Connect with us

    LATEST NEWS

    ಬಾಲಕನನ್ನು ಕಾಲುವೆಗೆ ಎಸೆದು ಕೊ*ಲೆ: ಆರೋಪಿ ಬಂಧನ

    Published

    on

    ಮಂಗಳೂರು/ಹೊಸಪೇಟೆ: ಏಳು ವರ್ಷದ ಬಾಲಕನನ್ನು ಅಪಹರಿಸಿ, ಎಚ್ ಎಲ್ ಸಿ ಕಾಲುವೆಗೆ ಎಸೆದು ಕೊ*ಲೆ ಮಾಡಿರುವ ಕೃ*ತ್ಯ ಅ.25ರ ಶುಕ್ರವಾರ ಬೆಳಕಿಗೆ ಬಂದಿದ್ದು, ವಿಜಯನಗರ ಜಿಲ್ಲೆಯ ಕಮಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

    ಮೃ*ತಪಟ್ಟ ಬಾಲಕನನ್ನು ಅಭಿ (7) ಎಂದು ಗುರುತಿಸಲಾಗಿದೆ. ಕಮಲಾಪುರದ ನಿವಾಸಿ ಓಬಳೇಶ್ (24) ಎಂಬ ಯುವಕನನ್ನು ಕೊಲೆ ಆರೋಪದ ಮೇಲೆ ಪೊಲೀಸರು ಬಂಧಿಸಿ, ತನಿಖೆ ಕೈಗೊಂಡಿದ್ದಾರೆ.

    ಅ.22ರಂದು ಬಾಲಕನನ್ನು ಶಾಲೆಯಿಂದ ಆರೋಪಿ ಅಪ*ಹರಣ ಮಾಡಿ, ಎಚ್ ಎಲ್ ಸಿ ಕಾಲುವೆಯಲ್ಲಿ ಎಸೆದಿದ್ದಾನೆ. ಕುರೇಕುಪ್ಪದ ಬಳಿ ಕಾಲುವೆಯಲ್ಲಿ ಬಾಲಕನ ಶ*ವ ದೊರೆತಿದೆ.

    ತನ್ನ ಮಗ ಕಾಣೆಯಾಗಿದ್ದಾನೆ ಎಂದು ಬಾಲಕನ ತಾಯಿ ಕಮಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ಬೆನ್ನುಬಿದ್ದ ಪೊಲೀಸರಿಗೆ ಬಾಲಕನ ಶವ ದೊರೆತಿದೆ. ಬಳಿಕ ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಿದ್ದಾರೆ.

    LATEST NEWS

    ಅನಾರೋಗ್ಯದ ಸಂದರ್ಭದಲ್ಲಿ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡ ಸಂಗಾತಿ; ಮುತ್ತಿನಂಥ ಪತ್ನಿಗೆ ಡಿವೋರ್ಸ್‌ ನೀಡಿದ ಪತಿ

    Published

    on

    ಮಂಗಳೂರು: ವ್ಯಕ್ತಿಯೊಬ್ಬ ತನ್ನ ಕಷ್ಟ ಕಾಲದಲ್ಲಿ ಜೊತೆಯಾಗಿ ನಿಂತಿದ್ದ ಹೆಂಡ್ತಿಗೆ ಕೈಕೊಟ್ಟು ಇನ್ನೊಬ್ಬಳನ್ನು ಮದುವೆಯಾಗಿದ್ದಾನೆ. ಹೌದು ಆ ವ್ಯಕ್ತಿ ತಾನು ಪಾರ್ಶ್ವವಾಯುಗೆ ತುತ್ತಾಗಿ 6 ವರ್ಷಗಳ ಕಾಲ ಹಾಸಿಗೆ ಹಿಡಿದಾಗ, ಆತನನ್ನು ಯಾವುದೇ ಕಾರಣಕ್ಕೂ ಬಿಟ್ಟು ಹೋಗದೆ ಕಣ್ಣಲ್ಲಿ ಕಣ್ಣಿಟ್ಟು ಆರೈಕೆ ಮಾಡಿದಂತಹ ಮುತ್ತಿನಂಥ ಪತ್ನಿಗೆ ಡಿವೋರ್ಸ್‌ ಕೊಟ್ಟು ಇನ್ನೊಬ್ಬಳನ್ನು ಮದುವೆಯಾದ ಘಟನೆ ನಡೆದಿದೆ.

