Connect with us

LATEST NEWS

UAEನ ಗೋಲ್ಡನ್ ವೀಸಾ ಪಡೆದ ಚಿಕ್ಕಮಗಳೂರು ಮಾಗುಂಡಿಯ ಕುಗ್ರಾಮದ ಉದ್ಯಮಿ..!

Published

on

ದುಬೈ: ಚಿಕ್ಕಮಗಳೂರು ಜಿಲ್ಲೆಯ ಮಾಗುಂಡಿ ಎಂಬ ಕುಗ್ರಾಮದ ಉದ್ಯಮಿಯೋರ್ವರಿಗೆ ವಿಶೇಷ ಸ್ಥಾನಮಾನ ಇರುವ ವ್ಯಕ್ತಿಗಳಿಗೆ ಮಾತ್ರ ಲಭಿಸುವ ಯುಎಇನ ಗೋಲ್ಡನ್ ವೀಸಾ ಲಭಿಸಿದೆ.


ಇದೀಗ ಯುಎಇ ನ ಗೋಲ್ಡನ್ ವೀಸಾ ಪಡೆದವರ ಪಟ್ಟಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮಾಗುಂಡಿ ಕುಗ್ರಾಮದ ವ್ಯಕ್ತಿ ಸೇರ್ಪಡೆಯಾಗುವ ಮೂಲಕ ಹೊಸ ದಾಖಲೆಯನ್ನು ಬರೆದಿದ್ದಾರೆ.

ಮಾಗುಂಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದ ಇವರು ನಂತರ ಹೈಸ್ಕೂಲ್ ಮತ್ತು ಪದವಿ ಶಿಕ್ಷಣವನ್ನು SJR ಬಾಳೆಹೊನ್ನೂರಿನಲ್ಲಿ ಪಡೆದಿದ್ದಾರೆ.

ಇವರು ದುಬೈನಲ್ಲಿ ಉದ್ಯಮ ನಡೆಸಿಕೊಂಡು ಆ ಮೂಲಕ ಯುಎಇ ಸರ್ಕಾರದ ಗಮನ ಸೆಳೆದಿದ್ದಾರೆ. ಇವರು ಕಳೆದ ಕೆಲವು ವರ್ಷಗಳಿಂದ ದುಬೈನಲ್ಲಿ ವಾಸಿಸುತ್ತಿದ್ದು, ನವೀದ್ ಕೇವಲ 15 ವರ್ಷದಲ್ಲಿ ದುಬೈಯಿಂದ ಗೋಲ್ಡನ್ ವೀಸಾ ಪಡೆದುಕೊಂಡಿದ್ದಾರೆ. ಸೆಪ್ಟೆಂಬರ್ 22 ರಂದು ವೀಸಾ ಪಡೆದಿದ್ದು, 2032 ಸೆಪ್ಟೆಂಬರ್ 21ಕ್ಕೆ ವೀಸಾ ರಿನ್ಯುವಲ್ ಆಗಲಿದೆ.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ BBM ಪದವಿ ಪಡೆದು, ಫಿನಾನ್ಸಿಯಲ್ ಮಾನೇಜ್ ಮೆಂಟ್ ನಲ್ಲಿ MBA ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಆಕ್ಸ್ ಫರ್ಡ್ ಯುನಿವರ್ಸಿಟಿ ಲಂಡನ್ ನಲ್ಲಿ ಪ್ರೈವೇಟ್ ವೆಲ್ತ್ ಅಡೈಸಿಂಗ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರು IBPCಯ ಸದಸ್ಯರು STEP ನ ಪೂರ್ಣಕಾಲಿಕ ಸದಸ್ಯರೂ ಆಗಿದ್ದಾರೆ.

ಬೆಂಗಳೂರಿನ ಆಕ್ಸೆಂಚರ್ ನಲ್ಲಿ ಫಿನಾನ್ಸಿಯಲ್ ಅನಾಲಿಸ್ಟ್ ವೃತ್ತಿ ಜೀವನ ಆರಂಭಿಸಿ, ತದನಂತರ 2007 ರಲ್ಲಿ ದುಬೈಗೆ ಆಗಮಿಸಿ ಅಲ್ಲಿ DIFC ಟ್ರಸ್ಟ್ ಕಂಪೆನಿ, ADIB ಕಂಪೆನಿ, SWISS ಕಂಪೆನಿಯಲ್ಲಿ ಮಿಡಲ್ ಈಸ್ಟ್ ಹೆಡ್ ಆಗಿ ಕಾರ್ಯನಿರ್ವಹಿಸಿದ್ದಾರೆ.

