DAKSHINA KANNADA
ಪುತ್ತೂರು: ಕಾರು ಢಿಕ್ಕಿಯಾಗಿ ಐದು ವರ್ಷದ ಬಾಲಕ ಸಾವು
ಪುತ್ತೂರು: ಕಾರು ಢಿಕ್ಕಿಯಾಗಿ ಐದು ವರ್ಷ ಪ್ರಾಯದ ಬಾಲಕ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಪುತ್ತೂರು ತಾಲೂಕಿನ ಕೆಯ್ಯೂರಿನಲ್ಲಿ ನಿನ್ನೆ (ಶನಿವಾರ) ನಡೆದಿದೆ.
ಕೆಯ್ಯೂರು ಗ್ರಾಮದ ನಿವಾಸಿ ಹಾರಿಸ್ ದಾರಿಮಿ ಎಂಬವರ ಪುತ್ರ, ಮಹಮ್ಮದ್ ಆದಿಲ್ (5) ಮೃತಪಟ್ಟ ಬಾಲಕ.ಈತ ಯುಕೆಜಿ ವಿದ್ಯಾರ್ಥಿಯಾಗಿದ್ದ.
ಘಟನೆ ವಿವರ
ಮಹಮ್ಮದ್ ಆದಿಲ್ ಶನಿವಾರ ಮಧ್ಯಾಹ್ನದ ಹೊತ್ತಿಗೆ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದಾಗ ಪುತ್ತೂರು ಕಡೆಗೆ ಹೋಗುತ್ತಿದ್ದ ಕಾರು ಬಾಲಕನಿಗೆ ಢಿಕ್ಕಿಯಾಗಿದೆ. ಢಿಕ್ಕಿಯ ರಭಸಕ್ಕೆ ಬಾಲಕ ಗಂಭೀರ ಗಾಯಗೊಂಡಿದ್ದಾನೆ.
ತಕ್ಷಣ ಬಾಲಕನನ್ನು ಪುತ್ತೂರಿನ ಆಸ್ಪತ್ರೆಗೆ ಸೇರಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆತ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಮೃತಪಟ್ಟಿದ್ದಾನೆ.ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
DAKSHINA KANNADA
ಚಲಿಸುತ್ತಿದ್ದಾಗ ಒಡೆದ ಬಸ್ಸಿನ ಗಾಜು; ಇಬ್ಬರು ಮಕ್ಕಳು, ಚಾಲಕನಿಗೆ ಗಾ*ಯ
ವಿಟ್ಲ : ಚಲಿಸುತ್ತಿದ್ದ ಕೇರಳ ರಾಜ್ಯದ ಬಸ್ಸಿನ ಗಾಜು ಒಡೆದ ಪರಿಣಾಮ ಇಬ್ಬರು ಮಕ್ಕಳು ಮತ್ತು ಚಾಲಕ ಗಾಯಗೊಂಡ ಘಟನೆ ಉರಿಮಜಲು ಎಂಬಲ್ಲಿ ಸಂಭವಿಸಿದೆ. ಪುತ್ತೂರು ಕಡೆಯಿಂದ ವಿಟ್ಲ ಮೂಲಕ ಕಾಸರಗೋಡಿಗೆ ಹೊರಟಿದ್ದ ಕೇರಳ ರಾಜ್ಯದ ಮಲಬಾರ್ ಬಸ್ ಉರಿಮಜಲು ಸೊಸೈಟಿ ತಲುಪುತ್ತಿದ್ದಂತೆ ಅದರ ಮುಂಭಾಗ ಗಾಜು ಹೊಡೆದಿದೆ.
ಇದನ್ನೂ ಓದಿ : ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕ್ರೇಟಾ..! ಕಾರು ಜಖಂ
ಇದರಿಂದ ಮುಂಭಾಗದಲ್ಲಿದ್ದ ಬಾಲಕ ಗಂಭೀರ ಗಾಯಗೊಂಡಿದ್ದು, ಚಾಲಕ ಮತ್ತು ಮತ್ತೊಂದು ಮಗು ಸಣ್ಣಪುಟ್ಟವಿಗೆ ಗಾಯಗಳಾಗಿವೆ. ಗಂಭೀರ ಗಾಯಗೊಂಡ ಬಾಲಕನನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರ ಗಾಯಗೊಂಡಿರುವ ಬಾಲಕ ಕೇರಳದ ಚೆರ್ಕಳ ನೆಲ್ಲಿಕಟ್ಟೆ ನಿವಾಸಿ ಎಂದು ಸ್ಥಳೀಯರು ತಿಳಿಸಿದ್ದಾರೆ.
