ಬಂಟ್ವಾಳ: ವಿಪರೀತ ಕುಡಿದು ವಾಹನ ಚಲಾಯಿಸಿ ರಸ್ತೆ ವಿಭಾಜಕಕ್ಕೆ ಡಿಕ್ಕಿ ಹೊಡೆದು ಕಾರೊಂದು ಜಖಂಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಬೈಪಾಸ್ ನಲ್ಲಿ ನಡೆದಿದೆ.
ಇಲ್ಲಿನ ಕಾವಳಕಟ್ಟೆ ದೂಮಳಿಕೆ ನಿವಾಸಿಯಾಗಿರುವ ಖಾಸಗಿ ಬಸ್ ಚಾಲಕ ಇಬ್ರಾಹಿಂ ಅವರು ವಿಪರೀತ ಕುಡಿದು ವಾಹನ ಚಾಲನೆ ಮಾಡಿದ ಚಾಲಕರಾಗಿದ್ದು, ಇವರು ಚಲಾಯಿಸಿಕೊಂಡು ಹೋಗಿದ್ದ ಒಮ್ನಿ ಕಾರು ರಸ್ತೆ ಬದಿಯ ವಿಭಾಜಕಕ್ಕೆ ಡಿಕ್ಕಿ ಹೊಡೆದು ಕಾರು ಸಂಪೂರ್ಣ ಜಖಂಗೊಂಡಿದೆ.
ಪವಾಡ ಸದೃಸವಾಗಿ ಕಾರು ಚಾಲಕರಾದ ಇಬ್ರಾಹಿಂ ಅವರು ಅಪಾಯದಿಂದ ಪಾರಾಗಿದ್ದಾರೆ.
ವಿಪರೀತ ಕುಡಿದು ಚಲಾಯಿಸಿದ ಬಗ್ಗೆ ವರದಿಯ ಹಿನ್ನೆಲೆಯಲ್ಲಿ ಮೆಲ್ಕಾರ್ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.