ಇದೀಗ ಇಂಟಿಗ್ನೆಸ್ ಕನ್ಸಲ್ಟಿಂಗ್ ಕಂಪೆನಿ ದುಬೈ ಕಂಪೆನಿಯಾಗಿದ್ದು, ಸೌತ್ ಆಫ್ರಿಕನ್ ಮೂಲದ ಗ್ರಾಹಕರ ಫ್ಯಾಮಿಲಿ ಆಪೀಸ್ ನ CEO ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಉದ್ಯಮಿಯಾಗಿ 18 ವರ್ಷಗಳ ಸುದೀರ್ಘ ಅನುಭವ ಹೊಂದಿದ್ದು, ಎಸ್ಟೇಸ್ ಪ್ಲಾನಿಂಗ್, ಅಸೆಟ್ ಪ್ರೊಟೆಕ್ಷನ್, ಟ್ರಸ್ಟ್ಸ್, ಫೌಂಡೇಶನ್ಸ್, ಟಾಕ್ಸ್ ಪ್ಲಾನಿಂಗ್, ಪ್ರಾಪರ್ಟಿ ಮ್ಯಾನೇಜ್ ಮೆಂಟ್ ನಲ್ಲಿ ಪರಿಣತಿ ಪಡೆದಿದ್ದಾರೆ.

ಇಂಗ್ಲೀಷ್, ಹಿಂದಿ, ಮಲಯಾಳಂ, ಕನ್ನಡ, ಉರ್ದು, ಬ್ಯಾರಿ, ತುಳು ಮತ್ತು ಕೊಂಕಣಿ ಭಾಷೆಯನ್ನು ಬಲ್ಲವರಾಗಿದ್ದು, ಪ್ರಸಿದ್ದ ಉದ್ಯಮಿ ಮಾತ್ರವಲ್ಲದೆ ಒಬ್ಬ ಉತ್ತಮ ಕ್ರೀಡಾಪಟು, ಗಾಯಕರೂ ಆಗಿದ್ದಾರೆ.

ಕ್ರೀಡೆಯಲ್ಲಿ ವಾಲಿಬಾಲ್ ಮತ್ತು ಕ್ರಿಕೆಟ್ ಆಟಗಾರರಾಗಿದ್ದು, ನವೀದ್ ಮಾಗುಂಡಿ ಒಳ್ಳೆ ಕಲಾಪೋಷಕರು, ಜೊತೆಗೆ ಬಹುಮುಖ ಪ್ರತಿಭೆಯೂ ಹೌದು, ಇವರು ಉತ್ತಮ ಗಾಯಕರಾಗಿದ್ದು, ಇವರದ್ದೇ ಫೇಸ್ ಬುಕ್, ಯೂಟೂಬ್ ಮುಖಾಂತರ ಲೈವ್ ಕಾರ್ಯಕ್ರಮವನ್ನು ಮಾಡುವ ಮೂಲಕ ತಮ್ಮದೇ ಅಪಾರ ಅಭಿಮಾನಿ ವರ್ಗವನ್ನು ಸಾಮಾಜಿಕ ಜಾಲತಾಣದಲ್ಲಿ ಸಂಪಾದಿಸಿದ್ದಾರೆ.

ಇವರ ತಂದೆ ದಿ. ಹಾಜಿ ಐ ಅಹ್ಮದ್, ತಾಯಿ ನೂರ್ ಜಹಾನ್ ಅದೇ ರಿತಿ ನವೀದ್ ಸುಖಮಯ ದಾಂಪತ್ಯ ಜೀವನ ನಡೆಸುತ್ತಿದ್ದು, ಪತ್ನಿ ಜಾನೆಟ್, ನವೀದ್ ದಂಪತಿಗೆ ಹನಾ, ಮನ್ಹಾ, ಸನಾ ಅನ್ನುವ ಮೂವರು ಮಕ್ಕಳಿದ್ದಾರೆ.

ಇದೀಗ ಗೋಲ್ಡನ್ ವೀಸಾ ಪಡೆದಿರುವ ಇವರಿಗೆ ಪ್ರಾಯೋಜಕರ ಅಗತ್ಯವಿಲ್ಲದೆ ಇರುವುದರಿಂದ ಉದ್ಯಮದಲ್ಲಿ ಮಾಲಿಕತ್ವ ಅವರದ್ದಾಗಲಿದೆ.

2 Comments

2 Comments

  1. Prashant S.Rao

    14/10/2022 at 6:37 AM

    That’s amazing!!!!
    Your journey is so inspiring, in fact a role model to many……
    It’s a great achievement
    God bless all…..