ಬಿಸಿಲಿನ ತಾಪಕ್ಕೆ ಈ ಘಟನೆ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
DAKSHINA KANNADA
ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕ್ರೇಟಾ..! ಕಾರು ಜಖಂ
ವಿಟ್ಲ: ನಿಯಂತ್ರಣ ತಪ್ಪಿ ಕ್ರೇಟಾ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ವಿಟ್ಲ ಪುತ್ತೂರು ರಸ್ತೆಯ ಚಂದಳಿಕೆ ಎಂಬಲ್ಲಿ ನಡೆದಿದೆ.
ಕಾರು ಪಲ್ಟಿಯಾದ ಪರಿಣಾಮ ಕಾರು ಸಂಪೂರ್ಣ ನುಜ್ಜು ಗುಜ್ಜಾಗಿದ್ದು ಪವಾಡ ಎಂಬಂತೆ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ.
ಮುಂದೆ ಓದಿ..; ಪ್ರಾಂಶುಪಾಲೆ, ಶಿಕ್ಷಕಿ ನಡುವೆ ಹೊಯ್ ಕೈ..!! ವೀಡಿಯೋ ವೈರಲ್
DAKSHINA KANNADA
ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂ*ಬ್ ಬೆದರಿಕೆ! ಇ ಮೇಲ್ ನಲ್ಲಿ ಏನಿದೆ?
ಮಂಗಳೂರು : ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂ*ಬ್ ಬೆದರಿಕೆ ಹಾಕಲಾಗಿದೆ. ಹೀಗಾಗಿ ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಯಾಗಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ರಾಮೇಶ್ವರಂ ಕೆಫೆ ಸ್ಫೋ*ಟ ಪ್ರಕರಣವೇ ಇನ್ನೂ ಜೀವಂತವಿದೆ. ಅಲ್ಲದೇ, ಶಾಲೆಗಳಿಗೂ ಬೆದರಿಕೆ ಕರೆ ಬಂದಿದ್ದವು. ಇದೀಗ ಮಂಗಳೂರು ವಿಮಾನ ನಿಲ್ದಾಣಕ್ಕೆ ಬೆದರಿಕೆ ಕರೆ ಬಂದಿದೆ.
ಇ ಮೇಲ್ ಮೂಲಕ ಬಂತು ಬೆದರಿಕೆ :
ಕಳೆದ ಎಪ್ರಿಲ್ 29 ರಂದು ದೇಶದ ವಿವಿಧ ವಿಮಾನ ನಿಲ್ದಾಣಗಳಿಗೆ ಬಾಂಬ್ ಬೆದರಿಕೆ ಸಂದೇಶಗಳು ಇ-ಮೇಲ್ ಮೂಲಕ ರವಾನೆಯಾಗಿದ್ದು, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಅದೇ ದಿನ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು ಎಂದು ತಡವಾಗಿ ಬೆಳಕಿಗೆ ಬಂದಿದೆ.
ಎಪ್ರಿಲ್ 29 ರಂದು ಬೆಳಗ್ಗೆ 9.37 ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಇ – ಮೇಲ್ ಐಡಿ ಗೆ ಅಪರಿಚಿತ ವ್ಯಕ್ತಿಯೊಬ್ಬ ತನ್ನ ಇ – ಮೇಲ್ ನಿಂದ ‘ವಿಮಾನ ನಿಲ್ದಾಣದಲ್ಲಿ ಮತ್ತು ವಿಮಾನದ ಒಳಗಡೆ ಸ್ಫೋಟಕಗಳನ್ನು ಇರಿಸಿದ್ದು, ಈ ಸ್ಫೋಟಕಗಳನ್ನು ಸ್ಫೋಟಿಸಿ ಜೀವ ಹಾನಿ ಮಾಡುವುದಾಗಿ’ ಬೆದರಿಕೆ ಸಂದೇಶ ಕಳುಹಿಸಿದ್ದನು.
