Connect with us

    ಷರತ್ತುಬದ್ಧವಾಗಿ ಕೇರಳ ಗಡಿಭಾಗ ತೆರವು: ತೀರ್ಪು ಸಮಂಜಸವಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ ಜಿ.ಪಂ ಸದಸ್ಯ

    Published

    on

    ಷರತ್ತುಬದ್ಧವಾಗಿ ಕೇರಳ ಗಡಿಭಾಗ ತೆರವು: ತೀರ್ಪು ಸಮಂಜಸವಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ ಜಿ.ಪಂ ಸದಸ್ಯ

    ಉಳ್ಳಾಲ: ಸುಪ್ರೀಂಕೋರ್ಟ್ ತೀರ್ಪಿನಿಂದ ಕಾಸರಗೋಡು ಭಾಗದವರಿಗೆ ಸಹಕಾರಿಯಾಗಲು ಸಾಧ್ಯವಿಲ್ಲ. ಕಾಸರಗೋಡು ಆಸ್ಪತ್ರೆಯಿಂದ ಅನುಮತಿ ಪಡೆದು ರೋಗಿಗಳನ್ನು ಕರೆತರುವುದು ಅಸಾಧ್ಯ.

    ತುರ್ತು ಸಂದರ್ಭದಲ್ಲಿ ಸರಕಾರಿ ಆಸ್ಪತ್ರೆಯಿಂದ ಪತ್ರ ಪಡೆದು ತರುವುದು ಹೇಗೆ ಸಾಧ್ಯ.?. ಅಲ್ಲದೆ ಸೀಮಿತ ಆಂಬ್ಯುಲೆನ್ಸ್ ಇರುವ ಕಾಸರಗೋಡು ಸರಕಾರಿ ಆಸ್ಪತ್ರೆಗಳಿಂದ ರೋಗಿಗಳನ್ನು ತರುವುದು ಅಸಾಧ್ಯದ ಮಾತು.

    ತೀರ್ಪು ಸಮಂಜಸ ಆಗಿಲ್ಲ. ಈ ನಿಟ್ಟಿನಲ್ಲಿ ಇಂದು ಮತ್ತೆ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಲಿದ್ದೇವೆ ಎಂದು ಕಾಸರಗೋಡು ಜಿ.ಪಂಚಾಯತ್ ಸದಸ್ಯ ಅರ್ಶಾದ್ ವರ್ಕಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇತ್ತ ಸುಪ್ರೀಂಕೋರ್ಟ್ ತೀರ್ಪಿನಂತೆ ಜಿಲ್ಲಾಡಳಿತ ಆದೇಶದನ್ವಯ ಷರತ್ತಿನ ಮೇಲೆ ಆಂಬ್ಯುಲೆನ್ಸ್ ಸಂಚರಿಸಲು ಅನುಮತಿ ನೀಡಿದೆ.

    ದ.ಕ.ಜಿಲ್ಲಾಡಳಿತ ಕೇರಳದಿಂದ ಆಗಮಿಸುವ ರೋಗಿಗಳಿಗೆ ಷರತ್ತುಗಳಿರುವ ಅರ್ಜಿ ನಮೂನೆಯನ್ನು ಜಿಲ್ಲಾಡಳಿತದ ವೆಬ್ ಸೈಟ್ ನಲ್ಲಿ ಪ್ರಕಟಿಸಿದ್ದು,

    ಈ ಅರ್ಜಿ ನಮೂನೆಯನ್ನು ಕಾಸರಗೋಡು ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಾಮಾಣಿಕರಿಸಿದ ಬಳಿಕ ಅವರ ಅನುಮತಿ ಪಡೆದು ಮಂಗಳೂರಿನ ಆಸ್ಪತ್ರೆಗೆ ಶಿಫಾರಾಸ್ಸು ಮಾಡಿದರೆ ಮಾತ್ರ ಆಂಬುಲೆನ್ಸ್ ನಲ್ಲಿ ಬರುವ ರೋಗಿಗಳಿಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲು ಅವಕಾಶವಿದೆ.

    ಕೋವಿಡ್ 19 ಪ್ರಕರಣಗಳು ಕಾಸರಗೋಡಿನಾದ್ಯಂತ ಅಧಿಕ ಆಗಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಗಡಿಭಾಗ ಸಂಪೂರ್ಣ ಬಂದ್ ಮಾಡಲಾಗಿತ್ತು.