  2. Ramesh Naik Head Master GHS Magundi

    14/10/2022 at 9:07 AM

    Excellent keep it up sir

Leave a Reply

Your email address will not be published. Required fields are marked *

FILM

ಕುಟುಂಬ ಸಹಿತರಾಗಿ ಬಂದು ಮತದಾನ ಮಾಡಿದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ

Published

on

ಉಡುಪಿ: ಇಂದು ಬೆಳಂಬೆಳಗ್ಗೆ ರಾಜಕೀಯ ನಾಯಕರು,  ಜನಸಾಮಾನ್ಯರು ಮತಗಟ್ಟೆಗೆ ಬಂದು ಮತ ಚಲಾಯಿಸಿದರೆ ಉಡುಪಿಯ ಮತಗಟ್ಟೆಯಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮತದಾನ ಮಾಡಿದ್ದಾರೆ.

ಕುಕ್ಕಿಕಟ್ಟೆ ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತಗಟ್ಟೆ ಸಂಖ್ಯೆ 197 ಕ್ಕೆ ಆಗಮಿಸಿ ಮತ ಚಲಾಯಿಸಿದರು. ರಕ್ಷಿತ್ ಶೆಟ್ಟಿ ಮನೆಯ ಮುಂಭಾಗದಲ್ಲೇ ಇರುವ ಮತಗಟ್ಟೆಗೆ ಕುಟುಂಬ ಸಹಿತರಾಗಿ ಬಂದು ಮತದಾನ ಮಾಡಿದರು. ರಕ್ಷಿತ್ ಶೆಟ್ಟಿ ಈ ಸಂದರ್ಭದಲ್ಲಿ ಸೆಲೆಬ್ರೆಟಿಯನ್ನು ಕಂಡ ಇತರ ಮತದಾರರು ಹರ್ಷಚಿತ್ತರಾಗಿ ಸೆಲ್ಫೆ ಕ್ಲಿಕಿಸಲು ಮುಂದಾದ ಘಟನೆ ನಡೆಯಿತು.

Continue Reading

DAKSHINA KANNADA

ಬೈಕ್-ಕಾರು ನಡುವೆ ಅಪ*ಘಾತ; ಓರ್ವ ಮೃ*ತ್ಯು

Published

on

ಅರಂತೋಡು: ಬೈಕ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪ*ಘಾತದಲ್ಲಿ ಬೈಕ್‌ನ ಹಿಂಬದಿ ಸವಾರ ಮೃ*ತಪಟ್ಟ ಘಟನೆ ಸಂಪಾಜೆ ಕಲ್ಲುಗುಂಡಿ ಸಮೀಪ ದೊಡ್ಡಡ್ಕ ಎಂಬಲ್ಲಿ ಗುರುವಾರ ತಡರಾತ್ರಿ ಸಂಭವಿಸಿದೆ.


ಮತದಾನ ಮಾಡಲು ಊರಿಗೆ ಬರುತ್ತಿದ್ದರು ಎಂದು ಹೇಳಲಾಗುತ್ತಿದ್ದು ಡಿ*ಕ್ಕಿಯ ರಭಸಕ್ಕೆ ಬೈಕ್‌ನ ಹಿಂಬದಿ ಸವಾರನಿಗೆ ಗಂಭೀರ ಗಾಯಗೊಂಡು ಮೃ*ತಪಟ್ಟರೆ ಇನ್ನೋರ್ವನಿಗೆ ಗಾಯವಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃ*ತರ ವಿವರ ಇನ್ನಷ್ಟೇ ತಿಳಿದುಬರಬೇಕಾಗಿದೆ.

Continue Reading

LATEST NEWS

ಅಯೋಧ್ಯೆಯ ಅಂಗಳದಲ್ಲಿ ಶೂಟಿಂಗ್ ಮಾಡಿದ ಮೊಟ್ಟ ಮೊದಲ ಕನ್ನಡ ಸೀರಿಯಲ್ ಇದು?

Published

on

ಮಹಿಳೆಯರಿಗೆ ಸೀರಿಯಲ್ ನೋಡುವುದಂದರೆ ಒಂತಾರ ಹುಚ್ಚು. ಮನೆಯಲ್ಲೇ ಇರುವ ಮಹಿಳೆಯರು ಕೆಲವೊಮ್ಮೆ ಬೆಳಗ್ಗೆಯಿಂದ ಸಂಜೆಯವರೆಗೆ ಟಿವಿಯಲ್ಲಿ ಸೀರಿಯಲ್ ನೋಡುತ್ತಾ ಇರುತ್ತಾರೆ. ಸೀರಿಯಲ್ ನೋಡೊದು ಮಾತ್ರ ಅಲ್ಲ ಅದರ ಬಗ್ಗೆ ಸಂವಾದ ಕೂಡ ಮನೆಯವರಲ್ಲಿ ಮಾಡುತ್ತಾ ಇರುತ್ತಾರೆ.