    ಪತಿ ಪಾರ್ಶ್ವವಾಯುಗೆ ತುತ್ತಾಗಿ ಹಾಸಿಗೆ ಹಿಡಿದ ಸಂದರ್ಭದಲ್ಲಿ ತನ್ನನ್ನು ಮಗುವಿನಂತೆ ಆರೈಕೆ ಮಾಡಿದ ಪತ್ನಿಗೆ ಡಿವೋರ್ಸ್‌ ನೀಡಿ ಮತ್ತೊಬ್ಬ ಮಹಿಳೆಯನ್ನು ಮದುವೆಯಾಗಿದ್ದಾನೆ.

    ಮಲೇಷ್ಯಾದ ನಿವಾಸಿಯಾಗಿರುವ ಈತ 2016 ರಲ್ಲಿ ನೂರುಲ್‌ ಸಯಾಜ್ ಸೈಜ್ವಾನಿ ಎಂಬ ಮಹಿಳೆಯನ್ನು ಮದುವೆಯಾಗುತ್ತಾನೆ. ಮದುವೆಯಾದ ಎರಡೇ ವರ್ಷಕ್ಕೆ ಆತ ಭೀಕರ ಕಾರು ಅಪಘಾತದಲ್ಲಿ ಪಾರ್ಶ್ವವಾಯುಗೆ ತುತ್ತಾಗಿ ಹಾಸಿಗೆ ಹಿಡಿಯುತ್ತಾನೆ. ಈ ಸಂದರ್ಭದಲ್ಲಿ ಸೈಜ್ವಾನಿ ಆತನನ್ನು ಬಿಟ್ಟು ಹೋಗದೆ ಸತತ ಆರು ವರ್ಷಗಳ ಕಾಲ ಅಂದರೆ ಅತ ಸಂಪೂರ್ಣವಾಗಿ ಗುಣಮುಖವಾಗುವವರೆಗೂ ನಾಸೊಗ್ಯಾಸ್ಟ್ರಿಕ್‌ ಟ್ಯೂಬ್‌ ಮೂಲಕ ಊಟ ಮಾಡಿಸುವುದರಿಂದ ಹಿಡಿದು ಡೈಪರ್‌ ಚೇಂಜ್‌ ಮಾಡುವವರೆಗೂ ಪತಿರಾಯನನ್ನು ಮಗುವಿನಂತೆ ಆರೈಕೆ ಮಾಡಿ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡಿದ್ದಾಳೆ.

    ಹೆಂಡತಿಯ ಆರೈಕೆಯಿಂದ ಸಂಪೂರ್ಣವಾಗಿ ಗುಣಮುಖನಾದ ಕೆಲವೇ ಸಮಯಗಳ ಬಳಿಕ ತನ್ನನ್ನು ಆರೈಕೆ ಮಾಡಿದ ಮುತ್ತಿನಂಥ ಪತ್ನಿಗೆ ಡಿವೋರ್ಸ್‌ ಕೊಟ್ಟು, ವಿಚ್ಛೇದನದ ಒಂದು ವಾರದ ಬಳಿಕ ಇನ್ನೊಬ್ಬ ಮಹಿಳೆಯನ್ನು ಮದುವೆಯಾಗಿದ್ದಾನೆ. ಸೈಜ್ವಾನಿ ಸೋಷಿಯಲ್‌ ಮೀಡಿಯಾದಲ್ಲಿ ಪತಿಯ ಎರಡನೇ ಮದುವೆಗೆ ಶುಭ ಕೋರಿದ್ದು, ಚಿನ್ನದಂತ ಹೆಂಡತಿಯನ್ನು ಬಿಟ್ಟು ಹೋದ ಆತನಿಗೆ ನೆಟ್ಟಿಗರು ಹಿಗ್ಗಾಮುಗ್ಗಾ ಬೈದಿದ್ದಾರೆ.