    ರೋಗಿಯನ್ನು ಸರಕಾರಿ ಆಂಬ್ಯುಲೆನ್ಸ್‍ನಲ್ಲೇ ತರಬೇಕಿದೆ. ಸರಕಾರಿ ಆಸ್ಪತ್ರೆ ವೈದ್ಯರ ಸೂಚನೆ ಪತ್ರದ ಮೇರೆಗೆ ತರಬೇಕಿದೆ.

    ತುರ್ತು ಚಿಕಿತ್ಸೆ ಹಾಗೂ ಕೇರಳದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಾಧ್ಯವಿಲ್ಲ ಅನ್ನುವ ವೈದ್ಯರ ಸೂಚನೆಯ ಪತ್ರದ ಜೊತೆಗೆ ರೋಗಿ ನಾನ್ ಕೋವಿಡ್ 19 ಅನ್ನುವ ವೈದ್ಯಕೀಯ ಪರೀಕ್ಷೆಯ ಪತ್ರವನ್ನು ತರಬೇಕು

    ಮತ್ತು ಆಂಬ್ಯುಲೆನ್ಸ್ ನಲ್ಲಿ ಚಾಲಕ ಬಿಟ್ಟು ರೋಗಿ ಜೊತೆಗೆ ಒಬ್ಬನೇ ಇರಬೇಕು ಅನ್ನುವ ಷರತ್ತುಗಳನ್ನು ಹಾಕಲಾಗಿದೆ.

    ಆಂಬ್ಯುಲೆನ್ಸ್ ಬಂದಾಗ ಹೆಲ್ಮೆಟ್ ಮಾಸ್ಕ್ ಧರಿಸಿರುವ 18 ಮಂದಿ ಪೊಲೀಸರು ಕೇರಳದಿಂದ ಬರುವ ರೋಗಿಗಳ ಜೊತೆಗೆ ಆರೋಗ್ಯ ಅಧಿಕಾರಿಗಳ ಜೊತೆಗೆ ಪರಿಶೀಲನೆ ವೇಳೆ ಭಾಗವಹಿಸಲಿದ್ದಾರೆ.

    ಗಡಿಭಾಗ ತೆರವು ಕುರಿತು ಪೊಲೀಸರಿಗೆ ಮಾಹಿತಿ ನೀಡುವ ಸಲುವಾಗಿ ಡಿಸಿಪಿ ಅರುಣಾಂಶುಗಿರಿ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ನೀಡಿದರು.

    ಇವರ ಜತೆಗೆ ಕೋವಿಡ್ 19 ನಿಗ್ರಹ ಪಡೆಯ ವಿಶೇಷ ಆರೋಗ್ಯ ಅಧಿಕಾರಿ ಡಾ.ಭುಜಂಗ ಶೆಟ್ಟಿ ಹಾಗೂ ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ರಾಜೇಶ್ವರಿ ಉಪಸ್ಥಿತರಿದ್ದರು.

    ಸ್ಥಳದಲ್ಲಿ ಸಹಾಯಕ ಪೊಲೀಸ್ ಆಯುಕ್ತ ಕೋದಂಡರಾಮ, ಉಳ್ಳಾಲ ಠಾಣಾಧಿಕಾರಿ ಅನಿಲ್ ಕುಮಾರ್ ಇದ್ದರು.

    Click to comment

    Leave a Reply

    Your email address will not be published. Required fields are marked *

    LATEST NEWS

    ಬೆಂಗಳೂರಿನಲ್ಲಿ ಮಹಿಳೆಯ ಬರ್ಬರ ಹ*ತ್ಯೆ – 20ಕ್ಕೂ ಹೆಚ್ಚು ತುಂಡು ಮಾಡಿ ಫ್ರಿಡ್ಜ್‌ನಲ್ಲಿಟ್ಟು ಆರೋಪಿ ಎಸ್ಕೇಪ್

    Published

    on

    ಬೆಂಗಳೂರು: ಮಹಿಳೆಯೊಬ್ಬರನ್ನು ಭೀಕರವಾಗಿ ಕೊ*ಲೆ ಮಾಡಿ 20ಕ್ಕೂ ಹೆಚ್ಚು ತುಂಡುಗಳನ್ನಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟು ಆರೋಪಿ ಎಸ್ಕೇಪ್ ಆಗಿರುವ ಘಟನೆ ಬೆಂಗಳೂರಿನ ವೈಯಾಲಿಕಾವಲ್‌ನ ವಿನಾಯಕ ನಗರದಲ್ಲಿ ನಡೆದಿದೆ.