ಈ ನಡುವೆ ಅಯೋಧ್ಯೆ ರಾಮಮಂದಿರ ನಿರ್ಮಾಣದ ನಂತರ ದೇಶದ ಜನರು ತುಂಬಾ ಸಂತೋಷದಲ್ಲಿದ್ದಾರೆ. ಅದೆಷ್ಟೋ ಜನ ಹಿಂದೂಗಳ ಕನಸು ನನಸಾದ ಕ್ಷಣ ಎಂದು ಹೇಳಬಹುದು. ಒಮ್ಮೆಯಾದ್ರೂ ಅಯೋಧ್ಯೆಗೆ ಹೋಗಿಬರಬೇಕು ಅಂತಾ ಪ್ಲಾನ್ ಅಂತೂ ಮಾಡ್ತಾ ಇರೋದು ಕಂಡಿತ. ಕೆಲವರು ಹೋಗಿ ಬಂದಿದ್ದಾರೆ ಕೂಡ ಆದರೆ ಇನ್ನು ಕೆಲವರು ಇನ್ನು ಹೋಗಬೇಕು. ಇದುವರೆಗೆ ಅಯೋಧ್ಯೆ ರಾಮಮಂದಿರದಲ್ಲಿ ಯಾವೂದೇ ರೀತಿದ ಫಿಲ್ಮ್ ಶೂಟಿಂಗ್, ಸೀರಿಯಲ್, ಕಿರುಚಿತ್ರ ಯಾವೂದು ಶೂಟಿಂಗ್ ಆಗಲಿಲ್ಲ. ಆದರೇ ಇದೇ ಮೊದಲ ಬಾರಿಗೇ ಕನ್ನಡ ಸೀರಿಯಲ್ ಇಂಡಸ್ಟ್ರಿಯಲ್ಲಿ ಕನ್ಯಾದಾನ ಸೀರಿಯಲ್ ಹೊಸ ದಾಖಲೆ ಬರೆದಿದೆ.

ಉದಯ ಟಿವಿಯಲ್ಲಿ ಪ್ರಸಾರವಾಗೋ ಕನ್ಯಾದಾನ ಧಾರಾವಾಹಿ ಈಗ ಹೊಸ ದಾಖಲೆ ಬರೆದಿದ್ದಾರೆ. ಕನ್ನಡ ಟೆಲಿವಿಷನ್ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಅಯೋಧ್ಯೆಯಲ್ಲಿ ಚಿತ್ರೀಕರಣಗೊಂಡ ಮೊಟ್ಟ ಮೊದಲ ಸೀರಿಯಲ್ ಎಂಬ ಹೆಗ್ಗಳಿಕೆಗೆ ಕನ್ಯಾದಾನ ಧಾರಾವಾಹಿ ಪಾತ್ರವಾಗಿದೆ.

ಜನವರಿ 22ರಂದು ಅಂದ್ರೆ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಯಾದ ನಂತರ ಇಲ್ಲಿಯವೆರೆಗೂ ಯಾವುದೇ ಸಿನಿಮಾವಾಗ್ಲಿ, ಅಥವಾ ಸೀರಿಯಲ್ ಆಗ್ಲಿ ಶೂಟ್ ಮಾಡಿರಲಿಲ್ಲ. ಆದ್ರೆ, ಕನ್ಯಾದಾನ ಧಾರವಾಹಿ ತಂಡ ಫಸ್ಟ್‌ಟೈಮ್‌ ಅಯೋಧ್ಯೆಗೆ ಹೋಗಿ ಚಿತ್ರೀಕರಣ ಮಾಡಿದೆ.

ಈ ಸೀರಿಯಲ್‌ನಲ್ಲಿ ಬಹುತೇಕ ಪಾತ್ರಗಳು ಒಂದಲ್ಲ ಒಂದು ಸಮಸ್ಯೆ ಎದುರಿಸ್ತಿವೆ. ಹಾಗಾಗಿ ರಾಮನ ದರ್ಶನ ಪಡೆದು ಆ ಕಷ್ಟಗಳಿಂದ ಹೊರಬರಬೇಕು ಎಂದು ನಿರ್ಧರಿಸಿ, ರಾಮಮಂದಿರಕ್ಕೆ ಹೋಗಿ ಬಾಲರಾಮನ ದರ್ಶನ ಪಡೆದಿದ್ದಾರೆ. ಅಯೋಧ್ಯೆಯಲ್ಲಿ ಶೂಟಿಂಗ್ ಮಾಡಿರೋ ಬಗ್ಗೆ ಸೀರಿಯಲ್​ ತಂಡ ಸಂತಸ ಹಂಚಿಕೊಂಡಿದೆ.

Continue Reading

LATEST NEWS

Trending