    Continue Reading

    BELTHANGADY

    ಬೆಳ್ತಂಗಡಿ ಮಲಂತಬೆಟ್ಟುವಿನಲ್ಲಿ ಹೆಜ್ಜೇನು ದಾಳಿ …!!

    Published

    on

    ಬೆಳ್ತಂಗಡಿ : ಸಂತ ತೆರೆಸಾ ಶಾಲೆಯ 8ನೇ ತರಗತಿ ವಿದ್ಯಾರ್ಥಿ ತೀರ್ಥೇಶ್ ಮೇಲಂತಬೆಟ್ಟು ಶಾಲೆಯಿಂದ ಮನೆ ಕಡೆ ಬರುತ್ತಿದ್ದರು. ಇವರ ಮೇಲೆ ತೀವ್ರವಾಗಿ ಹೆಜ್ಜೇನು ದಾಳಿ ನಡೆಸಿತ್ತು. ಮಗು ದಾರಿ ತೋರದೆ ಕೆಲ ಮನೆಗಳಿಗೆ ಓಡಿತ್ತು. ಭಯಭೀತಿಯಿಂದಾಗಿ ಮನೆ ಬಾಗಿಲು ಮುಚ್ಚಿತ್ತು.


    ಮೇಲಂತಬೆಟ್ಟು ಗ್ರಾಮದ ಬಳಿ ಹೆಜ್ಜೇನು ಜನರ ಮೇಲೆ ದಾಳಿ ಮಾಡಿದ್ದು, ಜನ ಭಯದಿಂದ ಓಡಿ ಹೋದರು. ಸುತ್ತಲಿನ ಮನೆಯವರು ಭೀತಿಯಿಂದ ಮನೆಬಾಗಿಲು ಮುಚ್ಚಿದರು.

    ಹೆಜ್ಜೇನು ದಾಳಿಯಿಂದ ನೋವು ಉರಿ ತಾಳಲಾರದೆ, ಅತ್ತು ಕರೆದರೂ ರಕ್ಷಣೆಗೆ ರಕ್ಷಣೆಗೆ ಯಾರೂ ಇಲ್ಲದಾಗ ಕೊನೆಯ ಉಪಾಯ ಇಲ್ಲದೆ ಪಂಚಾಯತ್ ಬಳಿ ಓಡಿದಾಗ ಪಂಚಾಯತ್ ಲೈಬ್ರರಿಯನ್ ಚಂದ್ರಾವತಿ ಯೊಗೀಶ್ ಪೂಜಾರಿ ಗೇರುಕಟ್ಟೆ ಬಂದು ಮುಚ್ಚಿದ ಬಾಗಿಲನ್ನು ತೆರೆದು ಮಗುವನ್ನು ಪಂಚಾಯತ್ ಒಳಗೆ ಕರೆಸಿಕೊಂಡು ಹೊದರು. ಆದರೂ ಬೆನ್ನು ಬಿಡದ ಹೆಜ್ಜೇನು ಆಗಲೂ ದಾಳಿ ನಡೆಸಿತು.

    ಮುಂದಕ್ಕೆ ಅಧ್ಯಕ್ಷರ ಕೊಠಡಿಯ ಒಳಗೆ ಹೋಗಿ ಬಾಗಿಲು ಮುಚ್ಚಿ ನೋಡಿದಾಗ ಅಲ್ಲಿಯೂ ಹೆಜ್ಜೇನು ಬಂದಿತ್ತು. ಆವಾಗ ಚಂದ್ರಮತಿಯು ಪೊರಕೆ ಸಹಾಯದಿಂದ ಬಹಳಷ್ಟು ಸಂಖ್ಯೆಯಲ್ಲಿದ್ದ ಹೆಜ್ಜೇನನ್ನು ಕೊಂದು ಮಗುವಿನ ಬಟ್ಟೆ ಬಿಚ್ಚಿಸಿ ಹೆಜ್ಜೇನು ಮುಳನ್ನು ತುರ್ತಾಗಿ ತೆಗೆದು ಮನೆಯವರಿಗೆ ಸುದ್ದಿ ಮುಟ್ಟಿಸಿದರು.

