Thursday, September 29, 2022

ಮಂಗಳೂರಿನಲ್ಲೇ ಹಾರುತಿಹುದು 70 ವರ್ಷ ಹಳೆಯದಾದ ಅಪ್ಪಟ ಖಾದಿ ತಿರಂಗಾ..!

ವಿಶೇಷ ವರದಿ

ಮಂಗಳೂರು: ದೇಶಾದೆಲ್ಲೆಡೆ ಸ್ವಾತಂತ್ರ್ಯದ ಅಮೃತಮಹೋತ್ಸವದ ಸಂಭ್ರಮ. ಕಳೆದೆರಡು ದಿನಗಳಿಂದ ಎಲ್ಲರ ಮನೆ-ಮನಗಳಲ್ಲಿ ತ್ರಿವರ್ಣ ಧ್ವಜ ರಾರಾಜಿಸುತ್ತಿದೆ. ಮಂಗಳೂರಿನ ಹಲವು ಕಟ್ಟಡಗಳು ರಾತ್ರಿ ವೇಳೆ ತಿರಂಗಾ ಬಣ್ಣದಲ್ಲಿ ಕಣ್ಮನ ಸೆಳೆಯುತ್ತಿದೆ.

ಈ ಮಧ್ಯೆ ಮಂಗಳೂರಿನಲ್ಲೇ ಸರಿ ಸುಮಾರು 70 ವರ್ಷಕ್ಕಿಂತಲೂ ಹಳೆಯದಾದ ಅಪ್ಪಟ ಖಾದಿಯ ರಾಷ್ಟ್ರಧ್ವಜವೊಂದು ಹಾರಾಡುತ್ತಿದೆ.


ಹೌದು ಮಂಗಳೂರು ನಗರದ ಪದವಿನಂಗಡಿಯ ಪೆರ್ಲಗುರಿಯ ಸುರೇಂದ್ರ ಬಾಬುಗುಡ್ಡೆ ಎಂಬುವವರ ಮನೆಯಲ್ಲಿ ಈ ಬಾವುಟ ರಾರಾಜಿಸುತ್ತಿದೆ. ಸುರೇಂದ್ರ ಅವರ ತಂದೆ ದಿ. ಬೇಕಲ ಲಕ್ಷ್ಮೀನಾರಾಯಣ ಅವರು ಮೂಲತಃ ಪಕ್ಕದ ಕಾಸರಗೋಡಿನ ಬೇಕಲದವರು.

ತನ್ನ ಯವ್ವನದ ಕಾಲದಲ್ಲಿ ಉದ್ಯೋಗ ಅರಸಿಕೊಂಡು ಮುಂಬೈಗೆ ಹೋಗಿದ್ದರು. ಅಲ್ಲಿ ಅಗರ್ಭ ಶ್ರೀಮಂತ ಶೇಟ್‌ ಒಬ್ಬರ ಅಂದಿನ ಕಾಲದ ಆಸ್ಟಿನ್‌ ಕಾರಿನ ಡ್ರೈವರ್‌ ಆಗಿ ಕೆಲಸಕ್ಕೆ ಸೇರಿಕೊಂಡರಂತೆ.

ಅಲ್ಲೇ ಉದ್ಯೋಗ ಮಾಡಿಕೊಂಡಿದ್ದ ಅವರು ಕಾರಣಾಂತರಗಳಿಂದ 1950 ರಲ್ಲಿ ಮುಂಬೈ ತೊರೆದು ಮಡದಿ ಮಕ್ಕಳ ಸಮೇತ ಮಂಗಳೂರಿಗೆ ಬಂದು ನೆಲೆಸಿದ್ದರು. ಆಗ ತಮ್ಮ ಜೊತೆ ಬಟ್ಟೆ ಬರೆ ಸಮೇತ ಟ್ರಂಕ್‌(ಕಬ್ಬಿಣದ ಪೆಟ್ಟಿಗೆ)ಯನ್ನು ತಂದಿದ್ದರು.

ಲಕ್ಷ್ಮೀನಾರಾಯಣ ಅವರು ತನ್ನ ಶತ ವಯಸ್ಸಿನಲ್ಲಿ ಅಂದರೆ 1994ರ ಮಾ.12 ರಂದು ಮಂಗಳೂರಿನಲ್ಲೇ ನಿಧನ ಹೊಂದಿದರು. ಕೆಲ ಸಮಯದ ಹಿಂದೆ ಲಕ್ಷ್ಮೀನಾರಾಯಣ ಅವರು ತನ್ನ ಮನೆಯಲ್ಲಿದ್ದ ಹಳೇ ಟ್ರಂಕ್‌ ತೆರೆದಾಗ ಅದರಲ್ಲಿ ಅಪ್ಪಟ ಖಾದಿಯ ತ್ರಿವರ್ಣ ಧ್ವಜವೊಂದು ಕಂಡಿದೆ.

ಇದೀಗ ಭಾರತ 75ರ ಸ್ವಾತಂತ್ರ್ಯ ಸಂಭ್ರದಲ್ಲಿರುವ ವೇಳೆ ಪ್ರಧಾನಿ ಆಶಯದಂತೆ ಮನೆ-ಮನಗಳಲ್ಲಿ ಹಾರಾಡಲು ಎಂದು ಕರೆ ನೀಡಿದಾಗ ತಮ್ಮಲ್ಲಿದ್ದ ತ್ರಿವರ್ಣ ಧ್ವಜ ನೆನಪಾಗಿ ನಿನ್ನೆ (ಆ.13) ಬೆಳಗ್ಗೆ 8 ಘಂಟೆಗೆ ತಿರಂಗಾ ಹಾರಿಸಿದ್ದಾರೆ.

