Thursday, September 29, 2022

“ಬಂಟನಾಗಬೇಕಾದರೆ ಆತನಿಗೆ ಎಂಟೆದೆ ಬೇಕು ಅದು ನಿಮ್ಮ ರಕ್ತದಲ್ಲಿದೆ”

ಮಂಗಳೂರು: ಬಂಟನಾಗಬೇಕಾದರೆ ಆತನಿಗೆ ಎಂಟೆದೆ ಬೇಕು. ಅದು ನಿಮ್ಮ ರಕ್ತದ ಕಣದಲ್ಲಿದೆ. ಯಾವುದು ಜಗತ್ತಿಗೆ ಅಸಾಧ್ಯವೋ ಅದನ್ನು ನೀವು ಸಾಧ್ಯ ಮಾಡಿ ತೋರಿಸಿದ್ದು ಬಂಟರು ಎಂದು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.


ಮಹಾರಾಷ್ಟ್ರದ ಬಂಟ ಸಂಘ ಪುಣೆ ಇದರ ನಾಲ್ಕನೇ ವರ್ಷಾಚರಣೆ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ನೀವು ನಮ್ಮವರು ನಮ್ಮೂರಿನವರು. ಮಣ್ಣಿನ ಹಾಗೂ ತಾಯಿ ಖುಣ ಭಾರೀ ಮಹತ್ವದ್ದು.

ಯಾರೂ ಮಣ್ಣಿನ ಖುಣವನ್ನು ಮನಸ್ಸಿನಲ್ಲಿಟ್ಟುಕೊಂಡು ತೀರಿಸುವ ಪ್ರಯತ್ನ ಮಾಡುತ್ತಾರೆ ಅವರೇ ನಿಜವಾದ ಬಂಟರು ಎಂದು ತಿಳಿದುಕೊಂಡಿದ್ದೇನೆ. ಬಂಟ ಅನ್ನು ಹೆಸರಿನಲ್ಲಿಯೇ ಶಕ್ತಿ ಇದೆ. ಈ ನಾಮ ಪಡೆದ ನೀವು ಧನ್ಯರು.

ನಿಮ್ಮೂರಲ್ಲಿ ಶಕ್ತಿ ಪ್ರದರ್ಶನ ಮಾಡುವುದು ದೊಡ್ಡದಲ್ಲ. ಆದರೆ ನೀವು ಎಲ್ಲೆ ಹೋದರೂ ನಿಮಗೊಂದು ಗೌರವ ಇದೆ. ಕೆಲವೆಡೆ ಬಂಟರ ಹೆಸರು ಕೇಳಿದರೆ ಎರಡು ಹೆಜ್ಜೆ ಹಿಂದೆ ನಿಂತು ಮಾತನಾಡುತ್ತಾರೆ.

ನೀವು ಎಲ್ಲಿದ್ದಿರಿ ಅಲ್ಲಿ ಸ್ನೇಹ, ಪ್ರೀತಿ ವಿಶ್ವಾಸದಿಂದ ಗೆದ್ದಿದ್ದೀರಿ. ಬಂಟ ಸಂಘದಿಂದ ಕನ್ನಡದ ಗುರುತಿಸಿದ್ದೀರಿ. ನಿಮ್ಮ ಹೆಸರಿನ ಜೊತೆ ಊರಿನ ಹೆಸರು ಹಾಕುವುದನ್ನು ಮರೆತಿಲ್ಲ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಪ್ರಕಾಶ್‌ ಶೆಟ್ಟಿ, ಮಟ್ಟಾರು ರತ್ನಾಕರ ಹೆಗ್ಡೆ, ಸಂತೋಷ್‌ ಶೆಟ್ಟಿ, ಐಕಳ ಹರೀಶ್‌ ಶೆಟ್ಟಿ, ಪ್ರವೀಣ್‌ ಶೆಟ್ಟಿ ಗುರ್ಮೆ, ಸುರೇಶ್‌ ಶೆಟ್ಟಿ ಸೇರಿ ಹಲವರಿದ್ದರು.