    ನಂತರ ಮಗುವನ್ನು ಆಸ್ಪತ್ರೆಗೆ ಸೇರಿಸಿ ಸೂಕ್ತ ಚಿಕಿತ್ಸೆ ನೀಡಲಾಯಿತು. ಮಗು ಈಗ ಆರೋಗ್ಯದಿಂದ ಚೇತರಿಸಿಕೊಳ್ಳುತ್ತಿದ್ದಾನೆ. ಪಂಚಾಯತ್ ನೌಕರ ಚಂದ್ರಾವತಿಯವರ ಸಮಯ ಪ್ರಜ್ಞೆ, ತಾಯಿ ಮಮತೆ, ಧೈರ್ಯ ಗ್ರಾಮಸ್ಥರ ಪ್ರಿತಿಗೆ ಪಾತ್ರವಾಯಿತು.

    Continue Reading

    LATEST NEWS

    ಡಿಜಿಟಲ್ ವಂಚನೆಗಳ ಬಗ್ಗೆ ಎಚ್ಚರದಿಂದಿರಿ : ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ ಮಾತು

    Published

    on

    ಮಂಗಳೂರು/ನವದೆಹಲಿ : ತಮ್ಮ ತಿಂಗಳ ರೇಡಿಯೊ ಕಾರ್ಯಕ್ರಮ ‘ಮನ್ ಕಿ ಬಾತ್’ ನಲ್ಲಿ ಇಂದು(ಅ.27) ಸೈಬರ್ ಕ್ರೈಂ ವಿಷಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಧ್ವನಿ ಎತ್ತಿದ್ದಾರೆ. ಸೈಬರ್ ಕ್ರೈಂ ಹಗರಣಗಳು ಇಂದು ಎಲ್ಲಾ ವರ್ಗದ ಜನರ ಮೇಲೆ ಪರಿಣಾಮ ಬೀರುತ್ತಿದೆ ಎಂದಿರುವ ಅವರು, ಇಂತಹ ಸಂದರ್ಭಗಳಲ್ಲಿ ಜನರು ಯೋಚಿಸುವುದನ್ನು ನಿಲ್ಲಿಸಿ ಕ್ರಮ ಕೈಗೊಳ್ಳುವ ಮಂತ್ರವನ್ನು ಅಳವಡಿಸಿಕೊಳ್ಳಬೇಕೆಂದು ಹೇಳಿದ್ದಾರೆ.

    ಕಾನೂನಲ್ಲಿ ಡಿಜಿಟಲ್ ಬಂಧನದಂತಹ ವ್ಯವಸ್ಥೆ ಇಲ್ಲ, ಇದು ಕೇವಲ ವಂಚನೆ, ವಂಚನೆ, ಸುಳ್ಳು, ಅಪರಾಧಿಗಳ ಗುಂಪು ಮತ್ತು ಇದನ್ನು ಮಾಡುತ್ತಿರುವವರು ಸಮಾಜದ ಶತ್ರುಗಳು. ವಿವಿಧ ತನಿಖಾ ಸಂಸ್ಥೆಗಳು ಡಿಜಿಟಲ್ ಬಂಧನದ ಹೆಸರಿನಲ್ಲಿ ನಡೆಯುತ್ತಿರುವ ವಂಚನೆಯನ್ನು ನಿಭಾಯಿಸಲು ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಈ ಏಜೆನ್ಸಿಗಳ ನಡುವೆ ಸಮನ್ವಯವನ್ನು ಸೃಷ್ಟಿಸಲು ರಾಷ್ಟ್ರೀಯ ಸೈಬರ್ ಕೋ-ಆರ್ಡಿನೇಷನ್ ಸೆಂಟರ್ ಅನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.