ಇದನ್ನೂ ಓದಿ : ಉಪ್ಪಿನಂಗಡಿ : ಹೃದಯಾ*ಘಾತದಿಂದ ಮಲಗಿದ್ದಲ್ಲೇ ಇಹಲೋಕ ತ್ಯಜಿಸಿದ ಯುವಕ
ಈ ಬಗ್ಗೆ ವಿಮಾನ ನಿಲ್ದಾಣದ ಮುಖ್ಯ ಭದ್ರತಾ ಅಧಿಕಾರಿ ಮೋನಿಶ ಕೆ.ಜಿ. ಅವರು ನೀಡಿದ ದೂರಿನ ಆಧಾರದಲ್ಲಿ ಬಜಪೆ ಪೊಲೀಸ್ ಠಾಣೆಯಲ್ಲಿ ಐಪಿಸಿ 507 ಕಲಂ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯಲ್ಲಿದೆ ಎಂದು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
ಈ ಕುರಿತು ತನಿಖೆ ನಡೆಸಿದಾಗ ಅಪರಿಚಿತ ವ್ಯಕ್ತಿಯು ಇದೇ ರೀತಿ ಮಂಗಳೂರು ವಿಮಾನ ನಿಲ್ದಾಣ ಸೇರಿದಂತೆ ದೇಶದ 25 ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳಿಗೆ ಬೆದರಿಕೆ ಸಂದೇಶಗಳನ್ನು ಕಳುಹಿಸಿರುವುದು ಕಂಡು ಬಂದಿದೆ. ಆರೋಪಿಯ ಪತ್ತೆಗಾಗಿ ಬಜಪೆ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ ಎಂದು ಪೊಲೀಸ್ ಕಮಿಷನರ್ ವಿವರಿಸಿದ್ದಾರೆ.
ಇ ಮೇಲ್ ನಲ್ಲಿ ಏನಿದೆ ?
ಇ ಮೇಲ್ ನಲ್ಲಿ, ‘ಮಂಗಳೂರು ವಿಮಾನ ನಿಲ್ದಾಣದ ಆವರಣದಲ್ಲಿ ಸ್ಪೋಟಕಗಳನ್ನು ಇಡಲಾಗಿದೆ. ಮೂರು ವಿಮಾನದಲ್ಲಿಯೂ ಬಾಂಬ್ ಇಡಲಾಗಿದೆ. ಕೆಲವೇ ಗಂಟೆಗಳಲ್ಲಿ ದೊಡ್ಡಮಟ್ಟದ ರಕ್ತಪಾತ ನಡೆಯಲಿದೆ. ಈ ಕೃತ್ಯದ ಹಿಂದೆ ಟೆರರೈಸರ್ಸ್ 111 ಕೈವಾಡವಿದೆ’ ಎಂದು ಸಂದೇಶದಲ್ಲಿ ಬರೆಯಲಾಗಿದೆ.
- DAKSHINA KANNADA2 days ago
ಸುಬ್ರಹ್ಮಣ್ಯ: ಕೆಎಸ್ಸಾರ್ಟಿಸಿ ಬಸ್ಗಳ ಹಗಲು ದರೋಡೆ..! ಏನಿದು ಘಟನೆ?
- LATEST NEWS7 days ago
ಚಾಲಕನ ನಿಯಂತ್ರಣ ತಪ್ಪಿ ಇನೋವಾ ಕಾರು ಪಲ್ಟಿ; ಯುವತಿ ಸಾವು!
- FILM4 days ago
ಬಿಗ್ ಬಾಸ್ ಬಗ್ಗೆ ಅಚ್ಚರಿ ಹೇಳಿಕೆ ಕೊಟ್ಟ ನಮ್ರತಾ ಗೌಡ!
- BELTHANGADY3 days ago
ವೇಷ ಕಳಚುವ ಮುನ್ನ ಇಹಲೋಕ ತ್ಯಜಿಸಿದ ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು