ಮೈಸೂರು: ಕಾಡು ಹಂದಿಗಳು ಚಿರತೆಯೊಂದನ್ನು ಕಚ್ಚಿ ತಿಂದಿರುವ ಘಟನೆ ಮೈಸೂರಿನ ಚಾಮರಾಜನಗರ ತಾಲೂಕಿನ ಕೊಳ್ಳೇಗಾಲ ಎಂಬಲ್ಲಿ ನಡೆದಿದೆ.
ಹಾಸನೂರು – ಕೊಳ್ಳೆಗಾಲ ರಸ್ತೆಯಲ್ಲಿ ವಾಹನವೊಂದರ ಹೊಡೆತಕ್ಕೆ ಸಿಲುಕಿದ ಚಿರತೆಯೊಂದು ಗಂಭೀರವಾಗಿ ಗಾಯಗೊಂಡು ರಸ್ತೆಯಲ್ಲಿ ಬಿದ್ದು ಸಾವಿನ ಅಂಚಿನಲ್ಲಿ ಒದ್ದಾಡುತ್ತಿತ್ತು.
ಈ ವೇಳೆ ಮೂರು ಕಾಡು ಹಂದಿಗಳು ಚಿರತೆಯ ಮೇಲೆ ಏಕಾಏಕಿ ದಾಳಿ ನಡೆಸಿ ಕಚ್ಚಿ ಸಾಯಿಸಿದ ನಂತರ ತಿಂದು ಹಾಕಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಭಾರೀ ವೈರಲ್ ಆಗುತ್ತಿದೆ.