Connect with us

    LATEST NEWS

    ಬ್ರಹ್ಮಾವರ : ಪೊಲೀಸ್ ಠಾಣೆಯಲ್ಲಿ ಕುಸಿದು ಬಿದ್ದು ಆರೋಪಿ ಸಾ*ವು

    Published

    on

    ಬ್ರಹ್ಮಾವರ : ಕಂಠಪೂರ್ತಿ ಕುಡಿದು ಮಹಿಳೆಯನ್ನು ಚುಡಾಯಿಸಿ  ಪೊಲೀಸ್ ಕಸ್ಟಡಿ ಸೇರಿದ್ದ ಆರೋಪಿಯೊಬ್ಬ ಇಂದು(ನ.10) ಮುಂಜಾನೆ ಸಾ*ವನ್ನಪ್ಪಿದ್ದಾನೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದ್ದು, ಇದೊಂದು ಹೃದಯಾ*ಘಾತ ಎಂದು ಪೊಲೀಸ್ ಇಲಾಖೆ ಹೇಳಿದೆ. ಆದರೆ, ಕಸ್ಟಡಿಯಲ್ಲಿದ್ದ ವೇಳೆ ಠಾಣೆಯಲ್ಲೇ ಮೃ*ತಪಟ್ಟ ಹಿನ್ನಲೆ ಪೊಲೀಸ್ ವರಿಷ್ಠಾಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಕೇರಳ ಮೂಲದ ಬಿಜು ಮೋಹನ್‌ ಎಂಬಾತ ಮೃತ ವ್ಯಕ್ತಿಯಾಗಿದ್ದು, ಕೊಚ್ಚಿನ್ ಶಿಪ್‌ ಯಾರ್ಡ್‌ನಲ್ಲಿ ಕಾರ್ಮಿಕನಾಗಿದ್ದ.

    ಶನಿವಾರ ರಾತ್ರಿ ಕಂಠಪೂರ್ತಿ ಕುಡಿದಿದ್ದ ಈತ ತನ್ನ ರೂಮ್ ಪಕ್ಕದ ಮಹಿಳೆಯನ್ನು ಚುಡಾಯಿಸಿ ಪೊಲೀಸರ ಅತಿಥಿಯಾಗಿದ್ದ. ರಾತ್ರಿ ಇಡೀ ಪೊಲೀಸ್ ಲಾಕಪ್‌ನಲ್ಲಿ ಇದ್ದ ಈತ, ನಸುಕಿನ ಜಾವ 3.30ಕ್ಕೆ ಕುಸಿದು ಬಿದ್ದಿದ್ದಾನೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿದಾಗ  ಅದಾಗಲೇ ಆತ ಮೃ*ತಪಟ್ಟಿರುವುದು ತಿಳಿದು ಬಂದಿದೆ.

    ಇದನ್ನೂ ಓದಿ : ಮಂಗಳೂರು: ಡಾನ್ ಬಾಸ್ಕೋ ಹಾಲ್ ನ ಮ್ಯಾನೇಜರ್ ಬೋನಿಫಾಸ್ ಪಿಂಟೋ ನಿ*ಧನ

    ಇದೊಂದು ಲಾಕಪ್‌ ಡೆ*ತ್ ಆಗಿರುವ ಸಾಧ್ಯತೆಯ ಬಗ್ಗೆ ಅನುಮಾನ ಇದೆಯಾದ್ರೂ, ಪೊಲೀಸ್ ಇಲಾಖೆ ಆತ ಹೃದಯಾ*ಘಾತದಿಂದ ಮೃ*ತನಾಗಿರುವುದಾಗಿ ಹೇಳಿದೆ. ಈ ಘಟನೆಯ ಬೆನ್ನಲ್ಲೇ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬ್ರಹ್ಮಾವರ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಪಶ್ಚಿಮ ವಲಯ ಐಜಿಪಿ ಅವರ ಅನುಪಸ್ಥಿತಿಯಲ್ಲಿ ಜವಾಬ್ದಾರಿ ವಹಿಸಿಕೊಂಡಿರುವ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್  ಅವರೂ  ಠಾಣೆಗೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    LATEST NEWS

    ಮಂಗಳೂರು: ನವೆಂಬರ್ 23 ರಂದು ಎನ್‌ಐಟಿಕೆ ಘಟಿಕೋತ್ಸವ

    Published

    on

    ಮಂಗಳೂರು: ಸುರತ್ಕಲ್‌ನ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕದ (ಎನ್ಐಟಿಕೆ) 22ನೇ ಘಟಿಕೋತ್ಸವವು ಇದೇ 23ರಂದು ಸಂಸ್ಥೆಯ ಸಿಲ್ವರ್ ಜುಬಿಲಿ ಸಭಾಂಗಣದಲ್ಲಿ ನಡೆಯಲಿದೆ.

    ಈ ಕುರಿತು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎನ್ಐಟಿಕೆಯ ನಿರ್ದೇಶಕ ಪ್ರೋ.ಬಿ.ರವಿ, ‘ಘಟಿಕೋತ್ಸವದಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರಿಗೆ ಸ್ನಾತಕ್ಕೋತ್ತರ ಮತ್ತು ಪಿಎಚ್.ಡಿ ವಿದ್ಯಾರ್ಥಿಗಳಿಗೆ ಹಾಗೂ ಮಧ್ಯಾಹ್ನ 3ರಿಂದ ಪದವಿ(ಯು.ಜಿ) ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಪ್ರದಾನ ಮಾಡಲಿದ್ದೇವೆ. ಸ್ನಾತಕ್ಕೋತ್ತರ ವಿಭಾಗದ ಘಟಿಕೋತ್ಸವದಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಪ್ರೋ.ಗೋವಿಂದನ್ ರಂಗರಾಜನ್ ಹಾಗೂ ಸಿಕಂದರಾಬಾದ್ನ ಕಿಮ್ಸ್ ಫೌಂಡೇಷನ್ ಮತ್ತು ರಿಸರ್ಚ್ ಸೆಂಟರ್(ಕೆಎಫ್ಆರ್‌ಸಿ) ಅಧ್ಯಕ್ಷ ಭುಜಂಗ ರಾವ್ ವೆಪಕೊಮ್ಮ ಅತಿಥಿಗಳಾಗಿ ಭಾಗವಹಿಸುವರು’ ಎಂದರು.

    ಪದವಿ ವಿಭಾಗದ ಘಟಿಕೋತ್ಸವದಲ್ಲಿ ಬಾಹ್ಯಾಕಾಶ ಆಯೋಗದ ಸದಸ್ಯ ಎ.ಎಸ್.ಕಿರಣ್ ಕುಮಾರ್ ಅತಿಥಿಯಾಗಿ ಭಾಗವಹಿಸಲಿದ್ದು. ಜೋಧಪುರದ ಇಂಡಿಯನ್‌ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯ ನಿರ್ದೇಶಕ ಪ್ರೋ.ಅವಿನಾಶ್ ಕುಮಾರ್ ಅಗರ್ವಾಲ್ ಅತಿಥಿಗಳಾಗಿ ಭಾಗವಹಿಸುವರು’ ಎಂದರು.

    ಸುದ್ದಿಗೋಷ್ಠಿಯಲ್ಲಿ ಎನ್ಐಟಿಕೆ ಪ್ರಾಧ್ಯಾಪಕರಾದ ಪ್ರೋ.ಅರುಣ್ ಇಸ್ಲೂರು, ಪ್ರೋ.ಸೈದಕ್ ದತ್ತ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ವೈಷ್ಣವಿ ಭಾಗವಹಿಸಿದ್ದರು.

    2078 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

    ಎನ್ಐಟಿಕೆಯ 22ನೇ ಘಟಿಕೋತ್ಸವದಲ್ಲಿ ಒಟ್ಟು 2078 ವಿದ್ಯಾರ್ಥಿಗಳು ಪದವಿ ಸ್ವೀಕರಿಸಲಿದ್ದಾರೆ. ಇದರಲ್ಲಿ 1002 ಬಿ.ಟೆಕ್ ಪದವಿಗಳು 758 ಎಂ.ಟೆಕ್ ಮತ್ತು ಎಂ.ಟೆಕ್ (ಆರ್) ಪದವಿಗಳು, 179 ಇತರ (ಎಂ.ಬಿ.ಎ ಎಂ.ಸಿ.ಎ. ಎಂ.ಎಸ್ಸಿ) ಸ್ನಾತಕೋತ್ತರ ಪದವಿಗಳು 139 ಪಿಎಚ್.ಡಿ 195 ಇತರ ಬಿ.ಡೆಕ್ ಪದವಿಗಳು ಮತ್ತು 5 ಬಿ.ಟೆಕ್ (ಆನರ್ಸ್) ಪದವಿಗಳೂ ಸೇರಿವೆ. 9 ಬಿ.ಟೆಕ್ ವಿದ್ಯಾರ್ಥಿಗಳು ಮತ್ತು 31 ಸ್ನಾತಕೋತ್ತರ ವಿದ್ಯಾರ್ಥಿಗಳು ಅತ್ಯುನ್ನತ ಸಿಜಿಪಿಎ ಪಡೆದಿದ್ದು ನಾನಾ ಸಂಸ್ಥೆಗಳು ಪ್ರಾಯೋಜಿಸಿರುವ ಚಿನ್ನದ ಪದಕಗಳನ್ನು ಪಡೆಯಲಿದ್ದಾರೆ ಎಂದು ಪ್ರೋ.ಬಿ.ರವಿ ತಿಳಿಸಿದರು.