    ರಾಷ್ಟ್ರೀಯ ಸೈಬರ್ ಸಹಾಯವಾಣಿಯೊಂದಿಗೆ ಸಂಪರ್ಕ ಸಾಧಿಸಲು ಅಥವಾ ಅದರ ಪೋರ್ಟಲ್‌ನೊಂದಿಗೆ ಸಂಪರ್ಕ ಸಾಧಿಸಲು 1930 ನಂಬರ್ ಡಯಲ್ ಮಾಡಿ. ಅಂತಹ ಅಪರಾಧದ ಬಗ್ಗೆ ಪೊಲೀಸರಿಗೆ ತಿಳಿಸಿ. ಇಂತಹ ಕರೆಗಳು ಬಂದಾಗ ಸಂಭಾಷಣೆಗಳನ್ನು ರೆಕಾರ್ಡ್ ಮಾಡಿ ಸ್ಕ್ರೀನ್‌ಶಾಟ್‌ಗಳನ್ನು ತೆಗೆದು ದೂರು ನೀಡಿ ಎಂದು ಮಾಹಿತಿ ನೀಡಿದರು.

    ಭಾರತೀಯ ಆ್ಯನಿಮೇಷನ್ ಬಗ್ಗೆ ಮೆಚ್ಚುಗೆ :

    ಅಲ್ಲದೇ, ಪ್ರಧಾನಿ ಆ್ಯನಿಮೇಷನ್ ಜಗತ್ತಿನಲ್ಲಿ ಭಾರತೀಯ ಪ್ರತಿಭೆಗಳು ಹೆಚ್ಚುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸೃಜನಶೀಲ ಶಕ್ತಿಯ ಅಲೆಯು ಭಾರತವನ್ನು ಆವರಿಸುತ್ತಿದೆ. ಆ್ಯನಿಮೇಷನ್ ಜಗತ್ತಿನಲ್ಲಿ ‘ಮೇಡ್ ಇನ್ ಇಂಡಿಯಾ’ ಮತ್ತು ‘ಮೇಡ್ ಬೈ ಇಂಡಿಯಾ’ ಪ್ರಕಾಶಮಾನವಾಗಿ ಮಿಂಚುತ್ತಿವೆ ಎಂದರು.

    ಇದನ್ನೂ ಓದಿ : ಅತ್ತಿಗೆ ಮೇಲೆ ಸ್ನೇಹಿತನ ಕಣ್ಣು ; ವಾರ್ನ್ ಮಾಡಿದ್ದಕ್ಕೆ ಬರ್ಬರ ಹ*ತ್ಯೆ

    ಛೋಟಾ ಭೀಮ್, ಕೃಷ್ಣ ಮತ್ತು ಮೋಟು ಪತ್ಲು ಮುಂತಾದ ಭಾರತೀಯ ಆ್ಯನಿಮೇಷನ್ ಪಾತ್ರಗಳು ವ್ಯಾಪಕವಾಗಿ ಜನಪ್ರಿಯವಾಗಿವೆ. ಭಾರತದ ವಿಷಯ, ಸಂಸ್ಕೃತಿ ಮತ್ತು ಸೃಜನಶೀಲತೆಯನ್ನು ಜಗತ್ತಿನಾದ್ಯಂತ ಮೆಚ್ಚುಗೆ ಗಳಿಸಿವೆ ಎಂದರು. ಭಾರತವು ಆ್ಯನಿಮೇಷನ್ ನಲ್ಲಿ ಕ್ರಾಂತಿಯನ್ನು ಸೃಷ್ಟಿಸುವ ಹಾದಿಯಲ್ಲಿದೆ. ಭಾರತೀಯ ಆಟಗಳು ಕೂಡ ಜನಪ್ರಿಯವಾಗುತ್ತಿವೆ ಎಂದರು.

     

     

     

    Continue Reading

    LATEST NEWS

    Trending