. ಒಂದಕ್ಕಿಂತ ಹೆಚ್ಚು ತುಳಸಿ ಗಿಡವನ್ನು ಇಟ್ಟು ಕೊಂಡರೆ ಏನಾಗುತ್ತದೆ ಎಂಬುದರ ಬಗ್ಗೆ ತಿಳಿಯೋಣ.

ತುಳಸಿ ಗಿಡ ಬೆಸ ಸಂಖ್ಯೆಯಲ್ಲಿ ಇರಬೇಕು:

ಕೆಲವೊಂದು ಮನೆಯಲ್ಲಿ ತುಳಸಿ ಗಿಡ ಎಲ್ಲಾ ಕಡೆಯಲ್ಲಿ ಬೆಳೆಯುತ್ತದೆ. ಇನ್ನು ಕೆಲವು ಮನೆಯಲ್ಲಿ ನೆಟ್ಟ ಒಂದು ಗಿಡವೂ ಸರಿಯಾಗಿ ಉಳಿಯುವುದು ಕಷ್ಟ. ಆದರೆ ತುಳಸಿ ಗಿಡದ ಸಂಖ್ಯೆ ಬೆಸಸಂಖ್ಯೆಯಲ್ಲಿರಬೇಕು. 1, 3, 5, 7 ಹೀಗೆ ಬೆಸಸಂಖ್ಯೆಯಲ್ಲಿ ತುಳಸಿ ಗಿಡವನ್ನು ಮನೆಯಲ್ಲಿಟ್ಟುಕೊಳ್ಳಬೇಕು. ಈ ರೀತಿಯಾಗಿ ಇದ್ದರೆ ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ತುಳಸಿ ಗಿಡವನ್ನು ಹೀಗೆ ನೆಡಬೇಕು:

ತುಳಸಿ ಗಿಡವನ್ನು ನೇರವಾಗಿ ನೆಲದ ಮೇಲೆ ನೆಡಬಾರದು. ಇಂತಹ ತಪ್ಪನ್ನು ಎಂದಿಗೂ ಮಾಡಬಾರದು. ಈ ಸಸಿಯನ್ನು ಕುಂಡದಲ್ಲಿ ಅಥವಾ ತೊಟ್ಟೆಯಲ್ಲಿ ಪ್ರತ್ಯೇಕವಾಗಿ ನೆಡಬೇಕು. ಕುಂಡದಲ್ಲಿ ತುಳಸಿ ಗಿಡವನ್ನು ನೆಟ್ಟರೆ ಯಾವೂದೇ ರೀತಿಯ ಅಶುದ್ಧತೆಗಳು ತುಳಸಿ ಗಿಡವನ್ನು ಮುಟ್ಟುವುದಿಲ್ಲ.

ಈ ದಿನದಂದು ತುಳಸಿಯನ್ನು ಕೀಳಬಾರದು:

ತುಳಸಿ ಗಿಡವನ್ನು ಎಲ್ಲಾ ದಿನ ನೆಡಬಾರದು. ತುಳಸಿಯನ್ನು ಭಾನುವಾರದಂದು ಮತ್ತು ಏಕಾದಶಿಯ ದಿನದಂದು ನೆಡಬಾರದು ಮತ್ತು ಅದರ ಎಲೆಗಳನ್ನು ತೆಗೆಯಬಾರದು. ಈ ಎರಡು ದಿನ ತುಳಸಿಯನ್ನು ಕೀಳುವುದು ಮತ್ತು ಮುಟ್ಟುವುದು ಮಾಡಿದರೆ ಅಶುಭವೆಂದು ಹೇಳುತ್ತಾರೆ.

ತುಳಸಿಯನ್ನು ನಾವು ಮನೆಯಲ್ಲಿ ನೆಡುವಾಗ ಈ ಮೇಲಿನ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ನೆಡಬೇಕು. ಒಂದು ವೇಳೆ ನಿಮ್ಮ ಮನೆಯಲ್ಲಿ ಸಮ ಸಂಖ್ಯೆಯಲ್ಲಿ ತುಳಸಿ ಗಿಡವಿದ್ದರೆ ಯಾವೂದಾದರು ಒಂದನ್ನು ಬೇರೆಯವರಿಗೆ ದಾನ ಮಾಡಿ. ಇದರಿಂದ ಯಾವೂದೇ ರೀತಿಯ ಸಮಸ್ಯೆಗಳು ಉಂಟಾಗುವುದಿಲ್ಲ.