    ಮಹಿಳೆಯನ್ನು ಕೊಂ*ದು ನಂತರ ಮೃ*ತದೇಹವನ್ನು ಪೀಸ್ ಪೀಸ್ ಆಗಿ ಕತ್ತರಿಸಿ ಬಳಿಕ ಫ್ರಿಡ್ಜ್‌ನಲ್ಲಿಟ್ಟು ಆರೋಪಿ ಪರಾರಿಯಾಗಿದ್ದಾನೆ. ಹ*ತ್ಯೆ ಬಳಿಕ ಮಾಂಸದ ಗುಡ್ಡೆ ಮಾಡಿ ಫ್ರಿಡ್ಜ್‌ನಲ್ಲಿ ಇರಿಸಿ ಮಗುವನ್ನು ಮನೆಯಲ್ಲೇ ಬಿಟ್ಟು ಆರೋಪಿ ಎಸ್ಕೇಪ್ ಆಗಿದ್ದಾನೆ. 15 ದಿನಗಳ ಹಿಂದೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    2-3 ತಿಂಗಳಿನಿಂದ ಮನೆಯಲ್ಲಿ ಬಾಡಿಗೆಗಿದ್ದರು. ಇಂದು ಸಂಬಂಧಿಕರು ಬೀಗ ಒಡೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ವೈಯಾಲಿಕಾವಲ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ವೈಯಾಲಿಕಾವಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಯ ಪತ್ತೆಗಾಗಿ ತನಿಖೆ ಮುಂದುವರೆದಿದೆ.

    Continue Reading

    LATEST NEWS

    ಶಿರೂರು ಗುಡ್ಡ ಕುಸಿತ; ಕೊನೆಗೂ ನಾಪತ್ತೆಯಾಗಿದ್ದ ಟ್ರಕ್‌ ಪತ್ತೆ

    Published

    on

    ಕಾರವಾರ: ಶಿರೂರು ಭೂ ಕುಸಿತದ ಬಳಿಕ ಗಂಗಾವಳಿ ನದಿಯಾಳದಲ್ಲಿ ಬಿದ್ದ ಟ್ರಕ್‌ ಕೊನೆಗೂ ಪತ್ತೆಯಾಗಿದೆ.

    ಜುಲೈ 16 ರಂದು ಭೂ ಕುಸಿತ ಸಂಭವಿಸಿದ ಬಳಿಕ ಕೇರಳದ ಅರ್ಜುನ್‌ ಚಲಾಯಿಸುತ್ತಿದ್ದ ಟ್ರಕ್‌ ಗಂಗಾವಳಿ ನದಿಗೆ ಬಿದ್ದಿತ್ತು. ನದಿಯಲ್ಲಿ ನೀರಿನ ಪ್ರಮಾಣ ಜಾಸ್ತಿ ಇದ್ದ ಕಾರಣ ಟ್ರಕ್‌ ಪತ್ತೆ ಮಾಡಲು ಕಷ್ಟವಾಗಿತ್ತು. ಮುಳುಗು ತಜ್ಞ ಈಶ್ವರ ಮಲ್ಪೆ ಅವರು ಟ್ರಕ್‌ ಪತ್ತೆಗೆ ನಿರಂತರ ಪ್ರಯತ್ನ ನಡೆಸುತ್ತಿದ್ದರು.

    ಈಗ ಟ್ರಕ್‌ ಗುಡ್ಡ ಕುಸಿತಗೊಂಡ ಜಾಗದ ಬಳಿಯೇ ಸಿಕ್ಕಿ ಬಿದ್ದಿದೆ. ಟ್ರಕ್‌ ಮೇಲೆ ಸಾಕಷ್ಟು ಕಲ್ಲು ಮತ್ತು ಮಣ್ಣುಗಳಿವೆ. ಹೀಗಾಗಿ ಮಣ್ಣು ಮತ್ತು ಕಲ್ಲುಗಳನ್ನು ತೆಗೆದು ಟ್ರಕ್‌ ಮೇಲಕ್ಕೆ ಎತ್ತಲು ಸಿದ್ಧತೆ ನಡೆಯುತ್ತಿದೆ.

