ಜಮ್ಮು ಕಾಶ್ಮೀರ: ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಬಸ್ನ ಮೇಲೆ ನಿನ್ನೆ ಜಮ್ಮುವಿನ ಚಡ್ಡಾ ಕ್ಯಾಂಪ್ ಬಳಿ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಓರ್ವ ಸಹಾಯಕ ಸಬ್ ಇನ್ಸ್ಪೆಕ್ಟರ್ ಹುತಾತ್ಮರಾಗಿದ್ದಾರೆ....
ಬೆಂಗಳೂರು: ದೆಹಲಿ, ಪಂಜಾಬ್ ನಂತರ ಕರ್ನಾಟಕದಲ್ಲಿಯೂ ಸರ್ಕಾರ ರಚಿಸಲಿದ್ದೇವೆ. ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸಲು ಕರ್ನಾಟಕದಲ್ಲಿ ಬದಲಾವಣೆ ಅಗತ್ಯ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಿನ್ನೆ ನಡೆದ...
ಅಮರಾವತಿ: ಸಿಎಂಗೆ ಎಸ್ಕಾರ್ಟ್ ವಾಹನ ಬೇಕೆಂದು ತಿರುಪತಿಗೆ ಹೋಗುತ್ತಿದ್ದ ಪ್ರವಾಸಿಗರನ್ನು ದಾರಿ ಮಧ್ಯೆ ಬಿಟ್ಟು ಬಲವಂತವಾಗಿ ಕಾರು ಕೊಂಡೊಯ್ದ ಘಟನೆ ಆಂಧ್ರಪ್ರದೇಶದ ಓಂಗೋಲ್ ಪಟ್ಟಣದಲ್ಲಿ ಬುಧವಾರ ರಾತ್ರಿ ನಡೆದಿದೆ. ಶುಕ್ರವಾರ ಒಂಗೋಲ್ಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್....
ಅಹಮದಾಬಾದ್: ಗುಜರಾತ್ನ ವಡ್ಗಾಮ್ ಶಾಸಕ ಜಿಗ್ನೇಶ್ ಮೇವಾನಿಯನ್ನು ಅಸ್ಸಾಂ ಪೊಲೀಸರು ಗುಜರಾತ್ನಲ್ಲಿ ಬಂಧಿಸಿದ್ದಾರೆ. ಆದರೆ ಬಂಧನಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಬುಧವಾರ ತಡರಾತ್ರಿ 11.30ಕ್ಕೆ ಪಾಲನ್ಪುರ ಸರ್ಕ್ಯೂಟ್ ಹೌಸ್ನಿಂದ ಅಸ್ಸೋಂ ಪೊಲೀಸರು ಬಂಧಿಸಿದ್ದಾರೆ. ಜಿಗ್ನೇಶ್...
ಹೊಸದಿಲ್ಲಿ: ಇಲ್ಲಿನ ಪೂರ್ವ ದಿಲ್ಲಿಯ ಸ್ಥಳೀಯ ಬಿಜೆಪಿ ನಾಯಕನನ್ನು ಆತನ ಮನೆಯ ಹೊರಗೆ ಗುಂಡಿಕ್ಕಿ ಹತ್ಯೆ ಮಾಡಲಾದ ಘಟನೆ ನವದೆಹಲಿಯಲ್ಲಿ ಸಂಭವಿಸಿದೆ. ಮೃತ ವ್ಯಕ್ತಿಯನ್ನು 42 ವರ್ಷದ ಜಿತು ಚೌಧರಿ ಎಂದು ಗುರುತಿಸಲಾಗಿದೆ. ಮಯೂರ್ ವಿಹಾರ್...
