ಹೊಸದಿಲ್ಲಿ: ಇಲ್ಲಿನ ಪೂರ್ವ ದಿಲ್ಲಿಯ ಸ್ಥಳೀಯ ಬಿಜೆಪಿ ನಾಯಕನನ್ನು ಆತನ ಮನೆಯ ಹೊರಗೆ ಗುಂಡಿಕ್ಕಿ ಹತ್ಯೆ ಮಾಡಲಾದ ಘಟನೆ ನವದೆಹಲಿಯಲ್ಲಿ ಸಂಭವಿಸಿದೆ.
ಮೃತ ವ್ಯಕ್ತಿಯನ್ನು 42 ವರ್ಷದ ಜಿತು ಚೌಧರಿ ಎಂದು ಗುರುತಿಸಲಾಗಿದೆ.
ಮಯೂರ್ ವಿಹಾರ್ 3 ನೇ ಹಂತದಲ್ಲಿ ಮನೆಯ ಮುಂದೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಿಜೆಪಿ ನಾಯಕನ ಶವವನ್ನು ಪೊಲೀಸ್ ಪೇದೆಯೊಬ್ಬರು ಪತ್ತೆ ಹಚ್ಚಿದ್ದರು. ಮೃತ ವ್ಯಕ್ತಿಗೆ ಗುಂಡೇಟಿನ ಗಾಯಗಳಾಗಿವೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಪರಾಧ ನಡೆದ ಸ್ಥಳದಿಂದ ಕೆಲವು ಕಾಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಆರೋಪಿಗಳು ಪರಾರಿಯಾಗಿದ್ದಾರೆ.