    ಜುಲೈ 16 ರಂದು ಭೂಕುಸಿತ ಸಂಭವಿಸಿದಾಗ ಅರ್ಜುನ್ ಮರ ತುಂಬಿಸಿಕೊಂಡು ಟ್ರಕ್‌ನಲ್ಲಿ ಕೋಝಿಕ್ಕೋಡ್‌ ಕಡೆಗೆ ಹೋಗುತ್ತಿದ್ದರು.

    Continue Reading

    FILM

    ಜಾನಿ ಮಾಸ್ಟರ್ ಪತ್ನಿಗೂ ಬಂತು ಕಂಟಕ..! ಅತ್ಯಾಚಾರ ಪ್ರಕರಣಕ್ಕೆ ಟ್ವಿಸ್ಟ್..!!

    Published

    on

    ಹೈದರಾಬಾದ್/ಮಂಗಳೂರು: ಜಾನಿ ಮಾಸ್ಟರ್ ಮೇಲಿರುವ ನೃತ್ಯ ನಿರ್ದೇಶಕಿಯ ಅತ್ಯಾಚಾರ ಆರೋಪಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಜಾನಿ ಮಾಸ್ಟರ್ ಪತ್ನಿ ಆಯಿಷಾ ಮೇಲೂ ಕ್ರಮಕೈಗೊಳ್ಳಲು ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ.

    ಈಗಾಗಲೇ ಜಾನಿ ಮಾಸ್ಟರ್‌ ನನ್ನು ಡ್ಯಾನ್ಸ್‌ ನಿರ್ದೇಶಕಿ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪದಡಿಯಲ್ಲಿ ಗೋವಾ ಪೊಲೀಸರು ಬಂಧಿಸಿ ಹೈದರಾಬಾದ್‌ನ ಚಂಚಲ್‌ ಗುಡಾ ಜೈಲಿಗೆ ಕಳುಹಿಸಿದ್ದಾರೆ. ನೃತ್ಯ ಸಂಯೋಜಕಿಯೊಬ್ಬಳು ನನ್ನ ಮೇಲೆ ಜಾನಿ ಮಾಸ್ಟರ್ ಅತ್ಯಾಚಾರವೆಸಗಿದ್ದಾರೆ ಹಾಗೂ ಅವರ ಪತ್ನಿ ಆಯಿಷಾ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ನರಸಿಂಗ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ಖ್ಯಾತ ಕೊರಿಯೋಗ್ರಾಫರ್ ಜಾನಿ ಮಾಸ್ಟರ್ ಅರೆಸ್ಟ್..!

    ಪ್ರಕರಣದಲ್ಲಿ ಆಯೇಷಾರನ್ನು ಆರೋಪಿಯನ್ನಾಗಿಸಲು ಪೊಲೀಸರು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಮತ್ತೊಂದೆಡೆ ಶನಿವಾರ(ಸೆ.21) ನರಸಿಂಗಿ ಪೊಲೀಸರು, ಜಾನಿ ಮಾಸ್ಟರ್ ನನ್ನು ಕಸ್ಟಡಿಗೆ ನೀಡುವಂತೆ ಉಪ್ಪಾರಪಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಿದ್ದಾರೆ. ಹತ್ತು ದಿನಗಳ ಕಾಲ ಕಸ್ಟಡಿಗೆ ಕೋರುವ ಸಾಧ್ಯತೆ ಇದೆ. ಫೋಕ್ಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿರುವುದರಿಂದ ಆತನನ್ನು ಸಂಪೂರ್ಣವಾಗಿ ಪ್ರಶ್ನಿಸಲು ಪೊಲೀಸರು ನ್ಯಾಯಾಲಯದ ಮೊರೆ ಹೋಗಲಿದ್ದಾರೆ. ಅಲ್ಲದೆ, ಆತನ ಪತ್ನಿ ವಿರುದ್ಧವೂ ಆರೋಪ ಕೇಳಿ ಬಂದಿರುವುದರಿಂದ ಬಂಧನವಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

    Continue Reading

    LATEST NEWS

    Trending