    Continue Reading

    LATEST NEWS

    ಬ್ಯಾಹ್ಯಾಕಾಶದಲ್ಲಿರುವ ಸುನೀತಾ ವಿಲಿಯಮ್ಸ್‌ ಈಗ ಹೇಗಿದ್ದಾರೆ ಗೊತ್ತಾ ?

    Published

    on

    ಅಂತರಾಷ್ಟ್ರೀಯ ಬ್ಯಾಹ್ಯಾಕಾಶ ಕೇಂದ್ರದಲ್ಲಿ ಸಿಲುಕಿಕೊಂಡಿರುವ ಗಗನಯಾತ್ರಿ ಸುನೀತಾ ವಿಲಿಯಮ್ಸ್‌ ಆರೋಗ್ಯ ತುಂಬಾ ಹದಗೆಟ್ಟಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅವರ ದೇಹದ ಅಂಗಾಂಗಳಲ್ಲಿ ಭಾರೀ ನೋವು ಕಾಣಿಸಿಕೊಂಡಿದ್ದು, ಸ್ನಾಯು ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಪರಿಣಾಮವಾಗಿ, ಭವಿಷ್ಯದಲ್ಲಿ ಸುನೀತಾ ಮರೆವಿನ ಕಾಯಿಲೆ ಬರುವ ಭೀತಿ ಎದುರಾಗಿದೆ.

    ಸುನೀತಾ ವಿಲಿಯಮ್ಸ್‌ ಭೂಮಿಯಿಂದ 150 ಮಿಲಿಯನ್ ಕಿಲೋ ಮೀಟರ್ ದೂರ ಇರೋ ಸೂರ್ಯನ ಬಳಿಯಲ್ಲಿದ್ದಾರೆ. ಅಲ್ಲಿಂದ ಸೂರ್ಯನ ಕಿರಣಗಳು ಭೂಮಿಗೆ ಬರಲು 10 ನಿಮಿಷ ಬೇಕು. ಸುನೀತಾ ಸೂರ್ಯನ ಹತ್ತಿರದಲ್ಲೇ ಇದ್ದು, ಅತಿಯಾದ ತಾಪಕ್ಕೆ ಒಳಗಾಗುತ್ತಿದ್ದಾರೆ. ಮೈಕ್ರೋ ಗ್ರ್ಯಾವಿಟಿಯನ್ನು ಅಲ್ಲಿ ಅಳವಡಿಸಲಾಗಿದ್ದು, ಕ್ಯಾನ್ಸರ್ ನಾಶಕ್ಕಾಗಿ ಬಳಸುವ ರೇಡಿಯೇಷನ್ ಇರುತ್ತದೆ. ಈ ರೇಡಿಯೇಷನ್ ಮಧ್ಯೆ ಸುನೀತಾ ಬದುಕುತ್ತಿರೋದು ಆರೋಗ್ಯದ ಮೇಲೆ ಬಹಳ ಗಂಭೀರ ಪರಿಣಾಮ ಬೀರುತ್ತಿವೆ. ಅಲ್ಲಿನ ವಾತಾವರಣದಿಂದ ಕಣ್ಣುಗಳಿಗೆ ತೊಂದರೆ ಜೊತೆಗೆ ಮೆದುಳಿನ ಮೇಲೂ ಕೆಟ್ಟ ಪರಿಣಾಮ ಬೀರಿದ್ದು, ಯೋಚನಾ ಸಾಮರ್ಥ್ಯಕ್ಕೂ ಸಮಸ್ಯೆಯಾಗಿದೆ. ಬಾಹ್ಯಾಕಾಶದಲ್ಲಿ ತೇಲಿಕೊಂಡು ಇರುವ ಕಾರಣ ಮೂಳೆಗಳ ಸಮಸ್ಯೆ ಎದುರಾಗಿದೆ. 165 ದಿನಗಳಿಂದ ಆರೋಗ್ಯ ಪೂರ್ತಿ ಹದಗೆಟ್ಟಿದೆ.

