Saturday, November 26, 2022

ಚಿತ್ರದುರ್ಗದಲ್ಲಿ ಸಿಎಂ ಬೊಮ್ಮಾಯಿ ಎಸ್ಕಾರ್ಟ್​ ವಾಹನ ಪಲ್ಟಿ: ನಡೆದುಕೊಂಡು ಹೋಗುತ್ತಿದ್ದ ತಾಯಿ-ಮಗನಿಗೆ ಗಾಯ..!

ಚಿತ್ರದುರ್ಗ: ಸಿಎಂ ಬಸವರಾಜ ಬೊಮ್ಮಾಯಿ ಬೆಂಗಾವಲು ವಾಹನ ಪಲ್ಟಿಯಾಗಿ ಇಬ್ಬರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ತಾಯಿ- ಮಗ- ಗಂಭೀರ ಗಾಯಗೊಂಡಿದ್ದಾರೆ.

ಚಿತ್ರದುರ್ಗದ ಹಿರಿಯೂರು ತಾಲೂಕು ಕಚೇರಿ ಬಳಿ ಈ ದುರ್ಘಟನೆ ಸಂಭವಿಸಿದೆ.

ವಾಣಿವಿಲಾಸ ಡ್ಯಾಂನಿಂದ ಹಿರಿಯೂರಿಗೆ ಬರುವ ವೇಳೆ ಈ ಅವಘಡ ಸಂಭವಿಸಿದ್ದು, ರಸ್ತೆಯಲ್ಲಿ ತೆರಳುತ್ತಿದ್ದ ತಾಯಿ, ಮಗನಿಗೆ ಗಾಯವಾಗಿದೆ.

ಮಸ್ಕಲ್ ಗ್ರಾಮದ ಮಂಜುಳಾ ಮತ್ತು ಪುತ್ರ ಮನೋಜ್​ ಗಾಯಾಳುಗಳಾಗಿದ್ದು ಹಿರಿಯೂರು ತಾಲೂಕು ಆಸ್ಪತ್ರೆಯಲ್ಲಿ  ಚಿಕಿತ್ಸೆ ನೀಡಲಾಗುತ್ತಿದೆ.

ಸಡನ್​ ಆಗಿ ಬ್ರೇಕ್​ ಹಾಕಿದ್ದಕ್ಕೆ ಬೆಂಗಾವಲು ಜೀಪ್​ ಪಲ್ಟಿ ಆಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಈ ಕುರಿತಾಗಿ ಚಿತ್ರದುರ್ಗ ಎಸ್ಪಿ ಕೆ.ಪರಶುರಾಮ್ ಮಾಹಿತಿ ನೀಡಿದ್ದು, ಪಲ್ಟಿ ಆಗಿದ್ದು ಸಿಎಂ ಬೆಂಗಾವಲು ವಾಹನ ಅಲ್ಲ. ಸಿಎಂ ಬೊಮ್ಮಯಿ ಅವರ ಇತರೆ ಭದ್ರತೆಯಲ್ಲಿದ್ದ ವಾಹನ. ಪೊಲೀಸ್ ವಾಹನ ಪಲ್ಟಿ ವೇಳೆ ಪಾದಾಚಾರಿಗಳಿಬ್ಬರಿಗೆ ಗಾಯಯಾಗಿದೆ.

ಜೊತೆಗೆ ಪಲ್ಟಿಯಾದ ವಾಹನದಲ್ಲಿದ್ದ ಪಿಐ ರಮಾಕಾಂತ್, ಪಿಎಸ್ ಐ ಅನಸುಯಾ, ಪಿಸಿಗಳಾದ ರಮೇಶ, ಅರ್ಚಿತಾ, ಚಾಲಕ ಪ್ರವೀಣ್​ಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳಿದರು.

 

LEAVE A REPLY

Please enter your comment!
Please enter your name here

Hot Topics

ಮಂಗಳೂರು ಬಲ್ಮಠ ರಸ್ತೆಯಲ್ಲಿ ಕಾರ್ ಬೆಂಕಿಗಾಹುತಿ..!

ಮಂಗಳೂರು : ನಗರದ ಬಲ್ಮಠ ರಸ್ತೆ ಬದಿಯಲ್ಲಿ ಪಾರ್ಕ್ ಮಾಡಲಾಗಿದ್ದ ಕಾರೊಂದು ಬೆಂಕಿಗಾಹುತಿಯಾದ ಘಟನೆ ಇಂದು ಅಪರಾಹ್ನ ಸಂಭವಿಸಿದೆ.ಬಲ್ಮಠ ಜ್ಯೂಸ್ ಜಂಕ್ಷನ್ ಬಳಿ ಪಾರ್ಕ್ ಮಾಡಲಾಗಿದ್ದ ಫೋರ್ಡ್‌ ಕಂಪೆನಿ ಕಾರು ಬೆಂಕಿಗಾಹುತಿಯಾಗಿದೆ.ಕಾರಿನ ಇಂಜಿನ್...

ಬೆಳ್ತಂಗಡಿಯಲ್ಲಿ ರಸ್ತೆ ಅಪಘಾತಕ್ಕೆ ಕಾಲೇಜು ವಿದ್ಯಾರ್ಥಿ ಬಲಿ..! 2 ದಿನದಲ್ಲಿ ಇಬ್ಬರು ಬಲಿ..!

ಬೆಳ್ತಂಗಡಿ:  ಬೆಳ್ತಂಗಡಿಯಲ್ಲಿ 2 ದಿನದಲ್ಲಿ ಒಂದೇ ಕಾಲೇಜಿನ  ಇಬ್ಬರು ವಿದ್ಯಾರ್ಥಿಗಳು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಜೀವಕಳಕೊಂಡಿದ್ದಾರೆ. ಎಳೆ ವಯಸ್ಸಿನ ಮಕ್ಕಳಿಗೆ ದ್ವಿಚಕ್ರವಾಹನಗಳನ್ನು ಕೊಡುವ ಪೋಷಕರಿಗೆ ಎಚ್ಚರಿಕೆಯ ಕರೆ ಗಂಟೆಯಾಗಿದೆ.  ಮಡಂತ್ಯಾರು ಸೆಕ್ರೆಡ್ ಹಾರ್ಟ್...