ಮುಂಬೈ: ಪದ್ಮಶ್ರೀ ಪುರಸ್ಕೃತ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಪಾನ್ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಂಡು ವ್ಯಾಪಕ ಚರ್ಚೆಗೆ ಕಾರಣವಾಗಿದ್ದ ಹಾಗೂ ವಿರೋಧಕ್ಕೆ ಮಣಿದು ಅಭಿಮಾನಿಗಳ ಕ್ಷಮೆ ಕೇಳಿದ್ದಾರೆ. ಮತ್ತೆ ಇಂತಹ ಜಾಹಿರಾತುಗಳಲ್ಲಿ ಭಾಗವಹಿಸುವುದಿಲ್ಲ ಎಂದು...
ನವದೆಹಲಿ: ಹನುಮ ಜಯಂತಿ ಮೆರವಣಿಗೆ ಸಂದರ್ಭದಲ್ಲಿ ಹಿಂಸಾಚಾರ ನಡೆದಿದ್ದ ಜಹಾಂಗಿರ್ಪುರಿಯಲ್ಲಿ ಉತ್ತರ ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಂಡಿದ್ದನ್ನು ತಕ್ಷಣ ನಿಲ್ಲಿಸಿ ಯಥಾಸ್ಥಿತಿ ಕಾಪಾಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಕೋಮು ಘರ್ಷಣೆಗೆ ಕಾರಣವಾಗಿರುವ...
ಪಟ್ನಾ: ಅರ್ಥಶಾಸ್ತ್ರದಲ್ಲಿ ಪದವಿ ಮುಗಿಸಿ ಎರಡು ವರ್ಷವಾದರೂ ಉದ್ಯೋಗ ಸಿಗದ ಕಾರಣ ಟೀ ವ್ಯಾಪಾರ ಆರಂಭಿಸಿದ ಯುವತಿಯ ಸಾಹಸಗಾಥೆ ವೈರಲ್ ಆಗುತ್ತಿದೆ. ಬಿಹಾರದ ಪೂರ್ನಿಯಾ ಜಿಲ್ಲೆಯ 24 ವರ್ಷದ ಯುವತಿ ಪಟ್ನಾ ನಗರದಲ್ಲಿ ಸ್ಟಾಲ್ ತೆರೆದು...
ಉತ್ತರಪ್ರದೇಶ: ಮದುವೆ ಕಾರ್ಯಕ್ರಮದಲ್ಲಿ ಮದುಮಗಳು ವರನಿಗೆ ಕೆನ್ನೆಗೆ ಬಾರಿಸಿದ ಘಟನೆ ಉತ್ತರ ಪ್ರದೇಶದ ಹಮೀರ್ಪುರದಲ್ಲಿ ನಡೆದಿದೆ. ಮದುವೆ ಮಂಟಪದಲ್ಲಿ ವಧೂ-ವರರು ಮದುವೆಯ ವಿಧಿ ವಿದಾನಗಳನ್ನು ನೆರವೇರಿಸಲು ಸಜ್ಜಾಗಿ ನಿಂತಿದ್ದರು. ಆ ವೇಳೆಗೆ ದೃಶ್ಯವನ್ನು ಸೆರೆಹಿಡಿಯಲೆಂದು ಛಾಯಾಗ್ರಾಹಕ...
ವಿಜಯವಾಡ: ಕೆಲವೇ ದಿನಗಳಲ್ಲಿ ಮದುವೆಯಾಗಬೇಕಿದ್ದ ವರನನ್ನು ವಧು ತನ್ನ ಊರಿಗೆ ಕರೆದು ಕುತ್ತಿಗೆ ಕೊಯ್ದು ಗಂಭೀರ ಗಾಯಗೊಳಿಸಿದ ಘಟನೆ ಆಂಧ್ರ ಪ್ರದೇಶದ ಅನಕಪಲ್ಲೆ ಜಿಲ್ಲೆಯ ರವಿಕಾಮತಮ್ ಮಂಡಲದ ಕೋಮಲಪುಡಿ ಗ್ರಾಮದಲ್ಲಿ ನಡೆದಿದೆ. ಗಂಭೀರ ಗಾಯಗೊಂಡ ವರನನ್ನು...