LEAVE A REPLY

Please enter your comment!
Please enter your name here

Hot Topics

ದ್ವೇಷದ ಕಿಚ್ಚು ಹಚ್ಚುವ ಸಂಘಟನೆಗಳ ವಿರುದ್ಧ ತಾರತಮ್ಯವಿಲ್ಲದೇ ಕ್ರಮ ಕೈಗೊಳ್ಳಿ: ಖಾದರ್‌ ಕಿಡಿ

ಮಂಗಳೂರು: ಸರ್ಕಾರ ಕೆಲವು ನೀತಿಗಳಲ್ಲಿ ತಾರತಮ್ಯ ಮಾಡುತ್ತದೆ. ಪರಿಹಾರ ಕೊಡುವುದರಲ್ಲಿ ಕೂಡಾ ಸರ್ಕಾರ ಭೇಧಭಾವ ಮಾಡಿದೆ. ಈ ರೀತಿಯ ತಾರತಮ್ಯ ಧೋರಣೆಯನ್ನು ನಾವು ಸಹಿಸುವುದಿಲ್ಲ. ಪಿಎಫ್‌ಐ ಬ್ಯಾನ್ ಮಾಡಿದಂತೆ ಯಾವ ಸಂಘಟನೆಗಳು ದೇಶದಲ್ಲಿ...

ಉಡುಪಿ: ರಸ್ತೆ ಅವ್ಯವಸ್ಥೆ-ಕೋಣಗಳ ಜೊತೆ ಕಾಂಗ್ರೆಸ್ ಕಾರ್ಯಕರ್ತರ ವಿನೂತನ ಪ್ರತಿಭಟನೆ

ಉಡುಪಿ: ಮಲ್ಪೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದ್ದು ಪ್ರವಾಸಿಗರ ಸಂಚಾರಕ್ಕೆ ತೊಡಕು ಉಂಟಾಗುತ್ತಿದೆ. ಸದ್ಯ ಪ್ರವಾಸಿಗರ ಸಂಖ್ಯೆ ಹೆಚ್ಚಳದಿಂದ ದಿನನಿತ್ಯ ಟ್ರಾಫಿಕ್ ಜಾಮ್ ಆಗುತ್ತಿದೆ. ಪ್ರವಾಸಿಗರು ಹಾಗೂ ಸ್ಥಳೀಯರು ಅನುಭವಿಸುತ್ತಿರುವ ಕಷ್ಟವನ್ನು...

ಉಡುಪಿ: ಗಿರಿಜಾ ಹೆಲ್ತ್‌ಕೇರ್ & ಸರ್ಜಿಕಲ್ಸ್‌ನಲ್ಲಿ ‘ಫಾರ್ಮಾಸಿಸ್ಟ್‌ ಡೇ’ ಆಚರಣೆ

ಉಡುಪಿ: ಗಿರಿಜಾ ಹೆಲ್ತ್‌ಕೇರ್ ಆ್ಯಂಡ್ ಸರ್ಜಿಕಲ್ಸ್‌ನಲ್ಲಿ ಗಿರಿಜಾ ಗ್ರೂಪ್ ಆಫ್ ಕನ್ಸರ್ನ್ಸ್‌ ವತಿಯಿಂದ ಫಾರ್ಮಾಸಿಸ್ಟ್‌ ದಿನವನ್ನು ಉಡುಪಿಯಲ್ಲಿ ಆಚರಿಸಲಾಯಿತು.ಉಡುಪಿಯ ಸೀನಿಯರ್ ಸಿಟಿ ಲೀಗನ್ ಸಹಕಾರದೊಂದಿಗೆ ಉಡುಪಿ ಭಾಗದ ಕೆಲ ಹಿರಿಯ ಫಾರ್ಮಸಿಸ್ಟ್ ಗಳನ್ನು...