Continue Reading

DAKSHINA KANNADA

ಉಪ್ಪಿನಂಗಡಿ : ಹೃದಯಾ*ಘಾತದಿಂದ ಮಲಗಿದ್ದಲ್ಲೇ ಇಹಲೋಕ ತ್ಯಜಿಸಿದ ಯುವಕ

Published

on

ಉಪ್ಪಿನಂಗಡಿ : ಕೋವಿಶೀಲ್ಡ್‌ ಲಸಿಕೆಯಿಂದ ರಕ್ತ ಹೆಪ್ಪುಗಟ್ಟುವಿಕೆಯಂತ ಅಡ್ಡ ಪರಿಣಾಮದ ಬಗ್ಗೆ ಒಪ್ಪಿಕೊಂಡಿದ್ದ ಸೀರಂ ಸಂಸ್ಥೆಯಿಂದ ಭಾರತದ ಜನರಲ್ಲಿ ಆತಂಕ ಹೆಚ್ಚಾಗಿದೆ. ಕೋವಿಡ್ ಲಸಿಕೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿರುವಾಗಲೇ ಆರೋಗ್ಯವಾಗಿದ್ದ ಯುವಕನೊಬ್ಬ ಹೃದಯಾ*ಘಾತಕ್ಕೊಳಗಾಗಿ ಇಹಲೋಕ ತ್ಯಜಿಸಿದ್ದಾರೆ.


ಗಾರೆ ಕೆಲಸ ಮಾಡಿಕೊಂಡು ಆರೋಗ್ಯವಾಗಿದ್ದ 27 ವರ್ಷದ ಜನಾರ್ದನ ಎಂಬ ಯುವಕ ಅಸು ನೀಗಿದ್ದಾನೆ. ಉಪ್ಪಿನಂಗಡಿ ಸಮೀಪದ ನಿನ್ನಿಕಲ್ಲು ನಿವಾಸಿಯಾಗಿದ್ದ ಜನಾರ್ದನ ಮೇಸ್ತ್ರಿಯಾಗಿ ಗಾರೆ ಕೆಲಸ ಮಾಡಿಕೊಂಡಿದ್ದರು. ಶುಕ್ರವಾರ ಮಧ್ಯಾಹ್ನ ಕೆಲಸಕ್ಕೆ ರಜೆ ಹಾಕಿ ಬಂದಿದ್ದ ಅವರು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು.ಈ ವೇಳೆ ನಿದ್ರೆಗೆ ಜಾರಿದ ಜನಾರ್ದನ್ ಮತ್ತೆ ಮೇಲೆದ್ದಿಲ್ಲ.

ಇದನ್ನೂ ಓದಿ : ಸಿಡಿಲ ಬಡಿತಕ್ಕೆ ನವವಿವಾಹಿತ ದುರ್ಮರ*ಣ..!10 ದಿನಗಳ ಹಿಂದೆಯಷ್ಟೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಯುವಕ ವಿಧಿಯಾಟಕ್ಕೆ ಬ*ಲಿ!!

ಮಗ ಮಲಗಿದ್ದಾನೆ ಅಂತ ತಾಯಿ ತೋಟದ ಕೆಲಸಕ್ಕೆ ಹೋಗಿದ್ದು ಸಂಜೆ ಬಂದು ಮಗನನ್ನು ಎಬ್ಬಿಸಿದಾಗಲೇ ವಿಚಾರ ಗೊತ್ತಾಗಿದೆ. ಕರೆದರೂ ಮಗ ಎದ್ದಿಲ್ಲ ಎಂದು ತಾಯಿ ಮಗನನ್ನು ಅಲುಗಾಡಿಸಿ ಎಚ್ಚರಿಸುವ ಪ್ರಯತ್ನ ನಡೆಸಿದ್ದಾರೆ. ಆದರೆ, ಆ ವೇಳೆ ಯಾವುದೇ ರೆಸ್ಪಾನ್ಸ್‌ ಇಲ್ಲದ ಕಾರಣ ತಾಯಿಗೆ ಅನುಮಾನ ಬಂದು ಉಸಿರು ಪರಿಶೀಲಿಸಿದಾಗ ಮಗ ಮೃ*ತಪಟ್ಟಿರುವುದು ಆರಿವಾಗಿದೆ.

 

Continue Reading

LATEST NEWS

Trending