ಏನಿದರ ವಿಶೇಷತೆ
ಈ ರಾಷ್ಟ್ರಧ್ವಜವು ಅಪ್ಪಟ ಖಾದಿಯಾಗಿದೆ. ಜೊತೆಗೆ 46 ಇಂಚು ಉದ್ದ ಹಾಗೂ 45 ಇಂಚು ಅಗಲವನ್ನು ಈ ಧ್ವಜ ಹೊಂದಿದೆ. 7 ದಶಕ ಕಳೆದರೂ ಈ ಧ್ವಜ ತ್ರಿವರ್ಣ ಹಾಗೂ ಆಶೋಕ ಚಕ್ರದ ಬಣ್ಣವೇ ಮಾಸಿಲ್ಲ ಎಂಬುವುದು ವಿಶೇಷ.

ನನಗೀಗ 73 ವಯಸ್ಸು, ನಾನು ಹುಟ್ಟಿದ ಕೆಲವೇ ವರ್ಷಗಳಲ್ಲಿ ತಂದೆ ಮುಂಬೈ ತೊರೆದು ಮಂಗಳೂರಿಗೆ ಬಂದು ನೆಲೆಸಿದ್ದರು. ಆಗ ಟ್ರಂಕ್‌ ಜೊತೆ ಈ ತ್ರಿವರ್ಣ ಧ್ವಜವನ್ನು ತಂದಿದ್ದಾರೆ.
ಸುರೇಂದ್ರ ಬಾಬುಗುಡ್ಡೆ, ಮಂಗಳೂರು

LEAVE A REPLY

Please enter your comment!
Please enter your name here

Hot Topics

ಪುತ್ತೂರಿನಲ್ಲಿ ಜಾಗದ ತಕರಾರು: V.A ಕಚೇರಿಗೆ ನುಗ್ಗಿ ದಾಂಧಲೆ-ಮಾರಕಾಸ್ತ್ರಗಳಿಂದ ಹತ್ಯೆ ಯತ್ನ

ಪುತ್ತೂರು: ಜಾಗದ ತಕರಾರಿಗೆ ಸಂಬಂಧಪಟ್ಟಂತೆ ವ್ಯಕ್ತಿಯೊಬ್ಬ ಸವಣೂರು ಕಂದಾಯ ಕಛೇರಿಗೆ ನುಗ್ಗಿ ತಲವಾರಿನಿಂದ ಹಲ್ಲೆಗೆ ಮುಂದಾಗಿ, ಕಲ್ಲು ಎತ್ತುಹಾಕಿ ಕೊಲೆಗೆ ಯತ್ನಿಸಿದ ಘಟನೆ ಪುತ್ತೂರಿನ ಸವಣೂರು ಜಂಕ್ಷನ್ ನಲ್ಲಿ ಇಂದು ನಡೆದಿದೆ.ಸವಣೂರು ಗ್ರಾಮದ...

ಸುಳ್ಯ: ಮಾಡರ್ನ್‌ಯುಗಕ್ಕೆ ಹೊಂದಿಕೊಂಡ ಕಾಗೆ ತನ್ನ ಗೂಡು ಹೆಣೆದಿದ್ದು ಕಬ್ಬಿಣದ ತಂತಿಯಲ್ಲಿ..!

ಸುಳ್ಯ: ಕಾಗೆಯೊಂದು ಕಬ್ಬಿಣದ ತಂತಿಗಳನ್ನೇ ಬಳಸಿ ಗೂಡು ಹೆಣೆದಿರುವ ಅದ್ಭುತ ಘಟನೆ ಸುಳ್ಯದ ಚೊಕ್ಕಾಡಿಯಲ್ಲಿ ನಡೆದಿದೆ.ಚೊಕ್ಕಾಡಿಯ ಭಗವಾನ್ ಶ್ರೀ ಸತ್ಯಸಾಯಿ ವಿದ್ಯಾಕೇಂದ್ರದ ಆವರಣದಲ್ಲಿ ಸ್ವಚ್ಚತೆ ಕಾರ್ಯ ಕೈಗೊಂಡ ವೇಳೆ ಮರವೊಂದರ ಕೊಂಬೆಯಲ್ಲಿ ಈ...

ತ್ರಿಶೂಲ ವಿತರಣೆ ಮಾಡಿ ಗಲಭೆಗೆ ಕುಮ್ಮಕ್ಕು ನೀಡುವ ಭಜರಂಗದಳ ಮಾಡುತ್ತಿರುವುದು ಸರಿಯೇ..?

ಮಂಗಳೂರು: ಇಲ್ಲಿ ಗಲಭೆಗೆ ಕಾರಣವಾಗುತ್ತಿರುವುದು ಕೇವಲ ಈ ಒಂದು ಸಂಘಟನೆ ಮಾತ್ರವೇ...? ಭಜರಂಗದಳದವರು ತ್ರಿಶೂಲ ವಿತರಣೆ ಮಾಡಿ ಗಲಭೆಗೆ ಕುಮ್ಮಕ್ಕು ನೀಡಿಲ್ಲವೇ ಎಂದು ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೆ ಅಶ್ರಫ್‌ ಪ್ರಶ್ನಿಸಿದ್ದಾರೆ.ಕೇಂದ್ರ ಗೃಹ...