    ಈಗಾಗಲೇ ಸುನೀತಾ ಆರೋಗ್ಯದ ಬಗ್ಗೆ ಸ್ವತಃ ನಾಸಾ ದಿಗ್ಭ್ರಮೆ ವ್ಯಕ್ತಪಡಿಸಿದೆ. ಅಗತ್ಯಕ್ಕಿಂತ ಹೆಚ್ಚಿನ ಕಾಲ ಅಲ್ಲೇ ವಾಸ ಮಾಡುತ್ತಿರುವ ಪರಿಣಾಮ ನಾಟಕೀಯ ರೀತಿಯಲ್ಲಿ ತೂಕ ಕಳೆದುಕೊಂಡಿದ್ದಾರೆ. ವಿಪರೀತವಾಗಿ ತೂಕನಷ್ಟ ಕಂಡು ಸಣಕಲು ಕಡ್ಡಿಯಾಗಿದ್ದಾರೆ. ಕೇವಲ ಎಂಟು ದಿನಕ್ಕಾಗಿ ಬಾಹ್ಯಾಕಾಶಕ್ಕೆ ಪ್ರಯಾಣ ಮಾಡಿದ್ದ ಸುನೀತಾ ಬಾಹ್ಯಾಕಾಶ ನೌಕೆಯಲ್ಲಿ ಉಂಟಾದ ಸಮಸ್ಯೆಯಿಂದಾಗಿ 160ಕ್ಕೂ ಹೆಚ್ಚು ದಿನಗಳ ಕಾಲ ಐಎಸ್‌ಎಸ್‌ನಲ್ಲಿಯೇ ಇರುವಂತಾಗಿದೆ.

    Continue Reading

    LATEST NEWS

    ಪ್ರಧಾನಿ ಮೋದಿಗೆ ಗಯಾನಾ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ

    Published

    on

    ಗಯಾನಾ: ಭಾರತ-ಗಯಾನ ಸಂಬಂಧಗಳನ್ನು ಬಲಪಡಿಸುವ ಪ್ರಯತ್ನಗಳನ್ನು ಗುರುತಿಸಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗಯಾನಾದ ಅತ್ಯುನ್ನತ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಗಯಾನಾ ಅಧ್ಯಕ್ಷ ಡಾ.ಇರ್ಫಾನ್ ಅಲಿ ಜಾರ್ಜ್ಟ ಟೌನ್ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವ ‘ಆರ್ಡರ್ ಆಫ್ ಎಕ್ಸಲೆನ್ಸ್’ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ, ಗಯಾನಾದ ಅತ್ಯುನ್ನತ ಪ್ರಶಸ್ತಿಯನ್ನು ನನಗೆ ನೀಡಿ ಗೌರವಿಸಿದ್ದಕ್ಕಾಗಿ ನನ್ನ ಸ್ನೇಹಿತ ಅಧ್ಯಕ್ಷ ಇರ್ಫಾನ್ ಅಲಿ ಅವರಿಗೆ ನಾನು ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತೇನೆ ಎಂದು ಪ್ರಧಾನಿ ಮೋದಿ ಹೇಳಿದರು.

    ಅಷ್ಟೇ ಅಲ್ಲದೇ, ಫೆಬ್ರವರಿ 2021ರಲ್ಲಿ, ಪ್ರಧಾನಿ ಮೋದಿ ಅವರು ಡೊಮಿನಿಕಾಗೆ 70 ಸಾವಿರಾ ಡೋಸ್ ಕೊರೊನಾ ಲಸಿಕೆ ಅಸ್ಟ್ರಾಜೆನೆಕಾವನ್ನು ಪೂರೈಸುವ ಮೂಲಕ ಅಮೂಲ್ಯವಾದ ಉಡುಗೊರೆಯನ್ನು ನೀಡಿದ್ದರು. ಪ್ರಧಾನಿ ಮೋದಿಯವರ ಈ ಉದಾರತೆಯನ್ನು ಗುರುತಿಸಿ, ಡೊಮಿನಿಕಾ ಸರ್ಕಾರವು ಅವರಿಗೆ ತನ್ನ ಅತ್ಯುನ್ನತ ನಾಗರಿಕೆ ಗೌರವವನ್ನು ನೀಡಿ ಗೌರವಿಸಿದೆ.

    ಪ್ರಧಾನಿ ಮೋದಿ ಗಯಾನಾ ತಲುಪುತ್ತಿದ್ದಂತೆ ಅವರನ್ನು ಸ್ವಾಗತಿಸಲು ರಾಷ್ಟ್ರಪತಿಯಿಂದ ಹಿಡಿದು ಇಡೀ ಕ್ಯಾಬಿನೆಟ್ನವರಿಗೆ ಎಲ್ಲರೂ ಸಿದ್ದರಾಗಿ ನಿಂತಿರುವುದು ಕಂಡುಬಂದಿತ್ತು. ಅಂದಹಾಗೆ 56 ವರ್ಷಗಳಲ್ಲಿ ಗಯಾನಾಗೆ ಭೇಟಿ ನೀಡಿದ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪ್ರಧಾನಿ ಮೋದಿ ಪಾತ್ರರಾಗಿದ್ದಾರೆ.

    Continue Reading

    LATEST NEWS

    Trending